ಸದ್ಯ ದೇಶದೆಲ್ಲೆಡೆ, ರಾಜ್ಯದೆಲ್ಲೆಡೆ ಸೈಬರ್ ಕ್ರೈಮ್ ಪ್ರಕರಣಗಳು (Cyber Crime) ಹೆಚ್ಚಾಗುತ್ತಿದೆ. ಸರ್ಕಾರ ಎಷ್ಟೇ ಕ್ರಮ ಕೈಗೊಂಡರೂ ಸೈಬರ್ ಖದೀಮರು ಮಾತ್ರ ಹೊಸ ಹೊಸ ಹಾದಿಯನ್ನು ಹಿಡಿದುಕೊಂಡು ಅಮಾಯಕರನ್ನು ಮೋಸದ ಬಲೆಗೆ ಬೀಳುಸುತ್ತಿದ್ದಾರೆ. ಆದ್ರೆ ಇದೀಗ ಸೈಬರ್ ವಂಚಕರಿಗೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರ (Central Govt) ಸಜ್ಜಾಗಿದೆ.

ಹೌದು, ಕೇಂದ್ರ ಸಂವಹನ ಸಚಿವಾಲಯವು ಮೊಬೈಲ್ ಹ್ಯಾಂಡ್‌ಸೆಟ್‌ಗಳಲ್ಲಿ ಹೊಸ ಮೊಬೈಲ್ ಅಪ್ಲಿಕೇಶನ್ ಸ್ಥಾಪಿಸಲು ಸಜ್ಜಾಗಿದೆ. ಈ ಆಪ್‌ಗಳು ಸೈಬರ್ ವಂಚನೆ, ಫೇಕ್ ಕಾಲ್‌ಗಳನ್ನು ತಡೆಯುವುದಲ್ಲದೇ ಹಲವು ಸಮಸ್ಯೆಗಳಿಗೆ ಪರಿಹಾರವಾಗಲಿದೆ.
ಸೈಬರ್ ವಂಚಕರಿಗೆ ಬ್ರೇಕ್!
ಕೇಂದ್ರ ಸಂವಹನ ಸಚಿವಾಲಯ, ಸಂಚಾರ್ ಸಾಥಿ ಅಪ್ಲಿಕೇಶನ್ ಅನ್ನು ಸ್ಮಾರ್ಟ್‌ಫೋನ್‌ಗಳಲ್ಲಿ ಮೊದಲೇ ಸ್ಥಾಪಿಸುವ ಬಗ್ಗತೆ ದೂರಸಂಪರ್ಕ ಇಲಾಖೆಯ (DoT) ನಿರ್ದೇಶನಗಳ ಉದ್ದೇಶವನ್ನು ಸ್ಪಷ್ಟಪಡಿಸಿದೆ. ನಕಲಿ ಹ್ಯಾಂಡ್‌ಸೆಟ್‌ಗಳಿಂದ ಬಳಕೆದಾರರನ್ನು ರಕ್ಷಿಸುವುದು ಹಾಗೂ ಕರೆಗಳ ಮೂಲಕ ಮೋಸ ಮಾಡುವುದನ್ನು ತಡೆಯಲು ಇದು ಸಹಕಾರಿಯಾಗಲಿದೆ ಎಂದು ಸಚಿವಾಲಯ ತಿಳಿಸಿದೆ. ನವೆಂಬರ್ 28 ರಂದು DoT, ಟೆಲಿಕಾಂ ಸೈಬರ್ ಭದ್ರತಾ ಕಾಯ್ದೆಯಡಿ ಭಾರತದಲ್ಲಿ ಮೊಬೈಲ್ ಹ್ಯಾಂಡ್‌ಸೆಟ್‌ಗಳ ತಯಾರಕರು ಮತ್ತು ಆಮದುದಾರರಿಗೆ ಈ ಆಪ್ ಅನ್ನು ಬಳಸುವುದು ಕಡ್ಡಾಯಗೊಳಿಸಿದೆ.
ಅಷ್ಟೇ ಅಲ್ಲದೇ, ಡಿಸೆಂಬರ್ 1 ರಂದು, ಕಾಂಗ್ರೆಸ್ ಪಕ್ಷ ಈ ನಿರ್ಧಾರಕ್ಕೆ ಖಂಡನೆ ವ್ಯಕ್ತ ಮಾಡಿತ್ತು. ಹೊಸ ಮೊಬೈಲ್ ಫೋನ್‌ಗಳಲ್ಲಿ ಸಂಚಾರ್ ಸಾಥಿ ಅಪ್ಲಿಕೇಶನ್‌ನ ಮೊದಲೇ ಸ್ಥಾಪಿಸುವ DoT ನಿರ್ದೇಶನಗಳನ್ನು ತೀವ್ರವಾಗಿ ಖಂಡಿನೆ ವ್ಯಕ್ತಪಡಿಸಿತ್ತು. ಇದನ್ನು 'ಅಸಂವಿಧಾನಿಕ' ಎಂದು ಬಣ್ಣಿಸಿ, ತಕ್ಷಣವೇ ಹಿಂಪಡೆಯಲು ಒತ್ತಾಯಿಸಿದೆ.
ಕೇಂದ್ರ ಸಂವಹನ ಸಚಿವಾಲಯದ ಪತ್ರಿಕಾ ಪ್ರಕಟಣೆಯಂತೆ, ಮೊಬೈಲ್ ಹ್ಯಾಂಡ್‌ಸೆಟ್‌ಗಳ ದೃಢೀಕರಣ ಪರಿಶೀಲನೆಗಾಗಿ ಸಂಚಾರ್ ಸಾಥಿ ಅಪ್ಲಿಕೇಶನ್ ಅನ್ನು ಮೊದಲೇ ಸ್ಥಾಪಿಸುವ ನಿರ್ದೇಶನಗಳನ್ನು DoT ಈಗಾಗಲೇ ಕಂಪನಿಗಳಿಗೆ ಹೊರಡಿಸಿದೆ. ಆ ಪ್ರಕಾರ ಇನ್ಮೇಲೆ ಬರುವಂತಹ ಎಲ್ಲಾ ಮೊಬೈಲ್‌ಗಳಲ್ಲಿ ಸಂಚಾರ ಸಾಥಿ ಆಪ್ ಮೊದಲೇ ಅಳವಡಿಸಿರಲಾಗುತ್ತದೆ..
ಡಿಸೆಂಬರ್ 1 ರ ಸಚಿವಾಲಯದ ವರದಿ:
"ಜನರು ನಕಲಿ ಹ್ಯಾಂಡ್‌ಸೆಟ್‌ಗಳನ್ನು ಖರೀದಿಸುವುದರಿಂದ ರಕ್ಷಿಸಲು, ಕರೆ ಸಂಪರ್ಕಗಳ ವರದಿಯನ್ನು ಕದಿಯುವುದಕ್ಕೆ ಕಡಿವಾಣ ಹಾಕಲು ಮತ್ತು ಸಂಚಾರ್ ಸಾಥಿ ಆಪ್‌ನ ಬಳಕೆಯನ್ನು ಹೆಚ್ಚಿಸಲು, DoT ದಿನಾಂಕ 28.11.2025 ರಂದು ನಿರ್ದೇಶನಗಳನ್ನು ಹೊರಡಿಸಿದೆ. ಇದು ಟೆಲಿಕಾಂ ಸೈಬರ್ ಭದ್ರತೆಯ ನಿಬಂಧನೆಗಳ ಅಡಿಯಲ್ಲಿ ಭಾರತದಲ್ಲಿ ಬಳಸುವ ಮೊಬೈಲ್ ಹ್ಯಾಂಡ್‌ಸೆಟ್‌ಗಳ ತಯಾರಕರು ಮತ್ತು ಆಮದುದಾರರಿಗೆ ಕಡ್ಡಾಯವಾಗಲಿದೆ."
ಸಚಿವಾಲಯ ಮೊಬೈಲ್ ಫೋನ್ ತಯಾರಕರು ಮತ್ತು ಆಮದುದಾರರಿಗೆ ನೀಡಿದ ಆದೇಶವೇನು?
1. ಭಾರತದಲ್ಲಿ ಬಳಸಲು, ತಯಾರಿಸಿದ ಅಥವಾ ಆಮದು ಮಾಡಿಕೊಳ್ಳುವ ಎಲ್ಲಾ ಮೊಬೈಲ್ ಹ್ಯಾಂಡ್‌ಸೆಟ್‌ಗಳಲ್ಲಿ ಸಂಚಾರ್ ಸಾಥಿ ಮೊಬೈಲ್ ಅಪ್ಲಿಕೇಶನ್ ಮೊದಲೇ ಸ್ಥಾಪಿಸಿರಬೇಕು.
2. ಮೊದಲ ಬಳಕೆಯ ಅಥವಾ ಸಾಧನದ ಸೆಟಪ್ ಆಗುವಾಗ, ಮೊದಲೇ ಸ್ಥಾಪಿಸಲಾದ ಸಂಚಾರ್ ಸಾಥಿ ಅಪ್ಲಿಕೇಶನ್ ಬಳಸಲು ಯೋಗ್ಯವಾಗಿರಬೇಕು ಮತ್ತು ಲಭ್ಯವಿರಬೇಕು. ಅದನ್ನು ಡಿಸೇಬಲ್ ಮಾಡುವ ಅವಕಾಶ ನೀಡಬಾರದು.
3. ಈಗಾಗಲೇ ತಯಾರಿಸಿದ ಮತ್ತು ಭಾರತದಲ್ಲಿ ಮಾರಾಟದಲ್ಲಿರುವ ಸಾಧನಗಳಿಗೆ, ತಯಾರಕರು ಮತ್ತು ಆಮದುದಾರರು ಸಾಫ್ಟ್‌ವೇರ್ ಅಪ್‌ಡೇಟ್‌ಗಳ ಮೂಲಕ ಅಪ್ಲಿಕೇಶನ್ ಅನ್ನು ಸ್ಥಾಪಿಸಲು ಪ್ರಯತ್ನಿಸಬೇಕು ಎನ್ನಲಾಗಿದೆ.


Click it and Unblock the Notifications