ಇ-ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್‌ನ ಸಹ-ಸಂಸ್ಥಾಪಕರಲ್ಲಿ ಓರ್ವರಾಗಿರುವ ಹಾಗೂ ಭಾರತದ ಸ್ವಯಂ ನಿರ್ಮಿತ ಬಿಲಿಯನೇರ್ ಸಚಿನ್ ಬನ್ಸಾಲ್, ಆಪ್ ಆಧಾರಿತ ರೈಡ್ ಸೇವೆಯಾದ ಓಲಾದಲ್ಲಿ ತಮ್ಮ ಪಾಲನ್ನು ಮಾರಾಟ ಮಾಡಲು ಚಿಂತಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಭವಿಶ್ ಅಗರ್ವಾಲ್ ಸ್ಥಾಪಿಸಿದ ಆಪ್ ಆಧಾರಿತ ರೈಡ್ ಶೇರಿಂಗ್ ಕ್ಯಾಬ್ ಸೇವೆಯಾದ ಓಲಾದಲ್ಲಿ ಬನ್ಸಾಲ್ ಅವರು 2019 ರಲ್ಲಿ $ 100 ಮಿಲಿಯನ್ ಹೂಡಿಕೆ ಮಾಡಿದ್ದರು
ಎಕನಾಮಿಕ್ ಟೈಮ್ಸ್ ಪತ್ರಿಕೆಯಲ್ಲಿ ಬಂದ ಸುದ್ದಿಯ ಪ್ರಕಾರ, ಬನ್ಸಾಲ್ ಅವರು ತಮ್ಮ ಓಲಾ ಷೇರುಗಳನ್ನು ಮಾರಾಟ ಮಾಡಲು ಬಯಸಿದ್ದಾರೆ. ಆದರೆ ಅವರು ಹಿಂದೆ ಹೂಡಿಕೆ ಮಾಡಿದಾಗ ಇದ್ದ ಕಂಪನಿಯ ಮೌಲ್ಯಕ್ಕಿಂತ ಈಗ ಹೆಚ್ಚು ಮೌಲ್ಯವನ್ನು ನಿರೀಕ್ಷಿಸುತ್ತಿದ್ದಾರೆ. ಆಗ ಕಂಪನಿ $3 ಬಿಲಿಯನ್ ಮೌಲ್ಯದ್ದಾಗಿದ್ದು, ಇದೀಗ $4 ಬಿಲಿಯನ್ ಎಂದು ಮೌಲ್ಯವನ್ನು ಹೆಚ್ಚಿನ ಮಟ್ಟದಲ್ಲಿ ನಿಗದಿ ಮಾಡುವ ಮೂಲಕ ಹೆಚ್ಚಿನ ಲಾಭ ಪಡೆಯಲು ಬಯಸುತ್ತಿದ್ದಾರೆ.

ಬನ್ಸಾಲ್ ಮತ್ತು ಅಗರ್ವಾಲ್ ಇಬ್ಬರೂ ಶ್ರೇಷ್ಟ ಉದ್ಯಮಿಗಳಾಗಿದ್ದು, ಬನ್ಸಾಲ್ ಅವರು Amazon ಮತ್ತು ಅಗರ್ವಾಲ್ ಅವರು Uber ನೊಂದಿಗೆ ಸ್ಪರ್ಧಿಸಲು ತಮ್ಮ ಸಂಸ್ಥೆಯನ್ನು ಸ್ಥಾಪಿಸಿ ಈ ಉದ್ಯಮಗಳಲ್ಲಿ ಉನ್ನತ ಸ್ಥಾನಕ್ಕೆ ಏರಿದ್ದಾರೆ. ಫ್ಲಿಪ್‌ಕಾರ್ಟ್ ಇ-ಕಾಮರ್ಸ್, ಆಗಿದ್ರೆ ಓಲಾ ಅಪ್ಲಿಕೇಶನ್ ಆಧಾರಿತ ರೈಡ್ ಸೇವೆಯಾಗಿದೆ. ಮೂಲಗಳ ಪ್ರಕಾರ, ಕಂಪನಿಯಲ್ಲಿನ ತನ್ನ ಪಾಲನ್ನು ಮಾರಾಟ ಮಾಡುವ ಬನ್ಸಾಲ್ ಅವರ ಪ್ರಸ್ತಾಪ ಇದೀಗಾ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ. ಇದಕ್ಕೂ ಹಿಂದೆ ಬನ್ಸಾಲ್ ಅವರು ಅಥರ್ ಎನರ್ಜಿಯಲ್ಲಿನ ತಮ್ಮ ಪಾಲನ್ನು ಝೆರೋಧಾಗೆ ಮಾರಾಟ ಮಾಡಿದ್ದರು.
ಸಚಿನ್ ಬನ್ಸಾಲ್ ಅವರು ತಮ್ಮ ಹೊಸ ಫಿನ್‌ಟೆಕ್ ಕಂಪನಿ "ನವಿ" ಮೇಲೆ ಹೆಚ್ಚು ಗಮನ ಕೊಡಲು ಬಯಸುತ್ತಿದ್ದಾರೆ. ಈ ಕಾರಣದಿಂದ ಅವರು ಓಲಾ ಕಂಪನಿಯಲ್ಲಿ ಹೂಡಿಕೆ ಮಾಡಿದ್ದ ಹಣವನ್ನು ಮರಳಿ ಪಡೆಯಲು ಓಲಾ ಷೇರುಗಳನ್ನು ಮಾರಾಟ ಮಾಡುತ್ತಿದ್ದಾರೆ. ಈ ಹಣವನ್ನು ಅವರು ತಮ್ಮ ನವಿ ಕಂಪನಿಗೆ ಹೂಡಿಕೆ ಮಾಡಲು ಬಳಸಬಹುದು ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, ಬನ್ಸಾಲ್ ಅವರು ಇತರ ಮೂಲಗಳಿಂದ ಹಣವನ್ನು ಸಂಗ್ರಹಿಸುವ ಮಾರ್ಗಗಳನ್ನು ಪರಿಶೀಲಿಸುತ್ತಿದ್ದಾರೆ, ಆದರೆ ಇನ್ನೂ ನಿರ್ಧಾರವನ್ನು ತೆಗೆದುಕೊಂಡಿಲ್ಲ. ನಿಯಂತ್ರಕ ಸಮಸ್ಯೆಗಳಿಂದಾಗಿ ಹೊರಗಿನ ಮೂಲಗಳಿಂದ ಹಣವನ್ನು ಸಂಗ್ರಹಿಸಲು ನವಿ ಕಂಪನಿಗೆ ಕೆಲವು ಸಮಸ್ಯೆಗಳಿವೆ ಎನ್ನಲಾಗಿದೆ.
Navi ತನ್ನ ಬ್ಯಾಂಕಿಂಗ್ ಅಲ್ಲದ ಹಣಕಾಸು ಅಂಗವಾದ Navi Finserv ನಿಂದ ಸಾಲ ನೀಡುವುದರ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ತಾತ್ಕಾಲಿಕ ನಿರ್ಬಂಧವನ್ನು ಒಳಗೊಂಡಂತೆ ನಿಯಂತ್ರಕದಿಂದದ ಹಿನ್ನಡೆಗಳನ್ನು ಎದುರಿಸಿದೆ. ಡಿಸೆಂಬರ್ 2024 ರಲ್ಲಿ ನಿರ್ಬಂಧವನ್ನು ತೆಗೆದುಹಾಕಲಾಗಿದ್ದರೂ, ನವಿ ಬ್ಯಾಂಕಿಂಗ್ ಪರವಾನಗಿಯನ್ನು ನಿರಾಕರಿಸಿದ ನಂತರ ಟೆಮಾಸೆಕ್‌ನಿಂದ ಹಣವನ್ನು ಪಡೆಯಲು ಹಿಂದಿನ ಪ್ರಯತ್ನಗಳು ವಿಫಲವಾದವು.
ವ್ಯಾನ್‌ಗಾರ್ಡ್ ಪ್ರಕಾರ 2021ರಲ್ಲಿ $7.3 ಶತಕೋಟಿ ಮೌಲ್ಯವನ್ನು ಹೊಂದಿದ್ದ ಓಲಾ ಕೇವಲ ಮೂರು ವರ್ಷಗಳಲ್ಲಿ $2 ಶತಕೋಟಿಗೆ ಇಳಿದಿದೆ. ಇನ್ನೊಂದೆಡೆ ಬೆಂಗಳೂರು ಮೂಲದ ANI ಟೆಕ್ನಾಲಜೀಸ್ ನಡೆಸುತ್ತಿರುವ Ola, ಮಾರ್ಚ್ 2026 ಕ್ಕೆ ಕೊನೆಗೊಳ್ಳುವ ಮುಂದಿನ ಹಣಕಾಸು ವರ್ಷದಲ್ಲಿ IPO ಗಾಗಿ ತಯಾರಿ ನಡೆಸುತ್ತಿದೆ. ಅಸ್ತಿತ್ವದಲ್ಲಿರುವ ಹೂಡಿಕೆದಾರರು ಸಾರ್ವಜನಿಕ ಕೊಡುಗೆಯ ಸಮಯದಲ್ಲಿ ಷೇರುಗಳನ್ನು ಮಾರಾಟ ಮಾಡುವ ಕುರಿತು ಕಂಪನಿಯೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.
ನವಿ ಗ್ರೂಪ್:
ಸಚಿನ್ ಬನ್ಸಾಲ್ , ಫ್ಲಿಪ್‌ಕಾರ್ಟ್‌ನಿಂದ ನಿರ್ಗಮಿಸಿದ ನಂತರ , IIT-ದೆಹಲಿ ಬ್ಯಾಚ್ ಮೇಟ್ ಅಂಕಿತ್ ಅಗರ್ವಾಲ್ ಜೊತೆಗೆ ಸೇರಿ BACQ ಅಕ್ವಿಸಿಷನ್ಸ್ ಪ್ರೈವೇಟ್ ಲಿಮಿಟೆಡ್ ಅನ್ನು ಸ್ಥಾಪಿಸಿದರು. ನಂತರ ನವಿ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಎಂದು ಮರುನಾಮಕರಣ ಮಾಡಿದ್ದು ಇದರ ಪ್ರಧಾನ ಕಚೇರಿ ಬೆಂಗಳೂರಿನಲ್ಲಿ ಹೊಂದಿದೆ. Navi ಡಿಜಿಟಲ್ ಸಾಲಗಳು, ಗೃಹ ಸಾಲಗಳು , ಮ್ಯೂಚುಯಲ್ ಫಂಡ್ಗಳು , ಆರೋಗ್ಯ ವಿಮೆ , ಡಿಜಿಟಲ್ ಚಿನ್ನ ಮತ್ತು UPI ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತದೆ .


Click it and Unblock the Notifications