ರಷ್ಯಾ-ಉಕ್ರೇನ್ ನಡುವಿನ ಉದ್ವಿಗ್ನತೆ ಚಿನ್ನ ಮತ್ತು ಕಚ್ಚಾ ತೈಲ ಬೆಲೆಗಳ ಏರಿಕೆಗೆ ಕಾರಣವಾಗಿದೆ. ಜಾಗತಿಕ ಇಕ್ವಿಟಿ ಸೂಚ್ಯಂಕಗಳು ಇಳಿಕೆ ಆಗುತ್ತಿದ್ದಂತೆ ಕಚ್ಚಾ ತೈಲ ಸೇರಿದಂತೆ ಸರಕುಗಳ ಮೇಲೆ ಉಕ್ರೇನ್ ಮೇಲಿನ ಭೌಗೋಳಿಕ ರಾಜಕೀಯ ಪರಿಣಾಮವು ಬೀರಿದೆ.
ಬ್ರೆಂಟ್ ಸೂಚ್ಯಂಕದ ಕಚ್ಚಾ ತೈಲ ಬೆಲೆಗಳು ಪ್ರತಿ ಬ್ಯಾರೆಲ್‌ಗೆ 96 ಡಾಲರ್ ದಾಟಿದೆ. ಇದು ಏಳು ವರ್ಷಗಳಲ್ಲಿ ಅತ್ಯಧಿಕವಾಗಿದೆ. ಕಚ್ಚಾ ತೈಲ ಮತ್ತು ಚಿನ್ನದ ವಿಶ್ವದ ಅಗ್ರ ಉತ್ಪಾದಕರಲ್ಲಿ ರಷ್ಯಾ ಒಂದಾಗಿದೆ. ರಷ್ಯಾದ ವಿರುದ್ಧ ಯಾವುದೇ ಪಾಶ್ಚಿಮಾತ್ಯ ನಿರ್ಬಂಧಗಳು ಜಾಗತಿಕ ಪೂರೈಕೆಗೆ ತೊಂದರೆ ಉಂಟು ಮಾಡುತ್ತದೆ.
ಕಾಮೆಕ್ಸ್ ಸ್ಪಾಟ್ ಚಿನ್ನದ ಬೆಲೆಗಳು ಪ್ರತಿ ಔನ್ಸ್‌ಗೆ 1,866 ಡಾಲರ್ ಸಮೀಪದಲ್ಲಿ ದಿನದ ಗರಿಷ್ಠ ವಹಿವಾಟಿನಿಂದಾಗಿ ಚಿನ್ನದ ಬೆಲೆಗಳು ಹೆಚ್ಚಾಗಿದೆ. ಎಂಸಿಎಕ್ಸ್‌ನಲ್ಲಿ ಚಿನ್ನವು 10 ಗ್ರಾಂಗೆ 49,859 ರೂಪಾಯಿ ಇದ್ದು, 1.52 ಶೇಕಡಾಕ್ಕಿಂತ ಹೆಚ್ಚು ಹೆಚ್ಚಳಗೊಂಡು ವಹಿವಾಟು ನಡೆಸಿದೆ.

ಅದೇ ರೀತಿ, ಎಂಸಿಎಕ್ಸ್ ಬೆಳ್ಳಿಯ ಬೆಲೆಯು ಕೂಡಾ ಏರಿಕೆ ಕಂಡಿದೆ. ಪ್ರತಿ ಕೆಜಿಗೆ 64,470 ರೂ.ಗೆ 2 ಪ್ರತಿಶತಕ್ಕಿಂತ ಹೆಚ್ಚು ಏರಿಕೆಯಾಗಿದೆ. ಆದರೆ ಕಾಮೆಕ್ಸ್‌ನಲ್ಲಿ ಸ್ಪಾಟ್ ಸಿಲ್ವರ್ ಬೆಲೆಗಳು ಸಂಜೆಯ ಬಳಿಕ ಪ್ರತಿ ಔನ್ಸ್‌ಗೆ 23.92 ಡಾಲರ್ ಸಮೀಪದಲ್ಲಿ ವಹಿವಾಟು ನಡೆಸಿದೆ.
ಚಿನ್ನದ ಬೆಲೆಗಳು ಮೂರು ತಿಂಗಳಲ್ಲಿ ಗರಿಷ್ಠ ಮಟ್ಟಕ್ಕೆ ಏರಿಕೆ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಹಿರಿಯ ವಿಶ್ಲೇಷಕ (ಸರಕುಗಳು) ತಪನ್ ಪಟೇಲ್, "ರಷ್ಯಾ-ಉಕ್ರೇನ್ ಬಿಕ್ಕಟ್ಟಿನ ನಡುವೆ ಚಿನ್ನದ ಬೆಲೆಗಳು ಮೂರು ತಿಂಗಳ ಗರಿಷ್ಠ ಮಟ್ಟದಲ್ಲಿ ವಹಿವಾಟು ನಡೆಸುತ್ತಿವೆ," ಎಂದು ತಿಳಿಸಿದ್ದಾರೆ. "ಮುಂಬರುವ ವಾರದಲ್ಲಿ ಯಾವುದೇ ಸಮಯದಲ್ಲಿ ರಷ್ಯಾ ಉಕ್ರೇನ್ ಅನ್ನು ಆಕ್ರಮಿಸಬಹುದು ಎಂದು ಯುಎಸ್ ಎಚ್ಚರಿಸಿದ ನಂತರ ರಷ್ಯಾ-ಉಕ್ರೇನ್ ಉದ್ವಿಗ್ನತೆಯ ಮೇಲಿನ ಭೌಗೋಳಿಕ ರಾಜಕೀಯ ಅಪಾಯವು ಲೋಹಗಳು ಹಾಗೂ ಕಚ್ಚಾ ತೈಲ ಬೆಲೆಯ ಮೇಲೆ ಪ್ರಭಾವ ಬೀರುತ್ತಿದೆ.
ಇನ್ನು IIL ಸೆಕ್ಯುರಿಟೀಸ್ VPಯ ಅನುಜ್ ಗುಪ್ತಾ, "ಚಿನ್ನವು ಪ್ರತಿ 10 ಗ್ರಾಂ ಮಟ್ಟಕ್ಕೆ ರೂ 50,500 ಮತ್ತು ಬೆಳ್ಳಿಯು ಕೆಜಿ ಮಟ್ಟಕ್ಕೆ ರೂ 66,500 ಅನ್ನು ಶೀಘ್ರದಲ್ಲೇ ಏರಿಕೆ ಕಾಣಬಹುದು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಚಿನ್ನವು 1,880 ಡಾಲರ್ ಮಟ್ಟವನ್ನು ಮತ್ತು ಬೆಳ್ಳಿಯು 25 ಡಾಲರ್ ಮಟ್ಟಕ್ಕೆ ಏರಬಹುದು," ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


Click it and Unblock the Notifications