ಎಸ್‌ಬಿಐ ಮ್ಯೂಚುವಲ್ ಫಂಡ್‌ನಿಂದ ಹೊಸ ಹೂಡಿಕೆ ಅವಕಾಶ... ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಹೊಸ ಶಕ್ತಿ!

ಎಸ್‌ಬಿಐ ಮ್ಯೂಚುವಲ್ ಫಂಡ್‌ ತನ್ನ ಹೂಡಿಕೆದಾರರಿಗೆ ಹೊಸ ಆಸಕ್ತಿದಾಯ ಅವಕಾಶ ನೀಡಲು ಮುಂದಾಗಿದೆ. ಅದಕ್ಕಾಗಿ ನೀಡಲು SBI BSE PSU ಬ್ಯಾಂಕ್ ಇಂಡೆಕ್ಸ್ ಫಂಡ್ ಮತ್ತು SBI BSE PSU ಬ್ಯಾಂಕ್ ETF ಅನ್ನು ಪರಿಚಯಿಸಿದೆ. ಈ ಹೊಸ ಯೋಜನೆಗಳು ಭಾರತದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಹೂಡಿಕೆ ಮಾಡಲು ಅವಕಾಶ ಕಲ್ಪಿಸುತ್ತವೆ. ಅಲ್ಲದೇ ಇವು ಹೂಡಿಕೆದಾರರಿಗೆ ಬ್ಯಾಂಕಿಂಗ್ ವಲಯದ ಬೆಳವಣಿಗೆಯಿಂದ ಲಾಭ ಪಡೆಯಲು ಈ ಸಹಾಯ ಮಾಡಲಿವೆ.

ಎಸ್‌ಬಿಐ ಮ್ಯೂಚುವಲ್ ಫಂಡ್‌ನಿಂದ ಹೊಸ ಹೂಡಿಕೆ ಅವಕಾಶ..!

ಎಸ್‌ಬಿಐ ಮ್ಯೂಚುವಲ್ ಫಂಡ್, ಭಾರತದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕಿಂಗ್ ವಲಯವನ್ನು ಗುರಿಯಾಗಿಸಿಕೊಂಡು ಈ ಎರಡು ಹೊಸ ಯೋಜನೆಗಳನ್ನು ಪ್ರಾರಂಭಿಸಿದೆ. ಹೂಡಿಕೆದಾರರಿಗೆ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಹೂಡಿಕೆ ಮಾಡುವ ಅವಕಾಶವನ್ನು ಒದಗಿಸಲು ಈ ನಿಧಿಗಳನ್ನು ವಿನ್ಯಾಸಗೊಳಿಸಲಾಗಿದೆ. ಮಾರ್ಚ್ 17ರಿಂದ ಮಾರ್ಚ್ 20ರವರೆಗೆ ಈ ಹೊಸ ನಿಧಿ ಕೊಡುಗೆ ತೆರೆದಿರಲಿದೆ. ಈ ಅವಧಿಯಲ್ಲಿ ಹೂಡಿಕೆದಾರರು ಹೂಡಿಕೆ ಮಾಡಬಹುದಾಗಿದೆ. ಬ್ಯಾಂಕಿಂಗ್ ವಲಯದ ಬೆಳವಣಿಗೆಗೆ ಬಲ ನೀಡಲು ಮತ್ತು ಹೂಡಿಕೆದಾರರಿಗೆ ದೀರ್ಘಕಾಲಿಕ ಲಾಭ ತರಲು ಈ ಯೋಜನೆಗಳು ಸಹಾಯಕರವಾಗಲಿವೆ.

ಈ ಹೊಸ ನಿಧಿಯ ಕೊಡುಗೆಗಳೇನು..?

ಯೋಜನೆಗಳ ಉದ್ದೇಶ ಮತ್ತು ಕಾರ್ಯವಿಧಾನ:

ಎಸ್‌ಬಿಐ ಪರಿಚಯಿಸಿರುವ SBI BSE PSU ಬ್ಯಾಂಕ್ ಇಂಡೆಕ್ಸ್ ಫಂಡ್ ಮತ್ತು SBI BSE PSU ಬ್ಯಾಂಕ್ ETF ಎಂಬ ಹೊಸ ಯೋಜನೆಗಳು, BSE PSU ಬ್ಯಾಂಕ್ ಸೂಚ್ಯಂಕ ಅನ್ನು ಟ್ರ್ಯಾಕ್ ಮಾಡುತ್ತವೆ. ಇದರರ್ಥ, ಈ ನಿಧಿಗಳು ಭಾರತದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಹೂಡಿಕೆ ಮಾಡುವುದನ್ನು ಉದ್ದೇಶಿಸಿರುವವು ಎನ್ನಬಹುದಾಗಿದೆ.

SBI BSE PSU ಬ್ಯಾಂಕ್ ಇಂಡೆಕ್ಸ್ ಫಂಡ್ ಎಂದರೇನು..?

SBI BSE PSU ಬ್ಯಾಂಕ್ ಇಂಡೆಕ್ಸ್ ಫಂಡ್ ಎಂದರೆ ಇದು ಇದು Open-endedಸೂಚ್ಯಂಕ ನಿಧಿಯಾಗಿದೆ. ಇಲ್ಲಿ ಹೂಡಿಕೆದಾರರು ಯಾವಾಗ ಬೇಕಾದರೂ ತಮ್ಮ ಯೂನಿಟ್‌ಗಳನ್ನು ಖರೀದಿಸಲು ಅಥವಾ ವಾಪಸು ಪಡೆಯಲು ಸಾಧ್ಯವಿರುತ್ತದೆ. ಇದು BSE PSU ಬ್ಯಾಂಕ್ ಸೂಚ್ಯಂಕವನ್ನು ಅನುಸರಿಸುವಂತೆ ಯೋಜನೆ ರೂಪಿತಗೊಂಡಿದೆ.

SBI BSE PSU ಬ್ಯಾಂಕ್ ETF ಎಂದರೇನು..?

SBI BSE PSU ಬ್ಯಾಂಕ್ ETF ಎಂದರೆ ವಿನಿಮಯ-ವಹಿವಾಟು ನಿಧಿಯಾಗಿದೆ. ಇದು NSE ಮತ್ತು BSEಯಲ್ಲಿ ಪಟ್ಟಿ ಮಾಡಲಾಗುತ್ತದೆ. ಇದರಿಂದ ಹೂಡಿಕೆದಾರರು ಈ ETF ಯೂನಿಟ್‌ಗಳನ್ನು ಷೇರು ಮಾರುಕಟ್ಟೆಯಲ್ಲಿ ವಹಿವಾಟು ಮಾಡಬಹುದು.

ಹೂಡಿಕೆ ತಂತ್ರ ಮತ್ತು ನಿಧಿಯ ವಿವರಗಳು:

ಎಸ್‌ಬಿಐ ಪರಿಚಯಿಸಿರುವ ಈ ಹೊಸ ನಿಧಿಗಳು ತಮ್ಮ ಒಟ್ಟು ಆಸ್ತಿಯ ಕನಿಷ್ಠ 95% ಅನ್ನು BSE PSU ಬ್ಯಾಂಕ್ ಸೂಚ್ಯಂಕದ ಭಾಗವಾಗಿರುವ ಭದ್ರತೆಗಳಲ್ಲಿ ಹೂಡಿಕೆ ಮಾಡುತ್ತವೆ. ಉಳಿದ ಶೇಕಡ 5ನ್ನು ಸರ್ಕಾರಿ ಭದ್ರತೆಗಳು, ತ್ರಿಪಕ್ಷೀಯ ರೆಪೊಗಳು, ಮತ್ತು ದ್ರವ್ಯತೆ ನಿರ್ವಹಣೆಗಾಗಿ ದ್ರವ ಮ್ಯೂಚುಯಲ್ ಫಂಡ್‌ಗಳಿಗೆ ಹಂಚಬಹುದು. ಈ ಎರಡೂ ಯೋಜನೆಗಳ ಪ್ರಮುಖ ಮಾನದಂಡ ಸೂಚ್ಯಂಕ BSE PSU ಬ್ಯಾಂಕ್ TRI ಆಗಿದೆ.

ಈ ನಿಧಿಯಿಂದಾಗುವ ಲಾಭಗಳು:

ಸಾರ್ವಜನಿಕ ವಲಯದ ಬ್ಯಾಂಕುಗಳು ಇದರಲ್ಲಿ ಬಹುಮುಖ್ಯವಾಗಿ ಪ್ರವೇಶಿಸಬಹುದು. ಹೂಡಿಕೆದಾರರು ಹೂಡಿಕೆದಾರರು SBI, PNB, BOI, BOB, ಯುನಿಯನ್ ಬ್ಯಾಂಕ್, ಕೆನರಾ ಬ್ಯಾಂಕ್‌ ಸೇರಿ ಮುಂತಾದ ಪ್ರಮುಖ ಸರ್ಕಾರಿ ಬ್ಯಾಂಕುಗಳಲ್ಲಿ ಹೂಡಿಕೆ ಮಾಡುವ ಅವಕಾಶವನ್ನು ಪಡೆಯುತ್ತಾರೆ. ನೇರವಾಗಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಆಗದ ಹೂಡಿಕೆದಾರರು ETF ಅಥವಾ ಇಂಡೆಕ್ಸ್ ಫಂಡ್ ಮುಖಾಂತರ ಈ ವಲಯದಲ್ಲಿ ಹೂಡಿಕೆ ಮಾಡಬಹುದು. ಹಾಗೆಯೇ NFO ಅವಧಿಯಲ್ಲಿ ಹೂಡಿಕೆ ಮಾಡಿದರೆ, ತಾರತಮ್ಯ ಇಲ್ಲದೆ ಎಲ್ಲ ಹೂಡಿಕೆದಾರರು ಒಂದೇ ಎನ್‌ಎವಿಗೆ ಯೂನಿಟ್ ಪಡೆಯುತ್ತಾರೆ.

ಈ ನಿಧಿಯ ಅಪಾಯಗಳೇನು..?

ಯಥಾರ್ಥ ಅನುಸರಣೆ ಆಗದೇ ಹೋದರೆ, ನಿಖರವಾದ ಸೂಚ್ಯಂಕ ಪ್ರಭಾವ ಪಡೆಯಲು ಸಾಧ್ಯವಿಲ್ಲ. ಹಾಗೆಯೇ ಬ್ಯಾಂಕಿಂಗ್ ವಲಯದಲ್ಲಿ ಹೂಡಿಕೆ ಮಾಡುತ್ತಿರುವುದರಿಂದ, ಬ್ಯಾಂಕುಗಳ ಲಾಭಕ್ಷಮತೆ, ಬಡ್ಡಿದರ ಬದಲಾವಣೆ, ನಿಯಂತ್ರಣಾತ್ಮಕ ನೀತಿ ಹಠಾತ್ ಬದಲಾವಣೆ ಮತ್ತು ಆರ್ಥಿಕ ಏರುಪೇರುಗಳು ಹೂಡಿಕೆಯ ಮೇಲೆ ಪರಿಣಾಮ ಬೀರುತ್ತವೆ. ಜೊತೆಗೆ ETF ಗಳಲ್ಲಿ ವಹಿವಾಟು ಕಡಿಮೆಯಾದರೆ, ದ್ರವ್ಯತೆ ಸಮಸ್ಯೆ ಉಂಟಾಗಬಹುದು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+