ನೀವೇನಾದ್ರು ಎಸ್‌ಬಿಐ ಗ್ರಾಹಕರಾಗಿದ್ದರೆ, ನಿಮಗೆ ಈ ಎಸ್‌ಬಿಐ ಕ್ರೆಡಿಟ್ ಕಾರ್ಡ್‌ಗಳ ರಿವಾರ್ಡ್‌ಗಳ ಬಗ್ಗೆ ನೀವು ತಿಳಿದಿರಬಹುದು. ಹಾಗೆ ನೀವು ಎಸ್‌ಬಿಐ ಗ್ರಾಹಕರಾಗಿದ್ದು ಕ್ರೆಡಿಟ್ ಕಾರ್ಡ್ ಹೊಂದಿಲ್ಲದಿದ್ರೆ ನಿಜವಾಗ್ಲು ನೀವು ಈ ರಿವಾರ್ಡ್‌ಗಳನ್ನ ಖಂಡಿತ ಕಳೆದುಕೋಳ್ತೀರ. ಹೌದು ಎಸ್‌ಬಿಐ ಕ್ರೆಡಿಟ್ ಕಾಡ್‌ಗಳ ಪಡೆಯುವುದರ ಮೂಲಕ ನೀವು ಇದರ ರಿವಾರ್ಡ್‌ಗಳನ್ನ ಕೂಡ ಪಡೆಯಬಹುದು. ಅಲ್ಲದೆ ಈ ರಿವಾರ್ಡ್ ಪಾಯಿಂಟ್‌ಗಳ ಮೂಲಕ ನೀವು ವಿವಿಧ ಪ್ರಯೋಜನಗಳನ್ನ, ಜೊತೆಗೆ ಆಕರ್ಷಕ ವೋಚರ್‌ಗಳನ್ನ ನೀವು ಪಡೆಯಬಹುದು. ಆದ್ರೆ ಇನ್ನು ಕೆಲವೇ ದಿನಗಳಲ್ಲಿ ಎಸ್‌ಬಿಐನ ಈ ಆಕರ್ಷಕ ಕೊಡುಗೆಗಳು ಮುಕ್ತಾಯವಾಗಲಿದೆ. ಆ ಮೊದಲೆ ನೀವೇನಾದ್ರು ಇದರ ಪ್ರಯೋಜನಗಳನ್ನ ಪಡೆಬೇಕೆಂದಿದ್ದರೆ, ಈ ಕೂಡಲೇ ರಿವಾರ್ಡ್‌ಗಳನ್ನ ನಿಮ್ಮದಾಗಿಸಿಕೊಳ್ಳಿ.
SBI ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್‌ಗಳ ಬಗ್ಗೆ ಮಾಹಿತಿ
ನೀವು ನಿಮ್ಮ ಕ್ರೆಡಿಟ್ ಕಾರ್ಡ್ ಬಳಸಿ ಮಾಡಿದ ಖರೀದಿಗಳ ಮೇಲೆ ಎಸ್‌ಬಿಐ ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್‌ಗಳು ನಿಮಗೆ ಸಿಗುತ್ತದೆ. ಹಾಗೆ ಕಾರ್ಡ್‌ನ ಪ್ರಕಾರ ಮತ್ತು ನಿಮ್ಮ ಖರ್ಚಿಗೆ ಅನುಗುಣವಾಗಿ ನೀವು ರಿವಾರ್ಡ್ ಪಾಯಿಂಟ್‌ಗಳನ್ನು ಬದಲಾಗುತ್ತವೆ. ಈ ಅಂಕಗಳು ನಿಮ್ಮ ಖಾತೆಯಲ್ಲಿ ಸಂಗ್ರಹಗೊಳ್ಳುತ್ತವೆ. ಇದರಿಂದ ನೀವು ವಿವಿಧ ಬಹುಮಾನಗಳಿಗಾಗಿ ರಿಡೀಮ್ ಮಾಡಿಕೊಳ್ಳಬಹುದು.

ಎಸ್‌ಬಿಐ ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್‌ಗಳನ್ನ ನೀವು ಮುಕ್ತಾಯದ ದಿನದೊಳಗೆ ರಿಡೀಮ್ ಮಾಡಬೇಕು. ಇಲ್ಲದಿದ್ದರ ನೀವು ರಿವಾರ್ಡ್‌ಗಳನ್ನ ಪಡೆಯುವಲ್ಲಿ ನೀವು ವಂಚಿತರಾಗುತ್ತೀರಿ. ಮುಕ್ತಾಯ ದಿನಾಂಕವನ್ನು ಸಾಮಾನ್ಯವಾಗಿ ನಿಮ್ಮ ಮಾಸಿಕ ಕ್ರೆಡಿಟ್ ಕಾರ್ಡ್ ಸ್ಟೇಟ್‌ಮೆಂಟ್‌ನಲ್ಲಿ ಉಲ್ಲೇಖಿಸಲಾಗುತ್ತದೆ ಅಥವಾ ಎಸ್‌ಬಿಐ ಕಾರ್ಡ್ ಮೊಬೈಲ್ ಅಪ್ಲಿಕೇಶನ್ ಅಥವಾ ವೆಬ್‌ಸೈಟ್ ಮೂಲಕ ನೀವು ತಿಳಿಯಬಹುದು.
ಹಾಗೆ ರಿವಾರ್ಡ್ ಪಾಯಿಂಟ್‌ಗಳನ್ನು ರಿಡೀಮ್ ಮಾಡುವಾಗ ಶುಲ್ಕದ ಬಗ್ಗೆ ಗಮನವಿರಲಿ. ಸಾಮಾನ್ಯವಾಗಿ ರಿಡೀಮ ಮಾಡಿಕೊಳ್ಳಲು 99 ರೂ. ನಿಗದಿಯಾಗಿರುತ್ತದೆ. ಇದರ ಜೊತೆಗೆ ಸಂಸ್ಕರಣೆ ಮತ್ತು ವಿತರಣೆಗೆ ಅನ್ವಯವಾಗುವ ತೆರಿಗೆಗಳು, ನಿರ್ದಿಷ್ಟವಾಗಿ ಭೌತಿಕ ಉತ್ಪನ್ನ ವಿಮೋಚನೆಗಳು ಹೀಗೆ ಇತರೆ ಸೇರಿ ಒಮ್ಮೆ ಈ ಶುಲ್ಕ ಅನ್ವಯಿಸುತ್ತದೆ.
SBI ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್‌ಗಳನ್ನು ಪರಿಶೀಲಿಸುವುದು ಹೇಗೆ
SBI ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್‌ಗಳನ್ನು ಪರಿಶೀಲನೆ ಮಾಡಲು ವಿವಿಧ ಮಾರ್ಗಗಳಿವೆ. ಹಾಗೆ ಎಷ್ಟು ರಿವಾರ್ಡ್ ಪಾಯಿಂಟ್‌ಗಳನ್ನು ಸಂಗ್ರಹಿಸಿದ್ದೀರಿ ಎಂಬುದನ್ನು ತಿಳಿಯಲು ಈ ವಿಧಾನಗಳನ್ನು ಪರಿಶೀಲಿಸಿ:
ಇತ್ತೀಚಿನ ಕ್ರೆಡಿಟ್ ಕಾರ್ಡ್ ಹೇಳಿಕೆಯನ್ನು ಉಲ್ಲೇಖಿಸುವ ಮೂಲಕ ನಿಮ್ಮ ಆನ್‌ಲೈನ್ ಖಾತೆಯ ಬಳಕೆದಾರ ID ಮತ್ತು ಪಾಸ್‌ವರ್ಡ್ ಅನ್ನು ಬಳಕೆ ಮಾಡಿಕೊಂಡು ಚಾಟ್‌ಬಾಟ್ ILAಗೆ ಲಾಗ್ ಇನ್ ಮಾಡುವ ಮೂಲಕ ಮತ್ತು ರಿವಾರ್ಡ್ ಪಾಯಿಂಟ್‌ಗಳ ಬಗ್ಗೆ ತಿಳಿಯಬಹುದು.
ಹಾಗೆ ಎಸ್‌ಬಿಐನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯಿಂದ 8422845514ಗೆ ಮಿಸ್ಡ್ ಕಾಲ್ ನೀಡುವ ಮೂಲಕ ನೀವು ಪರಿಶೀಲನೆ ಮಾಡಬಹುದು. ಜೊತೆಗೆ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 5676791ಗೆ SMS-REWARD XXXX (ಇಲ್ಲಿ XXXX ಎಂದರೆ ನಿಮ್ಮ ಕಾರ್ಡ್ ಸಂಖ್ಯೆಯ ಕೊನೆಯ 4 ಅಂಕೆಗಳು) ಕಳುಹಿಸುವ ಮೂಲಕ ಕೂಡ ಪರಿಶೀಲಿಸಬಹುದು.
ಅಥವಾ sbicard.com ಗೆ ಲಾಗ್ ಇನ್ ಮಾಡುವ ಮೂಲಕ ಮತ್ತು ಡ್ಯಾಶ್‌ಬೋರ್ಡ್‌ಗೆ ಹೋಗುವ ಮೂಲಕ ಹಾಗೆ SBI ಕಾರ್ಡ್ ಮೊಬೈಲ್ ಅಪ್ಲಿಕೇಶನ್ ಲಾಗಿನ್ ಮಾಡುವ ಮೂಲಕ ನೀವು ರಿವಾರ್ಡ್‌ಗಳ ಬಗ್ಗೆ ಪರಿಶೀಲನೆ ಮಾಡಬಹುದು.
SBI ರಿವಾರ್ಡ್ ಪಾಯಿಂಟ್‌ಗಳನ್ನು ರಿಡೀಮ್ ಮಾಡುವುದು ಹೇಗೆ
ನಿಮ್ಮ SBI ರಿವಾರ್ಡ್ ಪಾಯಿಂಟ್‌ಗಳನ್ನು ನೀವು ಎರಡು ರೀತಿಯಲ್ಲಿ ರಿಡೀಮ್ ಮಾಡಿಕೊಳ್ಳಬಹುದು. ಒಂದು ಉಡುಗೊರೆ ವೋಚರ್‌ಗಳು ಅಥವಾ ಭೌತಿಕ ಉತ್ಪನ್ನಗಳಿಗಾಗಿ ನಿಮ್ಮ ರಿವಾರ್ಡ್ ಪಾಯಿಂಟ್‌ಗಳನ್ನು ರಿಡೀಮ್ ಮಾಡಲು, SBI ಕಾರ್ಡ್ ವೆಬ್‌ಸೈಟ್‌ಗೆ (sbicard.com) ಭೇಟಿ ನೀಡಿ ಅಥವಾ ಅವರ ಮೊಬೈಲ್ ಅಪ್ಲಿಕೇಶನ್ ಬಳಕೆ ಮಾಡುವ ಮೂಲಕ ರಿವಾರ್ಡ್‌ಗಳನ್ನ ರಿಡೀಮ್ ಮಾಡಬಹುದು.
ಎರಡನೆಯು ನೀವು ನಿಮ್ಮ ರಿವಾರ್ಡ್ ಪಾಯಿಂಟ್‌ಗಳನ್ನು ನಗದಾಗಿ ಕೂಡ ಪರಿವರ್ತಿಸಬಹುದು. ಇದನ್ನು ಮಾಡಲು, ನೀವು ಮೇಲ್ ಮೂಲಕ ಬ್ಯಾಂಕ್ ಅನ್ನು ಸಂಪರ್ಕಿಸಬೇಕು ಅಥವಾ ಅವರ ಗ್ರಾಹಕ ಸೇವಾ ಹಾಟ್‌ಲೈನ್‌ಗೆ ಕರೆ ಮಾಡಬೇಕು.
ಹಾಗೆ ನೀವು ರಿವಾರ್ಡ್ ಪಾಯಿಂಟ್‌ಗಳ ಮೂಲಕ ಬಾಕಿ ಇರುವ ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ಅನ್ನು ಪಾವತಿಸಬಹದು. ಈ ಸಂದರ್ಭದಲ್ಲಿ, ರಿವಾರ್ಡ್ ಪಾಯಿಂಟ್‌ಗಳನ್ನು 2,000 ಗುಣಕಗಳಲ್ಲಿ ಮಾತ್ರ ಬಳಸಬಹುದು. ಆದ್ರೆ ನಿಮ್ಮ ರಿವಾರ್ಡ್ ಪಾಯಿಂಟ್ ಬ್ಯಾಲೆನ್ಸ್ ಅನ್ನು ಒಂದು SBI ಕಾರ್ಡ್‌ನಿಂದ ಇನ್ನೊಂದಕ್ಕೆ ವರ್ಗಾಯಿಸಲು ಸಾಧ್ಯವಿಲ್ಲ.
SBI ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್‌ಗಳ ಅವಧಿ
ಶಾಪ್ ಮತ್ತು ಸ್ಮೈಲ್ ರಿವಾರ್ಡ್ಸ್ ಪ್ರೋಗ್ರಾಂ ಅಡಿಯಲ್ಲಿ ನೀವು ಸಂಗ್ರಹ ಮಾಡುತ್ತಿರುವ ದಿನಾಂಕದಿಂದ 24 ತಿಂಗಳವರೆಗೆ ಮಾತ್ರ ನಿಮ್ಮ ಅಂಕಗಳನ್ನು ನೀವು ಸಂಗ್ರಹಿಸಬಹುದು. ನಿಗದಿತ ದಿನಾಂಕದಿಂದ 24 ತಿಂಗಳ ಅಂತ್ಯದೊಳಗೆ ರಿಡೀಮ್ ಮಾಡದ ಅಂಕಗಳು ಕಳೆದುಹೋಗುತ್ತವೆ. ಎಸ್‌ಬಿಐ ಕಾರ್ಡ್‌ದಾರರು sbicard.com ಅಥವಾ ಅವರ ಮೊಬೈಲ್ ಅಪ್ಲಿಕೇಶನ್‌ಗೆ ಲಾಗ್ ಇನ್ ಮಾಡುವ ಮೂಲಕ ರಿವಾರ್ಡ್ ಪಾಯಿಂಟ್‌ಗಳ ಅವಧಿ ಬಗ್ಗೆ ತಿಳಿಯಬಹುದು.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ನಿಫ್ಟಿ ಏರಿಕೆ: ಈಗಲೇ ಹೂಡಿಕೆ ಮಾಡಬೇಕಾ ಅಥವಾ ಕಾಯಬೇಕಾ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!



Click it and Unblock the Notifications