SBI ಅಮೃತ್ ವೃಷ್ಟಿ ಎಫ್‌ಡಿ ಯೋಜನೆಯಡಿಯಲ್ಲಿ ನೀವು ಹೂಡಿಕೆ ಮಾಡಿದ್ರೆ ಎಷ್ಟು ಮೆಚ್ಯೂರಿಟಿ ಪಡೆಯಬಹುದು ತಿಳಿಯಿರಿ

ಎಸ್‌ಬಿಐ ತಮ್ಮ ಗ್ರಾಹಕರಿಗಾಗಿ ಮತ್ತೊಂದು ಆಕರ್ಷಕ ಮಾಹಿತಿಯನ್ನ ನೀಡ್ತಿದೆ. ಎಸ್‌ಬಿಐ ಅಮೃತವೃಷ್ಟಿ ಎಫ್‌ಡಿ ಯೋಜನೆಯಡಿಯಲ್ಲಿ ನೀವು ಈಗ ಸುಲಭವಾಗಿ ಹೂಡಿಕೆ ಮಾಡಬಹುದು. ಇದಕ್ಕಾಗಿ ನಿಮಗೆ ಹೆಚ್ಚಿನ ಹಣದ ಅಗತ್ಯ ಬೀಳುವುದಿಲ್ಲ. ನೀವು ಸ್ಥಿರ ಠೇವಣಿಯೊಂದಿಗೆ ನೀವು ಕನಿಷ್ಠ 1000 ರೂ ಮೊತ್ತವನ್ನ ಹೂಡಿಕೆ ಮಾಡಬಹುದು. ಇನ್ನುಮುಂದೆ ಜನರು ಅಮೃತ್ ವೃಷ್ಟಿ ಎಫ್‌ಡಿ ಯೋಜನೆಯಲ್ಲಿ ಹೂಡಿಕೆ ಮಾಡಲು ಯಾವುದೇ ಹೆಚ್ಚಿನ ಮಿತಿ ಹೊಂದಿರುವ ಅಗತ್ಯವಿಲ್ಲ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನಾಗರಿಕರಿಗಾಗಿ ಅನೇಕ ಸ್ಥಿರ ಠೇವಣಿಗಳನ್ನು (FD) ನೀಡಲು ನಿರ್ಧರಿಸಿದೆ. ಸೀಮಿತ ಅವಧಿಗೆ ಅತೀ ಹೆಚ್ಚಿನ ಬಡ್ಡಿ ದರವನ್ನು ಪಾವತಿಸುವ ಅಮೃತ್ ವೃಷ್ಟಿ ಅತ್ಯುತ್ತಮ FD ಯೋಜನೆಗಳಲ್ಲಿ ಒಂದಾಗಿದೆ.

SBI ಅಮೃತವೃಷ್ಟಿ ಯೋಜನೆಯಡಿಯಲ್ಲಿ ನೀವು ಸುಲಭವಾಗಿ ಹೂಡಿಕೆ ಮಾಡಬಹುದು

ಎಸ್‌ಬಿಐ ಅಮೃತವೃಷ್ಟಿ ಎಫ್‌ಡಿ ಅವಧಿ?

ಅಮೃತವೃಷ್ಟಿ ಎಫ್‌ಡಿ ಯೋಜನೆಯು 444 ಅವಧಿಯನ್ನ ಹೊಂದಿದೆ. ಹಾಗೆ ಈ ಯೋಜನೆಯು ಆರಂಭವಾಗಿದ್ದು, ಜುಲೈ 15, 2024ರಂದು, ಅಲ್ಲದೆ ಈ ಯೋಜನೆ ಮಾರ್ಚ್‌ 31 2025ರವರೆಗೆ ನಿಮಗೆ ಲಭ್ಯವಿರುತ್ತದೆ.

ಎಸ್‌ಬಿಐ ಅಮೃತವೃಷ್ಟಿ ಎಫ್‌ಡಿಯಲ್ಲಿ ಯಾರೆಲ್ಲ ಹೂಡಿಕೆ ಮಾಡಬಹುದು?

ಪ್ರಮುಖವಾಗಿ ಈ ಅಮೃತವೃಷ್ಟಿ ಯೋಜನೆಯು ದೇಶೀಯ ಮತ್ತು ಅನಿವಾಸಿ ಭಾರತೀಯ ಗ್ರಾಹಕರಿಗೆ ಲಭ್ಯವಿದೆ.

ಎಸ್‌ಬಿಐ ಅಮೃತ್ ವೃಷ್ಟಿ ಎಫ್‌ಡಿ ಬಡ್ಡಿ ದರ ಎಷ್ಟಿರುತ್ತದೆ?

ಎಸ್‌ಬಿಐ ಶೇಕಡಾ 7.25 ಬಡ್ಡಿದರವನ್ನು ಸಾಮಾನ್ಯ ನಾಗರಿಕರಿಗೆ ನೀಡುತ್ತದೆ ಮತ್ತು 7.75 ಶೇಕಡಾ ಬಡ್ಡಿದರವನ್ನು ಹಿರಿಯ ನಾಗರಿಕರು ಈ ಗ್ಯಾರಂಟಿ ರಿಟರ್ನ್ ಯೋಜನೆಯಡಿಯಲ್ಲಿ ಪಡೆಯುತ್ತಾರೆ ಎಂದು ಎಸ್‌ಬಿಐ ತಿಳಿಸಿದೆ.

ಈ ಎಫ್‌ಡಿಯ ಕನಿಷ್ಠ ಮತ್ತು ಗರಿಷ್ಠ ಹೂಡಿಕೆ ಮೊತ್ತ

ಎಸ್‌ಬಿಐ ಅಮೃತವೃಷ್ಟಿ ಯೋಜನೆಯಡಿ ನಿಶ್ಚಿತ ಠೇವಣಿಯೊಂದಿಗೆ ನೀವು ಹೂಡಿಕೆ ಮಾಡಬಹುದಾದ ಕನಿಷ್ಠ ಮೊತ್ತವು 1,000 ರೂಪಾಯಿ ಆಗಿರುತ್ತದೆ. ಹಾಗೆ ಈ ಎಫ್‌ಡಿಯಲ್ಲಿ ಹೂಡಿಕೆ ಮಾಡಲು ಯಾವುದೇ ಹೆಚ್ಚಿನ ಮಿತಿಯನ್ನ ಇದು ಹೊಂದಿರುವುದಿಲ್ಲ.

ಪ್ರಬುದ್ಧ ವಾಪಸಾತಿಗೆ ಯಾವುದೇ ಶುಲ್ಕವಿದೆಯೇ?

-0.50% ಠೇವಣಿಗಳಿಗೆ 5 ಲಕ್ಷ ರೂ. ದಂಡ ಇರುತ್ತದೆ
-1%ಠೇವಣಿಗಳಿಗೆ 5 ಲಕ್ಷ ರೂ.ಗಿಂತ ಹೆಚ್ಚಿನ ದಂಡವಿರುತ್ತದೆ ಆದರೆ 3 ಕೋಟಿಗಿಂತ ಕಡಿಮೆ ಇರುತ್ತದೆ
- ಆದರೆ ಸಿಬ್ಬಂದಿ ಮತ್ತು ಎಸ್‌ಬಿಐ ಪಿಂಚಣಿದಾರರಿಗೆ ಯಾವುದೇ ದಂಡವಿರುವುದಿಲ್ಲ

2.5 ಲಕ್ಷ ರೂಪಾಯಿಯ ಹೂಡಿಕೆಯಲ್ಲಿ ನೀವು ಎಷ್ಟು ಮೆಚ್ಯೂರಿಟಿ ಮೊತ್ತವನ್ನು ಪಡೆಯಬಹುದು?

ಹಿರಿಯ ನಾಗರಿಕರು 2,50,000 ಹೂಡಿಕೆಯ ಮೇಲೆ, 7.75 ರ ದರದಲ್ಲಿ 24,824 ರೂಪಾಯಿಗಳ ಬಡ್ಡಿಯನ್ನು ಪಡೆಯುತ್ತಾರೆ. ಜೊತೆಗೆ ಅವರ ಮೆಚ್ಯೂರಿಟಿ ಮೊತ್ತ ಕೂಡ 2,74,824 ರೂಪಾಯಿ ಆಗಿರುತ್ತದೆ. ಇನ್ನು ಸಾಮಾನ್ಯ ನಾಗರಿಕರು ಶೇಕಡಾ 7.25 ದರದಲ್ಲಿ 23,165 ರೂಪಾಯಿಗಳನ್ನು ಪಡೆಯಬಹುದು ಇದರ ಜೊತೆ ಅವರ ಮೆಚ್ಯೂರಿಟಿ ಮೊತ್ತವು 2,73,165 ರೂಪಾಯಿ ಆಗಿರುತ್ತದೆ.

3 ಲಕ್ಷ ರೂಪಾಯಿಯ ಹೂಡಿಕೆಯಲ್ಲಿ ನೀವು ಎಷ್ಟು ಮೆಚ್ಯೂರಿಟಿ ಮೊತ್ತವನ್ನು ಪಡೆಯುತ್ತೀರಿ?

ಹಿರಿಯ ನಾಗರಿಕರು 3,00,000 ಹೂಡಿಕೆಯ ಮೇಲೆ, 29,789 ರಷ್ಟು ಬಡ್ಡಿಯನ್ನು 7.75% ದರದಲ್ಲಿ ಪಡೆಯುತ್ತಾರೆ, ಮತ್ತು ಅವರ ಮೆಚ್ಯೂರಿಟಿ ಮೊತ್ತ 23,29,789 ರೂ. ಆಗಿರುತ್ತದೆ. ಹಾಗೆ ಸಾಮಾನ್ಯ ನಾಗರಿಕರು ಶೇಕಡಾ 7.25 ದರದಲ್ಲಿ 27,798 ರೂಪಾಯಿಗಳನ್ನು ಪಡೆಯುತ್ತಾರೆ ಹಾಗೆ ಅವರ ಮೆಚ್ಯೂರಿಟಿ ಮೊತ್ತವು 3,27,798 ರೂಪಾಯಿ ಆಗಿರುತ್ತದೆ.

3.5 ಲಕ್ಷ ರೂಪಾಯಿ ಹೂಡಿಕೆಯಲ್ಲಿ ನೀವು ಎಷ್ಟು ಮೆಚ್ಯೂರಿಟಿ ಮೊತ್ತವನ್ನು ಪಡೆಯಬಹುದು?

ಹಿರಿಯ ನಾಗರಿಕರು 3,50,000 ರೂಪಾಯಿ ಹೂಡಿಕೆ ಮಾಡಿದ್ರೆ, ಶೇಕಡಾ 7.75 ರ ದರದಲ್ಲಿ 34,753 ರೂಪಾಯಿಗಳ ಬಡ್ಡಿಯನ್ನ ಅವರಿಗೆ ಒದಗಿಸುತ್ತಾರೆ. ಇದರ ಜೊತೆಗೆ ಅವರ ಮೆಚ್ಯೂರಿಟಿ ಮೊತ್ತವು 3,84,753 ರೂಪಾಯಿ ಆಗಿರುತ್ತದೆ. ಹಾಗೆ ಇದರಲ್ಲಿ ಸಾಮಾನ್ಯ ನಾಗರಿಕರು ಶೇಕಡಾ 7.25 ದರದಲ್ಲಿ 32,431 ರೂಪಾಯಿಗಳನ್ನ ಪಡೆಯುತ್ತಾರೆ ಮತ್ತು ಮೆಚ್ಯೂರಿಟಿ ಮೊತ್ತ 3,82,431 ರೂಪಾಯಿ ಆಗಿರುತ್ತದೆ.

4 ಲಕ್ಷ ರೂಪಾಯಿ ಹೂಡಿಕೆಯಲ್ಲಿ ನೀವು ಎಷ್ಟು ಮೆಚ್ಯೂರಿಟಿ ಮೊತ್ತವನ್ನು ಪಡೆಯಬಹುದು?

4,00,000 ರೂಪಾಯಿಗಳ ಹೂಡಿಕೆಯ ಮಾಡಿದ್ರೆ, ಹಿರಿಯ ನಾಗರಿಕರು ಶೇಕಡಾ 7.75 ರ ದರದಲ್ಲಿ 39,718 ರೂಪಾಯಿಗಳ ಬಡ್ಡಿ ಅವರಿಗೆ ಸಿಗುತ್ತದೆ. ಜೊತೆಗೆ ಅವರ ಮೆಚ್ಯೂರಿಟಿ ಮೊತ್ತವು 4,39,718 ರೂಪಾಯಿ ಆಗಿರುತ್ತದೆ. ಹಾಗೆ ಸಾಮಾನ್ಯ ನಾಗರಿಕರು ಶೇಕಡಾ7.25 ದರದಲ್ಲಿ 37,064 ರೂಗಳನ್ನು ಪಡೆಯುತ್ತಾರೆ ಮತ್ತು ಅವರ ಮೆಚ್ಯೂರಿಟಿ ಮೊತ್ತವು 4,37,064 ರೂಪಾಯಿ ಆಗಿರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+