ಎಸ್‌ಬಿಐ..ಬ್ಯಾಂಕಿಂಗ್ ಮತ್ತು ಹಣಕಾಸು ವಲಯದಲ್ಲಿ ಹೂಡಿಕೆ ಮಾಡಲು, ಮುಕ್ತ ಯೋಜನೆ ನೀಡಿರುವಂತಹ ಬ್ಯಾಂಕ್. ಈಗ ಈ ಬ್ಯಾಂಕ್ ಹಣಕಾಸು ಸೇವೆಗಳ ನಿಧಿ 10 ವರ್ಷಗಳನ್ನು ಪೂರೈಸಿರುವ ಸಂತಸದಲ್ಲಿದೆ. ಇಂತಹ ಸಂದರ್ಭದಲ್ಲಿ ಈ ನಿಧಿಯು ತನ್ನ ಆಸ್ತಿಯ ಕನಿಷ್ಠ 80% ಹಣವನ್ನು ಬ್ಯಾಂಕ್ ಮತ್ತು ಹಣಕಾಸು ಸೇವಾ ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡುವ ಬಗ್ಗೆ ಕಡ್ಡಾಯಗೊಳಿಸಿದೆ. 2015ನೇ ವರ್ಷದ ಫೆಬ್ರವರಿ 26ರಂದು ಇದು ಪ್ರಾರಂಭವಾದಾಗಿನಿಂದ ನೇರ ಯೋಜನೆಯಿಂದ 14.94% ಲಾಭ ಮತ್ತು ನಿಯಮಿತ ಯೋಜನೆಯಿಂದ 13.73% ಲಾಭ ಗಳಿಸಿದೆ. ಅದರ ಮಾನದಂಡವಾದ ನಿಫ್ಟಿ ಫೈನಾನ್ಷಿಯಲ್ ಸರ್ವೀಸಸ್ TRI ಈ ಅವಧಿಯಲ್ಲಿ 12.44% ಲಾಭವನ್ನು ನೀಡಿದೆ ಎನ್ನಲಾಗುತ್ತಿದೆ.
ಇನ್ನು ಈ ಯೋಜನೆಯು 15.32% ನಷ್ಟು ಪಾಯಿಂಟ್-ಟು-ಪಾಯಿಂಟ್ CAGR ಆದಾಯವನ್ನು ನೀಡಿದೆ. ಐದು ವರ್ಷಗಳಲ್ಲಿ ಇದು 14.26% ನೀಡಿದ್ದರೆ, 3 ವರ್ಷಗಳಲ್ಲಿ 15.71% ಆದಾಯ ನೀಡಿದೆ. ಮತ್ತು 1 ವರ್ಷದಲ್ಲಿ 14.82% ರಷ್ಟು ಆದಾಯ ನೀಡಿದೆ. ಅಲ್ಲದೇ ಅದೇ ಸಮಯದಲ್ಲಿ ನಿಫ್ಟಿ ಫೈನಾನ್ಷಿಯಲ್ ಸರ್ವೀಸಸ್ TRI ಕ್ರಮವಾಗಿ 12.62%, 10.94%, 10.22% ಮತ್ತು 14.38% ರಷ್ಟು ಆದಾಯ ಗಳಿಕೆಗೆ ಸಹಾಯ ಮಾಡಿದೆ.

ಹಣಕಾಸು ಸೇವೆಗಳ ಒಟ್ಟು ರಿಟರ್ನ್ಸ್:
ಹತ್ತು ವರ್ಷಗಳ ಹಿಂದೆ 10,000 ರೂ.ಗಳ SIPಯಿಂದ ಪ್ರಾರಂಭಾಗಿ, 2025ರ ಫೆಬ್ರವರಿ 26ರ ಹೊತ್ತಿಗೆ 27.67 ಲಕ್ಷ ರೂ.ಗಳ ಮೌಲ್ಯವಾಗಿದೆ.ಅಂದರೆ 15.98% CAGR ನ ಆದಾಯವನ್ನು ನೀಡುತ್ತದೆ. ಹಾಗೆಯೇ ಈ ಯೋಜನೆಯು ಐದು ವರ್ಷಗಳಲ್ಲಿ 17.46%, ಮೂರು ವರ್ಷಗಳಲ್ಲಿ 16.37% ಆದಾಯ ನೀಡಿದೆ. ಅದರ ಜೊತೆಗೆ ನಿಫ್ಟಿ ಫೈನಾನ್ಷಿಯಲ್ ಸರ್ವೀಸಸ್ ಐದು ವರ್ಷಗಳಲ್ಲಿ 13.44% ಮತ್ತು ಮೂರು ವರ್ಷಗಳಲ್ಲಿ 11.14% ಆದಾಯ ನೀಡಿದೆ. ಯೋಜನೆಯ ಪ್ರಾರಂಭದಿಂದಲೂ TRI ಡೇಟಾ ಲಭ್ಯವಿಲ್ಲದ ಕಾರಣ, ಲಭ್ಯವಿರುವ ದಿನಾಂಕದವರೆಗೆ PRI ಮಾನದಂಡದ ಸಂಯೋಜಿತ CAGR ಅನ್ನು ಬಳಸಿಕೊಳ್ಳಲಾಗಿದೆ. ಈ ಮೂಲಕ ಮಾನದಂಡ ಕಾರ್ಯಕ್ಷಮತೆಯನ್ನು ಲೆಕ್ಕಹಾಕಲಾಗುತ್ತದೆ.
1. SBI ನಿರ್ವಹಣೆಯಲ್ಲಿರುವ ಒಟ್ಟು ಆಸ್ತಿಗಳು:
ಎಸ್‌ಬಿಐ ನಿರ್ವಹಣೆಯಲ್ಲಿರುವ ಆಸ್ತಿಯ ಆಡಳಿತ ಜನವರಿ 31, 2025 ರಂತೆ, ₹6,481 ಕೋಟಿ ಆಗಿದ್ದು, ಇದು ಹೂಡಿಕೆದಾರರ ಮೇಲೆ ನಿಧಿಯ ವಿಶ್ವಾಸವನ್ನು ತೋರಿಸುತ್ತದೆ. ನಿಯಮಿತ ಯೋಜನೆಯ ವೆಚ್ಚ ಅನುಪಾತವು 1.81% ಆಗಿದ್ದು, ಇದು ನಿಧಿಯ ನಿರ್ವಹಣೆಗೆ ಸಂಬಂಧಿಸಿದ ವೆಚ್ಚವನ್ನು ಸೂಚಿಸುತ್ತದೆ. ವೆಚ್ಚ ಅನುಪಾತ ಕಡಿಮೆ ಇರುವುದಾದರೆ, ಹೂಡಿಕೆದಾರರು ಹೆಚ್ಚು ಲಾಭ ಪಡೆಯಬಹುದಾಗಿದೆ. ಹೀಗಾಗಿ 1.81% ವೆಚ್ಚ ಅನುಪಾತ ಮಿತಿಯಾಗಿದ್ದು, ಇದು ಹೂಡಿಕೆದಾರರಿಗೆ ತಾರತಮ್ಯವಿಲ್ಲದ ಹೂಡಿಕೆ ಆಯ್ಕೆಯನ್ನು ನೀಡುತ್ತದೆ.
2. ಕನಿಷ್ಠ ಹೂಡಿಕೆ ಅವಶ್ಯಕತೆ:
ಇಲ್ಲಿ ಕನಿಷ್ಠ ಹೂಡಿಕೆಯ ಅವಶ್ಯಕತೆ ₹5,000 ಆಗಿದ್ದು. ಹೂಡಿಕೆ ಪ್ರಾರಂಭಿಸಲು ಬೇಕಾದ ಕನಿಷ್ಠ ಮೊತ್ತವಾಗಿದೆ. ಇದು ಸಾಧಾರಣ ಹೂಡಿಕೆದಾರರೂ ಭಾಗವಹಿಸಬಹುದಾದ ಮಟ್ಟದಲ್ಲಿದೆ. ಕನಿಷ್ಠ SIP ಮೊತ್ತ ₹500 ಆಗಿದೆ. ಚಿಕ್ಕ ಮೊತ್ತದಿಂದ ಹೂಡಿಕೆ ಮಾಡಲು ಬಯಸುವ ಹೂಡಿಕೆದಾರರಿಗೆ ಇದು ಉತ್ತಮ ಆಯ್ಕೆಯಾಗಬಹುದು.
3. ಹೂಡಿಕೆ ವಿಂಗಡಣೆ:
95.87% ಈಕ್ವಿಟಿ ಹೊಂದಿದ್ದು ಬಹುತೇಕ ಹಣವು ಷೇರು ಮಾರುಕಟ್ಟೆಯಲ್ಲಿರುವ ಬ್ಯಾಂಕಿಂಗ್ ಮತ್ತು ಹಣಕಾಸು ಸಂಸ್ಥೆಗಳ ಷೇರುಗಳಲ್ಲಿದೆ. 0.07% ಸಾಲ ಇರುವುದರಿಂದ, ನಿಧಿಯು ಹೆಚ್ಚಿನಷ್ಟು ಶೇರುಗಳಲ್ಲಿ ಹೂಡಿಕೆ ಮಾಡಿರುವುದು ಸ್ಪಷ್ಟವಾಗಿದೆ. ಮತ್ತು 4.05% ನಗದು ಮತ್ತು ನಗದು ಸಮಾನ ಇರುವುದರಿಂದ ನಿಧಿಯ ದೈನಂದಿನ ಕಾರ್ಯಾಚರಣೆಗೆ ಇಡಲು ಈ ಶೇ.4.05% ಹಣವನ್ನು ಕಾಯ್ದಿರಿಸಲಾಗಿದೆ.
SBI ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳ ನಿಧಿಯ ವಿಶೇಷತೆ:
2025ರ ಕೇಂದ್ರ ಬಜೆಟ್‌ನ ಸುಧಾರಣೆಯೊಂದಿಗೆ ಭಾರತದ ಬ್ಯಾಂಕಿಂಗ್ ಮತ್ತು ಹಣಕಾಸು ಸೇವಾ ವಲಯ ಪರಿವರ್ತನೆಗೆ ಸಜ್ಜಾಗುತ್ತಿದೆ. ಇಲ್ಲಿ ಕೆವೈಸಿ ಪ್ರಕ್ರಿಯೆಗಳು ಸರಳವಾಗಿವೆ. ವಿಮೆಯಲ್ಲಿ ಹೆಚ್ಚಿನ FDI ಮಿತಿಗಳು ಮತ್ತು ಸುವ್ಯವಸ್ಥಿತ ತೆರಿಗೆ ನಿಯಮಗಳು ದಕ್ಷತೆಯನ್ನು ಹೆಚ್ಚಿಸುತ್ತವೆ. ಹೂಡಿಕೆದಾರರು ಹೆಚ್ಚಿದ ಅವಕಾಶಗಳು ಮತ್ತು ಸುಧಾರಿತ ಕಾರ್ಯಾಚರಣೆಯ ದಕ್ಷತೆಯನ್ನು ನೋಡುತ್ತಾರೆ. ಡಿಜಿಟಲ್ ನಾವೀನ್ಯತೆ ಮತ್ತು ಹಣಕಾಸು ಸೇರ್ಪಡೆಯಲ್ಲಿ ನಾಯಕನಾಗಿ, ಈ ವಲಯವು ಭಾರತದ ಆರ್ಥಿಕ ಸ್ಥಿತಿಸ್ಥಾಪಕತ್ವ ಮತ್ತು ಸುಸ್ಥಿರ ಅಭಿವೃದ್ಧಿಗೆ ನಿರ್ಣಾಯಕವಾಗಿ ಮುಂದುವರೆದಿದೆ" ಎಂದು SBI MF ನ DMD ಮತ್ತು ಜಂಟಿ CEO ಡಿಪಿ ಸಿಂಗ್ ಹೇಳುತ್ತಾರೆ.


Click it and Unblock the Notifications