ಅಮೆರಿಕಾದ ಡಾಲರ್ ಎದುರು ದಾಖಲೆಯ ಕುಸಿತ ಕಂಡ ಭಾರತದ ರೂಪಾಯಿ, ಕಾರಣವೇನು ?

ಹಣ ಕಂಡರೆ ಹೆಣ ಕೂಡ ಬಾಯಿ ಬಿಡುತ್ತೆ ಎನ್ನುವ ಮಾತು ಇದೆ. ಯಾಕೆಂದರೆ ಹಣಕ್ಕಿರುವ ಬೆಲೆ ಮತ್ತು ಗೌರವ ಅಂತಹದ್ದು. ನಿಜಾ.. ಜೀವನದ ಎಲ್ಲಾ ಸಮಸ್ಯೆಗಳಿಗೆ ಈ ಹಣ ಪರಿಹಾರವಲ್ಲವಾದರೂ, ಸಮತೋಲನಯುತ ಮತ್ತು ಆತ್ಮವಿಶ್ವಾಸಭರಿತ ಬದುಕಿಗೆ ಹಣ ಈ ಕಾಲದಲ್ಲಿ ಅತ್ಯಂತ ಅಗತ್ಯವಾದ ಸಾಧನ. ಹಣವನ್ನು ಗಳಿಸುವುದಕ್ಕಿಂತ ಅದನ್ನು ಹೇಗೆ ಬಳಸುತ್ತೇವೆ ಎಂಬುದರ ಮೇಲೆ ನಮ್ಮ ಭವಿಷ್ಯ ನಿರ್ಧಾರವಾಗುತ್ತೆ.

ಅಮೆರಿಕಾದ ಡಾಲರ್ ಎದುರು ದಾಖಲೆಯ ಕುಸಿತ ಕಂಡ ಭಾರತದ ರೂಪಾಯಿ, ಕಾರಣವೇನು

ಇಂತಹ ಹಣವನ್ನು ಸಂಪಾದನೆ ಮಾಡಲು ಎಲ್ಲರೂ ಕಷ್ಟಪಡುತ್ತಾರೆ. ಬೆವರು ಸುರಿಸುತ್ತಾರೆ. ಆದರೆ ಪ್ರಸ್ತುತ ಭಾರತದ ಆರ್ಥಿಕತೆಯಲ್ಲಿ ವಿಚಿತ್ರ ಬೆಳವಣಿಗೆ ನಡೆಯುತ್ತಿದ್ದು, ಕಳೆದ ಕೆಲ ದಿನಗಳಿಂದ ಭಾರತದ ರೂಪಾಯಿ ಅಮೆರಿಕದ ಡಾಲರ್ ಎದುರು ಕುಸಿಯುತ್ತಲೇ ಇದೆ. ಹೀಗೆ ಕುಸಿಯುತ್ತಾ.. ಕುಸಿಯುತ್ತಾ.. ಸದ್ಯ ಇದೇ ಮೊದಲ ಬಾರಿಗೆ 91ರ ಗಡಿಯನ್ನು ದಾಟಿದೆ.

ಹೌದು, ''ಸಿಸ್ಟಮ್ಯಾಟಿಕ್ಸ್ ಇನ್‌ಸ್ಟಿಟ್ಯೂಷನಲ್ ಈಕ್ವಿಟೀಸ್'' ವರದಿಯ ಪ್ರಕಾರ, ನಮ್ಮ ರೂಪಾಯಿಯ ಮೌಲ್ಯ ಶೇಕಡಾ 6.6 % ಕುಸಿದಿದೆ. ಜಾಗತಿಕ ಮಾರುಕಟ್ಟೆಯ ಸಂರಕ್ಷಣಾ ನೀತಿಗಳು ಮತ್ತು ಆರ್‌ಬಿಐ ಬಳಿಯಿರುವ ವಿದೇಶಿ ವಿನಿಮಯದ ಮಿತಿಗಳು ರೂಪಾಯಿಯನ್ನು ಮತ್ತಷ್ಟು ದುರ್ಬಲಗೊಳಿಸುತ್ತಿವೆ ಎಂದು ಹೇಳಲಾಗುತ್ತಿದ್ದು 2012ರಿಂದ ಇಲ್ಲಿಯವರೆಗೆ ರೂಪಾಯಿ ತನ್ನ ಮೌಲ್ಯದಲ್ಲಿ ಸುಮಾರು 90 ರಷ್ಟು ಕಳೆದುಕೊಂಡಿದೆ ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.

ಇನ್ನೂ ರೂಪಾಯಿ ದುರ್ಬಲವಾಗುವುದಕ್ಕೆ ಅಮೆರಿಕಾದ ಅಧ್ಯಕ್ಷ ಟ್ರಂಪ್ ಕಾರಣವಾಗಿದ್ದು ವಿಪರ್ಯಾಸ. ರಷ್ಯಾದಿಂದ ಕಚ್ಚಾ ತೈಲವನ್ನು ಭಾರತ ಆಮದು ಮಾಡುತ್ತಿರುವುದಕ್ಕೆ ಕೆರಳಿರುವ ಟ್ರಂಪ್ ಕೆಲ ವಸ್ತುಗಳ ಮೇಲೆ ಶೇಕಡಾ 50% ಸುಂಕ ವಿಧಿಸಿದ್ದಾರೆ. ಇನ್ನೂ ಭಾರತದಿಂದ ಅಮೆರಿಕಾಗೆ ಹೆಚ್ಚಿನ ಪ್ರಮಾಣದಲ್ಲಿ ವಸ್ತುಗಳು ರಫ್ತಾಗುತ್ತಿವೆ ಅಷ್ಟೇ. ಆದರೆ ಅಲ್ಲಿಂದ ಆಮದಾಗುತ್ತಿರುವ ವಸ್ತುಗಳು ತುಂಬಾನೇ ಕಡಿಮೆ. ಭಾರತದ ಜೊತೆ ವ್ಯಾಪಾರದಲ್ಲಿನ ಈ ಕೊರತೆಯಿಂದ ಕೂಡ ಟ್ರಂಪ್ ಸುಂಕ ಏರಿಸಿದ್ದಾರೆ.

ಇನ್ನು ವಿದೇಶಿ ಬಂಡವಾಳ ಕೂಡ ಇಳಿಕೆಯಾಗಿದೆ. ಟ್ರಂಪ್ ತೆರಿಗೆ ಸಮರ ಆರಂಭ ಮಾಡಿದ ನಂತರ ವಿದೇಶಿ ಹೂಡಿಕೆದಾರರು ನಿರಂತರವಾಗಿ ಹಣವನ್ನು ಹಿಂದಕ್ಕೆ ಪಡೆಯುತ್ತಿದ್ದಾರೆ. ನಿಜಾ, ಹಣ ಹಿಂಪಡೆಯುವ ಪ್ರಕ್ರಿಯೆ 2021ರಿಂದಲೇ ಆರಂಭವಾಗಿತ್ತು. ಆದರೆ 2024ರಲ್ಲಿ 3.04 ಲಕ್ಷ ಕೋಟಿ ಹಣವನ್ನು ಹಿಂದಕ್ಕೆ ಪಡೆಯಲಾಗಿದೆ. ಈ ವರ್ಷ ಈ ಲೆಕ್ಕ 2.80 ಲಕ್ಷ ಕೋಟಿಯನ್ನು ತಲುಪಿದೆ. ಅಮೆರಿಕಾದ ಡಾಲರ್ ಬಲಗೊಳ್ಳಲು ಇದು ಕೂಡ ಪ್ರಮುಖ ಕಾರಣವಾಗಿದ್ದು ಕೊರೊನಾ ನಂತರ ಚೀನಾದಲ್ಲಿ ಹೂಡಿಕೆದಾರರು ಹೆಚ್ಚೆಚ್ಚು ಹಣ ಹೂಡಿಕೆ ಮಾಡಲು ಶುರುಮಾಡಿದ್ದಾರೆ.

ರೂಪಾಯಿ ದುರ್ಬಲವಾಗುತ್ತಿರುವ ಹಿನ್ನೆಲೆ ಬ್ಯಾಂಕುಗಳು, ಸಾರ್ವಜನಿಕ ವಲಯದ ಉದ್ದಿಮೆಗಳು (ಪಿಎಸ್‌ಯು), ತೈಲ ಮತ್ತು ಅನಿಲ, ಹಾಗೂ ಇಂಧನ ಮತ್ತು ಮೂಲಸೌಕರ್ಯ ವಲಯಗಳು ಭಾರಿ ಒತ್ತಡವನ್ನು ಎದುರಿಸಲಿವೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಹೆಚ್ಚಾಗಿ ಈ ಎಲ್ಲವೂ ಆಮದನ್ನೇ ಅವಲಂಬಿಸಿರುವುದರಿಂದ ಆಮದು ವೆಚ್ಚ ಹೆಚ್ಚಾಗಲಿದೆ. ದೇಶ ಪ್ರವಾಸ, ಶಿಕ್ಷಣ ಮತ್ತು ವೈದ್ಯಕೀಯ ಸೇವೆ ಬಯಸುವ ಭಾರತೀಯರಿಗೆ ದರ ಏರಿಕೆಯಿಂದ ತೊಂದರೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಅದೇ ಇನ್ನೊಂದು ಕಡೆ ರಫ್ತು ಆಧಾರಿತ ವಲಯಗಳಾದ ಐಟಿ, ಫಾರ್ಮಾಸ್ಯುಟಿಕಲ್ಸ್, ಆಟೋಮೊಬೈಲ್ ಮತ್ತು ಮೆಟಲ್ ವಲಯಗಳು ರೂಪಾಯಿಯ ಈ ಅಪಮೌಲ್ಯದಿಂದಾಗಿ ಲಾಭ ಪಡೆಯಲಿವೆ. ಮುಂದಿನ 12 ರಿಂದ 24 ತಿಂಗಳುಗಳಲ್ಲಿ ಈ ಕುಸಿತ ಇನ್ನೂ ಹೆಚ್ಚಾಗಲಿದ್ದು ಡಾಲರ್ ಎದುರು ರೂಪಾಯಿ ಮೌಲ್ಯ 100ಕ್ಕೆ ಕುಸಿಯಲಿದೆ ಎಂದು ''ಸಿಸ್ಟಮ್ಯಾಟಿಕ್ಸ್ ಇನ್‌ಸ್ಟಿಟ್ಯೂಷನಲ್ ಈಕ್ವಿಟೀಸ್'' ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಈ ಎಲ್ಲ ಹಿನ್ನೆಲೆ ಷೇರು ಮಾರುಕಟ್ಟೆಯಿಂದ ಬರುವ ಆದಾಯ ಕೂಡ ಸಾಧಾರಣವಾಗಿರಲಿದೆ ಎಂದು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

ಹಕ್ಕುತ್ಯಾಗ: ವ್ಯಕ್ತಿಗತ ವಿಶ್ಲೇಷಕರ ಅಥವಾ ಘಟಕಗಳ ಅಭಿಪ್ರಾಯಗಳು ಮತ್ತು ಶಿಫಾರಸುಗಳು ಮಾತ್ರ ಇಲ್ಲಿ ಸೂಚಿಸಲಾಗಿದೆ ಮತ್ತು ಅವು Goodreturns.in ಅಥವಾ Greynium Information Technologies Private Limited (ಒಟ್ಟಿಗೆ "ನಾವು" ಎಂದು ಉಲ್ಲೇಖಿಸಲಾಗಿದೆ) ಅವರ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಯಾವುದೇ ವಿಷಯದ ನಿಖರತೆ, ಪೂರ್ಣತೆ ಅಥವಾ ನಂಬಿಕಾರ್ಹತೆಯನ್ನು ನಾವು ಖಚಿತಪಡಿಸುವುದಿಲ್ಲ, ಸಮರ್ಥಿಸುತ್ತಿಲ್ಲ ಅಥವಾ ಹೊಣೆಗಾರರಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾSECURITIES ಖರೀದಿ ಅಥವಾ ಮಾರಾಟವನ್ನು ಪ್ರೇರೇಪಿಸುವುದಿಲ್ಲ. ಎಲ್ಲಾ ಮಾಹಿತಿಯು ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರ ನೀಡಲಾಗಿದ್ದು, ಯಾವುದೇ ಹೂಡಿಕೆ ನಿರ್ಧಾರಗಳನ್ನು ಕೈಗೊಳ್ಳುವ ಮೊದಲು ಲೈಸೆನ್ಸ್ ಪಡೆದ ಹಣಕಾಸು ಸಲಹೆಗಾರರಿಂದ ಸ್ವತಃ ಪರಿಶೀಲಿಸುವುದು ಅಗತ್ಯ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+