ಪಹಲ್ಗಾಮ್ ದಾಳಿಯಲ್ಲಿ ಕನ್ನಡಿಗರ ಪ್ರಾಣ ಬಲಿದಾನವಾಯ್ತು. ದೇಶದ ರಕ್ಷಣೆಗೆ ತಮ್ಮ ಜೀವವನ್ನೇ ಅರ್ಪಿಸಿದ ಯೋಧನ ಕುಟುಂಬಕ್ಕೆ, ಬೆಂಗಳೂರಿನ ಆರ್‍ವಿ ಕಾಲೇಜ್ ನಿಜವಾದ ಗೌರರವನ್ನು ಸಪರ್ಮಿಸಿದೆ. ಅದೇನೆಂದರೆ ಅವರ ಮಕ್ಕಳ ಭವಿಷ್ಯವನ್ನು ರಚಿಸುವ ಹಾದಿಯಲ್ಲಿ ಕೈ ಹಿಡಿಯಲು ಮುಂದಾಗಿದೆ. ಅದಕ್ಕಾಗಿ ಬಿಎಸ್‌ಎಫ್ ಯೋಧ ಮಂಜುನಾಥ್ ರಾವ್ ಅವರ ಪುತ್ರ ಅಭಿಜಯ.ಎಂ ಅವರ ಪದವಿ ಶಿಕ್ಷಣ ಸಂಪೂರ್ಣ ಉಚಿತಗೊಳಿಸುವ ಘೋಷಣೆಯನ್ನು ವಿಶ್ವವಿದ್ಯಾಲಯ ನೀಡಿದೆ.

ಹೌದು, 2025ರ ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಎಂಬೆಡೆಗೆ ನಡೆದ ಬೃಹತ್ ದಾಳಿಯಲ್ಲಿ, ಬಿಎಸ್‌ಎಫ್ ಯೋಧ ಮಂಜುನಾಥ್ ರಾವ್ ಅಗಲಿದ್ದು ಮನ ಕಲಕುವಂತಹ ಘಟನೆ. ಭಾರತಕ್ಕಾಗಿ ಜೀವಬಿಟ್ಟ ಯೋಧನ ಮಗನಿಗೆ ಉಚಿತ ಶಿಕ್ಷಣ ಕೊಡಲು ಈಗ, ಪ್ರತಿಷ್ಠಿತ ವಿಶ್ವ ವಿದ್ಯಾಲಯ ಆರ್‍ವಿ ಕಾಲೇಜು ಮುಂದಾಗಿದೆ. ಅವರ ಈ ನಿರ್ಧಾರ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ.
ಶತಮಾನಕ್ಕೆ ಸಿಕ್ಕ ಪ್ರತಿಭೆ:
ಅಭಿಜಯ.ಎಂ ತಮ್ಮ 2ನೇ ಪಿಯು ಶಿಕ್ಷಣವನ್ನು ಶೇ. 97ರಷ್ಟು ಅಂಕಗಳೊಂದಿಗೆ ಪೂರೈಸಿದ್ದು, ಅವರ ಶೈಕ್ಷಣಿಕ ಶ್ರದ್ಧೆ ಮತ್ತು ಪರಿಶ್ರಮದ ಪ್ರಮಾಣವಾಗಿದೆ. ಅವರು ವಾಣಿಜ್ಯ ಕ್ಷೇತ್ರದಲ್ಲಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ನಿರ್ಧರಿಸಿದ್ದು, ಬೆಂಗಳೂರಿನ ಆರ್‌ವಿ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಬಿಸಿನೆಸ್ ನಲ್ಲಿ ಬಿಕಾಂ (B.Com) ಕೋರ್ಸ್‌ಗೆ ಪ್ರವೇಶ ಪಡೆದಿದ್ದಾರೆ. ತಂದೆಯ ನಿದ್ದೆಗೊಳ್ಳುವ ಅಗಾತ ದುಃಖದ ನಡುವೆಯೂ, ತಮ್ಮ ಶಿಕ್ಷಣದಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ದೃಢತೆಯಿಂದ ಮುಂದುವರಿಯುತ್ತಿರುವ ಅಭಿಜಯನ ಹೋರಾಟ ಪ್ರತಿ ವಿದ್ಯಾರ್ಥಿಗೆ ಪ್ರೇರಣೆಯಾಗಿದೆ.
ಮಾತೃಭೂಮಿಗೆ ಗೌರವ:
ಅಭಿಜಯನ ವಿದ್ಯಾಭ್ಯಾಸಕ್ಕೆ ಸಂಪೂರ್ಣ ನೆರವಿನ ಹಸ್ತವೊಂದನ್ನು ನೀಡಿದ ಆರ್‌ವಿ ಸಂಸ್ಥೆಗಳು ತಮ್ಮ ಸಾಮಾಜಿಕ ಬದ್ಧತೆಯನ್ನು ಮತ್ತೆ ಸಾಬೀತುಪಡಿಸಿವೆ. ಅವರ ಮಾತುಗಳಲ್ಲಿ ಸ್ಪಷ್ಟತೆ ಇದೆ. ಅಭಿಜಯನ ಪರಿಸ್ಥಿತಿಯಲ್ಲಿ ಇರುವ ವಿದ್ಯಾರ್ಥಿಗಳಿಗೆ ಮಾನವೀಯ ಸ್ಪಂದನೆ ನೀಡುವುದು ಪ್ರತಿಯೊಂದು ಶಿಕ್ಷಣ ಸಂಸ್ಥೆಯ ಜವಾಬ್ದಾರಿ. ನಾವು ಅವನಿಗೆ ಉಚಿತ ಶಿಕ್ಷಣ, ವಸತಿ ಮತ್ತು ಆಹಾರವನ್ನು ಒದಗಿಸುತ್ತೇವೆ, ಎಂದು ಆರ್‌ವಿ ವಿಶ್ವವಿದ್ಯಾಲಯದ ಸಹಕುಲಪತಿ ಡಿ.ಪಿ. ನಾಗರಾಜ್ ತಿಳಿಸಿದ್ದಾರೆ. ಅಭಿಜಯನಿಗೆ ಹಲವು ಆಯ್ಕೆಗಳು ಲಭ್ಯವಿದ್ದರೂ, ಅವರು ಆರ್‌ವಿ ಸಂಸ್ಥೆಯನ್ನೇ ಆರಿಸಿಕೊಂಡದ್ದು ಸಂಸ್ಥೆಯ ಪ್ರಾಮಾಣಿಕತೆಗೆ ನಿದರ್ಶನವಾಗಿದೆ.
ಇದು ರಾಜಕೀಯ ಪ್ರದರ್ಶನವಲ್ಲ, ಶ್ರದ್ಧಾ ಮತ್ತು ನೈತಿಕತೆಯ ಸಂಕೇತ. ಇಂತಹ ಘಟ್ಟಗಳಲ್ಲಿ ರಾಜಕಾರಣಕ್ಕಿಂತ ಮೇಲಿರುವ ಮಾನವೀಯ ಸ್ಪಂದನೆ ಸರ್ವೋತ್ಕೃಷ್ಟವಾಗಿದೆ. ಪಿತೃವಿಯೋಗದ ನೋವಿನ ನಡುವೆ ಅಭಿಜಯನ ತಾಯಿ ಮತ್ತು ಕುಟುಂಬ ಈ ನಿರ್ಧಾರದಿಂದ ಭರವಸೆಯಿಂದ ಮುಂದುವರಿಯುತ್ತಿದ್ದಾರೆ. ಅವರು ಪ್ರತಿಕ್ರಿಯೆ ನೀಡುತ್ತಾ ಹೇಳಿದ್ದಾರೆ: "ಇದು ನಮ್ಮ ಮಕ್ಕಳ ಭವಿಷ್ಯವನ್ನು ಉಳಿಸುವ ಕ್ರಮ. ಇಂದು ನಮ್ಮ ಕೈ ತಗ್ಗಿದರೂ, ಸಮಾಜದ ಬೆಂಬಲ ನಮ್ಮನ್ನು ಶಕ್ತಿಶಾಲಿಯಾಗಿ ನಿಲ್ಲಿಸುತ್ತದೆ.
ಇದು ಕೇವಲ ಒಂದು ವಿದ್ಯಾರ್ಥಿಗೆ ನೀಡಲಾದ ಸಹಾಯವಲ್ಲ, ಇಡೀ ಶಿಕ್ಷಣ ಕ್ಷೇತ್ರಕ್ಕೆ ಒಂದು ಮಾದರಿ. ಯೋಧರ ಕುಟುಂಬಗಳೊಂದಿಗೆ ನಿಲ್ಲುವುದು ಕೇವಲ ರಾಜಕೀಯ ಅಥವಾ ಸೇನಾ ಪ್ರೇರಣೆಯ ವಿಷಯವಲ್ಲ. ಅಭಿಜಯನಿಗೆ ನೀಡಿದ ಉಚಿತ ಶಿಕ್ಷಣ, ವಸತಿ ಮತ್ತು ಆಹಾರ ವ್ಯವಸ್ಥೆ ಇತರ ಸಂಸ್ಥೆಗಳಿಗೂ ಸಂದೇಶವನ್ನಿತ್ತಿದೆ: ನಿನ್ನ ಸಹೋದರನ ಮಕ್ಕಳಿಗೆ ನೀನು ಸಹೋದರನಂತೆ ನಿಲ್ಲಬೇಕು. ಭದ್ರತೆಯ ಹೊಣೆ ಹೊತ್ತವರು ತಮ್ಮ ಜೀವವನ್ನೇ ತ್ಯಾಗ ಮಾಡಿದಾಗ, ಅವರ ಕುಟುಂಬವನ್ನೇ ಸಮಾಜದ ಹೊಣೆದಾರಿಕೆಯಿಂದ ಬೆಳೆಸಬೇಕಾಗಿದೆ.
ಈ ರೀತಿಯ ಸಾಮಾಜಿಕ ಮತ್ತು ಶಿಕ್ಷಣದ ಬೆಂಬಲ ಕಾರ್ಯಗಳು ಮಾತ್ರ ದೇಶದ ಬಲವನ್ನು ಹೆಚ್ಚಿಸುವುದಲ್ಲದೆ, ಹುತಾತ್ಮರ ಕುಟುಂಬಗಳಿಗೆ ಮಾನಸಿಕ ಶಕ್ತಿ ಮತ್ತು ನಂಬಿಕೆಯನ್ನು ನೀಡುತ್ತವೆ. ಪಹಲ್ಗಾಮ್ ದಾಳಿಯಲ್ಲಿ ಜೀವ ತ್ಯಾಗ ಮಾಡಿದ ಮಂಜುನಾಥ್ ರಾವ್ ಅವರ ಮಗನಿಗೆ ಉಚಿತ ಶಿಕ್ಷಣ ನೀಡುವುದರಿಂದ ಮಾತ್ರವಲ್ಲ, ಇಂತಹ ಕಾರ್ಯಗಳು ನಮ್ಮ ಸಮಾಜದಲ್ಲಿ ಪರಸ್ಪರ ಸಹಾಯ, ಕಾಳಜಿ ಮತ್ತು ನೈತಿಕ ಹೊಣೆಗಾರಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ. ದೇಶದ ಪ್ರತಿಯೊಬ್ಬ ನಾಗರಿಕನೂ ಈ ಬಲಿದಾನಗಳೊಂದಿಗೆ ನಿಂತು, ಇಂತಹ ಕುಟುಂಬಗಳ ಭವಿಷ್ಯಕ್ಕೆ ಕೈಹೋಡಿಸಬೇಕು ಎಂಬುದು ನಮ್ಮ ನಿರಂತರ ಕರ್ತವ್ಯವಾಗಿದೆ. ಇನ್ನಷ್ಟು ಸಂಸ್ಥೆಗಳು ಮತ್ತು ಸಮುದಾಯಗಳು ಮುಂದಾಗಿ ಈ ರೀತಿಯ ಸಹಕಾರ ಹಾಗೂ ಬೆಂಬಲ ನೀಡಬೇಕು ಎಂಬುದೇ ಭವಿಷ್ಯದ ಸಮಾಜ ನಿರ್ಮಾಣದ ದಾರಿಯಾಗಿರುತ್ತದೆ.


Click it and Unblock the Notifications