For Quick Alerts
ALLOW NOTIFICATIONS  
For Daily Alerts

ಎಸ್‌ಬಿಐ ನ ಎಂಟು ಸಿಬ್ಬಂದಿಗೆ ಕೋವಿಡ್ ಸೋಂಕು; ಮೂರು ಶಾಖೆ ಬಂದ್

|

ಮುಂಬೈ, ಜೂನ್ 15: ಸಾರ್ವಜನಿಕ ವಲಯದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ)ದ ಎಂಟು ಸಿಬ್ಬಂದಿಗೆ ಕೋವಿಡ್ 19 ಸೋಂಕು ಖಚಿತಪಟ್ಟಿರುವುದರಿಂದ ಮುಂಬೈ ಹಾಗೂ ಥಾಣೆಯ ಮೂರು ಎಸ್‌ಬಿಐ ಶಾಖೆಗಳನ್ನು ಮುಚ್ಚಲಾಗಿದೆ.

ಎರಡು ಶಾಖೆ ಮುಂಬೈನಲ್ಲಿ ಹಾಗೂ ಥಾಣೆಯಲ್ಲಿ ಒಂದು ಶಾಖೆ ಮುಚ್ಚಲಾಗಿದೆ ಎಂದು ಎಸ್‌ಬಿಐ ತಿಳಿಸಿದೆ.

ಖಾಸಗಿ ಆಸ್ಪತ್ರೆಯ ಕೋವಿಡ್ ವಾರಿಯರ್ಸ್‌ಗೆ ವಿಮೆ ಏಕೆ ಇಲ್ಲ?; NHRCಖಾಸಗಿ ಆಸ್ಪತ್ರೆಯ ಕೋವಿಡ್ ವಾರಿಯರ್ಸ್‌ಗೆ ವಿಮೆ ಏಕೆ ಇಲ್ಲ?; NHRC

ಥಾಣೆಯ ಮುಖ್ಯ ಶಾಖೆಯ 27 ಮಂದಿಯಲ್ಲಿ 6 ಜನರಿಗೆ ಸೋಂಕು ಇರುವುದು ದೃಢಪಟ್ಟಿದೆ. ಅದೇ ರೀತಿ ವಾಯುವ್ಯ ಮುಂಬೈ ಉಪನಗರ ಜೋಗೇಶ್ವರಿ (ಪೂರ್ವ) ನಲ್ಲಿರುವ ಚೆಕ್ ಪ್ರೊಸೆಸಿಂಗ್ ಸೆಲ್ (ಎಲ್‌ಸಿಪಿಸಿ) ನಲ್ಲಿ ನಗದು ಅಧಿಕಾರಿಯೊಬ್ಬರು ಕೋವಿಡ್ ಪಾಸಿಟಿವ್ ಕಂಡುಬಂದಿದ್ದು ಹಾಗೂ ಅಂಧೇರಿ ಪ್ರದೇಶದಲ್ಲಿ ನೆಲೆಗೊಂಡಿರುವ ಎಲ್‌ಸಿಪಿಸಿಯಲ್ಲಿ ಗಾರ್ಡನ್ ಕೆಲಸ ಮಾಡುವ ಸಿಬ್ಬಂದಿಗೆ ಸೋಂಕು ದೃಢಪಟ್ಟಿರುವುದರಿಂದ ಒಟ್ಟು ಮೂರು ಶಾಖೆಗಳನ್ನು ಮುಚ್ಚಲಾಗಿದೆ ಎಂದು ಎಸ್‌ಬಿಐ ಉನ್ನತಾಧಿಕಾರಿಗಳು ಹೇಳಿದ್ದಾರೆ.

ಎಸ್‌ಬಿಐ ನ ಎಂಟು ಸಿಬ್ಬಂದಿಗೆ ಕೋವಿಡ್ ಸೋಂಕು; ಮೂರು ಶಾಖೆ ಬಂದ್

"ಕೋವಿಡ್ ಸಲುವಾಗಿ ರಚಿಸಲಾಗಿರುವ ನಮ್ಮ ತಂಡವು ಇಡೀ ದೇಶದ ನಮ್ಮ ಬ್ಯಾಂಕುಗಳ ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ಮತ್ತು ಎಂತದೇ ಸಂದರ್ಭದಲ್ಲಿ ಕೋವಿಡ್‌ ತಡೆ ನಿಯಮಾವಳಿಗಳನ್ನು ಅನುಸರಿಸಲಾಗುತ್ತದೆ. ಸೋಂಕಿಗೆ ಒಳಗಾದ ನಮ್ಮ ಅನೇಕ ಸಿಬ್ಬಂದಿ ಸದಸ್ಯರು ಚೇತರಿಸಿಕೊಂಡಿದ್ದಾರೆ'' ಎಂದು ಎಸ್‌ಬಿಐ ಜನರಲ್ ಮ್ಯಾನೇಜರ್ ತಿಳಿಸಿದ್ದಾರೆ.

English summary

SBI Closes 3 Branches in Mumbai, Thane After 8 Staffs tests Positive for Covid-19

SBIs 8 Staff Covid19 Tested Positive In Mumbai: 3 Branches Shutdown.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X