ಖ್ಯಾತ ಭಾರತೀಯ ಬ್ಯಾಂಕರ್, ICICI ಬ್ಯಾಂಕ್ ನ ಮಾಜಿ ಅಧ್ಯಕ್ಷ ನಾರಾಯಣನ್ ವಘುಲ್ ನಿಧನ

ನವದೆಹಲಿ, ಮೇ 22: ಖ್ಯಾತ ಭಾರತೀಯ ಬ್ಯಾಂಕರ್ ಮತ್ತು ಐಸಿಐಸಿಐ ಬ್ಯಾಂಕ್‌ನ ಮಾಜಿ ಅಧ್ಯಕ್ಷ ನಾರಾಯಣನ್ ವಘುಲ್ (88 ) ಶನಿವಾರ ನಿಧನರಾಗಿದ್ದಾರೆ. ಕುಸಿದು ಬಿದ್ದು, ಪ್ರಜ್ಞಾಹೀನಗೊಂಡು ಗಂಭೀರ ಸ್ಥಿತಿಯಲ್ಲಿದ್ದ ಅವರು ಎರಡು ದಿನಗಳಿಂದ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ನಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದರು.

ನಾರಾಯಣನ್ ವಘುಲ್ ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಪ್ರೊಬೇಷನರಿ ಅಧಿಕಾರಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಬಳಿಕ ತಮ್ಮ ಕಿರಿಯ ಅಂದರೆ 44 ನೇ ವಯಸ್ಸಿನಲ್ಲಿ ಸರ್ಕಾರಿ ಬ್ಯಾಂಕ್ ಆಫ್ ಇಂಡಿಯಾದ ಅಧ್ಯಕ್ಷರಾದರು.

ಖ್ಯಾತ ಭಾರತೀಯ ಬ್ಯಾಂಕರ್ ನಿಧನ

ಎಸ್‌ಬಿಐನಲ್ಲಿ ಸುಮಾರು 19 ವರ್ಷಗಳ ಕಾಲ ಕಳೆದ ನಂತರ ವಘುಲ್ ಅವರು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕ್ ಮ್ಯಾನೇಜ್‌ಮೆಂಟ್‌ನಲ್ಲಿ ಕೆಲವು ವರ್ಷಸೇವೆ ಸಲ್ಲಿಸಿದ್ದರು. ನಂತರ 1985 ರಲ್ಲಿ ಪ್ರಧಾನ ಮಂತ್ರಿ ರಾಜೀವ್ ಗಾಂಧಿಯವರು ಇಂಡಸ್ಟ್ರಿಯಲ್ ಕ್ರೆಡಿಟ್ ಮತ್ತು ಇನ್ವೆಸ್ಟ್‌ಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ(ICICI) ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಿಸಲಾಯಿತು. ಆ ವೇಳೆ ಇನ್ನೂ ಸರ್ಕಾರಿ ನಿಯಂತ್ರಿತ ಸಾರ್ವಜನಿಕ ಹಣಕಾಸು ಸಂಸ್ಥೆಯಾಗಿತ್ತು

ವಘುಲ್ ಅವರು ಇಂಡಸ್ಟ್ರಿಯಲ್ ಕ್ರೆಡಿಟ್ ಮತ್ತು ಇನ್ವೆಸ್ಟ್‌ಮೆಂಟ್ ಕಾರ್ಪೊರೇಷನ್ ಅನ್ನು ಭಾರತದ ಅತಿದೊಡ್ಡ ಖಾಸಗಿ ವಲಯದ ಬ್ಯಾಂಕ್ ಆಗಿ ಪರಿವರ್ತಿಸಲು ಕಾರಣರಾದರು ಮಾತ್ರವಲ್ಲದೇ ಇದಕ್ಕೆ ICICI ಬ್ಯಾಂಕ್ ಎಂದು ನಾಮಕರಣ ಮಾಡಿದರು. ಸುದೀರ್ಘ ಸೇವೆಯ ಬಳಿಕ 1996 ರಲ್ಲಿ ನಿವೃತ್ತರಾದರೂ 2009 ರವರೆಗೆ ಅದರ ಕಾರ್ಯನಿರ್ವಾಹಕೇತರ ಅಧ್ಯಕ್ಷರಾಗಿದ್ದರು. ವಘುಲ್ ಅವರು ವಿಪ್ರೋ , ಮಹೀಂದ್ರಾ ಮತ್ತು ಮಹೀಂದ್ರಾ , ಅಪೊಲೊ ಹಾಸ್ಪಿಟಲ್ಸ್ ಮತ್ತು ಮಿತ್ತಲ್ ಸ್ಟೀಲ್ ಸೇರಿದಂತೆ ಹಲವು ಕಂಪನಿಗಳ ಮಂಡಳಿಯಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.

1936 ರಲ್ಲಿ ಆಗಿನ ಬ್ರಿಟಿಷ್ ಭಾರತದಲ್ಲಿ ಮದ್ರಾಸ್ (ಇಂದಿನ ಚೆನ್ನೈ) ನಲ್ಲಿ ಎಂಟು ಮಕ್ಕಳ ಕುಟುಂಬದಲ್ಲಿ ಜನಿಸಿದ ವಘಲ್ ಎರಡನೆಯವರಾಗಿದ್ದರು. ರಾಮಕೃಷ್ಣ ಮಿಷನ್ ಶಾಲೆಯಲ್ಲಿ ವಿದ್ಯಾಭ್ಯಾಸದ ನಂತರ 1956 ರಲ್ಲಿ ಲಾಯೋಲಾ ಕಾಲೇಜ್ , ಮದ್ರಾಸ್ ವಿಶ್ವವಿದ್ಯಾನಿಲಯದಲ್ಲಿ ವಾಣಿಜ್ಯ ಪದವಿ ಪಡೆದರು. ವಘುಲ್ ಪದ್ಮಾ ವಘುಲ್ ಅವರನ್ನು ವಿವಾಹಗಿದ್ದು ಅವರಿಗೆ, ಮೋಹನ್ ಮತ್ತು ಸುಧಾ ಎಂಬ ಪುತ್ರ ಪುತ್ರಿಯರಿದ್ದಾರೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2023 ರಲ್ಲಿ ವಘುಲ್ ಅವರ ಆತ್ಮಚರಿತ್ರೆ ಬಿಡುಗಡೆ ಕಾರ್ಯುಕ್ರಮದಲ್ಲಿ ಭಾಗಿಯಾಗಿದ್ದ ಪೋಟೋಗಳನ್ನು ಎಕ್ಸ್‌ನಲ್ಲಿ ಹಂಚಿಕೊಂಡು "ಎನ್. ವಘುಲ್, ಒಬ್ಬ ಪ್ರಖ್ಯಾತ ಬ್ಯಾಂಕರ್, ಟೀಮ್ ಬಿಲ್ಡರ್, ಆರ್ಥಿಕ ಜಗತ್ತಿನಲ್ಲಿ ಅನೇಕರಿಗೆ ಮಾರ್ಗದರ್ಶಕ ಮತ್ತು ಬ್ಯಾಂಕಿಂಗ್ ಕ್ಷೇತ್ರದ ಆದರ್ಶಪ್ರಾಯ ನಾಯಕ ಇನ್ನಿಲ್ಲ. ಅವರ ಕುಟುಂಬ ಮತ್ತು ಸ್ನೇಹಿತರಿಗೆ ಸಂತಾಪ" ಎಂದು ಅವರು ಬರೆದಿದ್ದಾರೆ.

ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು " ಭಾರತೀಯ ಬ್ಯಾಂಕಿಂಗ್‌ನ ಭೀಷ್ಮ ಪಿತಾಮಹ ಇನ್ನಿಲ್ಲ ಎಂಬುವುದು ಬೇಸರದ ಸಂಗತಿಯಾಗಿದೆ" ಎಂದು ಎಕ್ಸ್ ಮಾಡಿದ್ದಾರೆ.

ವಘುಲ್ ಅವರು 2010 ರಲ್ಲಿ ವ್ಯಾಪಾರ ಮತ್ತು ಉದ್ಯಮ ವಿಭಾಗದಲ್ಲಿ ಸಲ್ಲಿಸಿದ ಸೇವೆಗಾಗಿ ಭಾರತದ ಮೂರನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬಿಸಿನೆಸ್ ಇಂಡಿಯಾದಿಂದ ವರ್ಷದ ಬಿಸಿನೆಸ್ ಮ್ಯಾನ್ (1991) ಮತ್ತು ಜೀವಮಾನ ಸಾಧನೆ ಪ್ರಶಸ್ತಿ ಸೇರಿದಂತೆ ಹಲವಾರು ಇತರ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+