ಸದ್ಯ ಬ್ಯಾಂಕಿಂಗ್ ವಲಯದಲ್ಲಿ ಫಿಕ್ಸ್‌ಡ್ ಡೆಪಾಸಿಟ್‌ನ ಹೆಸರು ಹೆಚ್ಚಾಗಿ ಕೇಳಿಬರುತ್ತಿದೆ. ಹೆಚ್ಚಿನ ಅವಧಿಗೆ ಬ್ಯಾಂಕ್‌ಗಳಲ್ಲಿ ಮೊತ್ತವನ್ನು ಇಟ್ಟರೆ ಅದಕ್ಕೆ ತಕ್ಕಂತೆ ಉತ್ತಮ ಲಾಭ ಪಡೆಯಲು ಫಿಕ್ಸ್‌ಡ್ ಡೆಪಾಸಿಟ್ ಯೋಜನೆ ಗ್ರಾಹಕರಿಗೆ ಇರುವ ಸಾಂಪ್ರದಾಯಿಕವಾದ ಉತ್ತಮ ಆಯ್ಕೆ ಎನ್ನಬಹುದು.
ಇಂದು ದೇಶದ ಹಲವಾರು ಬ್ಯಾಂಕ್ ಗಳು ತಮ್ಮದೇ ರೀತಿಯ ಫಿಕ್ಸ್‌ಡ್ ಡೆಪಾಸಿಟ್ ಯೋಜನೆಗಳನ್ನು ಹೊಂದಿದ್ದು, ಗ್ರಾಹಕರಿಗೆ ತಮಗೆ ಲಾಭಕ್ಕೆ ಅನುಸಾರವಾಗಿ ಹಲವು ಆಯ್ಕೆಗಳನ್ನು ನೀಡುತ್ತದೆ. ಈ ಮೂಲಕ ಗ್ರಾಹಕರು ತಮ್ಮ ಬೇಕಾದ ಅವಧಿ ಹಾಗೂ ಬಡ್ಡಿದರಗಳನ್ನು ಸೂಕ್ತವಾಗಿ ಪರಿಶೀಲಿಸಿದ ನಂತರ ಯಾವ ಬ್ಯಾಂಕ್‌ನಲ್ಲಿ ಹಣ ಹೂಡಿಕೆ ಮಾಡುವ ಬಗ್ಗೆ ಚಿಂತನೆ ನಡೆಸಬಹುದು.

ಇನ್ನು ಬ್ಯಾಂಕ್‌ಗಳು ಸೀಮಿತ ಅವಧಿಗೆ ವಿಶೇಷ ಸ್ಥಿರ ಠೇವಣಿ (ಎಫ್‌ಡಿ) ಯೋಜನೆಗಳನ್ನು ನೀಡುತ್ತವೆ. ಈ ಎಫ್‌ಡಿಗಳು ವಿಶಿಷ್ಟ ಅವಧಿಯನ್ನು ಹೊಂದಿರುತ್ತವೆ ಮತ್ತು ಸಾಮಾನ್ಯವಾಗಿ ತಮ್ಮ ಠೇವಣಿದಾರರಿಗೆ ಹೆಚ್ಚುವರಿ ಬಡ್ಡಿದರಗಳನ್ನು ಒದಗಿಸುತ್ತವೆ. ಆದರೆ ವಿಶೇಷ FD ಯ ಸಂಪೂರ್ಣ ಅವಧಿಗೆ ಠೇವಣಿ ಮಾಡಬಹುದಾದ ಹೂಡಿಕೆದಾರರು ಬಹುತೇಕ ಅಥವಾ ಸ್ವಲ್ಪ ಹೆಚ್ಚಿನ ಅವಧಿಯ FD ಗಳ ದರಗಳಿಗೆ ಹೋಲಿಸಿದರೆ ಉತ್ತಮ ಬಡ್ಡಿದರಗಳನ್ನು ಪಡೆಯುತ್ತಾರೆ.
ವಿಶೇಷ ಎಫ್‌ಡಿಗಳನ್ನು ನಿರ್ದಿಷ್ಟ ಅವಧಿಗೆ ಪ್ರಾರಂಭಿಸುವುದರಿಂದ, ಹೂಡಿಕೆದಾರರ ಪ್ರತಿಕ್ರಿಯೆಯ ಆಧಾರದ ಮೇಲೆ ಬ್ಯಾಂಕ್‌ಗಳು ಗಡುವನ್ನು ವಿಸ್ತರಿಸಬಹುದು.
SBI ಗ್ರೀನ್ ರೂಪಾಯಿ ಟರ್ಮ್ ಡೆಪಾಸಿಟ್
ಸದ್ಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ SBI ಗ್ರೀನ್ ರೂಪಾಯಿ ಟರ್ಮ್ ಡೆಪಾಸಿಟ್ (SGRTD) ಎಂಬ ವಿಶೇಷ FD ನಡೆಸುತ್ತಿದೆ. ಈ ವಿಶೇಷ FD ಮೂರು ಯೋಜನೆಗಳನ್ನು ಹೊಂದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯೋಣ.
SBI ಗ್ರೀನ್ ರೂಪಾಯಿ ಅವಧಿ ಠೇವಣಿ
ಇನ್ನು SBI ಗ್ರೀನ್ ರೂಪಾಯಿಯ ಅವಧಿಯು 1,111, 1,777 ಹಾಗೂ 2,222 ದಿನಗಳವರೆಗೆ ಯೋಜನೆಗಳನ್ನು ನೀಡುತ್ತದೆ. ಇನ್ನು ಠೇವಣಿಯ ಅವಧಿಯಲ್ಲಿ ಆಕರ್ಷಕ ಬಡ್ಡಿಗಳನ್ನು ಕೂಡ ನೀಡಲಾಗುತ್ತದೆ. 1,111-ದಿನ ಮತ್ತು 1,777-ದಿನಗಳ ಎಫ್‌ಡಿಗಳಲ್ಲಿನ ಬಡ್ಡಿ ದರಗಳು 6.65 ಪ್ರತಿಶತವಾಗಿದ್ದರೆ 2,222-ದಿನಗಳ ಎಫ್‌ಡಿಯಲ್ಲಿ ಇದು 6.40 ಪ್ರತಿಶತವನ್ನು ಹೊಂದಿದೆ.
ಇನ್ನು ಇದೇ ಯೋಜನೆಯಲ್ಲಿ ಹಿರಿಯ ನಾಗರಿಕರಿಗೆ ಕೂಡ ಆಕರ್ಷಕ ಬಡ್ಡಿದರಗಳನ್ನು ಕೂಡ ನಿಗದಿ ಮಾಡಲಾಗಿದೆ. ಹಿರಿಯ ನಾಗರಿಕರಿಗೆ 1,111 ಮತ್ತು 1,777-ದಿನಗಳ FD ಗಳಲ್ಲಿ 7.15 ಶೇಕಡಾ ಬಡ್ಡಿದರವನ್ನು ನೀಡಲಾಗುತ್ತದೆ. ಅದೇ ರೀತಿ ಹಿರಿಯ ನಾಗರಿಕರು 2,222-ದಿನದ FD ಯಲ್ಲಿ 7.40 ಶೇಕಡಾ ಬಡ್ಡಿದರವನ್ನು ನೀಡಲಾಗುತ್ತದೆ. ಇನ್ನು ಇದರಲ್ಲಿ ಇತರೆ ಸೌಲಭ್ಯಗಳು ಕೂಡ ಇದೆ.
ಬಹುತೇಕ ಎಲ್ಲಾ ಎಫ್‌ಡಿಗಳಲ್ಲಿ ಇರುವಂತೆ ಈ ಯೋಜನೆಯಲ್ಲಿ ಈ ಯೋಜನೆಯಲ್ಲೂ ಕೂಡ ಎಫ್‌ಡಿ ಮೇಲೆ ಸಾಲ ಪಡೆಯಲು ಸಾಧ್ಯವಿದೆ. ಅಲ್ಲದೆ ಮೊತ್ತವನ್ನು ಅಕಾಲಿಕ ರೀತಿಯಲ್ಲಿ ವಾಪಸ್ ಅಂದರೆ ಯೋಜನೆಯ ನಡುವಲ್ಲೇ ಹಣವನ್ನು ಮರುಪಡೆಯುವ ಸೌಲಭ್ಯವನ್ನು ನೀಡಲಾಗಿದೆ.
ಅಲ್ಲದೆ ನಾಮಿನೇಶನ್ ಕೂಡ ಮಾಡಬಹುದು. ಇನ್ನು ಎಸ್‌ಬಿಐ ಗ್ರೀನ್ ರೂಪಾಯಿ ಟರ್ಮ್ ಡೆಪಾಸಿಟ್ ನಲ್ಲಿ 1,777 ದಿನಗಳ ಯೋಜನೆಯಲ್ಲಿ 11 ಲಕ್ಷ ರೂ. ಹೂಡಿಕೆ ಮಾಡಿದರೆ ಸಾಮಾನ್ಯ ನಾಗರಿಕರಿಗೆ ಮೆಚುರಿಟಿಯಲ್ಲಿ ಅಂದಾಜು ಸುಮಾರು 4,1,6497.23 ರೂ. ಬಡ್ಡಿ ಲಭಿಸಿದರೆ ಅಂದಾಜು ಮೆಚ್ಯೂರಿಟಿ ರೂ. 15,16,497.23 ಆಗಿರುತ್ತದೆ.
ಅದೇ ರೀತಿ 1,777 ದಿನಗಳ ಯೋಜನೆಯಲ್ಲಿ 21 ಲಕ್ಷ ರೂ. ಹೂಡಿಕೆ ಮಾಡಿದರೆ ಸಾಮಾನ್ಯ ನಾಗರಿಕರಿಗೆ ಮೆಚುರಿಟಿಯಲ್ಲಿ ಅಂದಾಜು ಸುಮಾರು 7,95,131.08 ರೂ. ಬಡ್ಡಿ ಲಭಿಸುತ್ತದೆ. ಅಲ್ಲದೆ ಅಂದಾಜು ಮೆಚ್ಯೂರಿಟಿ ರೂ. 28,95,131.08 ಆಗಿರಲಿದೆ.
ಇನ್ನು 1,777 ದಿನಗಳ ಯೋಜನೆಯಲ್ಲಿ ಹಿರಿಯ ನಾಗರಿಕರು ರೂ 11 ಲಕ್ಷ ಹೂಡಿಕೆ ಮಾಡಿದರೆ ಮೆಚುರಿಟಿ ಅಂದಾಜು ಬಡ್ಡಿಯು ರೂ 4,53,224.21 ರೂ. ಲಭಿಸಲಿದೆ. ಅಂದಾಜು ಮೆಚುರಿಟಿ ಮುಕ್ತಾಯ ಅವಧಿಯಲ್ಲಿ 15,53,224.21 ರೂ. ಲಭಿಸಲಿದೆ. 1,777 ದಿನಗಳ ಯೋಜನೆಯಲ್ಲಿ 21 ಲಕ್ಷ ರೂ. ಹೂಡಿಕೆ ಮಾಡಿದರೆ ಹಿರಿಯ ನಾಗರಿಕರಿಗೆ ಮೆಚುರಿಟಿಯಲ್ಲಿ ಅಂದಾಜು ಬಡ್ಡಿ ರೂ 8,65,246.22 ಮತ್ತು ಅಂದಾಜು ಮೆಚ್ಯೂರಿಟಿ ರೂ 29,65,246.22 ಆಗಿರುತ್ತದೆ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ



Click it and Unblock the Notifications