ವಿಶೇಷವಾಗಿ ಹಿರಿಯ ನಾಗರಿಕರಿಗಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಮೃತ್ ವೃಷ್ಟಿ ಯೋಜನೆಯನ್ನ ಜಾರಿ ಮಾಡಿದೆ.ವಿಶೇಷ ಸ್ಥಿರ ಠೇವಣಿ (ಎಫ್‌ಡಿ)ಗೆ ಹೋಲಿಸಿದರೆ ಇದರಲ್ಲಿ ವಿಆಕರ್ಷಕ ಬಡ್ಡಿದರಗಳನ್ನು ಒದಗಿಸುತ್ತದೆ. ಹಿರಿಯ ನಾಗರಿಕರಿಗಾಗಿ ವಿವಿಧ ಅವಧಿಗಳಲ್ಲಿ ಅಂದರೆ ಸಾಂಪ್ರದಾಯಿಕ ಎಫ್‌ಡಿಗಳಲ್ಲಿ, ಇದು 1-ವರ್ಷ, 3-ವರ್ಷ, 5-ವರ್ಷ ಮತ್ತು 10-ವರ್ಷದ ಎಫ್‌ಡಿಗಳನ್ನು ನಡೆಸುತ್ತದೆ. ಎಸ್‌ಬಿಐನ ಅಮೃತ್ ವೃಷ್ಟಿ ಯೋಜನೆಯಲ್ಲಿ ₹5 ಲಕ್ಷ, ₹10 ಲಕ್ಷ ಮತ್ತು ₹15 ಲಕ್ಷ ಹೂಡಿಕೆಗಳು ಹೇಗೆ ಬೆಳೆಯುತ್ತವೆ.
ಎಸ್‌ಬಿಐ ಹಿರಿಯ ನಾಗರಿಕ ಎಫ್‌ಡಿ ದರ:
ನಿವೃತ್ತಿ ಹೊಂದಿದ ಹಿರಿಯ ನಾಗರಿಕರಿಗೆ ಹಣದ ಅಗತ್ಯ ಹೆಚ್ಚಿರುತ್ತದೆ. ಹೀಗಾಗಿ ಅಂತಹವರು ಇಲ್ಲಿ ಹೂಡಿಕೆಯನ್ನ ಮಾಡಬಹುದು. ಅಲ್ಲಿ ಅವರು ಕಡಿಮೆ ಅಪಾಯದೊಂದಿಗೆ ಹೂಡಿಕೆ ಮಡಬಹುದು. ಅದಕ್ಕಾಗಿಯೇ ಅವರಲ್ಲಿ ಹೆಚ್ಚಿನವರು ಸ್ಥಿರ ಠೇವಣಿ ಯೋಜನೆಗಳಲ್ಲಿ (ಎಫ್‌ಡಿ) ಹೂಡಿಕೆ ಮಾಡಲು ಇಚ್ಛಿಸುತ್ತಾರೆ. ಈ ರೀತಿಯ ಹೂಡಿಕೆಯಲ್ಲಿ, ಅವರು ಖಾತರಿಯ ಲಾಭವನ್ನು ಪಡೆಯಬಹುದು.

ಆದ್ದರಿಂದ ಅವರ ಅವಶ್ಯಕತೆಗಳನ್ನು ಆಧರಿಸಿ, ಅವರು ತಮ್ಮ ನಿವೃತ್ತಿಯ ನಂತರ ಅವರ ಕರ್ಚುವೆಚ್ಚಗಳನ್ನು ಲೆಕ್ಕ ಹಾಕಬಹುದು ಮತ್ತು ಅದಕ್ಕೆ ಅನುಗುಣವಾಗಿ ಅರು ಇಲ್ಲಿ ಹಣವನ್ನು ಹೂಡಿಕೆ ಮಾಡಬಹುದು. ಸಾಮಾನ್ಯ ನಾಗರಿಕರಿಗೆ ನೀಡುವ ಬಡ್ಡಿದರಗಳಿಗೆ ಹೋಲಿಕೆ ಮಾಡಿದ್ರೆ ಬ್ಯಾಂಕ್‌ಗಳು ಹಿರಿಯ ನಾಗರಿಕರಿಗೆ ಹೆಚ್ಚು ಬಡ್ಡಿದರಗಳನ್ನು ನೀಡುತ್ತವೆ. ಹಿರಿಯ ನಾಗರಿಕ ಹೂಡಿಕೆದಾರರು ಮೆಚ್ಯೂರಿಟಿಯಲ್ಲಿ ವಾಪಸ್ ಹಣವನ್ನ ಪಡೆಯಬಹುದು. ಆದರೆ ಅವರು ಹಣದ ಅವಶ್ಯಕತೆ ಇದ್ರೆ, ಅವರು ಮಾಸಿಕ, ತ್ರೈಮಾಸಿಕ, ಅರ್ಧ-ವಾರ್ಷಿಕ ಅಥವಾ ವಾರ್ಷಿಕ ಹಿಂಪಡೆಯುವಿಕೆಗಳನ್ನು ಅವರು ಆಯ್ಕೆ ಮಾಡಬಹುದು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)ಗೆ ಸಂಬಂಧಿಸಿದಂತೆ, ಅದರ ಎಲ್ಲಾ FDಗಳಲ್ಲಿ, ಅದರಲ್ಲೂ ಹಿರಿಯ ನಾಗರಿಕರಿಗೆ ಅಮೃತ್ ವೃಷ್ಟಿ ವಿಶೇಷ FDಯಲ್ಲಿ ಅತೀಹೆಚ್ಚು ಬಡ್ಡಿ ದರವನ್ನು ನೀಡುತ್ತದೆ. 444 ದಿನಗಳಲ್ಲಿ FD ಹಿರಿಯ ನಾಗರಿಕರಿಗೆ 7.75% ಬಡ್ಡಿದರವನ್ನು ನೀಡುತ್ತದೆ. ಎಸ್‌ಬಿಐನ 1, 3, ಮತ್ತು 5 ವರ್ಷದ ಹಿರಿಯ ನಾಗರಿಕರ ಎಫ್‌ಡಿಗಳಲ್ಲಿ ಬಡ್ಡಿ ದರಗಳು ಕ್ರಮವಾಗಿ ಶೇ.7.30, ಶೇ.7.25 ಮತ್ತು ಶೇ.7.50ರಷ್ಟಿದೆ. ಹಿರಿಯ ನಾಗರಿಕರು ಎಸ್‌ಬಿಐ ಅಮೃತ್ ವೃಷ್ಟಿ ಯೋಜನೆಡಿ, 1, 3, ಮತ್ತು 5 ವರ್ಷಗಳ ಎಫ್‌ಡಿಗಳಲ್ಲಿ ರೂ 5 ಲಕ್ಷ, ರೂ 10 ಲಕ್ಷ ಮತ್ತು ರೂ 15 ಲಕ್ಷ ಹೂಡಿಕೆ ಮಾಡಿದರೆ ಅವರ ಮೆಚ್ಯೂರಿಟಿ ಹಣ ಎಷ್ಎಂದು ಅವರು ತಿಳಿಯಬಹುದು.
ಇನ್ನು ಅವರ ಅಂದಾಜು ಬಡ್ಡಿ ಮೊತ್ತ 48,935.21 ರೂ. ಆಗಿರುತ್ತದೆ ಮತ್ತು ಅಂದಾಜು ಮುಕ್ತಾಯ ಮೊತ್ತವು 5,48,935.21 ರೂ. ಆಗಿರುತ್ತದೆ.
ಹಿರಿಯ ನಾಗರಿಕರು 97,870.42 ರೂಪಾಯಿಯ ಅಂದಾಜು ಆದಾಯದ ಮೊತ್ತವನ್ನು ಮತ್ತು 10,97,870.42 ರೂಪಾಯಿಯ ಅಂದಾಜು ಮೆಚ್ಯೂರಿಟಿ ಮೊತ್ತವನ್ನು ಪಡೆಯುತ್ತಾರೆ. ಹಿರಿಯ ನಾಗರಿಕರು 15 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ, ಅವರಿಗೆ ಅಂದಾಜು 1,46,805.63 ರೂ. ಬಡ್ಡಿ ಮತ್ತು ಅಂದಾಜು 16,46,805.63 ರೂ. ಬಡ್ಡಿ ಸಿಗುತ್ತದೆ. ಹಾಗೆ 5 ಲಕ್ಷ ರೂಪಾಯಿಯ ಹೂಡಿಕೆಯ ಅಂದಾಜು ಬಡ್ಡಿ ರೂ 37,511 ಆಗಿದ್ದರೆ, ಅಂದಾಜು ಕಾರ್ಪಸ್ ರೂ 5,37,511 ಆಗಿರುತ್ತದೆ.
ಹಾಗೆ ಅವರೇನಾದ್ರು 10 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರೆ, ಹಿರಿಯ ನಾಗರಿಕರು 75,023 ರೂಪಾಯಿಗಳ ಅಂದಾಜು ಬಡ್ಡಿಯನ್ನು ಮತ್ತು 10,75,023 ರೂ. ಅಂದಾಜು ಮೆಚ್ಯೂರಿಟಿ ಮೊತ್ತವನ್ನು ಪಡೆಯುತ್ತಾರೆ.
1 ವರ್ಷದ ಎಫ್‌ಡಿಯಲ್ಲಿ ಹಿರಿಯ ನಾಗರಿಕರು 15 ಲಕ್ಷ ರೂಪಯಿ ಹೂಡಿಕೆ ಮಾಡಿದರೆ, ಅವರ ಅಂದಾಜು ಆದಾಯದ ಮೊತ್ತ 1,12,534 ರೂಪಾಯಿ ಆಗಿರುತ್ತದೆ ಮತ್ತು ಅಂದಾಜು ಮೆಚ್ಯೂರಿಟಿ ಮೊತ್ತ ರೂ. 16,12,534 ಆಗಿರುತ್ತದೆ.
ಹಿರಿಯ ನಾಗರಿಕರು 3 ವರ್ಷದ ಎಫ್‌ಡಿಯಲ್ಲಿ ರೂ 5 ಲಕ್ಷ ಹೂಡಿಕೆ ಮಾಡಿದ್ರೆ ಅದರಲ್ಲಿ ಅವರು ರೂ 1,20,273 ಅಂದಾಜು ಬಡ್ಡಿಯನ್ನು ಪಡೆಯಲು ಇದು ಸಹಾಯ ಮಾಡುತ್ತದೆ ಮತ್ತು ರೂ 6,20,273 ರ ಅಂದಾಜು ಮುಕ್ತಾಯವಾಗುತ್ತದೆ. ಹಿರಿಯ ನಾಗರಿಕರು ಅಂದಾಜು ಬಡ್ಡಿ 2,40,547 ರೂ ಮತ್ತು ಅಂದಾಜು 12,40,547 ರೂ. ಮೆಚ್ಯೂರಿಟಿಯನ್ನ ಅವರು ಪಡೆಯಬಹುದು.
ಅಲ್ಲದೆ ಅವರೇನಾದ್ರು 3 ವರ್ಷದ ಎಫ್‌ಡಿಯಲ್ಲಿ 15 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ, ಅವರಿಗೆ 3,60,820 ರೂ.ಗಳ ಅಂದಾಜು ಬಡ್ಡಿ ಮತ್ತು 18,60,820 ರೂ. ಮೆಚ್ಯೂರಿಟಿ ಸಿಗುತ್ತದ. ಹಾಗೆ ಹಿರಿಯ ನಾಗರಿಕರು ಅಂದಾಜು 2,24,974 ರೂ ಬಡ್ಡಿ ಮತ್ತು ಅಂದಾಜು 7,24,974 ರೂ. ಮೆಚ್ಯೂರಿಟಿ ಪಡಯಬಹುದು.
ಅಲ್ಲದೆ ಅವರು 5 ವರ್ಷಗಳ ಎಫ್‌ಡಿಯಲ್ಲಿ 10 ಲಕ್ಷ ರೂ.ಗಳನ್ನು ಹೂಡಿಕೆ ಮಾಡಿದರೆ, ಹಿರಿಯ ನಾಗರಿಕರಿಗೆ ಅಂದಾಜು ಬಡ್ಡಿಯು ರೂ. 4,49,948 ಆಗಿರುತ್ತದೆ ಮತ್ತು ಅಂದಾಜು ಮೆಚ್ಯೂರಿಟಿ ಮೊತ್ತವು ರೂ.14,49,948 ಆಗಿರುತ್ತದೆ.
ಇನ್ನ ಯಾರಾದರೂ 5 ವರ್ಷದ ಎಫ್‌ಡಿಯಲ್ಲಿ 15 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ, ಅವರು ಅಂದಾಜು 6,74,922 ರೂ. ಬಡ್ಡಿ ಮತ್ತು ಅಂದಾಜು 21,74,922 ರೂ. ಮೆಚ್ಯೂರಿಟಿ ಆಗಿರುತ್ತದೆ.


Click it and Unblock the Notifications