ಭಾರತದ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಹಣದುಬ್ಬರವು ಅಕ್ಟೋಬರ್ 2023 ರಲ್ಲಿ ನಾಲ್ಕು ತಿಂಗಳುಗಳಲ್ಲಿ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ. ಕಳೆದ ತಿಂಗಳು ಕೂಡಾ ಕುಸಿದಿದ್ದ ಹಣದುಬ್ಬರ ಅಕ್ಟೋಬರ್‌ನಲ್ಲಿ ಶೇಕಡ 4.87ಕ್ಕೆ ತಲುಪಿದೆ. ಹಿಂದಿನ ತಿಂಗಳಲ್ಲಿ, ರಿಟೇಲ್ ಹಣದುಬ್ಬರ ದರವು ಶೇಕಡ 5.02 ರಷ್ಟಿತ್ತು.
ಹಣದುಬ್ಬರವು ಪ್ರಸ್ತುತ ಆರ್‌ಬಿಐನ ಮಧ್ಯಮ-ಅವಧಿಯ ಗುರಿಯಾದ ಶೇಕಡ 4ಕ್ಕೆ ಸಮೀಪದಲ್ಲಿದೆ. ಸತತ ಎರಡನೇ ತಿಂಗಳು ರಿಟೇಲ್ ಹಣದುಬ್ಬರವು ಆರ್‌ಬಿಐನ ಸಹಿಷ್ಣು ಮಿತಿಗಿಂತ ಕಡಿಮೆಯಾಗಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಹಣದುಬ್ಬರ ಶೇಕಡ 6.77ರಷ್ಟಿತ್ತು.

ಗ್ರಾಮೀಣ ಮತ್ತು ನಗರ ಹಣದುಬ್ಬರ ಎಷ್ಟಿದೆ?
ಅಕ್ಟೋಬರ್ 2023 ರಲ್ಲಿ, ರಿಟೇಲ್ ಹಣದುಬ್ಬರವು ಗ್ರಾಮೀಣ ಮತ್ತು ನಗರ ಪ್ರದೇಶ ಎರಡರಲ್ಲೂ ಕುಸಿತ ಕಂಡಿದೆ. ಸೆಪ್ಟೆಂಬರ್ 2023 ರಲ್ಲಿ ಗ್ರಾಮೀಣ ಮತ್ತು ನಗರ ಹಣದುಬ್ಬರವು ಕ್ರಮವಾಗಿ ಶೇಕಡ 5.33 ಮತ್ತು ಶೇಕಡ 4.65 ರಷ್ಟಿತ್ತು. ಅಕ್ಟೋಬರ್‌ನಲ್ಲಿ ಇವೆರಡು ಕೂಡಾ ಕ್ರಮವಾಗಿ ಶೇಕಡ 5.12 ಮತ್ತು ಶೇಕಡ 4.62 ಕ್ಕೆ ಇಳಿಕೆಯಾಗಿದೆ. ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಗ್ರಾಮೀಣ ಮತ್ತು ನಗರ ಹಣದುಬ್ಬರವು ಕ್ರಮವಾಗಿ ಶೇಕಡ 6.98 ಮತ್ತು ಶೇಕಡ 6.50 ರಷ್ಟಿತ್ತು.
ಗ್ರಾಹಕ ಆಹಾರ ಹಣದುಬ್ಬರ ಸೂಚ್ಯಂಕವು (ಸಿಎಫ್‌ಪಿಐ) ಅಕ್ಟೋಬರ್ 2023 ರಲ್ಲಿ ಶೇಕಡ 6.61ಕ್ಕೆ ಬಂದಿದೆ. ಇದು ಸೆಪ್ಟೆಂಬರ್ ತಿಂಗಳಿನ ಶೇಕಡ 6.62 ಕ್ಕೆ ಹೋಲಿಸಿದರೆ ಇದು ಕಡಿಮೆಯಾಗಿದೆ. ಅಕ್ಟೋಬರ್ 2022 ರಲ್ಲಿ, ಆಹಾರ ಹಣದುಬ್ಬರವು ಶೇಕಡ 7.01 ರಷ್ಟಿತ್ತು.
ಅಕ್ಟೋಬರ್ 2023 ರಲ್ಲಿ, ಆಹಾರ ಮತ್ತು ಪಾನೀಯಗಳ ಹಣದುಬ್ಬರ ದರವು ಶೇಕಡ 6.24 ರಷ್ಟಿದ್ದರೆ, ಪಾನ್, ತಂಬಾಕು ಮತ್ತು ಅಮಲು ಪದಾರ್ಥಗಳ ದರವು ಶೇಕಡ 3.87 ರಷ್ಟಿದೆ. ಬಟ್ಟೆ ಮತ್ತು ಪಾದರಕ್ಷೆಗಳ ಹಣದುಬ್ಬರ ದರವು ಶೇಕಡ 4.31 ರಷ್ಟಿದೆ. ವಸತಿ ಹಣದುಬ್ಬರವು ಶೇಕಡ 3.80 ರಷ್ಟಿದೆ.
ಈ ನಡುವೆ ಇಂಧನ ಮತ್ತು ಬೆಳಕಿನ ವಿಭಾಗದಲ್ಲಿ ಹಣದುಬ್ಬರವು ಶೇಕಡ 0.39 ಕ್ಕೆ ಇಳಿಕೆಯಾಗಿದೆ. ಕೊನೆಯದಾಗಿ, ವಿವಿಧ ಹಣದುಬ್ಬರ ದರವು ಶೇಕಡ 4.40 ರಷ್ಟಿತ್ತು. ಎಲ್ ನಿನೊ ಖಾರಿಫ್ ಬೆಳೆಗಳ ಉತ್ಪಾದನೆಯ ಮೇಲೆ ಪರಿಣಾಮ ಬೀರುವುದರಿಂದ ಬೇಳೆಕಾಳುಗಳು, ಧಾನ್ಯಗಳು ಮತ್ತು ಸಕ್ಕರೆ ಸೇರಿದಂತೆ ಮಸಾಲೆಗಳು (22.76%), ಬೇಳೆಕಾಳುಗಳು (18.79%), ಧಾನ್ಯಗಳು (10.65%), ಮೊಟ್ಟೆಗಳು (9.3%) ಮತ್ತು ಸಕ್ಕರೆ (5.5%) ಬೆಲೆಗಳು ಹೆಚ್ಚಳವಾಗಿದೆ.


Click it and Unblock the Notifications