ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಭಾರತದಲ್ಲಿನ ಹಲವಾರು ಮಾರುಕಟ್ಟೆಯಲ್ಲಿನ ತನ್ನ ಪ್ರಾಬಲ್ಯವನ್ನು ಈಗಾಗಲೇ ಸಾಧಿಸಿದೆ. ಹಾಗೆಯೇ ತನ್ನ ಕಬಂದ ಬಾಹುವನ್ನು ಕೂಡಾ ವಿಸ್ತಾರ ಮಾಡುತ್ತಾ ಸಾಗಿದೆ. ಈಗ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಭಾರತದಲ್ಲಿನ ಬೃಹತ್ ತಂಪು ಪಾನೀಯ ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯವನ್ನು ಸ್ಥಾಪಿಸಲು ಮುಂದಾಗಿದೆ.
ತನ್ನ ಈ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಮುಕೇಶ್ ಅಂಬಾನಿ ದಶಕಗಳಷ್ಟು ಹಳೆಯದಾದ ಕ್ಯಾಂಪಾ ಕೋಲಾದ ಹೊಸ ಪ್ರೊಡೆಕ್ಟ್ ಬಿಡುಗಡೆ ಮಾಡಿದ್ದಾರೆ. ಮುಕೇಶ್ ಅಂಬಾನಿಯವರ ರಿಲಯನ್ಸ್ ಭಾರತೀಯ ತಂಪು ಪಾನೀಯ ಮಾರುಕಟ್ಟೆಯಲ್ಲಿ ಗರಿಷ್ಠ ಪಾಲನ್ನು ವಶಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ. ಹಾಗೆಯೇ ಒಪ್ಪಂದವನ್ನು ಕೂಡಾ ಸಹಿ ಮಾಡುತ್ತಿದೆ. ಪೆಪ್ಸಿ ಮತ್ತು ಕೋಕಾ-ಕೋಲಾದಂತಹ ಪ್ರಮುಖ ಕಂಪನಿಗಳಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿ ಹೊರಹೊಮ್ಮುವ ನಿರೀಕ್ಷೆಯಿದೆ.

ಸಿಲೋನ್ ಬೆವರೇಜ್ ಇಂಟರ್‌ನ್ಯಾಶನಲ್‌ನೊಂದಿಗೆ ಒಪ್ಪಂದ
ರಿಲಯನ್ಸ್ ಸಂಸ್ಥೆಯು ಶ್ರೀಲಂಕಾದ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್‌ರ ಸಂಸ್ಥೆಯಾದ ಸಿಲೋನ್ ಬೆವರೇಜ್ ಇಂಟರ್‌ನ್ಯಾಶನಲ್‌ನೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ. ಒಪ್ಪಂದದ ಭಾಗವಾಗಿ ಮುರಳೀಧರನ್‌ರ ಸಿಲೋನ್ ಬೆವರೇಜ್ ಇಂಟರ್‌ನ್ಯಾಶನಲ್ ಸಂಸ್ಥೆ ಕ್ಯಾಂಪಾ ಕೋಲಾವನ್ನು ಕ್ಯಾನ್‌ಗಳಲ್ಲಿ ಪ್ಯಾಕಿಂಗ್ ಮಾಡುವ ಕಾರ್ಯವನ್ನು ಮಾಡಲಿದೆ.
ಪ್ಯಾಕಿಂಗ್ ಕೆಲಸಕ್ಕಾಗಿ ಸಿಲೋನ್ ಬೆವರೇಜಸ್ ಭವಿಷ್ಯದಲ್ಲಿ ಭಾರತದಲ್ಲಿ ಪ್ಯಾಕೇಜಿಂಗ್ ಘಟಕವನ್ನು ಸ್ಥಾಪಿಸುವ ನಿರೀಕ್ಷೆಯಿದೆ. ಈ ಪ್ಯಾಕೇಜಿಂಗ್ ಘಟಕ ಸ್ಥಾಪನೆಯಾಗುವವರೆಗೆ ಕ್ಯಾಂಪಾ ಕೋಲಾವನ್ನು ಸಿಲೋನ್ ಬೆವರೇಜಸ್‌ನ ಶ್ರೀಲಂಕಾ ಕಾರ್ಖಾನೆಯಿಂದ ಆಮದು ಮಾಡಿಕೊಳ್ಳಲಾಗುತ್ತದೆ.
ರಿಲಯನ್ಸ್ ಇಂಡಸ್ಟ್ರೀಸ್‌ನ ಘಟಕವಾದ ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಈ ಹಿಂದೆ ರಿಲಯನ್ಸ್‌ನ ಕ್ಯಾಂಪಾ ಸಾಫ್ಟ್ ಡ್ರಿಂಕ್ಸ್ ತಯಾರಿಕೆ ಮತ್ತು ವಿತರಣಾ ಪಾಲುದಾರಿಕೆಗಾಗಿ ಚೆನ್ನೈ ಮೂಲದ ಕಂಪನಿಯಾದ ಕಾಲಿ ಏರೇಟೆಡ್ ವಾಟರ್ ವರ್ಕ್ಸ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ರಿಲಯನ್ಸ್ ಕನ್ಸ್ಯೂಮರ್ 2022 ರಲ್ಲಿ ಪ್ಯೂರ್ ಡ್ರಿಂಕ್ಸ್ ಗ್ರೂಪ್‌ನಿಂದ ಕ್ಯಾಂಪಾ ಕೋಲಾವನ್ನು ಖರೀದಿ ಮಾಡಿದೆ.
ಅದರ ನಂತರ ರಿಲಯನ್ಸ್ ಗ್ರಾಹಕರು ಈ ಬ್ರ್ಯಾಂಡ್ ಅನ್ನು ಮರುಪ್ರಾರಂಭ ಮಾಡಿದೆ. ಇದನ್ನು ಆಂಧ್ರಪ್ರದೇಶ ಮತ್ತು ತೆಲಂಗಾಣ ಮಾರುಕಟ್ಟೆಯಲ್ಲಿ ಪರಿಚಯಿಸಲಾಗಿದೆ. ರಿಲಯನ್ಸ್ ಶೀಘ್ರದಲ್ಲೇ ಭಾರತದಾದ್ಯಂತ ಕ್ಯಾಂಪಾ ಕೋಲಾವನ್ನು ಪ್ರಾರಂಭಿಸಲು ಸಿದ್ಧವಾಗಿದೆ. ಇತ್ತೀಚಿನ ಒಪ್ಪಂದಗಳು ಕಂಪನಿಯು ದೇಶಾದ್ಯಂತ ತನ್ನ ನೆಟ್‌ವರ್ಕ್ ಅನ್ನು ವಿಸ್ತರಿಸಲು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.
ಯುಎಸ್ ಮೂಲದ ಮಿಮೋಸಾ ನೆಟ್‌ವರ್ಕ್ ಡೀಲ್
ರಿಲಯನ್ಸ್ ಇಂಡಸ್ಟ್ರೀಸ್ ಮಿಲಿಟೆಡ್‌ನ ಜಿಯೋ ಪ್ಲಾಟ್‌ಫಾರ್ಮ್ ರೆಡಿಸೀಸ್ ಕಾರ್ಪ್ ಯುಎಸ್ ಮೂಲದ ಮಿಮೋಸಾ ನೆಟ್‌ವರ್ಕ್ ಖರೀದಿಯ ಡೀಲ್‌ಗೆ ಸಹಿ ಹಾಕಿದೆ. ಮಿಮೋಸಾ ನೆಟ್‌ವರ್ಕ್ ಒಂದು ಕಮ್ಯೂನಿಫಿಕೇಷನ್ ಈಕ್ವಿಪ್‌ಮೆಂಟ್ ತಯಾರಕ ಸಂಸ್ಥೆಯಾಗಿದೆ. ಪ್ರಮುಖವಾಗಿ 5 ಜಿ ಸೇವೆಯನ್ನು ಮತ್ತು ತನ್ನ ಬ್ರಾಡ್‌ಬ್ಯಾಂಡ್ ಸೇವೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಮಿಮೋಸಾ ನೆಟ್‌ವರ್ಕ್ ಅನ್ನು ಖರೀದಿ ಮಾಡಿದೆ ಎಂದು ಮಾಹಿತಿ ನೀಡಿದೆ.
ಇನ್ನು ಮಿಮೋಸಾ ನೆಟ್‌ವರ್ಕ್ ಖರೀದಿಯ ಡೀಲ್ ಸುಮಾರು 60 ಬಿಲಿಯನ್ ಡಾಲರ್‌ನದ್ದಾಗಿದೆ. ಮಿಮೋಸಾ ನೆಟ್‌ವರ್ಕ್‌ನ ಮಾಲೀಕತ್ವವನ್ನು ಈ ಹಿಂದೆ ಯುಎಸ್ ಮೂಲದ ಏರ್‌ಸ್ಪಾನ್ ನೆಟ್‌ವರ್ಕ್ ಹೋಲ್ಡಿಂಗ್ಸ್ ಹೊಂದಿದೆ. ಪಾಯಿಂಟ್ ಟು ಪಾಯಿಂಟ್ ಮತ್ತು ಪಾಯಿಂಟ್ ಟು ಮಲ್ಟಿ ಪಾಯಿಂಟ್ ಪ್ರೊಡೆಕ್ಟ್ ಅನ್ನು ಮಿಮೋಸಾ ಹೊಂದಿದೆ. ವೈಫೈ 5 ಮತ್ತು ನೆವರ್ ವೈಫೈ 6ಇ ಟೆಕ್ನಾಲಜೀಸ್ ಮೂಲದ ಪ್ರೊಡೆಕ್ಟ್ ಆಗಿದೆ.


Click it and Unblock the Notifications