ಪ್ರತೀ ವರ್ಷಾಂತ್ಯದ ವೇಳೆ ಮುಂಬರುವ ವರ್ಷದ ರಜಾಪಟ್ಟಿಗಳನ್ನು ರಿಲೀಸ್ ಮಾಡಲಾಗುತ್ತದೆ. ಅದರಂತೆ ಕೇಂದ್ರ ಸರ್ಕಾರವು ಇದೀಗ 2026ನೇ ಸಾಲಿನಲ್ಲಿ (2026 Central Govt Holiday) ಕೇಂದ್ರದ ಅಡಿಯಲ್ಲಿ ಬರುವ ಸಾರ್ವತ್ರಿಕ ರಜಾದಿನಗಳ ಪಟ್ಟಿಯನ್ನು ರಿಲೀಸ್ ಮಾಡಿದೆ. ಈ ರಜಾಪಟ್ಟಿ ಕೇಂದ್ರ ಸರ್ಕಾರದಡಿಯಲ್ಲಿ ಕೆಲಸ ಮಾಡುವ ಎಲ್ಲಾ ಉದ್ಯೋಗಿಗಳಿಗೆ ಅನ್ವಯವಾಗಲಿದೆ. ಆದ್ದರಿಂದ ಕೇಂದ್ರ ಸರ್ಕಾರಿ ನೌಕರರು ನಿರ್ಬಂಧಿತ ರಜಾದಿನಗಳ ಪಟ್ಟಿಯಿಂದ ಎರಡು ರಜೆಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ.

ದೆಹಲಿ/ನವದೆಹಲಿ ಹೊರಗಿರುವ ಕೇಂದ್ರ ಸರ್ಕಾರದ ಆಡಳಿತ ಕಚೇರಿಗಳಿಗೆ, ಈ ಪಟ್ಟಿಯಲ್ಲಿ ಕಡ್ಡಾಯ ರಜೆಗಳ ಜೊತೆಗೆ 12 ಐಚ್ಛಿಕ ರಜಾ ಪಟ್ಟಿಯಿಂದ ಮೂರು ರಜೆಗಳನ್ನು ಆಯ್ಕೆಮಾಡಿಕೊಳ್ಳುವ ಅವಕಾಶವಿರುತ್ತದೆ.
2026ನೇ ಸಾಲಿನ ಭಾರತದಾದ್ಯಂತ ಕೇಂದ್ರ ಸರ್ಕಾರಿ ರಜಾದಿನಗಳು:
ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ, ಮಹಾತ್ಮ ಗಾಂಧಿ ಜನ್ಮದಿನ, ಬುದ್ಧ ಪೂರ್ಣಿಮಾ, ಕ್ರಿಸ್‌ಮಸ್, ದಸರಾ (ವಿಜಯದಶಮಿ), ದೀಪಾವಳಿ, ಗುಡ್ ಫ್ರೈಡೆ, ಗುರು ನಾನಕ್ ಜಯಂತಿ, ಈದ್-ಉಲ್-ಫಿತರ್, ಈದ್-ಉಲ್-ಜುಹಾ, ಮಹಾವೀರ್ ಜಯಂತಿ, ಮೊಹರಂ, ಪ್ರವಾದಿ ಮೊಹಮ್ಮದ್ ಜನ್ಮದಿನ (ಈದ್-ಎ-ಮಿಲಾದ್) ಇವು ಕಡ್ಡಾಯ ರಜೆಗಳಾಗಿವೆ.
2026ನೇ ಸಾಲಿನ ಸರ್ಕಾರಿ ರಜಾದಿನಗಳು:
ಜನವರಿ 26 (ಸೋಮವಾರ) ಗಣರಾಜ್ಯೋತ್ಸವ
ಮಾರ್ಚ್ 4 (ಬುಧವಾರ) ಹೋಳಿ
ಮಾರ್ಚ್ 29 (ಭಾನುವಾರ) ಈದ್-ಉಲ್-ಫಿತರ್
ಮಾರ್ಚ್ 31 (ಮಂಗಳವಾರ) ರಾಮ ನವಮಿ
ಏಪ್ರಿಲ್ 1 (ಬುಧವಾರ) ಮಹಾವೀರ್ ಜಯಂತಿ
ಏಪ್ರಿಲ್ 3 (ಶುಕ್ರವಾರ) ಗುಡ್ ಫ್ರೈಡೆ
ಮೇ 31 (ಭಾನುವಾರ) ಬುದ್ಧ ಪೂರ್ಣಿಮಾ,
ಜೂನ್ 26 (ಶುಕ್ರವಾರ) ಈದ್-ಉಲ್-ಜುಹಾ (ಬಕ್ರೀದ್)
ಜೂನ್ 26 (ಶುಕ್ರವಾರ) ಮೊಹರಂ
ಆಗಸ್ಟ್ 15 (ಶನಿವಾರ) ಸ್ವಾತಂತ್ರ್ಯ ದಿನಾಚರಣೆ
ಸೆಪ್ಟೆಂಬರ್ 4 (ಶುಕ್ರವಾರ) ಜನ್ಮಾಷ್ಟಮಿ
ಸೆಪ್ಟೆಂಬರ್ 24 (ಗುರುವಾರ) ಮಿಲಾದ್-ಉನ್-ನಬಿ / ಈದ್-ಎ-ಮಿಲಾದ್
ಅಕ್ಟೋಬರ್ 2 (ಶುಕ್ರವಾರ) ಮಹಾತ್ಮ ಗಾಂಧಿ ಜನ್ಮದಿನ
ಅಕ್ಟೋಬರ್ 21 (ಬುಧವಾರ) ದಸರಾ (ವಿಜಯ ದಶಮಿ)
ನವೆಂಬರ್ 21 (ಶನಿವಾರ) ದೀಪಾವಳಿ
ನವೆಂಬರ್ 29 (ಭಾನುವಾರ) ಗುರು ನಾನಕ್ ಜಯಂತಿ
ಡಿಸೆಂಬರ್ 25 (ಶುಕ್ರವಾರ) ಕ್ರಿಸ್‌ಮಸ್.
ದೆಹಲಿ/ನವದೆಹಲಿಯ 2026ರ ನಿರ್ಬಂಧಿತ (ಐಚ್ಛಿಕ) ರಜಾದಿನಗಳ ಪಟ್ಟಿ:
ಈ ಪಟ್ಟಿಯು ದೆಹಲಿ/ನವದೆಹಲಿಯಲ್ಲಿರುವ ಕೇಂದ್ರ ಸರ್ಕಾರಿ ಕಚೇರಿಗಳಿಗೆ ಮಾತ್ರ ಅನ್ವಯಿಸುತ್ತದೆ. ರಾಜ್ಯ ರಾಜಧಾನಿಗಳಲ್ಲಿರುವ ಸಮನ್ವಯ ಸಮಿತಿಗಳು ಅವರಿಗೆ ಬೇಕಾದಂತೆ ರಜಾ ದಿನಗಳನ್ನು ರಚಿಸುತ್ತದೆ..
ಜನವರಿ 1 (ಗುರುವಾರ) ಹೊಸ ವರ್ಷದ ದಿನ
ಜನವರಿ 13 (ಮಂಗಳವಾರ) ಹಜರತ್ ಅಲಿ ಜನ್ಮದಿನ
ಜನವರಿ 14 (ಬುಧವಾರ) ಮಕರ ಸಂಕ್ರಾಂತಿ
ಜನವರಿ 15 (ಗುರುವಾರ) ಮಾಘ ಬಿಹು/ಪೊಂಗಲ್
ಜನವರಿ 16 (ಶುಕ್ರವಾರ) ಶ್ರೀ ಪಂಚಮಿ/ಬಸಂತ ಪಂಚಮಿ
ಫೆಬ್ರವರಿ 12 (ಗುರುವಾರ) ಗುರು ರವಿ ದಾಸ್ ಜನ್ಮದಿನ
ಫೆಬ್ರವರಿ 26 (ಗುರುವಾರ) ಸ್ವಾಮಿ ದಯಾನಂದ ಸರಸ್ವತಿ ಜಯಂತಿ
ಫೆಬ್ರವರಿ 26 (ಗುರುವಾರ) ಮಹಾ ಶಿವರಾತ್ರಿ
ಮಾರ್ಚ್ 3 (ಮಂಗಳವಾರ) ಹೋಲಿಕಾ ದಹನ
ಮಾರ್ಚ್ 3 (ಮಂಗಳವಾರ) ದೋಲ್ಯತ್ರ
ಮಾರ್ಚ್ 19 (ಗುರುವಾರ) ಚೈತ್ರ ಸುಕ್ಲಾಡಿ/ಗುಡಿ ಪಾಡವಾ/ಯುಗಾದಿ
ಮಾರ್ಚ್ 31 (ಮಂಗಳವಾರ) ರಾಮ ನವಮಿ
ಏಪ್ರಿಲ್ 5 (ಭಾನುವಾರ) ಈಸ್ಟರ್ ಸಂಡೇ
ಏಪ್ರಿಲ್ 15 (ಬುಧವಾರ) ತಮಿಳು ಹೊಸ ವರ್ಷ/ವಿಷು
ಏಪ್ರಿಲ್ 15 (ಬುಧವಾರ) ವೈಶಾಖಾದಿ (ಬೆಂಗಾಲಿ ಹೊಸ ವರ್ಷ)
ಏಪ್ರಿಲ್ 15 (ಬುಧವಾರ) ಪುತುವರ್ಷಂ (ಮಲಯಾಳಂ ಹೊಸ ವರ್ಷ)
ಮೇ 8 (ಶುಕ್ರವಾರ) ಗುರು ರವೀಂದ್ರನಾಥ ಟ್ಯಾಗೋರ್ ಜನ್ಮದಿನ
ಜುಲೈ 16 (ಗುರುವಾರ) ರಥಯಾತ್ರೆ
ಆಗಸ್ಟ್ 15 (ಶನಿವಾರ) ಪಾರ್ಸಿ ಹೊಸ ವರ್ಷ/ನವರೋಜ್
ಆಗಸ್ಟ್ 26 (ಬುಧವಾರ) ಓಣಂ/ತಿರು ಓಣಂ
ಆಗಸ್ಟ್ 26 (ಬುಧವಾರ) ರಕ್ಷಾ ಬಂಧನ
ಸೆಪ್ಟೆಂಬರ್ 14 (ಭಾನುವಾರ) ಗಣೇಶ ಚತುರ್ಥಿ
ಅಕ್ಟೋಬರ್ 18 (ಭಾನುವಾರ) ದಸರಾ (ಸಪ್ತಮಿ)
ಅಕ್ಟೋಬರ್ 19 (ಸೋಮವಾರ) ದಸರಾ (ಮಹಾಷ್ಟಮಿ)
ಅಕ್ಟೋಬರ್ 20 (ಮಂಗಳವಾರ) ದಸರಾ (ಮಹಾನವಮಿ)
ಅಕ್ಟೋಬರ್ 22 (ಬುಧವಾರ) ಮಹರ್ಷಿ ವಾಲ್ಮೀಕಿ ಜನ್ಮದಿನ
ಅಕ್ಟೋಬರ್ 30 (ಗುರುವಾರ) ಕರ್ಕಾ ಚತುರ್ಥಿ (ಕರ್ವಾ ಚೌತ್)
ನವೆಂಬರ್ 17 (ಸೋಮವಾರ) ನರಕ ಚತುರ್ದಶಿ
ನವೆಂಬರ್ 17 (ಸೋಮವಾರ) ಗೋವರ್ಧನ ಪೂಜಾ
ನವೆಂಬರ್ 18 (ಮಂಗಳವಾರ) ಭಾಯಿ ದೂಜ್
ನವೆಂಬರ್ 19 (ಬುಧವಾರ) ಪ್ರಥಾರ್ ಷಷ್ಠಿ ಅಥವಾ ಸೂರ್ಯ ಷಷ್ಠಿ (ಛಾತ್ ಪೂಜಾ)
ನವೆಂಬರ್ 24 (ಸೋಮವಾರ) ಗುರು ತೇಗ್ ಬಹದ್ದೂರ್ ಹುತಾತ್ಮ ದಿನ
ಡಿಸೆಂಬರ್ 23 (ಬುಧವಾರ) ಹಜರತ್ ಅಲಿ ಜನ್ಮದಿನ
ಡಿಸೆಂಬರ್ 24 (ಗುರುವಾರ) ಕ್ರಿಸ್‌ಮಸ್ ಈವ್.


Click it and Unblock the Notifications