ಎಸ್‌ಬಿಐ ಮ್ಯೂಚುವಲ್ ಫಂಡ್ ಇತ್ತೀಚೆಗೆ ಜನ್ ನಿವೇಶ್ ಎಸ್‌ಐಪಿ ಎಂಬ ಹೊಸ ಎಸ್‌ಐಪಿ (ವ್ಯವಸ್ಥಿತ ಹೂಡಿಕೆ ಯೋಜನೆ) ಸೌಲಭ್ಯವನ್ನು ಪರಿಚಯಿಸಿದೆ . ಕಡಿಮೆ ಮೊತ್ತದಿಂದ ಹೂಡಿಕೆ ಆರಂಭಿಸಲು ಬಯಸುವ ಜನರಿಗಾಗಿಯೇ ಜನ್ ನಿವೇಶ್ SIP ಅನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಈ ಯೋಜನೆಯು ಹೂಡಿಕೆದಾರರಿಗೆ ತಿಂಗಳಿಗೆ ₹250 ರಷ್ಟು ಕಡಿಮೆ ಮೊತ್ತದಿಂದ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಅನುವು ಮಾಡಿಕೊಡುತ್ತದೆ.
ಎಸ್‌ಬಿಐ ಜನನಿವೇಶ್ ಎಸ್‌ಐಪಿಯ ಉದ್ದೇಶ
ಭಾರತದ ಅತಿದೊಡ್ಡ ಮ್ಯೂಚುವಲ್ ಫಂಡ್ ಹೌಸ್ ಆಗಿರುವ ಎಸ್‌ಬಿಐ ಮ್ಯೂಚುವಲ್ ಫಂಡ್, ಜನನಿವೇಶ್ ಎಸ್‌ಐಪಿ ಆರಂಭಿಸಿರುವ ಪ್ರಮುಖ ಉದ್ದೇಶ ಹೂಡಿಕೆಯನ್ನು ಅತ್ಯಂತ ಸುಲಭಗೊಳಿಸುವ ಮೂಲಕ ಆರ್ಥಿಕ ಸೇರ್ಪಡೆಯನ್ನು ಹೆಚ್ಚಿಸುವುದು ಆಗಿದೆ. ಮೊದಲ ಬಾರಿಗೆ ಹೂಡಿಕೆ ಮಾಡುವವರನ್ನು ಮತ್ತು ಗ್ರಾಮೀಣ ಭಾಗದ ಜನರಿಗೆ, ಕಾರ್ಮಿಕ ವರ್ಗಕ್ಕೆ ಮ್ಯೂಚುವಲ್ ಫಂಡ್ ಹೂಡಿಕೆಗಳನ್ನು ಹೆಚ್ಚು ಸುಲಭವಾಗಿ ಲಭ್ಯವಾಗುವಂತೆ ಮಾಡುವುದು ಇದರ ಉದ್ದೇಶ. ಈ ವರ್ಗ ಸಾಮಾನ್ಯವಾಗಿ ಮ್ಯೂಚುವಲ್ ಫಂಡ್ ನಂತಹ ಆಧುನಿಕ ಹೂಡಿಕೆಗಳಲ್ಲಿ ತೊಡಗಿಸಿಕೊಳ್ಳದೇ ಸಂಪ್ರಾದಾಯಿಕ ಹೂಡಿಕೆಗಳನ್ನೇ ಹೆಚ್ಚಾಗಿ ಅವಲಂಭಿಸುತ್ತಾರೆ.

ಈ ಯೋಜನೆಯು ಜನಸಾಮಾನ್ಯರ ಸ್ನೇಹಿಯಾಗಿದ್ದು ದೈನಂದಿನ, ಸಾಪ್ತಾಹಿಕ ಮತ್ತು ಮಾಸಿಕ SIP ಗಳನ್ನು ಒಳಗೊಂಡಂತೆ ಹೊಂದಿಕೊಳ್ಳುವ ಹೂಡಿಕೆ ಆಯ್ಕೆಗಳನ್ನು ನೀಡುತ್ತದೆ. ಈ ಯೋಜನೆಯೂ ಕಡಿಮೆ ಆದಾಯ ಗಳಿಸುವ ವ್ಯಕ್ತಿಗಳು ಕೂಡಾ ಸಣ್ಣ ಮೊತ್ತದ ಕೊಡುಗೆಗಳೊಂದಿಗೆ ತಮ್ಮ ಉಳಿತಾಯವನ್ನು ಕ್ರಮೇಣವಾಗಿ ಬೆಳೆಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಪ್ರತಿ ತಿಂಗಳು ಕೇವಲ 250 ರೂ ಮಾತ್ರ ಹೂಡಿಕೆ ಮಾಡುವ ಮೂಲಕ, ದೀರ್ಘಾವಧಿಯಲ್ಲಿ ₹7 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ನಿಧಿಯನ್ನು ನಿರ್ಮಿಸಬಹುದು.
ಎಸ್‌ಬಿಐಯ ಜನನಿವೇಶ್ ಎಸ್‌ಐಪಿಯಲ್ಲಿ ಯಾರು ಹೂಡಿಕೆ ಮಾಡಬಹುದು?
ಈ ಯೋಜನೆಯನ್ನು ವಿದ್ಯಾರ್ಥಿಗಳು, ಮೊದಲ ಬಾರಿಗೆ ಹೂಡಿಕೆ ಮಾಡುವವರು, ವ್ಯಾಪಾರಿಗಳು ಮತ್ತು ಸಣ್ಣ ಉಳಿತಾಯಗಾರರು ಎಲ್ಲರಿಗೂ ವಿನ್ಯಾಸಗೊಳಿಸಲಾಗಿದೆ. ತಮ್ಮ ಹೂಡಿಕೆ ಪ್ರಯಾಣವನ್ನು ಪ್ರಾರಂಭಿಸಲು ಬಯಸುವ ಯಾರಾದರೂ ಈ ಯೋಜನೆಯಲ್ಲಿ ಭಾಗವಹಿಸಬಹುದು. ಜನನಿವೇಶ್ SIP ಅಡಿಯಲ್ಲಿ ಮಾಡಲಾದ ಎಲ್ಲಾ ಹೂಡಿಕೆಗಳನ್ನು SBI ಬ್ಯಾಲೆನ್ಸ್ಡ್ ಅಡ್ವಾಂಟೇಜ್ ಫಂಡ್‌ಗೆ ನಿರ್ದೇಶಿಸಲಾಗುತ್ತದೆ.
ಎಸ್‌ಬಿಐ ಜನನಿವೇಶ್ ಎಸ್‌ಐಪಿಯಲ್ಲಿ ಹೂಡಿಕೆ ಮಾಡುವುದು ಹೇಗೆ?
ಎಸ್‌ಬಿಐ ಜನನಿವೇಶ್ ಎಸ್‌ಐಪಿಯಲ್ಲಿ ಹೂಡಿಕೆ ಮಾಡುವುದು ಅತ್ಯಂತ ಸರಳವಾಗಿದ್ದು ಇದನ್ನು ಬಹು ಪ್ಲ್ಯಾಟ್ ಪಾರ್ಮ್ ಗಳ ಮೂಲಕ ಮಾಡಬಹುದು. SBI YONO ಅಪ್ಲಿಕೇಶನ್ ಜೊತೆಗೆ, ಈ ಸೌಲಭ್ಯವು Paytm, Groww ಮತ್ತು Zerodha ನಂತಹ ಫಿನ್‌ಟೆಕ್ ಪ್ಲಾಟ್‌ಫಾರ್ಮ್‌ಗಳಲ್ಲಿಯೂ ಲಭ್ಯವಿರುವ ಕಾರಣ ಬಹು ಸುಲಭವಾಗಿ ಹೂಡಿಕೆ ಮಾಡಬಹುದು.
ನೀವು 10 ವರ್ಷಗಳ ಅವಧಿಗೆ ಪ್ರತಿ ತಿಂಗಳು ₹250 ರಂತೆ SIP ನಲ್ಲಿ ಹೂಡಿಕೆ ಮಾಡಿದರೆ, ನಿಮ್ಮ ಒಟ್ಟು ಹೂಡಿಕೆ ₹30,000 ಆಗುತ್ತದೆ. ವಾರ್ಷಿಕ ಸರಾಸರಿ 12% ರ ಬೆಳವಣಿಗೆಯ ದರವನ್ನು (CAGR) ಪರಿಗಣಿಸಿದರೆ, ನಿಮ್ಮ ಅಂದಾಜು ಆದಾಯ ₹26,009 ಆಗಿರುತ್ತದೆ. ಹೀಗಾಗಿ, ಹೂಡಿಕೆಯ ಅವಧಿಯ ಕೊನೆಯಲ್ಲಿ ನಿಮ್ಮ ಬಳಿ ಸರಿಸುಮಾರು ₹56,009 ರಷ್ಟಿರುತ್ತದೆ.
ಅದೇ ರೀತಿ, 20 ವರ್ಷಗಳವರೆಗೆ ಇದೇ ಮಾದರಿಯಲ್ಲಿ ಹೂಡಿಕೆ ಮುಂದುವರೆಸಿದರೆ, ನಿಮ್ಮ ಒಟ್ಟು ಹೂಡಿಕೆ ₹60,000 ಆಗುತ್ತದೆ. 12% CAGR ನಲ್ಲಿ, ನಿಮ್ಮ ಅಂದಾಜು ಆದಾಯ ₹1.69 ಲಕ್ಷಕ್ಕೆ ಏರುತ್ತದೆ, ಮತ್ತು ನಿಮ್ಮ ಅಂತಿಮ ನಿಧಿ ₹2.29 ಲಕ್ಷವನ್ನು ತಲುಪುತ್ತದೆ.
ಇನ್ನೂ ದೀರ್ಘಾವಧಿಯಾದ 30 ವರ್ಷಗಳವರೆಗೆ ಹೂಡಿಕೆ ಮುಂದುವರೆಸಿದರೆ, ನಿಮ್ಮ ಒಟ್ಟು ಹೂಡಿಕೆ ₹90,000 ಆಗುತ್ತದೆ. 12% CAGR ನಲ್ಲಿ, ನಿಮ್ಮ ಅಂದಾಜು ಆದಾಯವು ಗಮನಾರ್ಹವಾಗಿ ₹6.80 ಲಕ್ಷಕ್ಕೆ ಹೆಚ್ಚಾಗುತ್ತದೆ, ಮತ್ತು ನಿಮ್ಮ ಅಂತಿಮ ನಿಧಿ ₹7.70 ಲಕ್ಷವನ್ನು ಮೀರುತ್ತದೆ.
Disclaimer: The write-up is just for information purposes, and is not a recommendation to buy, sell or hold. We have not done fundamental or technical analysis and have no opinion on article mentioned. Neither, the author nor Greynium Information Technologies should be held liable for any losses. Please consult a professional advisor.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications