ರಾಷ್ಟ್ರದ ಅತೀ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತಮ್ಮ ಬ್ಯಾಂಕ್‌ನಿಂದ ಸಾಲ ಪಡೆದವರಿಂದ ಸಾಲ ಮರುಪಾವತಿ ಪಡೆದುಕೊಳ್ಳುವ ನಿಟ್ಟಿನಲ್ಲಿ ಹೊಸ, ವಿನೂತನ ಮಾರ್ಗವನ್ನು ಪಾಲಿಸಲು ಮುಂದಾಗಿದೆ. ವಿಶೇಷವಾಗಿ ಅದರ ರಿಟೇಲ್ ಸಾಲಗಾರರು ಮಾಸಿಕ ಕಂತುಗಳನ್ನು ಪಾವತಿಸಲು ಸಾಧ್ಯವಾಗದಿದ್ದರೆ, ಚಾಕೊಲೇಟ್‌ಗಳನ್ನು ನೀಡಿ ಶುಭಾಶಯ ಕೋರುವ ಕಾರ್ಯವನ್ನು ಮಾಡಲು ಎಸ್‌ಬಿಐ ಆರಂಭಿಸಿದೆ.
ಎಸ್‌ಬಿಐ ಪ್ರಕಾರ, ಸಾಲವನ್ನು ಮರುಪಾವತಿ ಮಾಡಲು ವಿಳಂಬ ಮಾಡುವವರು, ಬ್ಯಾಂಕ್‌ನಿಂದ ರಿಮೈಂಡರ್ ನೋಟಿಸ್‌ಗಳಿಗೆ, ಕರೆಗಳಿಗೆ ಯಾವುದೇ ಉತ್ತರವನ್ನು ನೀಡದಿರುವುದು ಕಂಡು ಬಂದಿದೆ. ಅದಕ್ಕಾಗಿ ವಿನೂತನವಾದ ಮಾರ್ಗವನ್ನು ಪಾಲಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮುಂದಾಗಿದೆ. ಇಲ್ಲಿದೆ ವಿವರ ಮುಂದೆ ಓದಿ....

ಚಾಕೊಲೇಟ್ ನೀಡುವ ಎಸ್‌ಬಿಐ
ರೆಪೋ ದರ ಏರಿಕೆಯಾದ ಬಳಿಕ ಬಡ್ಡಿದರವು ಕೂಡಾ ಹೆಚ್ಚಳವಾಗಿದೆ. ಇದಾದ ಬಳಿಕ ರಿಟೇಲ್ ಸಾಲ ವಂಚನೆ ಪ್ರಕರಣವು ಅಧಿಕವಾಗುತ್ತಿದೆ. ಈ ನಡುವೆ ಸಾಲ ಮರುಪಾವತಿಯನ್ನು ಖಾತ್ರಿ ಪಡಿಸುವ ನಿಟ್ಟಿನಲ್ಲಿ ಎಸ್‌ಬಿಐ ಕ್ರಮವನ್ನು ಕೈಗೊಳ್ಳುತ್ತಿದೆ. ಯಾರು ಸಾಲ ಮರುಪಾವತಿ ತಡ ಮಾಡುತ್ತಾರೋ ಅವರಿಗೆ ಚಾಕೊಲೇಟ್ ನೀಡಲು ಎಸ್‌ಬಿಐ ಮುಂದಾಗಿದೆ.
ಎಸ್‌ಬಿಐನ ರಿಟೇಲ್ ಸಾಲದ ಜೂನ್ 2023 ರ ತ್ರೈಮಾಸಿಕದಲ್ಲಿ ಈ ಹಿಂದಿನ ವರ್ಷದಲ್ಲಿದ್ದ 10,34,111 ಕೋಟಿ ರೂಪಾಯಿಗಳಿಂದ ಶೇಕಡ 16.46 ರಷ್ಟು ಏರಿಕೆಯಾಗಿ 12,04,279 ಕೋಟಿ ರೂಪಾಯಿಗೆ ತಲುಪಿದೆ. ಇದು ಎಸ್‌ಬಿಐಗೆ ಅತಿದೊಡ್ಡ ಆಸ್ತಿಯಾಗಿದೆ. ವರ್ಷದಿಂದ ವರ್ಷಕ್ಕೆ ಸಾಲದ ಪ್ರಮಾಣವು ಶೇಕಡ 13.9ರಷ್ಟು ಏರಿಕೆಯಾಗಿ, 33,03,731 ಕೋಟಿ ರೂಪಾಯಿಗೆ ತಲುಪಿದೆ.
ಎಸ್‌ಬಿಐನ ರಿಟೇಲ್ ಸಾಲವು ಶೇಕಡ 16 ರಷ್ಟು ಬೆಳವಣಿಗೆ ಕಂಡಿದೆ. "ಕೃತಕ ಬುದ್ಧಿಮತ್ತೆಯನ್ನು ಬಳಸುವ ಎರಡು ಫಿನ್‌ಟೆಕ್‌ಗಳೊಂದಿಗೆ, ನಾವು ನಮ್ಮ ರಿಟೇಲ್ ಸಾಲಗಾರರಿಗೆ ಮರುಪಾವತಿ ಜವಾಬ್ದಾರಿಗಳನ್ನು ನೆನಪಿಸುವ ಹೊಸ ಮಾರ್ಗವನ್ನು ಪ್ರಾಯೋಗಿಕವಾಗಿ ನಡೆಸುತ್ತಿದ್ದೇವೆ," ಎಂದು ಎಸ್‌ಬಿಐನ ಉಸ್ತುವಾರಿ ನಿರ್ದೇಶಕ ಅಶ್ವಿನಿ ಕುಮಾರ್ ತಿವಾರಿ ಹೇಳಿದರು.
"ಡೀಫಾಲ್ಟ್ ಆಗುವ ಸಾಧ್ಯತೆಯಿರುವ ಸಾಲಗಾರರು ಯಾರು ಎಂದು ಗುರುತಿಸಿ ಈ ಫಿನ್‌ಟೆಕ್‌ನ ಪ್ರತಿನಿಧಿಗಳು ಆ ಸಾಲಗಾರರನ್ನು ಭೇಟಿ ಮಾಡುತ್ತಾರೆ. ಚಾಕೊಲೇಟ್‌ಗಳ ಪ್ಯಾಕ್ ಒಯ್ಯುತ್ತಾರೆ. ಚಾಕೊಲೇಟ್‌ಗಳ ಪ್ಯಾಕ್ ಅನ್ನು ನೀಡಿ ಇಎಂಐಗಳನ್ನು ಪಾವತಿ ಮಾಡಲು ನೆನಪಿಸುತ್ತಾರೆ," ಎಂದು ಅಶ್ವಿನಿ ಕುಮಾರ್ ತಿವಾರಿ ತಿಳಿಸಿದರು.
ತಿವಾರಿ ಪ್ರಕಾರ, ವೈಯಕ್ತಿಕವಾಗಿ ಭೇಟಿ ನೀಡಿ ಚಾಕೊಲೇಟ್‌ಗಳ ಪ್ಯಾಕ್ ಅನ್ನು ನೀಡುವ ನಿರ್ಧಾರವನ್ನು ನಾವು ಮಾಡಿರಲು ಒಂದು ಕಾರಣವಿದೆ. ನಾವು ಸಾಲ ಬಾಕಿ ಉಳಿಸಿರುವವರಿಗೆ ನೊಟೀಸ್ ಅಥವಾ ಪತ್ರವನ್ನು ಕಳುಹಿಸಿದರೂ ಕೂಡಾ ಅದಕ್ಕೆ ಯಾವುದೇ ಉತ್ತರ ಇರುವುದಿಲ್ಲ. ಕರೆಗೂ ಉತ್ತರ ಇರಲ್ಲ. ಆದ್ದರಿಂದಾಗಿ ನಾವಾಗಿಯೇ ಮನೆಗಳಲ್ಲಿ ಭೇಟಿ ಮಾಡಿ ಚಾಕೊಲೇಟ್ ನೀಡಿ ನೆನಪಿಸುವ ನಿರ್ಧಾರವನ್ನು ಮಾಡಿದ್ದೇವೆ ಎಂದು ಹೇಳಿದರು.
ಈ ಹೊಸ ಮಾರ್ಗವನ್ನು ಕೇವಲ 15 ದಿನಗಳ ಹಿಂದೆಯೇ ಜಾರಿಗೆ ತರಲಾಗಿದೆ. ಯಶಸ್ವಿಯಾದರೆ, ನಾವು ಅದನ್ನು ಮುಂದುವರಿಸುತ್ತೇವೆ ಎಂದು ತಿಳಿಸಿದರು. "ನಮ್ಮ ಸಾಲ ದಕ್ಷತೆಯನ್ನು ಸುಧಾರಿಸಲು ನಾವು ಕೆಲವು ಇತರ ಫಿನ್‌ಟೆಕ್‌ಗಳೊಂದಿಗೆ ಮಾತನಾಡುತ್ತಿದ್ದೇವೆ. ವರ್ಷದ ಅಂತ್ಯದ ವೇಳೆಗೆ, ನಾವು ಕನಿಷ್ಠ ನಾಲ್ಕರಿಂದ ಐದು ತಿಂಗಳವರೆಗೆ ಒಪ್ಪಂದ ಮಾಡಿಕೊಳ್ಳುತ್ತೇವೆ," ಎಂದು ಹೇಳಿದರು.


Click it and Unblock the Notifications