For Quick Alerts
ALLOW NOTIFICATIONS  
For Daily Alerts

ಎಸ್‌ಬಿಐ ಕ್ರೆಡಿಟ್‌ ಕಾರ್ಡ್ ಮೂಲಕ ಇಎಂಐ ವಹಿವಾಟಿಗೆ ತೆರಿಗೆ ಅನ್ವಯ, ಎಷ್ಟು?

|

ಎಸ್‌ಬಿಐ ಕ್ರೆಡಿಟ್‌ ಕಾರ್ಡ್ ಮೂಲಕ ಇಎಂಗೆ ವಹಿವಾಟಿಗೆ ಪ್ರಕ್ರಿಯೆ ಶುಲ್ಕದ ಜೊತೆಗೆ ತೆರಿಗೆ ಅನ್ವಯ ಮಾಡಲಾಗುತ್ತದೆ. ಈ ಬಗ್ಗೆ ಎಸ್‌ಬಿಐ ಕ್ರೆಡಿಟ್‌ ಕಾರ್ಡ್ ಗ್ರಾಹಕರಿಗೆ ಇಮೇಲ್‌ನಲ್ಲಿ ಮಾಹಿತಿ ನೀಡಿದೆ. ಡಿಸೆಂಬರ್‌ 1, 2021 ರಿಂದ ಈ ಆದೇಶವು ಜಾರಿಗೆ ಬರಲಿದೆ. ಎಸ್‌ಬಿಐ ಕ್ರೆಡಿಟ್‌ ಕಾರ್ಡ್ ಬಳಸಿ ಮಾಡಲಾಗುವ ಪ್ರತಿ ಇಎಂಐ ವಹಿವಾಟಿನ ಮೇಲೆ ಇನ್ನು ಮುಂದೆ ಪ್ರಕ್ರಿಯೆ ಶುಲ್ಕ 99 ರೂಪಾಯಿ ಮತ್ತು ಬೇರೆ ಅಧಿಕ ತೆರಿಗೆಯನ್ನು ಪಾವತಿ ಮಾಡಬೇಕಾಗುತ್ತದೆ.

ಇನ್ನು ಮುಂದೆ ಎಸ್‌ಬಿಐ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿ ಔಟ್‌ಲೆಟ್‌ಗಳು, ಇ ಕಾಮರ್ಸ್ ವೆಬ್‌ಸೈಟ್‌ಗಳು ಹಾಗೂ ಅಪ್ಲಿಕೇಶನ್‌ಗಳ ಮೂಲಕ ನಡೆಸುವ ಎಲ್ಲಾ ಇಎಂಐ ವಹಿವಾಟಿಗೆ ಶುಲ್ಕ ಪಾವತಿ ಮಾಡಬೇಕಾಗುತ್ತದೆ.

ಈ ನಡುವೆ ಈ ಕ್ರಮವು ಬಿಎನ್‌ಪಿಎಲ್‌ ಸೇರಿದಂತೆ ವ್ಯಾಪಾರಿ ಪ್ಲಾಟ್‌ಫಾರ್ಮ್‌ಗಳಿಂದ ವಿಸ್ತರಿಸಲಾದ ಇಎಂಐ ಪಾವತಿ ವಿಧಾನಗಳ ಮೂಲಕ ಕಾರ್ಡ್‌ದಾರರು ನಡೆಸುತ್ತಿರುವ ಖರೀದಿಗಳ ಮೇಲೆ ಪರಿಣಾಮ ಬೀರಲಿದೆ. ಇತ್ತೀಚೆಗೆ ಇಎಂಐ ಮೂಲಕ ಜನರು ಖರೀದಿಯನ್ನು ಮಾಡುವುದು ಅಧಿಕ ಆಗುತ್ತಿದೆ. ಈ ನಡುವೆ ಎಸ್‌ಬಿಐನ ಈ ಕ್ರಮವು ಗ್ರಾಹಕರಿಗೆ ನಿರಾಸೆಯನ್ನು ಉಂಟು ಮಾಡುವ ಸಾಧ್ಯತೆಗಳು ಇದೆ.

ಎಸ್‌ಬಿಐ ಕ್ರೆಡಿಟ್‌ ಕಾರ್ಡ್ ಮೂಲಕ ಇಎಂಐ ವಹಿವಾಟಿಗೆ ತೆರಿಗೆ ಅನ್ವಯ

ಇನ್ನು ಮುಂದೆ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಮೂಲಕ ನಡೆಸುವ ವಹಿವಾಟುಗಳ ಶುಲ್ಕವು ದುಬಾರಿಯಾಗಲಿದೆ. ಈ ಬಗ್ಗೆ ಕ್ರೆಡಿಟ್‌ ಕಾರ್ಡ್‌ದಾರರಿಗೆ ಎಸ್‌ಬಿಐ ಇಮೇಲ್‌ ಮಾಡಿದೆ. ಈ ಇಮೇಲ್‌ನಲ್ಲಿ, "ಇನ್ನು ಮುಂದೆ ನಿಮ್ಮ ಎಸ್‌ಬಿಐ ಕ್ರೆಡಿಟ್‌ ಕಾರ್ಡ್ ವಹಿವಾಟಿಗೆ ರೂಪಾಯಿ 99 ಪ್ರಕ್ರಿಯೆ ಶುಲ್ಕ ಹಾಗೂ ಅಧಿಕ ತೆರಿಗೆ ವಿಧಿಸಲಾಗುತ್ತದೆ. ವ್ಯಾಪಾರಿ ಔಟ್‌ಲೈಟ್/ವೆಬ್‌ಸೈಟ್/ಅಪ್ಲಿಕೇಶನ್ ಮೂಲಕ ನಡೆಸುವ ವಹಿವಾಟಿಗೆ ಪ್ರಕ್ರಿಯೆ ಶುಲ್ಕ ವಿಧಿಸಲಾಗುತ್ತದೆ. ವ್ಯಾಪಾರಿ ಇಎಂಐ ಪ್ರಕ್ರಿಯೆ ಶುಲ್ಕದ ಕುರಿತು ಇನ್ನಷ್ಟು ತಿಳಿದುಕೊಳ್ಳಿ," ಎಂದು ಉಲ್ಲೇಖ ಮಾಡಲಾಗಿದೆ. ಈ ಶುಲ್ಕವು ನಿಮ್ಮ ಕ್ರೆಡಿಟ್ ಕಾರ್ಡ್ ಸ್ಟೇಟ್‌ಮೆಂಟ್‌ನಲ್ಲಿ ಇಎಂಐ ಜೊತೆಗೆ ಸೇರ್ಪಡೆ ಮಾಡಲಾಗಿರುತ್ತದೆ.

ಕ್ರೆಡಿಟ್ ಕಾರ್ಡ್ ಕಂಪನಿಯು ಈಗಾಗಲೇ ಬಡ್ಡಿದರವನ್ನು ವಿಧಿಸುತ್ತದೆ. ಇನ್ನು ಪ್ರಕ್ರಿಯೆ ಶುಲ್ಕವನ್ನು ಕೂಡಾ ಉಲ್ಲೇಖ ಮಾಡುತ್ತದೆ. ಶೂನ್ಯ ವೆಚ್ಚದ ಇಎಂಐ ವಹಿವಾಟಿನ ಸಂದರ್ಭದಲ್ಲಿ ಸಹ ಈ ಶುಲ್ಕ ಅನ್ವಯ ಆಗಲಿದೆ. ಇನ್ನು ಇಎಂಐ ವಹಿವಾಟು ಅಲ್ಲದಿದ್ದರೆ, ಯಾವುದೇ ಪ್ರಕ್ರಿಯೆ ಶುಲ್ಕವು ಇರುವುದಿಲ್ಲ ಎಂದು ಮಾಧ್ಯಮಗಳ ವರದಿಗಳು ಉಲ್ಲೇಖ ಮಾಡಿದೆ.

"ಎಸ್‌ಬಿಐ ಕ್ರೆಡಿಟ್‌ ಕಾರ್ಡ್‌ನ ಈ ಪ್ರಕ್ರಿಯೆ ಶುಲ್ಕವು ಉದ್ಯಮದ ಮಾನದಂಡಗಳ ಪ್ರಕಾರ ಇರಲಿದೆ. ಇತರ ಪ್ರಮುಖ ಖಾಸಗಿ ಬ್ಯಾಂಕ್‌ಗಳು ಈ ಹಿಂದೆಯೇ ಶುಲ್ಕವನ್ನು ವಿಧಿಸಲು ಆರಂಭ ಮಾಡಿದೆ," ಎಂದು ಬ್ಯಾಂಕರ್‌ ಒಬ್ಬರು ಮಾಹಿತಿ ನೀಡಿದ್ದಾರೆ. ನೀವು ಉದಾಹರಣೆಗೆ ಅಮೆಜಾನ್​ನಲ್ಲಿ ಬ್ಯಾಂಕಿನ ಇಎಂಐ ಯೋಜನೆಯಡಿ ಆ ಬಳಿಕ ಎಸ್‌ಬಿಐಸಿಪಿಎಸ್‌ಎಲ್‌ ನಿಮಗೆ ವಹಿವಾಟನ್ನು ಪ್ರೊಸೆಸ್ ಮಾಡುವುದಕ್ಕೆ ರೂಪಾಯಿ 99 ಅನ್ನು ಹೆಚ್ಚುವರಿ ಶುಲ್ಕವನ್ನು ವಿಧಿಸುತ್ತದೆ. ಹಾಗೆಯೇ ತೆರಿಗೆ ಕೂಡಾ ವಿಧಿಸುತ್ತದೆ. ಈ ಹೆಚ್ಚುವರಿ ಮೊತ್ತವು ಆ ಉತ್ಪನ್ನದ ಇಎಂಐ ಮೊತ್ತದ ಜೊತೆಗೆ ಕ್ರೆಡಿಟ್ ಕಾರ್ಡ್‌ನ ತಿಂಗಳ ಸ್ಟೇಟ್​ಮೆಂಟ್​ನಲ್ಲಿ ಬರುತ್ತದೆ.

English summary

SBI credit card users to pay Rs 99 + tax on all EMI transactions from Dec 1

SBI Credit Card To Charge Rs. 99 Plus Taxes For EMI Transactions Via Its Credit Card.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X