ತಂತ್ರಜ್ಞಾನ (Technology) ದಿನೇ ದಿನೇ ಅಭಿವೃದ್ಧಿಯಾಗುತ್ತಲೇ ಇದೆ. ಈ ಮಧ್ಯೆ ಸೈಬರ್ ವಂಚಕರ ಸಂಖ್ಯೆ ಕೂಡಾ ಹೆಚ್ಚಾಗುತ್ತಿದೆ. ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ಅಮಾಯಕ ಜನರನ್ನು ಮೋಸ ಮಾಡಲು ಖದೀಮರು ಪ್ಲಾನ್ ಮಾಡುತ್ತಿದ್ದಾರೆ. ಆದ್ರೆ ಈ ಎಲ್ಲಾ ಕೃತ್ಯಗಳಿಗೆ ಕಡಿವಾಣ ಹಾಕಲು ಇದೀಗ ಎರಡು ಬ್ಯಾಂಕ್‌ಗಳು ಸಜ್ಜಾಗಿದೆ. ಭಾರತದ ಅತಿ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಮತ್ತು ಬ್ಯಾಂಕ್ ಆಫ್ ಬರೋಡಾ (BoB) ದೇಶದಲ್ಲಿ ಡಿಜಿಟಲ್ ಪೇಮೆಂಟ್‌ನಲ್ಲಾಗುತ್ತಿರುವ ವಂಚನೆ ತಡೆಗಟ್ಟಲು ಹೊಸ ಐಡಿಯಾ ಕಂಡುಕೊಂಡಿದೆ. ಅದಕ್ಕಾಗಿ ಹೊಸ ಪ್ಲಾಟ್ ಫಾರ್ಮ್‌ವೊಂದನ್ನು ಜಾರಿಗೆ ತರಲು ಮುಂದಾಗಿದೆ. ಇದು ಆನ್‌ಲೈನ್ ಪೇಮೆಂಟ್‌ನಲ್ಲಾಗುವ ವಂಚನೆಯನ್ನು (Online Payment Scam) ತಕ್ಷಣ ಪತ್ತೆಹಚ್ಚಲಿದೆ.

ಈ ಹೊಸ ಸಂಸ್ಥೆಗೆ "ಇಂಡಿಯನ್ ಡಿಜಿಟಲ್ ಪೇಮೆಂಟ್ ಇಂಟೆಲಿಜೆನ್ಸ್ ಕಾರ್ಪೊರೇಷನ್" (IDPIC) ಎಂದು ಹೆಸರಿಡಲಾಗಿದೆ. ಅಲ್ಲದೇ ಸಾರ್ವಜನಿಕ ವಲಯದ ಎಲ್ಲ 12 ಬ್ಯಾಂಕ್‌ಗಳು ಇದರಲ್ಲಿ ಇಕ್ವಿಟಿ ಪಾಲುದಾರರಾಗುವ ನಿರೀಕ್ಷೆಯಿದೆ ವರದಿಯಾಗಿದೆ.
ಐಡಿಪಿಐಸಿ ಒಂದು ಸೆಕ್ಷನ್ 8 ಕಂಪನಿಯಾಗಿ ಸ್ಥಾಪನೆಯಾಗಲಿದೆ. ಇದರ ಅಧಿಕೃತ ಬಂಡವಾಳ 500 ಕೋಟಿ ರೂ. ಮತ್ತು ಪಾವತಿಸಿದ ಬಂಡವಾಳ 200 ಕೋಟಿ ರೂ. ಆಗಿರುತ್ತದೆ. ಸದ್ಯ ಈ ಪ್ಲಾಟ್‌ಫಾರ್ಮ್‌ಗೆ ಎಸ್‌ಬಿಐ ಮತ್ತು ಬ್ಯಾಂಕ್ ಆಫ್ ಬರೋಡಾದಿಂದ ಇಬ್ಬರು ಹಿರಿಯ ಅಧಿಕಾರಿಗಳು ನಿರ್ದೇಶಕರಾಗಿರುತ್ತಾರೆ ಎಂದು ವರದಿಯಾಗಿದೆ.
ಆರ್‌ಬಿಐನಿಂದ ಅನುಮೋದನೆ:
ಭಾರತೀಯ ರಿಸರ್ವ್ ಬ್ಯಾಂಕ್ (RBI) ಈಗಾಗಲೇ ಈ ಕಂಪನಿಯ ನೀತಿ, ನಿಯಮಗಳಿಗೆ ಅನುಮೋದನೆ ನೀಡಿದೆ. ಎಸ್‌ಬಿಐ ಆರಂಭದಲ್ಲಿ 10 ಕೋಟಿ ರೂಪಾಯಿಗಳನ್ನು ನೀಡಲು ಒಪ್ಪಿಕೊಂಡಿದ್ದು, ಬ್ಯಾಂಕ್ ಆಫ್ ಬರೋಡಾ ಸಹ ಅಷ್ಟೇ ಮೊತ್ತವನ್ನು ಹೂಡಿಕೆ ಮಾಡಲಿದೆ ಎಂದು ವರದಿಯಾಗಿದೆ. ನಂತರದ ದಿನಗಳಲ್ಲಿ ಬಹುತೇಕ ಎಲ್ಲಾ ಬ್ಯಾಂಕುಗಳು ಈ ಸಂಸ್ಥೆಯಲ್ಲಿ ಪಾಲು ಹೊಂದಲು ಸಿದ್ಧವಾಗಿವೆ ಎಂದು ಹೇಳಲಾಗಿದೆ.
ದೇಶದಲ್ಲಿ ಹೆಚ್ಚುತ್ತಿದೆ ಬ್ಯಾಂಕ್ ವಂಚನೆ:
ದೇಶದಲ್ಲಿ ಇತ್ತೀಚೆಗೆ ಬ್ಯಾಂಕ್ ವಂಚನೆಗಳು ಹೆಚ್ಚಾಗುತ್ತಿದ್ದು, ಇದೀಗ ಈ ಎಲ್ಲದಕ್ಕೆ ಕಡಿವಾಣ ಹಾಕಲು ಈ ಕಂಪನಿ ಸಹಕಾರಿಯಾಗಲಿದೆ. ಆರ್‌ಬಿಐ ವರದಿ ಪ್ರಕಾರ, ಮಾರ್ಚ್‌ನಲ್ಲಿ ಅಂತ್ಯದಲ್ಲಿ ಬ್ಯಾಂಕ್ ವಂಚನೆಗಳಲ್ಲಿ ಮೂರು ಪಟ್ಟು ಹೆಚ್ಚಾಗಿದೆ ಎನ್ನಲಾಗಿದೆ. ಆದ್ದರಿಂದ ಈ ಎಲ್ಲಾ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.
ಆರ್‌ಬಿಐ ವರದಿ ಪ್ರಕಾರ, ಮಾರ್ಚ್ 2025 ಕ್ಕೆ 36,014 ಕೋಟಿ ರೂ.ಗೆ ಏರಿಕೆಯಾಗಿದೆ. ಪ್ರಸ್ತುತ, ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಬರುವ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ ( I4C) ಸೈಬರ್ ವಂಚನೆಯನ್ನು ತಡೆಯಲು ನೋಡಲ್ ಪಾಯಿಂಟ್ ಆಗಿ ಕಾರ್ಯನಿರ್ವಹಿಸುತ್ತಿದೆ. ಅಷ್ಟೇ ಅಲ್ಲದೇ ಕೆಲವು ಬ್ಯಾಂಕುಗಳು ಈಗಾಗಲೇ ಆರ್‌ಬಿಐ ಅಭಿವೃದ್ಧಿಪಡಿಸಿದ MuleHunter.Ai ಎಂಬ AI/ML ಎಂಬ ಟೆಕ್ನಾಲಜಿಯನ್ನು ಬಳಸುತ್ತಿದೆ. ಇದರಿಂದ ಮ್ಯೂಲ್ ಅಕೌಂಟ್‌ಗಳನ್ನು ಪತ್ತೆ ಮಾಡಲು ಸುಲಭವಾಗುತ್ತದೆ. ಈ ಮೂಲಕ ಬ್ಯಾಂಕಿಂಗ್ ವಹಿವಾಟುಗಳಲ್ಲಾಗುತ್ತಿರುವ ವಂಚನೆಯನ್ನು ತಡೆಯಬಹುದಾಗಿದೆ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್‌ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್‌ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್‌ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್‌ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್‌ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಚಿನ್ನದ ಬೆಲೆ ಇಂದು ಏರಿಕೆ? ಖರೀದಿಸುವ ಮುನ್ನ ಇದನ್ನು ನೋಡಿ



Click it and Unblock the Notifications