ಇತ್ತೀಚೆಗೆ ಡೀಪ್‌ಫೇಕ್‌ಗಳ ಹಾವಳಿ ಹೆಚ್ಚಾಗಿದೆ. ಕ್ಷುಲ್ಲಕ ಕಾರಣಗಳಿಗೆಲ್ಲಾ ತಂತ್ರಜ್ಞಾನ ಬಳಸಿಕೊಂಡು, ಮುಖಭಂಗವಾಗುವಂತೆ ಮಾಡಲಾಗುತ್ತಿದೆ. ಡೀಪ್ ಫೇಕ್‌ಗಳ ಮೂಲಕ ಮಾನ ಹರಾಜು ಮಾಡುವ ಕೆಲಸಗಳು ಹೆಚ್ಚಾಗಿದ್ದು, ಅಮಾಯಕರು ಹೆದರಿ ಕೂರುವ ಪರಿಸ್ಥಿತಿ ಎದುರಾಗಿದೆ. ಸಾಮಾನ್ಯ ವರ್ಗದವರಲ್ಲದೇ ದೊಡ್ಡ ದೊಡ್ಡ ಸ್ಥಾನದಲ್ಲಿರುವವರಿಗೂ ಈ ಡೀಪ್ ಫೇಕ್ ಒಂದು ಮಾರಕವಾಗಿತ್ತು. ಉದಾಹರಣೆಗೆ ನಟಿ ರಶ್ಮಿಕಾ ಮಂದಣ್ಣ, ಕತ್ರಿನಾ ಕೈಫ್‌ರಂತಹ ನಟಿಯರಿಗೂ ಈ ಡೀಪ್ ಫೇಕ್ ದೆವ್ವ ಬಿಡಲಿಲ್ಲ. ಅವರ ಮುಖಕ್ಕೆ ಮಸಿ ಬಳಿಯಲು, ಮಾನ ಹರಾಜು ಹಾಕಲು ಅವರ ಫೋಟೋಗಳನ್ನು ಕೆಟ್ಟ ಕೆಟ್ಟದಾಗಿ ಎಡಿಟ್ ಮಾಡಿದ್ದರು. ಇಂಥಾ ಚಟುವಟಿಕೆಗಳನ್ನು ಗಮನಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಒಂದು ಎಚ್ಚರಿಕೆ ನೀಡಿದೆ.

ಹೌದು, ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚುತ್ತಿರುವ ಡೀಪ್‌ಫೇಕ್ ವಿಡಿಯೋಗಳನ್ನು ಗಮನಿಸಿದ ಎಸ್‌ಬಿಐ, ತನ್ನ ಗ್ರಾಹಕರು ಹಾಗೂ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ. ಹೂಡಿಕೆ ಯೋಜನೆಗಳು ಪ್ರಾರಂಭಿಸುತ್ತೇವೆ ಅಥವಾ ಅನುಮೋದಿಸುತ್ತೇವೆ ಎಂದು ಸುಳ್ಳು ಮಾಹಿತಿ ಹರಡುತ್ತಿವೆ. ಅವುಗಳನ್ನು ಎಂದಿಗೂ ನಂಬಬೇಡಿ. ಈ ವೀಡಿಯೊಗಳು SBIನ ಉನ್ನತ ನಿರ್ವಹಣೆಯನ್ನು ತಪ್ಪಾಗಿ ತೋರಿಸುತ್ತವೆ ಎಂದು ಕಿಡಿ ಕಾರಿದೆ ಎಸ್‌ಬಿಐ ಸಂಸ್ಥೆ. ಅಲ್ಲದೇ ಎಸ್‌ಬಿಐ ಇಂತಹ ಮೋಸದ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಂಬುವುದಿಲ್ಲ ಎಂದು ತಿಳಿಸಿದೆ. ಹಾಗೂ ಯಾವುದೇ ಆಕರ್ಷಕ ಹೂಡಿಕೆ ಅಥವಾ ಹಣಕಾಸು ಯೋಜನೆಗೆ ಮರು ವಿಚಾರಣೆ ಮಾಡದೇ ನಂಬಬೇಡಿ. ಅಧಿಕೃತ ಎಸ್‌ಬಿಐ ಮೂಲಗಳನ್ನು ಮಾತ್ರ ನಂಬಿ ಎಂದು, ತನ್ನ X ಖಾತೆ ಮೂಲಕ ಎಚ್ಚರಿಕೆ ನೀಡಿದೆ.
SBI ಪೋಸ್ಟ್‌ನಲ್ಲಿ ಇರುವುದೇನು..?
ಡೀಪ್‌ಫೇಕ್‌ಗ ವಿಡಿಯೋಗಳಿಂದ ಎಚ್ಚರಿಕೆಯಿಂದ ಇರಿ ಎಂದಿರುವ ಎಸ್‌ಬಿಐ, ಸಾಮಾಜಿಕ ಮಾಧ್ಯಮಗಳಲ್ಲಿ ಡೀಪ್‌ಫೇಕ್ ವೀಡಿಯೊಗಳು ಹಬ್ಬುತ್ತಿವೆ. ಈ ವೀಡಿಯೊಗಳು SBI ಉನ್ನತ ನಿರ್ವಹಣೆಯನ್ನು ತಪ್ಪಾಗಿ ತೋರಿಸುತ್ತವೆ. SBI ಈ ರೀತಿಯ ಯಾವುದೇ ಯೋಜನೆಗಳನ್ನು ಅನುಮೋದಿಸಿಲ್ಲ ಅಥವಾ ಬೆಂಬಲಿಸುವುದಿಲ್ಲ. ತಾಂತ್ರಿಕ ಪರಿಕರಗಳ ನೆರವಿನಿಂದ ತಯಾರಿಸಲಾದ ಈ ಡೀಪ್‌ಫೇಕ್ ವೀಡಿಯೊಗಳು ಜನರನ್ನು ಮೋಸಗೊಳಿಸಲು ಪ್ರಯತ್ನಿಸುತ್ತಿವೆ. SBI ಉನ್ನತ ನಿರ್ವಹಣೆಯನ್ನು ತೋರಿಸುತ್ತಾ, ಸುಳ್ಳು ಹೂಡಿಕೆ ಯೋಜನೆಗಳಲ್ಲಿ ಹಣ ಹೂಡಲು ಪ್ರೇರೇಪಿಸುತ್ತಿವೆ. SBI ಇಂತಹ ಯಾವುದೇ ಯೋಜನೆಗಳನ್ನು ಅನುಮೋದಿಸಿರುವುದಿಲ್ಲ. ಯಾವುದೇ ಹೂಡಿಕೆ ಮಾಡಲು ಅಥವಾ ಹಣಕಾಸು ಸೇವೆಗಳ ಬಗ್ಗೆ ಮಾಹಿತಿಗೆ SBIಯ ಅಧಿಕೃತ ವೆಬ್‌ಸೈಟ್ ಅಥವಾ ಶಾಖೆಯನ್ನು ಮಾತ್ರ ನಂಬಿ. ಮೋಸಗಾರರಿಗೆ ಬಲಿ ಆಗಬೇಡಿ ಎಂದು ತಿಳಿಸಲಾಗಿದೆ.
ಈ ಡೀಪ್‌ಫೇಕ್ ವಿಡಿಯೋಗಳು ಆರ್ಟಿಫಿಷಿಯಲ್ ಇಂಟಲಿಜೆನ್ಸ್ ತಂತ್ರಜ್ಞಾನವನ್ನು ಬಳಸಿಕೊಂಡು ರಚನೆಯಾಗುತ್ತವೆ. ಚಿತ್ರಗಳು, ಧ್ವನಿಗಳು ಮತ್ತು ದೃಶ್ಯಗಳನ್ನು ಕುಶಲತೆಯಿಂದ ಜೋಡಿಸಿ, ನಕಲಿ ವಿಡಿಯೋಗಳನ್ನು ತಯಾರಿಸಲಾಗುತ್ತದೆ. ಆದರೆ ಆ ವಿಡಿಯೋಗಳು ವಾಸ್ತವಿಕವಾಗಿ ತೋರುವಂತಹದ್ದೇ ಆಗಿವೆ. ವಂಚಕರು ಈ ತಂತ್ರಜ್ಞಾನವನ್ನು ಪ್ರಮುಖ ವ್ಯಕ್ತಿಗಳು ಮತ್ತು ಸಂಸ್ಥೆಗಳಂತೆ ನಟಿಸಲು ಬಳಸುತ್ತಾರೆ. ನೋಡಲು ನೈಜ ವಿಡಿಯೋಗಳಂತೆ ಸೃಷ್ಟಿ ಮಾಡುವುದರಿಂದ, ಎಂಥವರೂ ಒಮ್ಮೆ ನಂಬಿ ಬಿಡುವಂತೆ ಇರುತ್ತದೆ. ಹೀಗಾಗಿ ಅವರು ಸುಳ್ಳು ಹೂಡಿಕೆ ಯೋಜನೆಗಳು ಅಥವಾ ಅನಧಿಕೃತ ಮಾಹಿತಿಯನ್ನು ಜನರಿಗೆ ನಂಬಿಸುವ ಪ್ರಯತ್ನ ಮಾಡುತ್ತಾರೆ. ಸೈಬರ್ ಅಪರಾಧಿಗಳು ಈ ತಂತ್ರವನ್ನು ಬಳಸಿ ದೊಡ್ಡ ಪ್ರೇಕ್ಷಕರನ್ನು ಮೋಸಗೊಳಿಸಲು ತ್ವರಿತವಾಗಿ ಗುರಿಯಾಗಿಸುತ್ತಿದ್ದಾರೆ.
ಡೀಪ್‌ಫೇಕ್‌ನಿಂದಾದ ಅನಾಹುತಗಳು:
ಈ ಡೀಪ್‌ಫೇಕ್‌ನಿಂದ ಆಗಲೇ ಹೇಳಿದ ಹಾಗೆ ನಟಿ ರಶ್ಮಿಕಾ ಮಂದಣ್ಣ ಹಾಗೂ ಕತ್ರಿನಾ ಕೈಫ್ ಸೇರಿ ಹಲವರನ್ನ ಅಶ್ಲೀಲವಾಗಿ ತೋರಿಸಲಾಗಿತ್ತು. ಈ ತಂತ್ರಜ್ಞಾನ ಕೆಲವೊಮ್ಮೆ ರಾಜಕೀಯ, ಹಣಕಾಸು ಸೇರಿದಂತೆ ಹಲವು ವಿಚಾರಗಳಿಗೆ ದುರ್ಬಳಕೆಯಾಗಿದೆ. ವಿಶ್ವದಾದ್ಯಂತ ಹಲವಾರು ದೇಶಗಳಲ್ಲಿ ನಕಲಿ ವೀಡಿಯೊಗಳ ಮೂಲಕ ರಾಜಕೀಯ ನಾಯಕರಿಗೆ ದುಷ್ಪ್ರಚಾರ ಮಾಡಲಾಗಿದೆ. ಪ್ರಮುಖವಾಗಿ 2020 ಅಧ್ಯಕ್ಷೀಯ ಚುನಾವಣೆಯಲ್ಲಿ ಡೀಪ್‌ಫೇಕ್ ತಂತ್ರಜ್ಞಾನ ಬಳಸಿ, ಮತದಾರರನ್ನು ಗೊಂದಲಕ್ಕೀಡು ಮಾಡಲು ನಕಲಿ ರಾಜಕೀಯ ಭಾಷಣಗಳು ಮತ್ತು ಸಂದೇಶಗಳು ಹರಡಲಾಯಿತು. 2023ರಲ್ಲಿ ಹೋಂಗ್‌ಕೋಂಗ್ ಬ್ಯಾಂಕ್ ಡೀಪ್‌ಫೇಕ್ ಹ್ಯಾಕ್ ಆಗಿತ್ತು. ಆ ಬ್ಯಾಂಕ್‌ನ CEO ಧ್ವನಿಯನ್ನು ನಕಲಿ ಮಾಡಿ 35 ಮಿಲಿಯನ್ ಡಾಲರ್‌ಗಳ ಹಗರಣ ನಡೆಸಲಾಯಿತು. ದೊಡ್ಡ ಸಂಸ್ಥೆಗಳ ನಕಲಿ ವೀಡಿಯೊಗಳಿಂದ ಜನರನ್ನು ಮೋಸಗೊಳಿಸಿ ಹಣ ಹೂಡಿಕೆ ಮಾಡಲು ಪ್ರೇರೇಪಿಸಲಾಗಿದೆ.
ಇದಿಷ್ಟೇ ಅಲ್ಲ 2018ರಲ್ಲಿ ಈ ಡೀಪ್‌ಫೇಕ್‌ನಿಂದ, ಮಾಜಿ ಅಮೆರಿಕಾದ ಅಧ್ಯಕ್ಷ ಒಬಾಮಾ ಅವರ ನಕಲಿ ವೀಡಿಯೊ ವೈರಲ್ ಆಯಿತು. ಎಲನ್ ಮಸ್ಕ್ ಅವರ ನಕಲಿ ವೀಡಿಯೊ ಬಳಸಿ ಕ್ರಿಪ್ಟೋ ಹೂಡಿಕೆ ಕಳಪೆತನಕ್ಕೆ ಬಳಸಲಾಯಿತು. ಇಂತಹ ಸಾಕಷ್ಟು ಅನಾಹುತಗಳು ಡೀಪ್‌ಫೇಕ್‌ನಿಂದ ಆಗಿದೆ. ಹೀಗಾಗಿ ಗ್ರಾಹಕರು ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications