ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ರಿಟೇಲ್ ಕ್ವಿಕ್ ಕಾಮರ್ಸ್ ಪ್ರವೇಶ ಪಡೆಯುತ್ತಿರುವ ಬಗ್ಗೆ ಸುದ್ದಿಗಳು ಹೊರಬಿದ್ದಿದೆ. ಯಾವುದೇ ಸದ್ದುಗದ್ದಲವಿಲ್ಲದೇ ರಿಲಯನ್ಸ್ ರಿಟೇಲ್ ತ್ವರಿತ ಬೆಳವಣಿಗೆ ಕಾಣುತ್ತಿರುವ ಕ್ಷೇತ್ರವಾದ ಕ್ವಿಕ್ ಕಾಮರ್ಸ್ ನಲ್ಲಿ ಪ್ರಬಲ ಪ್ರತಿಸ್ಪರ್ಧಿಯಾಗಲು ಬೆಳೆದು ನಿಲ್ಲಲು ತಯಾರಿ ನಡೆಸುತ್ತಿದೆ. ಈಗಾಗಲೇ ಈ ಕ್ಷೇತ್ರದಲ್ಲಿ ಬ್ಲಿಂಕಿಟ್, ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಮತ್ತು ಬಿಗ್‌ಬಾಸ್ಕೆಟ್‌ನಲ್ಲಿ ಸದ್ದುಮಾಡುತ್ತಿದೆ.
ದಿ ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ, ರಿಲಯನ್ಸ್ ಈಗಾಗಲೇ ನವಿ ಮುಂಬೈ ಮತ್ತು ಬೆಂಗಳೂರಿನಲ್ಲಿ ರಿಲಯನ್ಸ್ ರಿಟೇಲ್, ಜಿಯೋಮಾರ್ಟ್ ಮೂಲಕ ಮೂಲಕ ಪೈಲಟ್ ಪ್ರಾಜೆಕ್ಟ್ ಗಳನ್ನು ಪ್ರಾರಂಭಿಸಿದೆ. ಉದ್ಯಮ ದೈತ್ಯ ಸಂಸ್ಥೆ ಇದು ತ್ವರಿತ ವಿತರಣಾ ಮಾರುಕಟ್ಟೆಯನ್ನು ಗಟ್ತಿಯಾಗಿ ಕಾಲೂರುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿದೆ. ಶೀಘ್ರದಲ್ಲೇ ದೇಶಾದ್ಯಂತ ತನ್ನ ಈ ಪ್ರಾಜೆಕ್ಟ್ ವಿಸ್ತರಣೆಗೆ ಯೋಜನೆ ಹಾಕಿಕೊಂಡಿದ್ದು ರಿಲಯನ್ಸ್ ಭಾರತದ ಬೆಳೆಯುತ್ತಿರುವ ಕ್ವಿಕ್ ಕಾಮರ್ಸ್ ಕ್ಷೇತ್ರದಲ್ಲಿ ಫೇಮಸ್ ಆಗಿರುವ ಸಂಸ್ಥೆಗಳೊಂದಿಗೆ ನೇರ ಘರ್ಷಣೆಗೆ ಸಿದ್ಧವಾಗುತ್ತಿದೆ.

ವರದಿಯ ಪ್ರಕಾರ ಹೇಳುವಂತೆ, ರಿಲಯನ್ಸ್ ಆರಂಭಿಕ ಹಂತದಲ್ಲಿ ಗ್ರೋಸರಿ ವಿತರಣೆಯ ಮೇಲೆ ತನ್ನ ಗುರಿಯನ್ನು ಕೇಂದ್ರೀಕರಿಸುತ್ತದೆ. ನಂತರ ರಿಲಯನ್ಸ್ ಮೊಬೈಲ್‌ಗಳು ಮತ್ತು ಲ್ಯಾಪ್‌ಟಾಪ್‌ಗಳನ್ನು ಒಳಗೊಂಡಂತೆ ಹೆಚ್ಚಿನ ಮೌಲ್ಯದ ಫ್ಯಾಷನ್ ಮತ್ತು ಎಲೆಕ್ಟ್ರಾನಿಕ್ಸ್ ವಿತರಣೆಯತ್ತ ತನ್ನ ಯೋಜನೆಯನ್ನು ವಿಸ್ತರಿಸಲು ಯೋಜಿಸಿದೆ. ಡಾರ್ಕ್ ಸ್ಟೋರ್‌ಗಳು ಮತ್ತು ಹತ್ತಿರದ ಗೋದಾಮುಗಳನ್ನು ಅವಲಂಬಿಸುವ ಸ್ಪರ್ಧಿಗಳಿಗಿಂತ ಭಿನ್ನವಾಗಿ, ರಿಲಯನ್ಸ್ ರಿಲಯನ್ಸ್ ಡಿಜಿಟಲ್ ಮತ್ತು ಟ್ರೆಂಡ್ಸ್ ಸ್ಟೋರ್‌ಗಳನ್ನು ಒಳಗೊಂಡಂತೆ ತನ್ನ ವಿಶಾಲವಾದ ಚಿಲ್ಲರೆ ನೆಟ್‌ವರ್ಕ್‌ನಿಂದ ಆರ್ಡರ್‌ಗಳನ್ನು ಪೂರೈಸುವ ಸಾಧ್ಯತೆಗಳಿವೆ.
ರಿಲಯನ್ಸ್ ನ ಹೈಪರ್‌ಲೋಕಲ್ ಲಾಜಿಸ್ಟಿಕ್ಸ್ ಸ್ಟಾರ್ಟ್ಅಪ್ ಆಗಿರುವ ಗ್ರಾಬ್ ಅನ್ನು ಬಳಸಿಕೊಂಡು ಹೆಚ್ಚಿನ ಆರ್ಡರ್‌ಗಳನ್ನು 10-15 ನಿಮಿಷಗಳಲ್ಲಿ ವಿತರಿಸಲಿದೆ ಎನ್ನಲಾಗಿದೆ. ಇವುಗಳನ್ನೆಲ್ಲಾ ಗಮನಿಸಿದಾಗ ರಿಲಯನ್ಸ್ " ಕ್ವಿಕ್ ಕಾಮರ್ಸ್" ಕ್ಷೇತ್ರದ ಪ್ರವೇಶಕ್ಕಾಗಿ ಹೊಸ ಸವಲತ್ತುಗಳನ್ನು ನಿರ್ಮಿಸಿದೇ ಈಗಾಗಲೇ ಇರುವ ಹೊಸ ಸೌಲಭ್ಯಗಳನ್ನು ನಿರ್ಮಿಸುವ ಬದಲಿಗೆ ತನ್ನ ಅಸ್ತಿತ್ವದಲ್ಲಿರುವ ಮೂಲಸೌಕರ್ಯವನ್ನು ಸಮರ್ಥವಾಗಿ ಬಳಸಿಕೊಂಡು ಪ್ರತಿಸ್ಪರ್ಧಿಗಳ ಸ್ಟಾಟಜಿಗಳಿಗಿಂತ ವಿಭಿನ್ನವಾಗಿ ನಿಲ್ಲುವ ಪ್ರಯತ್ನವನ್ನು ಮಾಡಲಿದೆ.
ಇದಲ್ಲದೇ ರಿಲಯನ್ಸ್ ವಿತರಣೆ, ಪ್ಲಾಟ್‌ಫಾರ್ಮ್ ಮತ್ತು ಸರ್ಜ್ ಶುಲ್ಕಗಳನ್ನು ವಿನಾಯಿತಿ ಮಾಡುವ ಮೂಲಕ ಗ್ರಾಹಕರ ಗಮನ ಸೆಳೆಯಲು ತಂತ್ರಗಳನ್ನು ಹೆಣೆದಿದೆ. ಬ್ಲಿಂಕಿಟ್ ಮತ್ತು ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನಂತಹ ಸ್ಪರ್ಧಿಗಳಿಗೆ ಹೋಲಿಸಿದರೆ ಇದು ಪ್ರಮುಖ ಪ್ರಯೋಜನವಾಗಿದೆ. ಕಂಪನಿ ತಿಂಗಳ ಕೊನೆಯವರೆಗೆ 5,000 ಪಿನ್ ಕೋಡ್‌ಗಳಲ್ಲಿ 1,150 ನಗರಗಳಲ್ಲಿ ತನ್ನ ಸೇವೆಯನ್ನು ಪ್ರಾರಂಭಿಸಲು ಸಿದ್ಧವಾಗಿದೆ ಎಂದು ವರದಿಯಲ್ಲಿ ತಿಳಿಸಿದೆ.
ಕ್ವಿಕ್ ಕಾಮರ್ಸ್ ಮಾರುಕಟ್ಟೆಯು ತ್ವರಿತ ಬೆಳವಣಿಗೆಯ ಪಥದಲ್ಲಿದೆ. ಸಿಎಲ್ಎಸ್ಎಯ ಇತ್ತೀಚಿನ ವರದಿಯು ಬ್ಲಿಂಕಿಟ್, ಝೆಪ್ಟೋ ಮತ್ತು ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನಂತಹ ಪ್ಲಾಟ್‌ಫಾರ್ಮ್‌ಗಳು ಹಿಂದುಸ್ತಾನ್ ಯುನಿಲಿವರ್ (ಎಚ್‌ಯುಎಲ್) ಮತ್ತು ಮರಿಕೊದಂತಹ ಸಾಂಪ್ರದಾಯಿಕ ಎಫ್‌ಎಂಸಿಜಿ ದೈತ್ಯಗಳನ್ನು ಮೀರಿಸುತ್ತಿವೆ ಎಂದು ಬಹಿರಂಗಪಡಿಸಿದೆ. ಕ್ವಿಕ್ ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಬೆಲೆಗಳನ್ನು ಕಡಿಮೆ ಮಾಡುವುದರಿಂದ ಮತ್ತು ವೇಗವಾಗಿ ತಲುಪಿಸುವುದರಿಂದ ನಗರ ಮಾರುಕಟ್ಟೆಗಳಲ್ಲಿ ಒಮ್ಮೆ ಪ್ರಬಲವಾಗಿದ್ದ HUL ಮತ್ತು ಮಾರಿಕೊ ಈಗ ತೀವ್ರ ಸ್ಪರ್ಧೆಯನ್ನು ಎದುರಿಸುತ್ತಿವೆ ಎಂದು ವರದಿಯು ಹೇಳಿದೆ.
ಒಟ್ಟಾರೆ ರಿಲಯನ್ಸ್ ಈ ಕ್ಷೇತ್ರದಲ್ಲಿ ಮಹತ್ತರ ಪ್ರಗತಿ ಸಾಧಿಸಲು, FMCG ಕ್ಷೇತ್ರವನ್ನು ಗುರಿಯಾಗಿಸಿಕೊಂಡಿದೆ. ಕ್ವಿಕ್ ಕಾಮರ್ಸ್ ವಿತರಣೆ ಮಾರ್ಗಗಳು ಈಗಾಗಲೇ ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರಗಳಲ್ಲಿ ಒಂದಾಗಿದ್ದು ,ಬ್ಲಿಂಕಿಟ್, ಸ್ವಿಗ್ಗಿ ಇನ್‌ಸ್ಟಾಮಾರ್ಟ್, ಬಿಗ್‌ಬಾಸ್ಕೆಟ್ ಮುಂತಾದ ಕಂಪನಿಗಳಿಗೆ ತೀವ್ರ ಪ್ರತಿಸ್ಪರ್ಧಿ ಒಡ್ಡುವುದು ಪಕ್ಕಾ ಆಗಿದೆ
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications