ದೇಶದ ಅತಿದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) 2023ರ ಸೆಪ್ಟೆಂಬರ್ 30ರಂದು ಕೊನೆಗೊಂಡ ತ್ರೈಮಾಸಿಕದ ತನ್ನ ಹಣಕಾಸಿನ ಫಲಿತಾಂಶಗಳನ್ನು ಶನಿವಾರ ಬಿಡುಗಡೆ ಮಾಡಿದೆ.
ಎಸ್‌ಬಿಐ ನಿವ್ವಳ ಲಾಭವು ಹಣಕಾಸು ವರ್ಷ 2023 ರಲ್ಲಿ 13,264.52 ಕೋಟಿ ರೂಪಾಯಿ ಆಗಿತ್ತು. ಆದರೆ ಹಣಕಾಸು ವರ್ಷ 2024 ರಲ್ಲಿ ಎಸ್‌ಬಿಐ ನಿವ್ವಳ ಲಾಭವು ವರ್ಷದಿಂದ ವರ್ಷಕ್ಕೆ ಶೇಕಡ 8 ರಷ್ಟು ಹೆಚ್ಚಳವಾಗಿ, 13,264.52 ಕೋಟಿ ರೂಪಾಯಿಗೆ ತಲುಪಿದೆ.

ಎಸ್‌ಬಿಐ ನಿವ್ವಳ ಬಡ್ಡಿ ಆದಾಯ (ಎನ್‌ಐಐ) ಹಿಂದಿನ ವರ್ಷದ ಅದೇ ತ್ರೈಮಾಸಿಕದಲ್ಲಿ 35,183.4 ಕೋಟಿ ರೂಪಾಯಿಯಿಂದ ಹಣಕಾಸು ವರ್ಷ 2024 ರ ಎರಡನೇ ತ್ರೈಮಾಸಿಕದಲ್ಲಿ ಶೇಕಡ 12.3 ರಷ್ಟು ಏರಿಕೆಯಾಗಿ, ಸುಮಾರು 39,500 ಕೋಟಿ ರೂಪಾಯಿಗೆ ಜಿಗಿತ ಕಂಡಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರಕಾರ ಹಣಕಾಸು ವರ್ಷ 2024ರ ಎರಡನೇ ತ್ರೈಮಾಸಿಕದಲ್ಲಿ ಅದರ ನಿರ್ವಹಣಾ ಲಾಭ 19,417 ಕೋಟಿ ರೂಪಾಯಿಗಳಾಗಿದೆ. ಇದು ಹಣಕಾಸು ವರ್ಷ 2023 ರ ಎರಡನೇ ತ್ರೈಮಾಸಿಕಕ್ಕಿಂತ ಶೇಕಡ 8.07 ರಷ್ಟು ಇಳಿಕೆಯಾಗಿದೆ. ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ ಎಸ್‌ಬಿಐ ನಿರ್ವಹಣಾ ಲಾಭ 21,120 ಕೋಟಿ ರೂಪಾಯಿ ಆಗಿತ್ತು.
ವರ್ಷದ ಮೊದಲಾರ್ಧದಲ್ಲಿ, ಬ್ಯಾಂಕಿನ ಆರ್‌ಒಎ ಮತ್ತು ಆರ್‌ಒಇ ಕ್ರಮವಾಗಿ ಶೇಕಡ 1.10 ಮತ್ತು ಶೇಕಡ 22.57 ಆಗಿದೆ. ಎಸ್‌ಬಿಐ ಪ್ರಕಾರ ತ್ರೈಮಾಸಿಕದಲ್ಲಿ ಅದರ ಆರ್‌ಒಎ ಶೇಕಡ 1.01 ಆಗಿದ್ದು, ವರ್ಷದಿಂದ ವರ್ಷಕ್ಕೆ ಸುಮಾರು 3 ಬಿಪಿಎಸ್‌ನಷ್ಟು ಕುಸಿತವನ್ನು ಕಂಡಿದೆ.
ಹಣಕಾಸು ವರ್ಷ 2024ರ ಮೊದಲಾರ್ಧದಲ್ಲಿ ದೇಶೀಯ ಎನ್‌ಐಎಂ ಸುಮಾರು ಶೇಕಡ 3.45ಕ್ಕೆ ಏರಿದೆ. ವರ್ಷದಿಂದ ವರ್ಷಕ್ಕೆ 6 ಬಿಪಿಎಸ್‌ನಷ್ಟು ಏರಿಕೆಯಾಗಿದೆ ಎಂದು ಬ್ಯಾಂಕ್ ಹೇಳಿದೆ. ಆದರೆ ಎರಡನೇ ತ್ರೈಮಾಸಿಕದಲ್ಲಿ ದೇಶೀಯ ಎನ್‌ಐಎಂ ವರ್ಷದಿಂದ ವರ್ಷಕ್ಕೆ 12 ಮೂಲಾಂಕ ಇಳಿದು ಶೇಕಡ 3.43ಕ್ಕೆ ಇಳಿದಿದೆ.
ಬ್ಯಾಲೆನ್ಸ್ ಶೀಟ್‌ಗೆ ಸಂಬಂಧಿಸಿದಂತೆ, ಬ್ಯಾಂಕ್ ತನ್ನ ಕ್ರೆಡಿಟ್ ಬೆಳವಣಿಗೆಯು ಶೇಕಡ 12.39 ರಷ್ಟು ವರ್ಷದಿಂದ ವರ್ಷಕ್ಕೆ ಜಿಗಿದಿದೆ ಎಂದು ಹೇಳಿದೆ. ದೇಶೀಯ ಅಡ್ವಾನ್ಸ್‌ಗಳು ಶೇಕಡ 13.21 ರಷ್ಟು ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗಿದೆ.
ಬ್ಯಾಂಕ್‌ನ ಶೇಕಡ 39 ರಷ್ಟು ರಿಟೇಲ್ ಆಸ್ತಿ ಖಾತೆಗಳು ಮತ್ತು ಅದರ ಶೇಕಡ 61 ರಷ್ಟು ಎಸ್‌ಬಿ ಖಾತೆಗಳು ಹಣಕಾಸು ವರ್ಷ 2024 ರ ಎರಡನೇ ತ್ರೈಮಾಸಿಕದಲ್ಲಿ ಯೋನೋ ಮೂಲಕ ಡಿಜಿಟಲ್ ಆಗಿದೆ.


Click it and Unblock the Notifications