ಬೆಂಗಳೂರು, ಜೂನ್ 26: ಭಾರತದ ಸಿರಿವಂತ ಕುಟುಂಬ, ರಿಲಯನ್ಸ್ ಫೌಂಡೇಶನ್ ಅಧ್ಯಕ್ಷ ಮತ್ತು ಬಿಲಿಯನೇರ್ ಮುಕೇಶ್ ಅಂಬಾನಿ ಮನೆಯಲ್ಲಿ ಈಗ ಮದುವೆಯ ಸಂಭ್ರಮ ಮನೆಮಾಡಿದೆ. ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ತಮ್ಮ ಪುತ್ರನ ಮದುವೆ ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಇನ್ನೊಂದೆಡೆ ಮುಖೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ತಮ್ಮ ಕಿರಿಯ ಪುತ್ರ ಅನಂತ್ ಅಂಬಾನಿ ಅವರ ವಿವಾಹಕ್ಕೂ ಮುನ್ನ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ಕುಟುಂಬ ಮದುವೆ ಹಾಗೂ ವಿವಾಹ ಪೂರ್ವ ಕಾರ್ಯಕ್ರಮಗಳಿಂದ ಅಗ್ಗಾಗ್ಗೆ ಸುದ್ದಿಯಾಗುತ್ತಿದೆ. ಅಂಬಾನಿ ಕುಟುಂಬದ ಶ್ಲೋಕಾ ಮೆಹ್ತಾ ಮತ್ತು ರಾಧಿಕಾ ಮರ್ಚೆಂಟ್ ಸಿರಿವಂತ ಕುಟುಂಬದ ಹಿನ್ನಲೆಯುಳ್ಳವರು. ಆದರೆ ಅಂಬಾನಿ ಸೊಸೆಯರಿಗಿಂತ ಸಿರಿವಂತ ಮಹಿಳೆಯೊಬ್ಬರಿದ್ದಾರೆ. ಅವರೇ ಕ್ರೀಡಾ ಲೋಕದಲ್ಲಿ ಸಾಧನೆ ಮಾಡಿದ, ಮೂಗುತಿ ಸುಂದರಿ ಖ್ಯಾತಿಯ ಸಾನಿಯಾ ಮಿರ್ಜಾ.

ಸಾನಿಯಾ ಮಿರ್ಜಾ ಅವರು ಭಾರತೀಯ ಮಾಜಿ ವೃತ್ತಿಪರ ಟೆನಿಸ್ ಆಟಗಾರ್ತಿಯಾಗಿದ್ದು, ಅವರು ತಮ್ಮ ವೃತ್ತಿಜೀವನದುದ್ದಕ್ಕೂ, ಭಾರತದಲ್ಲಿ ಹೆಚ್ಚು ತಿಳಿದಿರುವ, ಅತಿ ಹೆಚ್ಚು ಸಂಭಾವನೆ ಪಡೆಯುವ ಮತ್ತು ಪ್ರಭಾವಶಾಲಿ ಕ್ರೀಡಾಪಟು ಆಗಿದ್ದರು. ಸದ್ಯ ಸಾನಿಯಾ ಮಿರ್ಜಾ ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್‌ನಿಂದ ವಿಚ್ಛೇದನ ಪಡೆದಿದ್ದು ತಮ್ಮ ಪುತ್ರ ಇಜಾನ್‌ಗೆ ಸಿಂಗಲ್ ಮದರ್ ಆಗಿದ್ದಾರೆ. ಸಾನಿಯಾ ಯಶಸ್ವಿ ವೃತ್ತಿಜೀವನ ಮತ್ತು ಅತ್ಯುತ್ತಮ ಆಟದಿಂದಾಗಿ ತನ್ನದೇ ಆದ ಛಾಪನ್ನು ಮೂಡಿಸಿದವರು.
ಸಾನಿಯಾ ಮಿರ್ಜಾ ಅವರ ನಿವ್ವಳ ಮೌಲ್ಯವು ಅಂಬಾನಿ ಸೊಸೆಯರಾಗಿರುವ ಶ್ಲೋಕಾ ಮೆಹ್ತಾ ಮತ್ತು ರಾಧಿಕಾ ಮರ್ಚೆಂಟ್ ಅವರ ನಿವ್ವಳ ಮೌಲ್ಯಕ್ಕಿಂತ ಹೆಚ್ಚು ಅಂದರೆ ನಂಬಲೇಬೇಕು. ಮಿರ್ಜಾ ಅವರ ಒಟ್ಟಾರೆ ನಿವ್ವಳ ಮೌಲ್ಯವು 26 ಮಿಲಿಯನ್ ಡಾಲರ್ (ಅಂದಾಜು 216 ಕೋಟಿ ರೂಪಾಯಿ) ಎಂದು ಅಂದಾಜಿಸಲಾಗಿದೆ. ಮಾಜಿ ಭಾರತೀಯ ಟೆನಿಸ್ ಆಟಗಾರ್ತಿ ಬ್ರ್ಯಾಂಡ್ ಎಂಡಾರ್ಸ್‌ಮೆಂಟ್‌ಗಳಿಗಾಗಿ 25 ಕೋಟಿ ರೂ ವಿಧಿಸುತ್ತಾರೆ ಮಾತ್ರವಲ್ಲದೇ ತನ್ನದೇ ಆದ ಟೆನಿಸ್ ಅಕಾಡೆಮಿ ಸಹ ನಡೆಸುತ್ತಿದ್ದಾರೆ.
ಅಂಬಾನಿ ಸೊಸೆಯಂದಿರ ನಿವ್ವಳ ಮೌಲ್ಯ ನೋಡುವುದಾದರೆ, ಆಕಾಶ್ ಅಂಬಾನಿ ಅವರ ಪತ್ನಿ ಶ್ಲೋಕಾ ಮೆಹ್ತಾ ಅವರ ನಿವ್ವಳ ಮೌಲ್ಯವು $ 18 ಮಿಲಿಯನ್ ಅಥವಾ 120 ಕೋಟಿ ರೂಪಾಯಿಯಾದರೆ ಅನಂತ್ ಅಂಬಾನಿ ಅವರ ನಿಶ್ಚಿತ ವಧು ರಾಧಿಕಾ ಮರ್ಚೆಂಟ್ ಅವರ ಪ್ರಸ್ತುತ ನಿವ್ವಳ ಮೌಲ್ಯ ಸುಮಾರು 10 ಕೋಟಿ ಎಂದು ಅಂದಾಜಿಸಲಾಗಿದೆ.
ಸಾನಿಯಾ ಮಿರ್ಜಾ ಕೂಡ ಐಷಾರಾಮಿ ಜೀವನ ಸಾಗಿಸುತ್ತಿದ್ದು, ಹೈದರಾಬಾದ್‌ನಲ್ಲಿರುವ ಅವರ ಐಷಾರಾಮಿ ಮನೆಯು ಸುಮಾರು 13 ಕೋಟಿ ರೂಪಾಯಿಗಳ ಮೌಲ್ಯದ್ದಾಗಿದೆ . ಈ ವಿಲಾಸವು ಎಲ್ಲಾ ಆಧುನಿಕ ಸೌಕರ್ಯಗಳು, ಭವ್ಯತೆ, ಸುಂದರಒಳಾಂಗಣ ವಿನ್ಯಾಸಗಳೊಂದಿಗೆ ಸುಸಜ್ಜಿತವಾಗಿದೆ.
ಸಾನಿಯಾ ಮಿರ್ಜಾ ಕೂಡ ಐಷಾರಾಮಿ ಕಾರುಗಳ ಸಮೂಹವನ್ನು ಹೊಂದಿದ್ದು ಜಿಕ್ಯೂ ಪ್ರಕಾರ, ಸಾನಿಯಾ ಮಿರ್ಜಾ ಬಿಎಂಡಬ್ಲ್ಯು 7-ಸಿರೀಸ್ ಕಾರು ಹೊಂದಿದ್ದು, ಇದರ ಮೌಲ್ಯ 1.70 ಕೋಟಿ ರೂ. ಆಗಿದೆ. ಇದಲ್ಲದೆ ಅವರು ರೇಂಜ್ ರೋವರ್ ಇವೊಕ್ ಹೊಂದಿದ್ದು ಇದರ ಮೌಲ್ಯವು 72.09 ಲಕ್ಷ ರೂಪಾಯಿಗಳು ಮತ್ತು ಜಾಗ್ವಾರ್ ಎಕ್ಸ್‌ಇ ಮೌಲ್ಯವು 46.64 ಲಕ್ಷ ರೂಪಾಯಿ ಆಗಿದೆ.


Click it and Unblock the Notifications