ಬಾಲಿವುಡ್ನ ಭಾಯ್ ಜಾನ್ ಸಲ್ಮಾನ್ ಖಾನ್ ಇಂದು 59ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಇಂದಿಗೂ ಕೂಡಾ ಬಾಲಿವುಡ್ ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಆಗಿಯೇ ಉಳಿದುಕೊಂಡಿರುವ ಸೂಪರ್ ಸ್ಟಾರ್ ಭಾರತೀಯ ಚಿತ್ರರಂಗದಲ್ಲಿ ಅಗ್ರ ನಟರಲ್ಲಿ ಒಬ್ಬರಾಗಿ ಇಂದಿಗೂ ಮಿಂಚುತ್ತಿದ್ದಾರೆ. ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲ ಸಿನಿಮಾ ಕ್ಷೇತ್ರದಲ್ಲಿ ಮಿಂಚುಹರಿಸಿರುವ ಲಕ್ಷಾಂತರ ಅಭಿಮಾನಿಗಳ ಹೃದಯದಲ್ಲಿ ವಿಶೇಷ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ.
ಸಲ್ಮಾನ್ ಖಾನ್ ಅವರು ಬಾಲಿವುಡ್ ನ ಬಿಗ್ ಬಾಸ್‌ನಿಂದ ಹಿಡಿದು ಬಾಕ್ಸ್ ಆಫೀಸ್‌ವರೆಗೂ ತಮ್ಮದೇ ಆದ ಸಾಮ್ರಾಜ್ಯವನ್ನು ನಿರ್ಮಿಸಿಕೊಂಡಿದ್ದಾರೆ. 1988 ರಲ್ಲಿ"ಬಿವಿ ಹೋ ತೋ ಐಸಿ" ಚಿತ್ರದಲ್ಲಿ ಪೋಷಕ ಪಾತ್ರದ ಮೂಲಕ ತಮ್ಮ ಸಿನಿಮಾ ಪ್ರಯಾಣವನ್ನು ಆರಂಭಿಸಿದ ಸಲ್ಮಾನ್ ಖಾನ್ ಅವರು ಇಂದು ಬಾಲಿವುಡ್‌ನ ಬಾಕ್ಸ್ ಆಫೀಸ್ ಬಾದ್‌ಷಾಹ್ ಆಗಿದ್ದಾರೆ. 1989 ರಲ್ಲಿ ಸೂರಜ್ ಬರ್ಜಾತ್ಯಾ ಅವರ "ಮೈನೆ ಪ್ಯಾರ್ ಕಿಯಾ" ಚಿತ್ರ ಅವರ ಜೀವನದಲ್ಲಿ ಒಂದು ಮಹತ್ವದ ತಿರುವು ಬಿಂದುವಾಗಿತ್ತು.

ಮಧ್ಯಪ್ರದೇಶದ ಇಂದೋರ್‌ನಲ್ಲಿ ಡಿ. 27, 1965 ರಂದು ಜನಿಸಿದ ಸಲ್ಮಾನ್ ಖ್ಯಾತ ಚಿತ್ರಕಥೆಗಾರ ಸಲೀಂ ಖಾನ್ ಮತ್ತು ಅವರ ಮೊದಲ ಪತ್ನಿ ಸಲ್ಮಾ ಅವರ ಪುತ್ರರಾಗಿದ್ದಾರೆ. ಮುಂಬೈನ ಬಾಂದ್ರಾ ಪ್ರದೇಶದ ಸೇಂಟ್ ಸ್ಟಾನಿಸ್ಲಾಸ್ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿದ್ದ ಅವರು ಸೇಂಟ್ ಕ್ಸೇವಿಯರ್ ಕಾಲೇಜಿಗೆ ಸೇರಿದರು. ಆದರೆ ಕಾಲೇಜು ಅರ್ಧಕ್ಕೆ ತೊರೆದ ಸಲ್ಮಾನ್ ಖಾನ್ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು. ಇನ್ನೊಂದು ಕುತೂಹಲಕಾರಿ ವಿಚಾರವೆಂದರೆ ನಟರಾಗುವ ಮೊದಲು ಮೂರು ಚಿತ್ರಕಥೆಗಳನ್ನು ಬರೆದಿದ್ದರು. ಅಷ್ಟೇ ಅಲ್ಲದೆ, ತಮ್ಮ ತಾಯಿ ಸಲ್ಮಾ ಅವರಿಂದ ವರ್ಣಚಿತ್ರ ಕಲಿತಿದ್ದಾರೆ.
ಸಲ್ಮಾನ್ ಸಂಪತ್ತಿನ ಸಾಮ್ರಾಜ್ಯ:
ಹಲವಾರು ಪ್ರಶಸ್ತಿಗಳಿಗೆ ಪಾತ್ರರಾಗಿ ವಿಶ್ವದಾದ್ಯಂತ ಖ್ಯಾತಿಯನ್ನು ಗಳಿಸಿರುವ ಸಲ್ಮಾನ್ ಖಾನ್ ಅವರ ಒಟ್ಟು ಆಸ್ತಿ ಮೌಲ್ಯ 2024ರಲ್ಲಿ ಸುಮಾರು 2900 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಫೋರ್ಬ್ಸ್ 2015 ಮತ್ತು 2018 ಎರಡರಲ್ಲೂ ವಿಶ್ವದಾದ್ಯಂತ ಅತಿ ಹೆಚ್ಚು ಸಂಭಾವನೆ ಪಡೆಯುವ ಸೆಲೆಬ್ರಿಟಿಗಳಲ್ಲಿ ಸಲ್ಮಾನ್ ಖಾನ್ ಹೆಸರಿದೆ. ಒಂದು ಕಾಲದಲ್ಲಿ ಮುಂಬೈನ ತಾಜ್ ಹೋಟೆಲ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬ್ಯಾಕ್ ಡ್ಯಾನ್ಸರ್ ಆಗಿ ಕೆಲಸ ಮಾಡಿದ್ದರು ಸಲ್ಮಾನ್. ಈ ಕೆಲಸಕ್ಕೆ 75 ರೂ ಪಡೆದಿದ್ದರಂತೆ 'ಮೈನೇ ಪ್ಯಾರ್ ಕಿಯಾ' ಹಿಟ್ ಚಿತ್ರಕ್ಕೆ ಸಲ್ಲು ಪಡೆದಿದ್ದು ಕೇವಲ 31 ಸಾವಿರ ರೂಪಾಯಿ. ಆದರೆ ಇಂದು 2900 ಕೋಟಿ ರೂ . ಸಾಮ್ರಾಜ್ಯದ ಒಡೆಯರಾಗಿದ್ದಾರೆ.
ಕೇವಲ ಸಿನಿಮಾಗಳಿಂದ ಮಾತ್ರ ಗಳಿಸದ ಸಲ್ಮಾನ್ ಹಲವಾರು ಬ್ರ್ಯಾಂಡ್‌ಗಳನ್ನು ಪ್ರಚಾರ ಮಾಡುವ ಮೂಲಕ ತಮ್ಮ ವ್ಯಾಪಾರ ಸಾಮ್ರಾಜ್ಯವನ್ನು ವಿಸ್ತರಿಸಿದ್ದಾರೆ. ಅವರ ಜನಪ್ರಿಯತೆಯಿಂದಾಗಿ, ಅವರು ತೆರೆ ಮೇಲೆ ಮತ್ತು ಹೊರಗೆ ಎರಡರಲ್ಲೂ ಗಳಿಸುತ್ತಿದ್ದಾರೆ. ಜಾಹೀರಾತುಗಳಲ್ಲಿ ನಟನೆ, ಬ್ರಾಂಡ್ ಅಂಬಾಸಿಡರ್ ಹೀಗೆ ಅನೇಕ ಒಪ್ಪಂದದ ಮೂಲಕ ಅವರು ಕೋಟಿಗಳಲ್ಲಿ ಸಂಪಾದನೆ ಮಾಡುತ್ತಿದ್ದಾರೆ.
ಸಲ್ಮಾನ್ ಖಾನ್ ಅವರು ಕೇವಲ ಒಬ್ಬ ನಟರಷ್ಟೇ ಅಲ್ಲ, ಬದಲಾಗಿ ಒಬ್ಬ ಯಶಸ್ವಿ ಉದ್ಯಮಿಯೂ ಹೌದು. ಅವರ ಬ್ರ್ಯಾಂಡ್ 'ಬೀಯಿಂಗ್ ಹ್ಯೂಮನ್' ಫ್ಯಾಷನ್ ಜಗತ್ತಿನಲ್ಲಿ ಹೊಸ ಹೆಗ್ಗುರುತಾಗಿದೆ. 2013 ರಲ್ಲಿ ಈ ಬ್ರ್ಯಾಂಡ್ ಅನ್ನು ಪ್ರಾರಂಭಿಸಲಾಯಿತು, ಇದು ಟ್ರೆಂಡಿ ಉಡುಪುಗಳನ್ನು ಮಾರಾಟ ಮಾಡಿದರೂ ಚಾರಿಟಬಲ್ ನ್ನು ಬೆಂಬಲಿಸುತ್ತದೆ. ಈ ಮೂಲಕ ಸಲ್ಮಾನ್ ಫ್ಯಾಷನ್‌ಗೆ ಲೋಕೋಪಕಾರವನ್ನು ಟಚ್ ನೀಡಿದ್ದಾರೆ.
ಬೀಯಿಂಗ್ ಸ್ಟ್ರಾಂಗ್: ಫಿಟ್‌ನೆಸ್ ಕ್ಷೇತ್ರ
2020 ರಲ್ಲಿ ಸಲ್ಮಾನ್ ಖಾನ್ ಅವರು 'ಬೀಯಿಂಗ್ ಸ್ಟ್ರಾಂಗ್' ಎಂಬ ಹೆಸರಿನಲ್ಲಿ ಫಿಟ್‌ನೆಸ್ ಸಲಕರಣೆಗಳ ಸರಣಿಯನ್ನು ಪ್ರಾರಂಭಿಸಿದರು. ಈ ಸರಣಿಯ ಮೂಲಕ ಅವರು ಜನರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಬಯಸಿದ್ದರು. ಕೇವಲ ಕೆಲವೇ ವರ್ಷಗಳಲ್ಲಿ ಈ ಸರಣಿ ಭಾರತದಾದ್ಯಂತ 300 ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ.
ಸಲ್ಮಾನ್ ಖಾನ್ ಅವರ ಎಂಡಾರ್ಸ್‌ಮೆಂಟ್ ಪೋರ್ಟ್‌ಫೋಲಿಯೊ ಕೆಲವು ಉನ್ನತ ಬ್ರಾಂಡ್‌ಗಳನ್ನು ಹೊಂದಿದೆ. ಇತ್ತೀಚೆಗೆ, ಅವರು ಅಗ್ರ ಅಕ್ಕಿ ಬ್ರಾಂಡ್‌ನ ಅಂಬಾಸಿಡರ್ ಆಗಿದ್ದರು. ಇದಲ್ಲದೇ ಖೋ ಖೋ ವಿಶ್ವಕಪ್‌ಗೆ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕಗೊಂಡರು.
ನಟರಷ್ಟೇ ಅಲ್ಲ, ಯಶಸ್ವಿ ನಿರ್ಮಾಪಕ ಕೂಡ!
ಸಲ್ಮಾನ್ ಖಾನ್ ಅವರು ತಮ್ಮ ಸ್ವಂತ ನಿರ್ಮಾಣ ಕಂಪನಿ, ಸಲ್ಮಾನ್ ಖಾನ್ ಫಿಲ್ಮ್ಸ್ ಮೂಲಕ ಹಲವಾರು ಯಶಸ್ವಿ ಚಿತ್ರಗಳನ್ನು ನಿರ್ಮಿಸಿದ್ದಾರೆ. ಬಜರಂಗಿ ಭಾಯಿಜಾನ್, ಟ್ಯೂಬ್‌ಲೈಟ್, ರೇಸ್ 3, ಭಾರತ್ ಇವರಲ್ಲಿ ಕೆಲವು ಉದಾಹರಣೆಗಳು. 2021 ರಲ್ಲಿ, ಸಲ್ಮಾನ್ ಖಾನ್ ಜನಪ್ರಿಯ ಶಾರ್ಟ್ ವಿಡಿಯೋ ಪ್ಲಾಟ್‌ಫಾರ್ಮ್‌ನಲ್ಲಿ ಹೂಡಿಕೆ ಮಾಡಿದರು. ಸ್ವದೇಶಿ ಅಪ್ಲಿಕೇಶನ್ ಅವರನ್ನು ತಮ್ಮ ಜಾಗತಿಕ ರಾಯಭಾರಿ ಎಂದು ಹೆಸರಿಸಿದೆ.
ರಿಯಲ್ ಎಸ್ಟೇಟ್ ಸಾಮ್ರಾಜ್ಯ
ಸಲ್ಮಾನ್ ಖಾನ್ ಅವರು ಭಾರತ ಮತ್ತು ವಿದೇಶಗಳಲ್ಲಿ ಹಲವಾರು ಐಷಾರಾಮಿ ಆಸ್ತಿಗಳನ್ನು ಹೊಂದಿದ್ದಾರೆ. ಮುಂಬೈನ ಬಾಂದ್ರಾ ವೆಸ್ಟ್‌ನಲ್ಲಿರುವ ಅವರ ಮನೆ ಸುಮಾರು 100-150 ಕೋಟಿ ರೂಪಾಯಿ ಮೌಲ್ಯದ್ದಾಗಿದೆ. ಅವರ ಪನ್ವೆಲ್‌ನ ಫಾರ್ಮ್‌ಹೌಸ್ 150 ಎಕರೆ ವಿಸ್ತಾರವಾಗಿದೆ ಮತ್ತು ಗೊರೈನ ಬೀಚ್ ಹೌಸ್ ಸುಮಾರು 100 ಕೋಟಿ ರೂಪಾಯಿ ಮೌಲ್ಯದ್ದಾಗಿದೆ. ದುಬೈನ ಬುರ್ಜ್ ಪೆಸಿಫಿಕ್ ಟವರ್ಸ್‌ನಲ್ಲಿರುವ ಅವರ ಅಪಾರ್ಟ್‌ಮೆಂಟ್‌ನ ಮೌಲ್ಯವನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಮುಂಬೈನ ಲಿಂಕಿಂಗ್ ರಸ್ತೆಯಲ್ಲಿರುವ ಅವರ ವಾಣಿಜ್ಯ ಆಸ್ತಿಯನ್ನು 120 ಕೋಟಿ ರೂಪಾಯಿಗೆ ಖರೀದಿಸಲಾಗಿತ್ತು ಮತ್ತು ಪ್ರಸ್ತುತ ಬಾಡಿಗೆದಾರರಾದ ಫುಡ್ ಸ್ಕ್ವೇರ್ ಮಾಸಿಕ 1 ಕೋಟಿ ರೂಪಾಯಿ ಬಾಡಿಗೆ ನೀಡುತ್ತಿದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications