Subrata Roy: ಸಹಾರಾ ಗ್ರೂಪ್ ಸಂಸ್ಥಾಪಕ ಇನ್ನಿಲ್ಲ, ಸುಬ್ರತಾ ರಾಯ್ ಬಗ್ಗೆ ನೀವು ತಿಳಿದಿರಬೇಕಾದ ಮಾಹಿತಿ ಇಲ್ಲಿದೆ

ಉದ್ಯಮಿ ಮತ್ತು ಸಹಾರಾ ಗ್ರೂಪ್ ಸಂಸ್ಥಾಪಕ ಸುಬ್ರತಾ ರಾಯ್ ಮಂಗಳವಾರ ರಾತ್ರಿ 10.30 ಕ್ಕೆ ಮುಂಬೈನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. 75 ನೇ ವರ್ಷದ ಉದ್ಯಮಿ ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಸಹಾರಾ ಗ್ರೂಪ್ ಮಾಹಿತಿ ನೀಡಿದೆ.

"ಸಹಾರಾ ಇಂಡಿಯಾ ಪರಿವಾರದ ವ್ಯವಸ್ಥಾಪಕ ನಿರ್ವಾಹಕ ಮತ್ತು ಅಧ್ಯಕ್ಷರಾದ ನಮ್ಮ ಗೌರವಾನ್ವಿತ 'ಸಹರಾಶ್ರೀ' ಸುಬ್ರತಾ ರಾಯ್ ಸಹಾರಾ ಅವರ ನಿಧನವನ್ನು ಸಹಾರಾ ಇಂಡಿಯಾ ಪರಿವಾರ ತೀವ್ರ ದುಃಖದಿಂದ ತಿಳಿಸುತ್ತದೆ," ಎಂದು ಸಹಾರಾ ಗ್ರೂಪ್ ಹೇಳಿಕೆಯಲ್ಲಿ ತಿಳಿಸಿದೆ.

 ಸಹಾರಾ ಗ್ರೂಪ್ ಸಂಸ್ಥಾಪಕ ಇನ್ನಿಲ್ಲ, ಸುಬ್ರತಾ ರಾಯ್ ವ್ಯಕ್ತಿಚಿತ್ರ

ಸುಬ್ರತಾ ರಾಯ್ ಬಗ್ಗೆ ನೀವು ತಿಳಿದಿರಬೇಕಾದ 5 ಮಾಹಿತಿ

1. ಸುಬ್ರತಾ ರಾಯ್ ಸಹಾರಾ ಅವರು ಜೂನ್ 10, 1948 ರಂದು ಬಿಹಾರದ ಅರಾರಿಯಾದಲ್ಲಿ ಜನಿಸಿದರು. ಗೋರಖ್‌ಪುರದ ಸರ್ಕಾರಿ ತಾಂತ್ರಿಕ ಸಂಸ್ಥೆಯಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿದ್ದಾರೆ. ಅವರ ಉದ್ಯಮದ ಪ್ರಯಾಣವು ಗೋರಖ್‌ಪುರದಲ್ಲಿ ಪ್ರಾರಂಭವಾಯಿತು.

ಆರಂಭಿಕವಾಗಿ ಸುಬ್ರತಾ ರಾಯ್ ವ್ಯಾಪಾರ ಮಾಡು ಪ್ರಯತ್ನವನ್ನು ಮಾಡಿದ್ದಾರೆ. ನಂತರ ರಾಯ್ 1976 ರಲ್ಲಿ ಮೂಲತಃ ಚಿಟ್-ಫಂಡ್ ಕಂಪನಿಯಾದ ಸಹಾರಾ ಫೈನಾನ್ಸ್‌ನ ಉಸ್ತುವಾರಿ ವಹಿಸಿಕೊಂಡರು. 1978 ರ ಹೊತ್ತಿಗೆ, ರಾಯ್ ಅದನ್ನು ಭಾರತದ ಪ್ರಮುಖ ಸಂಘಟಿತ ಸಂಸ್ಥೆಯಾದ ಸಹಾರಾ ಇಂಡಿಯಾ ಪರಿವಾರ ಆಗಿ ಯಶಸ್ವಿಯಾಗಿ ಪರಿವರ್ತಿಸಿದರು.

2. ಸುಬ್ರತಾ ರಾಯ್ ಹಣಕಾಸು, ರಿಯಲ್ ಎಸ್ಟೇಟ್, ಮಾಧ್ಯಮ ಮತ್ತು ಆತಿಥ್ಯದಂತಹ ವೈವಿಧ್ಯಮಯ ಕ್ಷೇತ್ರಗಳನ್ನು ಒಳಗೊಂಡ ಸಾಮ್ರಾಜ್ಯವನ್ನು ವಿಸ್ತರಿಸುವಲ್ಲಿ ಯಶಸ್ವಿಯಾದರು. ಸಹಾರಾ ಇಂಡಿಯಾ ಪರಿವಾರ ಆಂಬಿ ವ್ಯಾಲಿ ಸಿಟಿ, ಸಹಾರಾ ಮೂವೀ ಸ್ಟುಡಿಯೋಸ್, ಏರ್ ಸಹಾರಾ, ಉತ್ತರ ಪ್ರದೇಶ ವಿಝಾರ್ಡ್ಸ್ ಮತ್ತು ಫಿಲ್ಮಿ ಸೇರಿದಂತೆ ಹಲವಾರು ಉದ್ಯಮಗಳನ್ನು ನಿರ್ವಹಣೆ ಮಾಡುತ್ತಿದೆ.

ಸಂಘಟಿತ ಸಂಸ್ಥೆಯು ಹಣಕಾಸು, ರಿಯಲ್ ಎಸ್ಟೇಟ್, ಮೂಲಸೌಕರ್ಯ, ವಸತಿ, ಮಾಧ್ಯಮ, ಮನರಂಜನೆ, ಪ್ರವಾಸೋದ್ಯಮ ಮತ್ತು ಆತಿಥ್ಯದಲ್ಲಿಯೂ ವಿಸ್ತರಿಸಿಕೊಂಡಿದೆ. ಸಹಾರಾ ಗ್ರೂಪ್ ಯೋಜನೆಗಳು ವಸತಿ ಅಭಿವೃದ್ಧಿಯಿಂದ ಹಿಡಿದು ದೊಡ್ಡ ಪ್ರಮಾಣದ ಕಾರ್ಯಕ್ರಮಗಳನ್ನು ಆಯೋಜಿಸುವವರೆಗೆ ಇದ್ದವು.

3. ಸಹಾರಾ ಗ್ರೂಪ್ 1992 ರಲ್ಲಿ ಪ್ರಾರಂಭವಾದ ಹಿಂದಿ ಪತ್ರಿಕೆಯಾದ ರಾಷ್ಟ್ರೀಯ ಸಹಾರಾದೊಂದಿಗೆ ಮಾಧ್ಯಮ ಲೋಕಕ್ಕೂ ಎಂಟ್ರಿ ನೀಡಿದೆ. ನಂತರ, ಸಹಾರಾ ಗ್ರೂಪ್ ಸಹಾರಾ ಟಿವಿಯೊಂದಿಗೆ ದೂರದರ್ಶನ ಉದ್ಯಮದಲ್ಲಿ ತಮ್ಮ ಅಸ್ತಿತ್ವವನ್ನು ವಿಸ್ತರಿಸಿದೆ. ಬಳಿಕ ಸಹಾರಾ ಒನ್ ಎಂದು ಮರುನಾಮಕರಣ ಮಾಡಲಾಗಿದೆ.

4. ಸುಬ್ರತಾ ರಾಯ್ ಬ್ಯುಜಿನೆಸ್ ಮ್ಯಾನ್ ಆಫ್ ದಿ ಇಯರ್ ಪ್ರಶಸ್ತಿ, ಮತ್ತು 2002 ರಲ್ಲಿ ಅತ್ಯುತ್ತಮ ಕೈಗಾರಿಕೋದ್ಯಮಿ ಪ್ರಶಸ್ತಿಯಂತಹ ಪುರಸ್ಕಾರಗಳನ್ನು ಪಡೆದಿದ್ದಾರೆ. 2010 ರಲ್ಲಿ ವಿಶಿಷ್ಟ ರಾಷ್ಟ್ರೀಯ ಉಡಾನ್ ಸಮ್ಮಾನ್, 2010 ರಲ್ಲಿ ರೋಟರಿ ಇಂಟರ್‌ನ್ಯಾಶನಲ್‌ನಿಂದ ವೊಕೇಶನಲ್ ಅವಾರ್ಡ್ ಫಾರ್ ಎಕ್ಸಲೆನ್ಸ್ ಪ್ರಶಸ್ತಿ ಪಡೆದಿದ್ದಾರೆ.

ಹಾಗೆಯೇ 1995 ರಲ್ಲಿ ಕರ್ಮವೀರ ಸಮ್ಮಾನ, 1994 ರಲ್ಲಿ ಉದ್ಯಮ ಶ್ರೀ, 1992 ರಲ್ಲಿ ಬಾಬಾ-ಇ-ರೋಜ್‌ಗಾರ್ ಪ್ರಶಸ್ತಿ, 2001 ರಲ್ಲಿ ರಾಷ್ಟ್ರೀಯ ನಾಗರಿಕ ಪ್ರಶಸ್ತಿ ಪಡೆದಿದ್ದಾರೆ. ಇನ್ನು 2012 ರಲ್ಲಿ, ಸುಬ್ರತಾ ರಾಯ್ ಇಂಡಿಯಾ ಟುಡೆ ನಿಯತಕಾಲಿಕೆಯಿಂದ ಭಾರತದ 10 ಅತ್ಯಂತ ಪ್ರಭಾವಶಾಲಿ ಉದ್ಯಮಿಗಳಲ್ಲಿ ಒಬ್ಬರೆಂದು ಗುರುತಿಸಲ್ಪಟ್ಟಿದ್ದಾರೆ.

5. 2014 ರಲ್ಲಿ, ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ದೊಂದಿಗೆ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗಲು ವಿಫಲವಾದ ಕಾರಣ ಸುಬ್ರತಾ ರಾಯ್‌ರನ್ನು ಬಂಧಿಸುವಂತೆ ಭಾರತದ ಸುಪ್ರೀಂ ಕೋರ್ಟ್ ಆದೇಶಿಸಿತು. ಈ ನಿಟ್ಟಿನಲ್ಲಿ ಸುದೀರ್ಘ ಕಾನೂನು ಹೋರಾಟ ನಡೆದಿದೆ. ತಿಹಾರ್ ಜೈಲಿನಲ್ಲಿ ಸುಬ್ರತಾ ರಾಯ್ ಇದ್ದರು. ಅಂತಿಮವಾಗಿ ಪೆರೋಲ್ ಮೇಲೆ ಬಿಡುಗಡೆ ಮಾಡಲಾಗಿತ್ತು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+