ಬೆಂಗಳೂರು, ಮಾರ್ಚ್ 29: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಇತ್ತೀಚೆಗೆ ಕೆಲವು ಡೆಬಿಟ್ ಕಾರ್ಡ್‌ಗಳ ವಾರ್ಷಿಕ ನಿರ್ವಹಣಾ ಶುಲ್ಕಗಳಿಗೆ ಪರಿಷ್ಕರಣೆಗಳನ್ನು ಘೋಷಿಸಿಸುವ ಮೂಲಕ ತನ್ನ ಗ್ರಾಹಕರಿಗೆ ಶಾಕ್ ನೀಡಿದೆ. ಈ ವಾರ್ಷಿಕ ನಿರ್ವಹಣಾ ಶುಲ್ಕ ಏಪ್ರಿಲ್ 1, 2024 ರಿಂದ ಜಾರಿಗೆ ಬರಲಿದೆ.
ಎಸ್‌ಬಿಐ ಡೆಬಿಟ್ ಕಾರ್ಡ್‌ಗಳ ಕ್ಲಾಸಿಕ್, ಸಿಲ್ವರ್, ಗ್ಲೋಬಲ್, ಕಾಂಟ್ಯಾಕ್ಟ್‌ಲೆಸ್ ಮತ್ತು ಇತರ ವರ್ಗಗಳ ಪರಿಷ್ಕೃತ ವಾರ್ಷಿಕ ನಿರ್ವಹಣಾ ಶುಲ್ಕಗಳು ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ.

ಕ್ಲಾಸಿಕ್ ಡೆಬಿಟ್ ಕಾರ್ಡ್‌ಗಳು:
ಎಸ್‌ಬಿಐ ಕ್ಲಾಸಿಕ್, ಸಿಲ್ವರ್, ಗ್ಲೋಬಲ್, ಕಾಂಟ್ಯಾಕ್ಟ್‌ಲೆಸ್ ಡೆಬಿಟ್ ಕಾರ್ಡ್‌ಗಳ ಶುಲ್ಕವನ್ನೂ ಹೆಚ್ಚಿಸಲಾಗಿದೆ. ಈ ಹಿಂದೆ ಈ ಕಾರ್ಡುಗಳನ್ನು ಹೊಂದಿದ್ದವರು ಇದ್ದ 125 ರೂ. ಶುಲ್ಕ + ಜಿಎಸ್‌ಟಿ ಪಾವತಿಸಬೇಕಾಗಿತ್ತು. ಈಗ ಪರಿಷ್ಕೃತ ಶುಲ್ಕಗಳ ಪ್ರಕಾರ ಹೊಂದಿರುವ ಗ್ರಾಹಕರು ವಾರ್ಷಿಕ 200 ರೂ. ನಿರ್ವಹಣಾ ಶುಲ್ಕ ಮತ್ತು ಜಿಎಸ್‌ಟಿಯನ್ನು ಪಾವತಿಸಬೇಕಾಗುತ್ತದೆ.
ಯುವಾ ಮತ್ತು ಇತರ ಕಾರ್ಡ್‌ಗಳು
ಯುವ, ಗೋಲ್ಡ್, ಕಾಂಬೊ ಡೆಬಿಟ್ ಕಾರ್ಡ್ ಮತ್ತು ಮೈ ಕಾರ್ಡ್ (ಇಮೇಜ್ ಕಾರ್ಡ್) ನಂತಹ ಡೆಬಿಟ್ ಕಾರ್ಡ್‌ಗಳಿಗೆ ವಾರ್ಷಿಕ ನಿರ್ವಹಣಾ ಶುಲ್ಕ GST ಜೊತೆಗೆ ರೂ. 250/- ಪಾವತಿಸಬೇಕಾಗುತ್ತದೆ. ಇದರ ಹಿಂದಿನ ಶುಲ್ಕ GST +175/ ಪಾವತಿಸಬೇಕಾಗಿತ್ತು.
SBI ಪ್ಲಾಟಿನಂ ಡೆಬಿಟ್ ಕಾರ್ಡ್:
ಡೆಬಿಟ್ ಕಾರ್ಡ್ ಹೊಂದಿರುವ ಪ್ಲಾಟಿನಂ ಡೆಬಿಟ್ ಕಾರ್ಡ್ ಹೊಂದಿರುವವರು ತಮ್ಮ ವಾರ್ಷಿಕ ನಿರ್ವಹಣೆ ಶುಲ್ಕಗಳು ರೂ. 325/- ಜೊತೆಗೆ GST ಪಾವತಿಸಬೇಕಾಗುತ್ತದೆ. ಇದರ ಶುಲ್ಕ ಹಿಂದಿನ 250 ರೂ. ಆಗಿತ್ತು.
ಪ್ರೀಮಿಯಂ ಬಿಸಿನೆಸ್ ಡೆಬಿಟ್ ಕಾರ್ಡ್:
ಪ್ರೈಡ್ ಮತ್ತು ಪ್ರೀಮಿಯಂ ಬ್ಯುಸಿನೆಸ್ ಡೆಬಿಟ್ ಕಾರ್ಡ್‌ಗಳ ವಾರ್ಷಿಕ ನಿರ್ವಹಣೆ ಶುಲ್ಕವು ಈಗ 350 ರಿಂದ 425 ರೂ. ಎಲ್ಲಾ ಶುಲ್ಕಗಳಿಗೆ ಪ್ರತ್ಯೇಕ GST ಅನ್ವಯಿಸುತ್ತದೆ.
ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬದಲಾವಣೆ:
ಎಸ್‌ಬಿಐ ಕ್ರೆಡಿಟ್ ಕಾರ್ಡ್‌ನ ವಿಷಯದಲ್ಲೂ ಕೆಲವು ಬದಲಾವಣೆ ತಂದಿದೆ. ಏಪ್ರಿಲ್ 1ರಿಂದ ಎಸ್‌ಬಿಐ ತನ್ನ ಕೆಲವು ಕ್ರೆಡಿಟ್ ಕಾರ್ಡ್‌ಗಳಿಗೆ ರಿವಾರ್ಡ್ ಪಾಯಿಂಟ್ಸ್ ನೀಡುವ ವಿಚಾರದಲ್ಲೂ ಹಲವು ಬದಲಾವಣೆ ಮಾಡಿದ್ದು, ವಿಶೇಷ ಕ್ರೆಡಿಟ್ ಕಾರ್ಡ್ ಹೊಂದಿರುವವರು ಇನ್ನು ಮುಂದೆ ಕ್ರೆಡಿಟ್ ಕಾರ್ಡ್‌ಗಳ ಮೂಲಕ ದರ ಪಾವತಿಗಳನ್ನು ಮಾಡುವ ರಿವಾರ್ಡ್ ಪಾಯಿಂಟ್‌ಗಳ ಪ್ರಯೋಜನ ಪಡೆಯುವುದಿಲ್ಲ.


Click it and Unblock the Notifications