Savings by age: '30,40, 50 ವರ್ಷ' ನಿಮ್ಮ ವಯಸ್ಸಿನ ಪ್ರಕಾರ ಉಳಿತಾಯ ಮಾಡಿದ್ದಿರಾ? ಚೆಕ್ ಮಾಡ್ಕೊಳ್ಳಿ

ಯೌವನದಲ್ಲಿ ಅಥವಾ ಕಷ್ಟಪಟ್ಟು ದುಡಿಯುವ ವಯಸ್ಸಿನಲ್ಲಿ ಆದಾಯ ಉತ್ತಮವಾಗಿರುತ್ತದೆ. ಆದಾಯ ಉತ್ತಮವಿದ್ದಾಗ ನಮಗೆ ಬೇಕಾದ ಆರ್ಥಿಕ ಅಗತ್ಯಗಳನ್ನು, ಮನೆ ಖರೀದಿಗೆ, ವಾಹನ ಖರೀದ್ಗೆ ಹೀಗೆ ನಮ್ಮ ಬಯಕೆಗಳನ್ನು ಪೂರೈಸಲು ಸಾಲ ಸೌಲಭ್ಯಗಳೂ ಸಿಗುತ್ತದೆ. ಆದರೆ ನಿವೃತ್ತಿಯ ನಂತರ ಏನು? ಕೈಯಲ್ಲಿ ಕೆಲವೂ ಇರುವುದಿಲ್ಲ ಆದಾಯವೂ ಇಲ್ಲ. ಸಾಲ ಮೊದಲೇ ಸಿಗುವುದಿಲ್ಲ. ವಯಸ್ಸಾದಂತೆ ದಿನಿತ್ಯದ ಅಗತ್ಯಗಳಿಗೆ ಮತ್ತು ಆಸ್ಪತ್ರೆಗೆ ವೆಚ್ಚಗಳಿಗೆ ನಾವು ಮನೆಮಂದಿಯನ್ನು ಅವಲಂಬಿಸಬೇಕಾಗುತ್ತದೆ. ಭವಿಷ್ಯದಲ್ಲಿ ಇಂತಹ ಪರಿಸ್ಥಿತಿ ಬರಬಾರದು ಎಂದು ನಾವು ಬಯಸಿದ್ರೆ ಮುಂಚಿತವಾಗಿಯೇ ಎಚ್ಚರವಹಿಸಬೇಕು..

ದುಡಿಯುವ ವಯಸ್ಸಿನಲ್ಲಿ ನಾವು ಒಂದಷ್ಟು ಪ್ಲ್ಯಾನ್ ಮಾಡಿ ಹೂಡಿಕೆಯನ್ನು ಆರಂಭಿಸಬೇಕು. ನಿವೃತ್ತಿ ಜೀವನವು ಆರಾಮದಾಯಕವಾಗಿರಬೇಕು ಎಂಬ ಕನಸನ್ನು ನನಸು ಮಾಡಲು ಮುಂಚಿತವಾಗಿ ಯೋಜನೆ ರೂಪಿಸುವುದು ಅತ್ಯಂತ ಮುಖ್ಯ. ನಿವೃತ್ತಿಯ ನಂತರ ಆದಾಯದ ಮೂಲಗಳು ಕಡಿಮೆಯಾಗುವ ಕಾರಣ, ಆಗಿನ ಜೀವನವನ್ನು ಸುಗಮವಾಗಿ ನಡೆಸಲು ಹಣಕಾಸಿನ ಸ್ಥಿರತೆ ಅಗತ್ಯ. ಆದರೆ ನಿವೃತ್ತಿಗಾಗಿ ಅನೇಕರಿಗೆ ಎಷ್ಟು ಉಳಿಸಬೇಕು ಎನ್ನುವುದು ತಿಳಿದಿರಲಿಕ್ಕಿಲ್ಲ. ಆದರೆ ಅದು ವ್ಯಕ್ತಿಯಿಂದ ವ್ಯಕ್ತಿ ಅವರ ಜೀವನಕ್ರಮದ ಮೇಲೆ ಬದಲಾಗುತ್ತ ಹೋಗುತ್ತದೆ ಎಂಬುವುದು ಗಮನದಲ್ಲಿಟ್ಟಿಕೊಳ್ಳಬೇಕು.

 Savings by age: ವಯಸ್ಸಿನ ಪ್ರಕಾರ ಉಳಿತಾಯ ಮಾಡಿದ್ದಿರಾ?

ವಯಸ್ಸಿನ ಲೆಕ್ಕಚಾರದಲ್ಲಿ ಎಷ್ಟು ಉಳಿಸಬೇಕು?

ನಿವೃತ್ತಿ ಯೋಜನೆ ಪೂರೈಕೆದಾರರಾದ ಫಿಡೆಲಿಟಿ ಇನ್ವೆಸ್ಟ್‌ಮೆಂಟ್ಸ್ ಪ್ರಕಾರ, 67 ನೇ ವಯಸ್ಸಿನಲ್ಲಿ ನಿವೃತ್ತಿ ಹೊಂದಲು ನೀವು ಬಯಸಿದರೆ, ನಿಮ್ಮ ಆದಾಯದ 10 ಪಟ್ಟು ಹಣವನ್ನು ಉಳಿಸುವುದು ನಿಯಮವಾಗಿದೆ - ಇದರಲ್ಲಿ ನಿವೃತ್ತಿ ಖಾತೆ ಮತ್ತು ಹೂಡಿಕೆಗಳಲ್ಲಿರುವ ಎಲ್ಲವೂ ಸೇರಿವೆ. ಪ್ರತಿ ದಶಕಕ್ಕೆ ಅದು ಹೇಗೆ ಬದಲಾಗುತ್ತದೆ ಎಂಬುದು ಇಲ್ಲಿದೆ:

20 ರಿಂದ 30 ವರ್ಷ: ಈ ಹಂತದಲ್ಲಿ, ನಿಮ್ಮ ಆದಾಯದ 1 ಪಟ್ಟು ಹಣವನ್ನು ಉಳಿಸುವ ಗುರಿಯನ್ನು ಹೊಂದಿರಬೇಕು . ಅಂದರೆ ನಿಮ್ಮ ವಾರ್ಷಿಕ ವೇತನಕ್ಕೆ ಸಮನಾದ ಉಳಿತಾಯ ನಿಮ್ಮ ಬಳಿ ಇರಬೇಕು. ನಿಮ್ಮ ವಾರ್ಷಿಕ ಆದಾಯ 3 ಲಕ್ಷ ಎಂದಾದರೆ 30 ವರ್ಷದ ಹುಟ್ಟುಹಬ್ಬದ ವೇಳೆ ನಿಮ್ಮ ಬಳಿ 3 ಲಕ್ಷ ರೂ. ಉಳಿತಾಯ ಇರಬೇಕು

30 ರಿಂದ 40 ವರ್ಷ: 30 ರಿಂದ 40 ವರ್ಷದ ನಡುವೆ ಹಣ ಉಳಿಸುವುದು ನಿಮ್ಮ ದೀರ್ಘಾವಧಿಯ ಹಣಕಾಸಿನ ಸ್ವಾತಂತ್ರ್ಯಕ್ಕೆ ಬಹಳ ಮುಖ್ಯ. ಹೀಗಾಗಿ ನಿಮ್ಮ ಆದಾಯದ 3 ಪಟ್ಟು ಹಣವನ್ನು ಉಳಿಸುವ ಗುರಿ ಮುಟ್ಟಲು ನೀವು ಎಲ್ಲಾ ರೀತಿಯಲ್ಲೂ ಪ್ರಯತ್ನಿಸಬೇಕು.

40 ರಿಂದ 50 ವರ್ಷ: ಈ ಅವಧಿಯಲ್ಲಿ ನೀವು ನಿವೃತ್ತಿಗೆ ಹತ್ತಿರವಾಗುತ್ತೀರಿ. ನಿವೃತ್ತಿಯ ನಂತರ ಆದಾಯದ ಮೂಲಗಳು ಕಡಿಮೆಯಾಗುವ ಕಾರಣ ಹಾಗೂ ಇತರ ಖರ್ಚುಗಳು ಹೆಚ್ಚಾಗುತ್ತವೆ ಎಂಬುವುದು ಗಮನದಲ್ಲಿರಲಿ. ಹೀಗಾಗಿ ನಿಮ್ಮ ೫೦ನೇ ವರ್ಷದ ಹುಟ್ಟುಹಬ್ಬದ ವೇಳೆ ನಿಮ್ಮ ಆದಾಯದ 6 ಪಟ್ಟು ಹಣವನ್ನು ಉಳಿತಾಯ ರೂಪದಲ್ಲಿ ನಿಮ್ಮ ಬಳಿ ಇರಲಿ.

50 ರಿಂದ 60 ವರ್ಷ: ಈ ವಯಸ್ಸಿನ ಅವಧಿಯಲ್ಲಿ ನಿಮ್ಮ ಆದಾಯದ 8 ಪಟ್ಟು ಹಣವನ್ನು ಉಳಿಸುವುದು ನಿಮ್ಮ ನಿವೃತ್ತಿಯನ್ನು ಸುರಕ್ಷಿತಗೊಳಿಸಲು ಅತ್ಯಂತ ಮುಖ್ಯವಾದ ಗುರಿಯಾಗಿದೆ. ಈ ಅವಧಿಯಲ್ಲಿ ನೀವು ಮಾಡುವ ಪ್ರತಿಯೊಂದು ಉಳಿತಾಯವು ನಿಮ್ಮ ಭವಿಷ್ಯದ ಸುರಕ್ಷತೆಗೆ ಕೊಡುಗೆ ನೀಡುತ್ತದೆ.

60 ರಿಂದ 67 ವರ್ಷ: ಈ ಅವಧಿಯಲ್ಲಿ ನಿಮ್ಮ ಆದಾಯದ 10 ಪಟ್ಟು ಹಣವನ್ನು ಉಳಿಸುವ ಗುರಿಯನ್ನುಹೊಂದುವುದು ನಿಮ್ಮ ನಿವೃತ್ತಿ ಜೀವನವನ್ನು ಸುರಕ್ಷಿತಗೊಳಿಸುತ್ತದೆ. ಆರೋಗ್ಯ ಸಮಸ್ಯೆಗಳು, ಮನೆ ರಿಪೇರಿಯಂತಹ ಖರ್ಚು ನಿಮ್ಮನ್ನು ಕಾಡಬಹುದಾಗಿರುವುದರಿಂದ ಸಾಕಷ್ಟು ಉಳಿತಾಯ ಮಾಡಿಕೊಳ್ಳಿ.

ನಿವೃತ್ತಿ ಯೋಜನೆ ರೂಪಿಸುವಾಗ ನಿಮ್ಮ ನಿವೃತ್ತಿ ವಯಸ್ಸು ಬಹಳ ಮುಖ್ಯವಾಗಿದೆ. 62 ನೇ ವಯಸ್ಸಿನಲ್ಲಿ ನಿವೃತ್ತಿ ಹೊಂದುವವರು (ಸಾಮಾಜಿಕ ಭದ್ರತೆಯನ್ನು ಪಡೆಯಲು ಕನಿಷ್ಠ ವಯಸ್ಸು) ಐದು ವರ್ಷಗಳ ಕಾಲ ಹೆಚ್ಚುವರಿ ಆದಾಯವಿಲ್ಲದೆ ಬದುಕಲು ಹೆಚ್ಚು ಉಳಿಸಬೇಕಾಗುತ್ತದೆ. ಮತ್ತೊಂದೆಡೆ, 70 ನೇ ವಯಸ್ಸಿನಲ್ಲಿ ನಿವೃತ್ತಿ ಹೊಂದುವವರಿಗೆ ತಮ್ಮ ಆದಾಯದ 10 ಪಟ್ಟು ಹಣವನ್ನು ಸಂಪೂರ್ಣವಾಗಿ ಉಳಿಸುವ ಅಗತ್ಯವಿರುವುದಿಲ್ಲ, ಏಕೆಂದರೆ ಅವರು ಮೂರು ವರ್ಷಗಳ ಹೆಚ್ಚುವರಿಯಾಗಿ ಕೆಲಸ ಮಾಡುತ್ತಾರೆ ಮತ್ತು ಜೀವಿಸುವ ಅವಧಿಯೂ ಕಡಿಮೆಯಾಗಿರುತ್ತದೆ.

ಮೇಲಿನ ಸಲಹೆಯಂತೆ ಉಳಿತಾಯ ಮಾಡಬೇಕು ಎನ್ನುವ ಯೋಚನೆ ಇದ್ದರೆ ಫಿಡೆಲಿಟಿ ಸಂಸ್ಥೆಯೂ ನಿಮ್ಮ 25 ನೇ ವಯಸ್ಸಿನಿಂದ ಪ್ರತಿ ವರ್ಷ ನಿಮ್ಮ ಆದಾಯದ 15% ಉಳಿಸಲು ಶಿಫಾರಸು ಮಾಡುತ್ತದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+