ಮುಂಬೈ, ಫೆಬ್ರವರಿ 24: ಗುರುವಾರ ಬೆಳಗ್ಗೆ ಪೂರ್ವ ಉಕ್ರೇನ್ ಮೇಲೆ ರಷ್ಯಾ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತಿದ್ದಂತೆಯೇ ಭಾರತದ ಮುಂಬೈ ಮಾರುಕಟ್ಟೆಯಲ್ಲಿ 2,000 ಸೆನ್ಸೆಕ್ಸ್ ಪಾಯಿಂಟ್‌ಗಳು ದಿಢೀರ್ ಕುಸಿತ ಕಂಡು, ಷೇರುಪೇಟೆ ತಲ್ಲಣವಾಗಿದೆ. ಇನ್ನು ನಿಫ್ಟಿ ಸಹ 16,500-ಮಾರ್ಕ್‌ಗಿಂತ ಕಡಿಮೆಯಾಗಿದೆ.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಘೋಷಿಸಿದ ಕೆಲವೇ ಕ್ಷಣಗಳಲ್ಲಿ ಮುಂಬೈ ಷೇರುಪೇಟೆ ಪಾತಾಳಕ್ಕೆ ಕುಸಿದಿದೆ. ಏಕಕಾಲಕ್ಕೆ ಸೆನ್ಸೆಕ್ಸ್ 2000ಕ್ಕೂ ಅಧಿಕ ಅಂಕ ಕುಸಿತ ಕಂಡರೆ, ನಿಫ್ಟಿ 581 ಅಂಕ ಕುಸಿತ ಕಂಡಿದೆ. ಷೇರುಪೇಟೆ ಇನ್ನಷ್ಟು ಕುಸಿತ ಕಾಣುವ ಸಾಧ್ಯತೆ ಇದೆ.
ಬಿಎಸ್‌ಇ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ (ಎನ್‌ಎಸ್‌ಇ) ಮೇಲಿನ ಟಾಪ್‌ಲೈನ್ ಇಕ್ವಿಟಿ ಸೂಚ್ಯಂಕಗಳು ಏಳನೇ ನೇರ ಸೆಷನ್‌ಗೆ ಅದರ ಕರಡಿ ಕುಣಿತ ಮುಂದುವರೆಸಿದೆ. ಗುರುವಾರ ಮುಂಜಾನೆಯ ವಹಿವಾಟಿನಲ್ಲಿ ಶೇಕಡಾ 3.5ಕ್ಕಿಂತ ಹೆಚ್ಚು ಕುಸಿದಿದೆ.

ಗುರುವಾರ ಬೆಳಿಗ್ಗೆ 9:48ಕ್ಕೆ, ಎಸ್ & ಪಿ ಬಿಎಸ್‌ಇ ಸೆನ್ಸೆಕ್ಸ್ 2,051.45 ಪಾಯಿಂಟ್‌ಗಳು (ಶೇ 3.58) ಕುಸಿತು ಕಂಡು 55,180.61ಕ್ಕೆ ಇಳಿದಿದ್ದರೆ, ನಿಫ್ಟಿ 600.00 ಪಾಯಿಂಟ್‌ಗಳು ಕುಸಿದು (ಶೇ 3.52) 16,463.25ಕ್ಕೆ ತಲುಪಿದೆ. ಎರಡೂ ಸೂಚ್ಯಂಕಗಳು ಸುಮಾರು ಶೇ.3ರಷ್ಟು ಕಡಿಮೆ ತೆರೆಯಲ್ಪಟ್ಟವು ಮತ್ತು ಆರಂಭಿಕ ಗಂಟೆಯ ಕೆಲವೇ ನಿಮಿಷಗಳಲ್ಲಿ ಮತ್ತಷ್ಟು ಜಾರಿಕೊಂಡವು.
ಗುರುವಾರ ಮುಂಜಾನೆ ದೂರದರ್ಶನದ ಭಾಷಣದಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಪುಟಿನ್ ಉಕ್ರೇನ್‌ನಿಂದ ಬರುವ ಬೆದರಿಕೆಗಳಿಗೆ ಪ್ರತಿಕ್ರಿಯೆಯಾಗಿ ಪೂರ್ವ ಉಕ್ರೇನ್‌ನಲ್ಲಿ ಮಿಲಿಟರಿ ಕಾರ್ಯಾಚರಣೆಯನ್ನು ಘೋಷಿಸಿದರು. ಇದು ನಾಗರಿಕರನ್ನು ರಕ್ಷಿಸುವ ಉದ್ದೇಶವನ್ನು ಹೊಂದಿದೆ ಎಂದು ಹೇಳಿಕೊಂಡರು.
ತೈಲ ಬೆಲೆ ದಿಢೀರ್ ಏರಿಕೆ:
ರಷ್ಯಾದ ಮಿಲಿಟರಿ ಕಾರ್ಯಾಚರಣೆ ಘೋಷಣೆಯಿಂದ ಪೆಟ್ರೋಲ್ ಕಚ್ಚಾತೈಲ ದರ 100 ಡಾಲರ್ ತಲುಪಿದೆ. ಇದು ಈ ಹಿಂದಿಗಿಂತಲೂ ಗರಿಷ್ಠ ಏರಿಕೆಯಾಗಿದೆ.


Click it and Unblock the Notifications