ಉದ್ಯೋಗಿಗಳಿಗೆ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು, ಟಾಟಾ ಕಾರುಗಳನ್ನ ನೀಡಿದ ಚೆನ್ನೈ ಮೂಲದ ಲಾಜಿಸ್ಟಿಕ್ಸ್ ಕಂಪನಿ

ಸಹಜವಾಗಿ ಕಂಪನಿಗಳಲ್ಲಿ ಹಬ್ಬದ ಸಮಯದಲ್ಲಿ ಉದ್ಯೋಗಿಗಳಿಗೆ ಸಣ್ಣ ಪುಟ್ಟ ಉಡುಗೊರೆಗಳನ್ನ ನೀಡುವುದನ್ನ ನಾವು ನೋಡಿದ್ದೇವೆ. ಅದರಲ್ಲೂ ಕೆಲ ಕಂಪನಿಗಳು ಡ್ರೈಫ್ರೂಟ್ಸ್‌, ಸಿಹಿ ತಿಂಡಿ ಅಥವಾ ಚಾಕ್‌ಲೇಟ್‌ ಬಾಕ್ಸ್‌ಗಳನ್ನ ನೀಡುವುದನ್ನ ನಾವು ನೋಡಿರಬಹುದು. ಆದ್ರೆ ಇಲ್ಲೊಂದು ಕಂಪನಿ ತನ್ನ ಉದ್ಯೋಗಿಗಳಿಗೆ ದುಭಾರಿ ಉಡುಗೊರೆಗಳನ್ನ ನೀಡಿದೆ.

ತಮಿಳುನಾಡಿನ ರಾಜಧಾನಿಯಾದ ಚೆನ್ನೈನ ಕಂಪನಿಯೊಂದು ಹೊಸ ರ್ವಕ್ಕು ಮುನ್ನ ತನ್ನ ಉದ್ಯೋಗಿಗಳಿಗೆ ಕಾರುಗಳು ಹಾಗು ಬೈಕ್‌ಗಳಂತ ದುಬಾರಿ ಉಡುಗೊರೆಗಳನ್ನ ನೀಡಿದೆ. ಚೆನ್ನೈ ಮೂಲದ ಕಂಪನಿಯಾದ ಸುರ್ಮೌಂಟ್ ಲಾಜಿಸ್ಟಿಕ್ಸ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ತನ್ನ ಕಂಪನಿಯ ಉದ್ಯೋಗಿಗಳಿಗೆ ರಾಯಲ್ ಎನ್‌ಫೀಲ್ಡ್ ಮೋಟಾರ್‌ಸೈಕಲ್‌ಗಳು ಮತ್ತು ಟಾಟಾ ಕಾರುಗಳನ್ನ ಉಡುಗೊರೆಯಾಗಿ ನೀಡಿದೆ. ಸಂಸ್ಥೆಯ 20 ಉದ್ಯೋಗಿಗಳನ್ನು ಪ್ರೋತ್ಸಹಿಸಲು ಟಾಟಾ ಕಾರು, ಆಕ್ಟಿವಾ ಸ್ಕೂಟಿ ಹಾಗೂ ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನ ಉಡುಗೊರೆಯಾಗಿ ನೀಡಿದೆ. ಅಲ್ಲದೆ ಆ ಕಂಪನಿಯ ಉದ್ಯೋಗಿಗಳು ತಾವು ಈ ಉಡುಗೊರೆಯನ್ನ ಪಡೆಯುತ್ತಾರೆ ಎಂದು ಅವರು ಊಹಿಸಿರಲಿಲ್ಲ. ಅಲ್ಲದೆ ಸಹಜವಾಗಿ ಎಲ್ಲಾ ಕಂಪನಿಗಳಲ್ಲಿ ಉಡುಗೊರೆಯಾಗಿ ಸಣ್ಣ ಪುಟ್ಟ ವಸ್ತು ಹಾಗೆ ಸಿಹಿ ಹಂಚಿದ್ರೆ ಈ ಕಂಪನಿ ಇಂತಹ ಉಡುಗೊರೆಗಳನ್ನ ನೀಡಿರುವುದು ನಿಜಕ್ಕೂ ಆಶ್ಚರ್ಯ.

ಉದ್ಯೋಗಿಗಳಿಗೆ ರಾಯಲ್ ಎನ್‌ಫೀಲ್ಡ್ ಬೈಕ್‌ ಮತ್ತು ಟಾಟಾ ಕಾರ್‌ ಉಡುಗೊರೆ

ಅದರಲ್ಲೂ ಇದು ಅಚ್ಚರಿ ಪಡುವಂತಹ ವಿಷಯವೇ, ಏಕೆಂದರೆ ಅಷ್ಟು ದುಭಾರಿ ಮೊತ್ತದ ಉಡುಗೊರೆಗಳನ್ನ ಕಂಪನಿಯವರು ನೀಡಿದ್ದಾರೆ ಎಂದರೆ ಇದೇ ಮೊದಲ ಬಾರಿ ಎನ್ನಬಹುದು. ಸುರ್ಮೌಂಟ್ ಲಾಜಿಸ್ಟಿಕ್ಸ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ತನ್ನ ಕಂಪನಿಯ ಉದ್ಯೋಗಿಗಳನ್ನ ಮತ್ತಷ್ಟು ಹುರಿದುಂಬಿಸಲು ಜೊತೆಗೆ ಕಂಪನಿಯ ಏಳಿಗೆಗೆ ಅವರು ಕೆಲಸ ಮಾಡಲು ಪ್ರೇರೇಪಿಸುವ ಸಲುವಾಗಿ ಕಾರುಗಳು ಮತ್ತು ಮೋಟಾರ್ ಸೈಕಲ್‌ಗಳನ್ನು ಉಡುಗೊರೆಯಾಗಿ ಕಂಪನಿ ನೀಡಿದೆ. ಇನ್ನು ಕಂಪನಿಯ ಉನ್ನತ ಅಧಿಕಾರಿಯೊಬ್ಬರು ಭಾನುವಾರ ಈ ಕುರಿತು ಮಾಹಿತಿ ನೀಡಿದ್ದು, ಉನ್ನತ ಗುರಿಗಳನ್ನು ಸಾಧಿಸಲು ಕಂಪನಿಯ 20 ಉದ್ಯೋಗಿಗಳನ್ನು ಆಯ್ಕೆಮಾಡಿ ಅವರಿಗೆ ಈ ಉಡುಗೊರೆಯನ್ನ ನೀಡಿದ್ದಾರೆ ಎನ್ನಲಾಗ್ತಿದೆ. ಅಲ್ಲದೆ ಅವರಿಗೆ ಟಾಟಾ ಕಾರುಗಳು, ಆಕ್ಟಿವಾ ಸ್ಕೂಟಿ ಮತ್ತು ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ಉಡುಗೊರೆಯಾಗಿ ಕಂನಿ ನೀಡಿದೆ.

ಕಂಪನಿ ಏನು ಮಾಡುತ್ತದೆ

ಸರ್ಮೌಂಟ್ ಲಾಜಿಸ್ಟಿಕ್ಸ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ತನ್ನ ಪ್ರಧಾನ ಕಛೇರಿಯನ್ನು ಚೆನ್ನೈನಲ್ಲಿ ಹೊಂದಿದೆ. ಇದು ಸರಕು ಸಾಗಣೆ ವಿಳಂಬ, ಪಾರದರ್ಶಕತೆಯ ಕೊರತೆ ಮತ್ತು ಅಸಮರ್ಥ ಪೂರೈಕೆ ಸರಪಳಿ ಪರಿಹಾರಗಳಂತಹ ಲಾಜಿಸ್ಟಿಕ್ಸ್ ವಲಯದಲ್ಲಿನ ಸಾಮಾನ್ಯ ಸವಾಲುಗಳನ್ನು ಪರಿಹರಿಸುವ ಕೆಲಸ ಮಾಡುತ್ತದೆ. ಎಲ್ಲಾ ಗಾತ್ರದ ವ್ಯವಹಾರಗಳಿಗೆ ಲಾಜಿಸ್ಟಿಕ್ಸ್ ಅನ್ನು ಸರಳಗೊಳಿಸುವುದು ನಮ್ಮ ಗುರಿಯಾಗಿದೆ ಎಂದು ಕಂಪನಿಯ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಡೆನ್ಸಿಲ್ ರಿಯಾನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸಾಂಪ್ರದಾಯಿಕ ಸರಕು ಸಾಗಣೆ ಮತ್ತು ಲಾಜಿಸ್ಟಿಕ್ಸ್ ಪ್ರಕ್ರಿಯೆಗಳ ತೊಂದರೆಗಳನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ. ಪರಿಣಾಮಕಾರಿ ಮಾತ್ರವಲ್ಲ, ಪರಿಸರ ಪ್ರಜ್ಞೆಯೂ ಇರುವ ಪರಿಹಾರಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ.

ಉಡುಗೊರೆಗಳಿಗೆ ಸಂಬಂಧಿಸಿದಂತೆ, ಬಲವಾದ ಉದ್ಯೋಗಿ ಕ್ಷೇಮ ಕಾರ್ಯಕ್ರಮದ ಅನುಷ್ಠಾನವು ಒಟ್ಟಾರೆ ಉದ್ಯೋಗಿ ತೃಪ್ತಿಯನ್ನು ಸುಧಾರಿಸುತ್ತದೆ ಆದರೆ ಉತ್ಪಾದಕತೆ ಮತ್ತು ನಿಶ್ಚಿತಾರ್ಥವನ್ನು ಹೆಚ್ಚಿಸುತ್ತದೆ. ಏಕೆಂದರೆ ಪ್ರೇರಿತ ಉದ್ಯೋಗಿಗಳು ತಮ್ಮ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.

ಅದರಲ್ಲೂ ಒಂದು ಕಂಪನಿ ಕಾರು ಅಥವಾ ಬೈಕ್‌ಗಳನ್ನ ನೀಡುವುದೆಂದರೆ ಇದು ಬರೀ ಹುಡುಗಾಟ ಅಲ್ಲ. ಸಾಕಷ್ಟು ಕಂಪನಿಗಳು ಇರೆಡೆಗೆ ತಿರುಗಿ ನೋಡುವಂತೆ ಮಾಡಿದೆ. ಅಲ್ಲದೆ ಇನ್ನು ಕೆಲವು ಕಂನಿಗಳು ಮದುವೆ ಸಮಯದಲ್ಲಿ ಹಬ್ಬಗಳ ಸಮಯದಲ್ಲಿ ಬೋನುಸ್‌ಗಳನ್ನ ಕೂಡ ಕೊಟ್ಟಿರುವುದನ್ನ ನಾವು ಗಮನಿಸಿದ್ದೇವೆ ಆದ್ರೆ ಇದೇ ಮೊದಲ ಬಾರಿ ಒಂದು ಕಂಪನಿ ಇಂತಹ ದುಬಾರಿ ಉಡುಗೊರೆಗಳನ್ನ ನೀಡಿರುವುದು ನಿಜವಾಗ್ಲೂ ಅಚ್ಚರಿ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+