ಎಸ್‌ಬಿಐ (SBI) ಮಾಡಿದ ಒಂದು ತಪ್ಪಿನಿಂದಾಗಿ ಇದೀಗ ಭಾರೀ ಮೊತ್ತ ಗ್ರಾಹಕರೊಬ್ಬರಿಗೆ ಪಾವತಿಸುವಂತಾಗಿದೆ. ದೆಹಲಿ ರಾಜ್ಯ ಗ್ರಾಹಕ ವಿವಾದ ಪರಿಹಾರ ಆಯೋಗವು (Delhi State Consumer Disputes Redressal Commission) ಎಸ್‌ಬಿಐ ಬ್ಯಾಂಕ್‌ಗೆ ಮಹಿಳಾ ಗ್ರಾಹಕರಿಗೆ 1.7 ಲಕ್ಷ ರೂ. ಪಾವತಿಸುವಂತೆ ಆದೇಶ ನೀಡಿದೆ. ಮಹಿಳೆಯೊಬ್ಬರ ಎಸ್‌ಬಿಐ ಬ್ಯಾಂಕ್ ಖಾತೆಯಲ್ಲಿ ಸಾಕಷ್ಟು ಹಣವಿದ್ದರೂ ಇಸಿಎಸ್ ಬೌನ್ಸ್ ಶುಲ್ಕವನ್ನು ತಪ್ಪಾಗಿ ವಿಧಿಸಿತ್ತು. ಮಹಿಳೆಯೊಬ್ಬರು ಎಚ್‌ಡಿಎಫ್‌ಸಿ ಬ್ಯಾಂಕ್‌ನಿಂದ (HDFC Bank) ಕಾರ್ ಲೋನ್ ಪಡೆದಿದ್ದರು ಮತ್ತು ಎಸ್‌ಬಿಐ ಖಾತೆಯಿಂದ ಇಎಂಐ ಕಡಿತಗೊಳಿಸುವಂತೆ ಸೂಚಿಸಿದ್ದರು ಆದರೆ 11 ಇಎಂಐಗಳು ಬೌನ್ಸ್ ಆಗಿದ್ದವು.

ಆ ಪ್ರಕಾರ, ದೆಹಲಿ ರಾಜ್ಯ ಗ್ರಾಹಕ ವಿವಾದ ಪರಿಹಾರ ಆಯೋಗವು (Delhi State Consumer Disputes Redressal Commission) ಭಾರತೀಯ ಸ್ಟೇಟ್ ಬ್ಯಾಂಕ್ (SBI) ಒಬ್ಬ ಮಹಿಳಾ ಗ್ರಾಹಕರಿಗೆ 1.7 ಲಕ್ಷ ರೂ. ಪಾವತಿಸುವಂತೆ ಆದೇಶ ಹೊರಡಿಸಿದೆ. ಏಕೆಂದರೆ ಎಸ್‌ಬಿಐ ಬ್ಯಾಂಕ್ ಮಹಿಳೆಯ ಖಾತೆಯಲ್ಲಿ ಸಾಕಷ್ಟು ಹಣವಿದ್ದರೂ ಸಹ ಇಸಿಎಸ್ (ಎಲೆಕ್ಟ್ರಾನಿಕ್ ಕ್ಲಿಯರಿಂಗ್ ಸರ್ವಿಸ್) ಬೌನ್ಸ್ ಶುಲ್ಕವನ್ನು ತಪ್ಪಾಗಿ ವಿಧಿಸಿದೆ ಎಂದು ಆಯೋಗ ತೀರ್ಪು ನೀಡಿ, ಗ್ರಾಹಕರಿಗೆ ಇಷ್ಟು ಮೊತ್ತವನ್ನು ಪಾವತಿಸುವಂತೆ ಹೇಳಿದೆ. ಈ ಮೂಲಕ ಪ್ರಕರಣವು ಗ್ರಾಹಕರಿಗೆ ನ್ಯಾಯ ಒದಗಿಸುವಲ್ಲಿ ಗ್ರಾಹಕ ಆಯೋಗಗಳ ಪಾತ್ರವನ್ನು ಎತ್ತಿ ತೋರಿಸುತ್ತದೆ.
ಏನಿದು ಪ್ರಕರಣ?
ಒಬ್ಬ ಮಹಿಳಾ ಗ್ರಾಹಕರು ಎಚ್‌ಡಿಎಫ್‌ಸಿ ಬ್ಯಾಂಕ್‌ನಿಂದ ಕಾರ್ ಲೋನ್ ಪಡೆದಿದ್ದರು ಮತ್ತು ತಮ್ಮ ಎಸ್‌ಬಿಐ ಉಳಿತಾಯ ಖಾತೆಯಿಂದ ಮಾಸಿಕ ಇಎಂಐ ಕಡಿತಗೊಳಿಸುವಂತೆ ಸೂಚನೆ ನೀಡಿದ್ದರೆ. ಆದರೆ, ಎಸ್‌ಬಿಐ ಅವರ 11 ಇಎಂಐಗಳನ್ನು ಬೌನ್ಸ್ ಮಾಡಿತ್ತು ಮತ್ತು ಎಸ್‌ಬಿಐ ಅದಕ್ಕೆ ಪ್ರತಿ ಬಾರಿಯೂ ಅವರಿಂದ 400 ರೂ. ಶುಲ್ಕ ವಿಧಿಸಿತ್ತು.
ಆದರೆ ಎಸ್‌ಬಿಐ ಬ್ಯಾಂಕ್ ಖಾತೆಯಲ್ಲಿ ಸಾಕಷ್ಟು ಹಣ ಇದ್ದರೂ, ಇಎಂಐ ಬೌನ್ಸ್ ಆಗಿದ್ದು ಅವರನ್ನು ಆಶ್ಚರ್ಯಕ್ಕೀಡುಮಾಡಿತ್ತು. ಇದಕ್ಕೆ ಸಾಕ್ಷಿಯಾಗಿ, ಅವರು ತಮ್ಮ ಬ್ಯಾಂಕ್ ಸ್ಟೇಟ್‌ಮೆಂಟ್ ಅನ್ನು ಮುದ್ರಿಸಿ ಬ್ಯಾಂಕ್‌ಗೆ ಸಲ್ಲಿಸಿದರು.
ಆದರೆ ಎಸ್‌ಬಿಐ ಬೌನ್ಸ್ ಶುಲ್ಕವನ್ನು ಹಿಂದಿರುಗಿಸಲು ನಿರಾಕರಿಸಿತು. ಇದರಿಂದ ರೊಚ್ಚಿಗೆದ್ದ ಗ್ರಾಹಕರು, 2010 ರಲ್ಲಿ ಜಿಲ್ಲಾ ಗ್ರಾಹಕ ಆಯೋಗದಲ್ಲಿ ದೂರು ಸಲ್ಲಿಸಿದರು, ಆದರೆ ಅವರ ಅರ್ಜಿಯನ್ನು ತಿರಸ್ಕರಿಸಲಾಯಿತು. ನಂತರ ಅವರು ರಾಷ್ಟ್ರೀಯ ಗ್ರಾಹಕ ವಿವಾದ ಪರಿಹಾರ ಆಯೋಗಕ್ಕೆ (NCDRC) ಮನವಿ ಸಲ್ಲಿಸಿದರು, ಅದು ಪ್ರಕರಣವನ್ನು ಮತ್ತೆ ದೆಹಲಿ ರಾಜ್ಯ ಗ್ರಾಹಕ ಆಯೋಗಕ್ಕೆ ವರ್ಗಾಯಿಸಿತು. ಅಲ್ಲಿ, ಗ್ರಾಹಕರು ಅಂತಿಮವಾಗಿ ಅಕ್ಟೋಬರ್ 9, 2025 ರಂದು ಪ್ರಕರಣವನ್ನು ಗೆದ್ದರು.
ಎಸ್‌ಬಿಐ ವಾದಿಸುತ್ತಾ, ಇಸಿಎಸ್ ಮ್ಯಾಂಡೇಟ್‌ನಲ್ಲಿ ನೀಡಲಾದ ಮಾಹಿತಿ ಸರಿಯಾಗಿಲ್ಲ, ಇದರಿಂದಾಗಿ ಮಹಿಳೆಯ ಚೆಕ್‌ಗಳು ಬೌನ್ಸ್ ಆಗಿವೆ ಎಂದು ತಿಳಿಸಿತ್ತು. ಆದರೆ ಎಸ್‌ಬಿಐ ವಾದವನ್ನು ದೆಹಲಿ ರಾಜ್ಯ ಗ್ರಾಹಕ ವಿವಾದ ಪರಿಹಾರ ಆಯೋಗ ಸಮಂಜಸವಲ್ಲ ಎಂದು ಹೇಳಿದೆ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ



Click it and Unblock the Notifications