ರಿಲಯನ್ಸ್ ಇಂಡಸ್ಟ್ರೀಸ್ ಮಿಲಿಟೆಡ್‌ನ ಜಿಯೋ ಪ್ಲಾಟ್‌ಫಾರ್ಮ್ ರೆಡಿಸೀಸ್ ಕಾರ್ಪ್ ಯುಎಸ್ ಮೂಲದ ಮಿಮೋಸಾ ನೆಟ್‌ವರ್ಕ್ ಖರೀದಿಯ ಡೀಲ್‌ಗೆ ಸಹಿ ಹಾಕಿದೆ. ಮಿಮೋಸಾ ನೆಟ್‌ವರ್ಕ್ ಒಂದು ಕಮ್ಯೂನಿಫಿಕೇಷನ್ ಈಕ್ವಿಪ್‌ಮೆಂಟ್ ತಯಾರಕ ಸಂಸ್ಥೆಯಾಗಿದೆ. ಪ್ರಮುಖವಾಗಿ 5 ಜಿ ಸೇವೆಯನ್ನು ಮತ್ತು ತನ್ನ ಬ್ರಾಡ್‌ಬ್ಯಾಂಡ್ ಸೇವೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಮಿಮೋಸಾ ನೆಟ್‌ವರ್ಕ್ ಅನ್ನು ಖರೀದಿ ಮಾಡಿದೆ ಎಂದು ಮಾಹಿತಿ ನೀಡಿದೆ.
ಇನ್ನು ಮಿಮೋಸಾ ನೆಟ್‌ವರ್ಕ್ ಖರೀದಿಯ ಡೀಲ್ ಸುಮಾರು 60 ಬಿಲಿಯನ್ ಡಾಲರ್‌ನದ್ದಾಗಿದೆ. ಮಿಮೋಸಾ ನೆಟ್‌ವರ್ಕ್‌ನ ಮಾಲೀಕತ್ವವನ್ನು ಈ ಹಿಂದೆ ಯುಎಸ್ ಮೂಲದ ಏರ್‌ಸ್ಪಾನ್ ನೆಟ್‌ವರ್ಕ್ ಹೋಲ್ಡಿಂಗ್ಸ್ ಹೊಂದಿದೆ. ಪಾಯಿಂಟ್ ಟು ಪಾಯಿಂಟ್ ಮತ್ತು ಪಾಯಿಂಟ್ ಟು ಮಲ್ಟಿ ಪಾಯಿಂಟ್ ಪ್ರೊಡೆಕ್ಟ್ ಅನ್ನು ಮಿಮೋಸಾ ಹೊಂದಿದೆ. ವೈಫೈ 5 ಮತ್ತು ನೆವರ್ ವೈಫೈ 6ಇ ಟೆಕ್ನಾಲಜೀಸ್ ಮೂಲದ ಪ್ರೊಡೆಕ್ಟ್ ಆಗಿದೆ.

"ಇಂದು ಏರ್‌ಸ್ಪಾನ್ ನೆಟ್‌ವರ್ಕ್ಸ್ ಹೋಲ್ಡಿಂಗ್ಸ್ (ಏರ್‌ಸ್ಪಾನ್) ಮತ್ತು ಜಿಯೋ ಪ್ಲಾಟ್‌ಫಾರ್ಮ್ ಲಿಮಿಟೆಡ್‌ನ (ಜಿಯೋ) ರೇಡಿಸೀಸ್ ಕಾರ್ಪೋರೇಷನ್ (ರೇಡಿಸೀಸ್) ಮಿಮೋಸಾ ನೆಟ್‌ವರ್ಕ್ಸಸ್ ಇಂಕ್ ಅನ್ನು ಖರೀದಿ ಮಾಡುವುದಾಗಿ ಘೋಷಣೆ ಮಾಡುತ್ತಿದೆ. ಸಾಲ ರಹಿತ, ನಗದು ರಹಿತ ಸುಮಾರು 60 ಮಿಲಿಯನ್ ಡಾಲರ್ ಡೀಲ್ ಇದಾಗಿದೆ," ಎಂದು ಸ್ಟೇಟ್‌ಮೆಂಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ.
ಇನ್ನು ಮಾಹಿತಿ ಪ್ರಕಾರ ಜಿಯೋದ ಯುನಿಟ್ ಆದ ರಿಲಯನ್ಸ್ ಜಿಯೋ ಇನ್ಫೋಕಾಮ್ ಯುಎಸ್‌ಎ, ಏರ್‌ಸ್ಪಾನ್‌ನ ಷೇರುದಾರ ಸಂಸ್ಥೆಯಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್ ಜಿಯೋ ಮೂಲಕ ದೇಶದಲ್ಲೇ ಅತೀ ದೊಡ್ಡ ಟೆಲಿಕಾಂ ಸೇವೆಯನ್ನು ನೀಡುತ್ತಾ ಬಂದಿದೆ. ಈಗ ವಿಶ್ವದಾದ್ಯಂತ ಜಿಯೋ 5ಜಿ ಸೇವೆಯನ್ನು ವಿಸ್ತಾರ ಮಾಡುತ್ತಿದೆ. ಕಳೆದ ವರ್ಷ ಸುಮಾರು 11 ಬಿಲಿಯನ್ ಡಾಲರ್‌ನ 5ಜಿ ಸ್ಪೆಕ್ಟ್ರಮ್ ಹರಾಜಿನ್ನು ರಿಲಯನ್ ಜಿಯೋ ಗೆದ್ದುಕೊಂಡಿದೆ.
ಮಿಮೋಸಾ ಸಂಸ್ಥೆಯ ಬಗ್ಗೆ ಮಾಹಿತಿ
ಮಿಮೋಸಾ ಸಂಸ್ಥೆಯನ್ನು 2018ರಲ್ಲಿ ಏರ್‌ಸ್ಪಾನ್ ವಶಕ್ಕೆ ಪಡೆದುಕೊಂಡಿದೆ. ಮಿಮೋಸಾ ನೆಟ್‌ವರ್ಕ್ ಒಂದು ಕಮ್ಯೂನಿಫಿಕೇಷನ್ ಈಕ್ವಿಪ್‌ಮೆಂಟ್ ತಯಾರಕ ಸಂಸ್ಥೆಯಾಗಿದೆ. ಈ ಸಂಸ್ಥೆಯು 5ಜಿ ಸೇವೆ ವಿಸ್ತರಣೆಗೆ ಮಿಮೋಸಾಗೆ ಸಹಾಯ ಮಾಡಲಿದೆ. ಇನ್ನು ಕಳೆದ ಕೆಲವು ವರ್ಷಗಳಿಂದ ರಿಲಯನ್ಸ್ ಇಂಡಸ್ಟ್ರೀಸ್ ಭಾರತದ ಟೆಲಿಕಾಂ ಮಾರುಕಟ್ಟೆಯಲ್ಲಿ ಹಲವಾರು ಹೂಡಿಕೆಗಳನ್ನು ಮಾಡುತ್ತಿದೆ. ಇನ್ನು ಈ ಡೀಲ್ 2023ರ ಮೂರನೇ ತ್ರೈಮಾಸಿಕದಲ್ಲಿ ಕೊನೆಯಾಗುವ ಸಾಧ್ಯತೆಯಿದೆ.


Click it and Unblock the Notifications