ರಿಲಯನ್ಸ್‌ ಜಿಯೋ ತೊರೆದ 1,09,00,000 ಗ್ರಾಹಕರು: ಕಾರಣವೇನು?

2014ರಲ್ಲಿ ಅತ್ಯಲ್ಪ ಮೊತ್ತದಲ್ಲಿ ಇಂಟರ್‌ನೆಟ್‌ ಡೇಟಾ ಪೂರೈಸುವ ಮೂಲಕ ಜಾಗತಿಕ ಮಟ್ಟದಲ್ಲಿ ಧೂಳೆಬ್ಬಿಸಿದ್ದ ಜಿಯೊ ಸದ್ಯ ತನ್ನ ಹೆಚ್ಚುವರಿ ತೆರಿಗೆಯಿಂದ ಕೊಂಚ ಮಂಕಾಗಿದೆ ಎಂದರೆ ತಪ್ಪಾಗಲಾರದು. ಇತ್ತೀಚಿಗೆ ಜಿಯೋ ತನ್ನ ಬಳಕೆದಾರರ ಮೇಲೆ ರೀಜಾರ್ಜ್‌ ಸುಂಕದಲ್ಲಿ ಭಾರೀ ಹೆಚ್ಚಳ ಮಾಡಿದ್ದು, ಪರಿಣಾಮ ಸದ್ಯ ಎರಡನೇ ತ್ರೈಮಾಸಿಕದಲ್ಲಿ ಸುಮಾರು ಬರೊಬ್ಬರಿ 1,09,00,000 ಗ್ರಾಹಕರು ಜಿಯೋವನ್ನು ತೊರೆದಿದ್ದಾರೆ ಎನ್ನಲಾಗಿದೆ. ಸಹಜವಾಗಿಯೇ ಇದರಿಂದ ಜಿಯೋ ಮೇಲೆ ವ್ಯತಿರಿಕ್ತ ಪ್ರಭಾವ ಕೂಡ ಬೀರಿದೆ ಎನ್ನಲಾಗಿದೆ. ಆದರೆ ಇದು ಜಿಯೋ ಸಂಸ್ಥೆಗೆ ಆತಂಕ ಪಡುವ ಅಂಶವೇ ಎಂಬ ಪ್ರಶ್ನೆಗೆ ಉತ್ತರ ಸರಳವಾಗಿದೆ. ಜಿಯೋ ತೊರೆದಿರುವುದು ಆತಂಕ ಪಡುವ ಸಂಗತಿ ಅಲ್ಲ. ಇದು ಜಗತ್ತಿನ ಪ್ರತಿಯೊಂದು ಈ ರೀತಿಯ ಸಂಸ್ಥೆಯಲ್ಲಿ ನಡೆಯುವ ಸಂಗತಿಯಾಗಿದ್ದು, ಕೊಂಚ ಸುಂಕ ಹೆಚ್ಚಾದರೂ ಗ್ರಾಹಕರು ಮತ್ತೊಂದು ಕಂಪೆನಿಯತ್ತ ಕಣ್ಣು ಹಾಯಿಸುವುದು ಸಾಮಾನ್ಯ ಸಂಗತಿಯಾಗಿದೆ ಎಂದು ಮಾರುಕಟ್ಟೆ ಪಂಡಿತರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

2014ರಲ್ಲಿ ಜಿಯೋದ ಹವಾ ಹೇಗಿತ್ತು?

2014ರ ವರೆಗೂ ಭಾರತ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಇಂಟರ್‌ನೆಟ್‌ ಡೇಟಾದ ಬೆಲೆಯು ತೀರಾ ಹೆಚ್ಚಿದ್ದು, ಜನತೆ ಹೆಚ್ಚಿನ ಮೊತ್ತವನ್ನು ನೀಡಬೇಕಾದ ಅನಿವಾರ್ಯತೆ ಇತ್ತು. ಈ ಅವಧಿಯಲ್ಲಿ ಹಲವು ಕಂಪೆನಿಗಳು ಹೆಚ್ಚಿನ ಮೊತ್ತಕ್ಕೆ ಮೊಬೈಲ್‌ ಡೇಟಾವನ್ನು ಮಾರಾಟ ಮಾಡಿ, ಬಹುಕೋಟಿ ರೂ. ಲಾಭ ಮಾಡಿಕೊಂಡಿತ್ತು. ಆದರೆ 2014ರಲ್ಲಿ ರಿಲಯನ್ಸ್‌ನ ಜಿಯೊ ಯೊಜನೆ ಆರಂಭವಾದ ಬಳಿಕ ಭಾರತದಲ್ಲಿ ಇಂಟರ್‌ನೆಟ್‌ನ ಪರಿಭಾಷೆಯನ್ನೇ ಬದಲಾಯಿಸಿತು ಎಂದರೆ ಅತಿಶಯೋಕ್ತಿಯಾಗಲಾರದು. 2014ರಲ್ಲಿ ಜಿಯೊ ಯೋಜನೆ ಆರಂಭದಲ್ಲಿ ಬಹುತೇಕ ಉಚಿತವಾಗಿ ಸೇವೆ ನೀಡಿದ್ದ ರಿಲಯನ್ಸ್‌ ಬಳಿಕ ನಿಧಾನವಾಗಿ ತನ್ನ ಮೊತ್ತವನ್ನು ಹೆಚ್ಚಿಸಿತ್ತು. ಮೊತ್ತ ಹೆಚ್ಚಿಸಿದರೂ ಉಳಿದ ಸಂಸ್ಥೆಗೆ ಹೋಲಿಕೆ ಮಾಡಿದರೆ ಮೊತ್ತವು ತೀರಾ ಕಡಿಮೆ ಇತ್ತು. ಹಾಗಾಗಿ ಈ ಅವಧಿಯಲ್ಲಿ ಜಿಯೋದ ಗ್ರಾಹಕರ ಸಂಖ್ಯೆಯಲ್ಲೂ ದಾಖಲೆ ಪ್ರಮಾಣದಲ್ಲಿ ಏರುತ್ತಲೇ ಹೋಯಿತು.

ರಿಲಯನ್ಸ್‌ ಜಿಯೋ ತೊರೆದ 1,09,00,000 ಗ್ರಾಹಕರು

ಕೆಲವರು ಹೊರನಡೆದರೂ ಹೆಚ್ಚಾದ ಗ್ರಾಹಕರ ಸಂಖ್ಯೆ

ಒಂದೆಡೆ ಎರಡನೇ ತ್ರೈಮಾಸಿಕದಲ್ಲಿ ಜಿಯೋದ ಸುಮಾರು 1,09,00000 ಗ್ರಾಹಕರು ಕಂಪೆನಿ ಬಿಟ್ಟು ತೆರಳಿದರೂ ಒಟ್ಟಾರೆ ಅಂಕಿಅಂಶಗಳ ಪ್ರಕಾರ Jio ನ 5G ಚಂದಾದಾರರ ಸಂಖ್ಯೆ 17 ಮಿಲಿಯನ್ (1.70 ಕೋಟಿ) ಹೆಚ್ಚಾಗಿದೆ ಎಂದು ಬಹಿರಂಗಪಡಿಸಿದೆ. ಈ ಹಿಂದೆ ಬಳಕೆದಾರರ ಸಂಖ್ಯೆ 130 ಮಿಲಿಯನ್ ಇದ್ದರೆ ಸದ್ಯ ಈ ಸಂಖ್ಯೆ 147 ಮಿಲಿಯನ್‌ಗೆ ತಲುಪಿದೆ. ಹಾಗಾಗಿ 1.70 ಕೋಟಿ ಜನತೆ ಹೆಚ್ಚುವರಿಯಾಗಿ ಜಿಯೋ ಕುಟುಂಬವನ್ನು ಸೇರಿಕೊಂಡಿದ್ದಾರೆ. ಪ್ರಸ್ತುತ ARPU ಅಂಕಿ ಅಂಶವು 181.7 ರಿಂದ 195.1 ಕ್ಕೆ ಹೆಚ್ಚಾಗಿದೆ. ಇದರ ಹೊರತಾಗಿಯೂ ಜಿಯೋದ ಒಟ್ಟಾರೆ ಚಂದಾದಾರರ ಬೇಸ್ ಕುಸಿತವನ್ನು ಅನುಭವಿಸಿದೆ. ಒಟ್ಟಾರೆ ಬಳಕೆದಾರರ ಸಂಖ್ಯೆಯಲ್ಲಿ ಕುಸಿತದ ನಡುವೆಯೂ ಜಿಯೋ ನಿವ್ವಳ ಲಾಭ 6,536 ಕೋಟಿ ರೂ.ಗೆ ಏರಿಕೆಯಾಗಿದೆ.

ಮುಂದುವರೆದ ಜಿಯೋ ಪ್ರಾಬಲ್ಯ!

OpenSignal ನ ಇತ್ತೀಚಿನ ವರದಿಯು ಮೂರು ಪ್ರಮುಖ ಕ್ಷೇತ್ರಗಳಲ್ಲಿ ಜಿಯೋ ಪ್ರಾಬಲ್ಯವನ್ನು ಎತ್ತಿ ತೋರಿಸಿದೆ. ನೆಟ್‌ವರ್ಕ್ ವೇಗ, ಕವರೇಜ್ ಮತ್ತು ಸ್ಥಿರತೆ ಈ ವಿಚಾರದಲ್ಲಿ ಜಿಯೋ ತನ್ನ ಪ್ರಾಬಲ್ಯವನ್ನು ಮುಂದುವರೆಸಿದೆ ಎಂದು ವರದಿ ತಿಳಿಸಿದೆ. 2024ರ ಅಕ್ಟೋಬರ್ ಭಾರತದ ಮೊಬೈಲ್ ನೆಟ್‌ವರ್ಕ್ ಅನುಭವದ ವರದಿ ಪ್ರಕಾರ, ಜಿಯೋ ಡೌನ್‌ಲೋಡ್ ವೇಗವು 89.5 Mbps ಅನ್ನು ತಲುಪಿದೆ ಎಂದು ಬಹಿರಂಗಪಡಿಸಿತು. ಹಾಗಾಗಿ ಈ ವೇಗವು ಜಿಯೋ ಪ್ರತಿಸ್ಪರ್ಧಿಗಳ ವೇಗವನ್ನು ಕೂಡ ಮೀರಿಸಿದೆ. ಏರ್‌ಟೆಲ್ 44.2 Mbps ಅನ್ನು ಹೊಂದಿದ್ದರೆ, Vi 16.9 Mbps ನಲ್ಲಿ ತೀರಾ ಹಿಂದುಳಿದಿದೆ. ಹಾಗಾಗಿ ಜಿಯೋದ ವೇಗವು ಏರ್‌ಟೆಲ್‌ಗಿಂತ ದುಪ್ಪಟ್ಟಾಗಿದೆ. ಇದು ಸ್ಟ್ರೀಮಿಂಗ್, ಗೇಮಿಂಗ್ ಮತ್ತು ಇತರಕ್ಕಾಗಿ ವೇಗದ ಮೊಬೈಲ್ ಇಂಟರ್ನೆಟ್ ಅನ್ನು ಬಯಸುವ ಬಳಕೆದಾರರಿಗೆ ಇದು ಉನ್ನತ ಆಯ್ಕೆಯಾಗಿದೆ.

ಭಾರತದಲ್ಲಿ ಮುಂದುವರೆದ ಡಿಜಿಟಲೀಕರಣ

ಸದ್ಯ ದೇಶದ ಕೆಲವೇ ಪ್ರಮಾಣದ ಜನತೆ ಅಂತರ್ಜಾಲ ಸೇವೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಹಾಗಾಗಿ ಅಂತರ್ಜಾಲ ಬಳಕೆದಾರರ ಸಂಖ್ಯೆಯಲ್ಲಿ ಏರಿಕೆ ದಾಖಲಾಗುತ್ತಲೇ ಹೋಗುತ್ತಿದೆ. ಅಲ್ಲದೆ ಸದ್ಯ ಭಾರತದ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳು ಡಿಜಿಟಲೀಕರಣದತ್ತ ಹೊಗುತ್ತಿದ್ದು, ಹಾಗಾಗಿ ಭವಷ್ಯದಲ್ಲಿ ರಿಲಯನ್ಸ್‌ ಜಿಯೋ, ಏರ್‌ಟೆಲ್‌ ಮುಂತಾದ ಕಂಪೆನಿಗಳಿಗೆ ಮತ್ತಷ್ಟು ಲಾಭ ತರಲಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಎಲ್ಲಾ ಕಂಪೆನಿಗಳು ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ಅಲ್ಪ ಮೊತ್ತ ಡೇಟಾ ನೀಡಲು ಮುಂದಾಗುತ್ತಿದು, ಭವಿಷ್ಯದಲ್ಲಿ ಇದರ ಲಾಭ ಜನತೆಗೆ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+