ಕ್ರೆಡಿಟ್ ಕಾರ್ಡ್ ಬಳಕೆದಾರರ ಸಂಖ್ಯೆ ಹೆಚ್ಚುತ್ತಿರುವ ಬೆನ್ನಲ್ಲೆ ಕ್ರೆಡಿಟ್ ಕಾರ್ಡ್ ವಂಚಕರು ಕೂಡ ಹೆಚ್ಚಾಗ್ತಿದ್ದಾರೆ. ಈ ಡಿಜಿಟಲ್ ಯುಗದಲ್ಲಿ ಸೈಬರ್ ವಂಚಕರ ಜೊತೆಜೊತೆಗೆ ಕ್ರೆಡಿಟ್ ಕಾರ್ಡ್ ವಂಚಕರು ಕೂಡ ಹೆಚ್ಚಾಗ್ತಿದ್ದಾರೆ. ಹಾಗೆ ಕ್ರೆಡಿಟ್ ಮಿತಿಗಳನ್ನ ಹೆಚ್ಚಿಸುತ್ತೇವೆ, ಹಾಗೆ ಉತ್ತಮ ಕ್ರೆಡಿಟ್ ಕಾರ್ಡ್ ಆಫರ್‌ಗಳನ್ನ ನೀಡುತ್ತೇವೆ ಎಂದು ಹೇಳಿ ವಂಚಿಸುವವರು ಈಗ ಹೆಚ್ಚಾಗ್ತಿದ್ದಾರೆ.
ಇತ್ತೀಚೆಗೆ ನೋಯ್ಡಾದಲ್ಲಿ ಇಂತದ್ದೇ ಒಂದು ಪ್ರಕರಣ ಬೆಳಕಿಗೆ ಬಂದಿದ್ದು, ಬ್ಯಾಂಕ್ ಅಧಿಕಾರಿಗಳಂತೆ ನಟಿಸಿ ವಂಚಿಸುತ್ತಿದ್ದ ವಂಚಕರನ್ನ ಪೊಲೀಸರು ಪತ್ತೆ ಹಚ್ಚಿದ್ದಾರೆ. ಕಾರ್ಡ್ ಮಿತಿಯನ್ನು ಹೆಚ್ಚಿಸುತ್ತೇವೆ ಎಂದು ಹೇಳಿ ಜನರ ಸೂಕ್ಷ್ಮ ಮಾಹಿತಿಗಳನ್ನ ಕದ್ದು ಜನ್ನ ವಂಚಿಸುತ್ತಿದ್ದರು ಎಂದು ತಿಳಿದುಬಂದಿದೆ.

ಈ ಸ್ಕ್ಯಾಮರ್‌ಗಳು ಕ್ರೆಡಿಟ್ ಕಾರ್ಡ್ ಹೊಂದಿರುವವರನ್ನ ದಾಳವಾಗಿ ಮಾಡಿಕೊಂಡು ಅವರ ಹಣನ್ನ ದೋಚಲು ಮುಂದಾಗಿದ್ದಾರೆ. ನಾವು ನಿಮ್ಮ ಬ್ಯಾಂಕ್‌ನಿಂದ ಕರೆ ಮಾಡಿದ್ದೇವೆ, ನಿಮ್ಮ ಕ್ರೆಡಿಟ್ ಕಾರ್ಡ್ ಮಿತಿಯನ್ನ ಹೆಚ್ಚಳ ಮಾಡುತ್ತೇವೆ ಜೊತೆಗೆ ಉತ್ತಮ ಆಫರ್‌ಗಳನ್ನ ನೀಡುತ್ತೇವೆ ಎಂದು ಜನರನ್ನ ನಂಬಿಸುತ್ತಾರೆ. ನಂತರ ಕ್ರೆಡಿಟ್ ಕಾರ್ಡ್ ವಿವರಗಳನ್ನ ಪಡೆದು ಜನರನ್ನ ವಂಚಿಸಲು ನೋಡುತ್ತಾರೆ. ಅವರು ನೀಡುವ ಕೊಡುಗೆಗಳು ಅಧಿಕೃತವಾಗಿ ಬ್ಯಾಂಕ್‌ನವರೇ ನೀಡಿದ್ದಾರೆಂದು ತಿಳಿದು ಅಮಾಯಕ ಜನರು ಬಲಯಾಗುತ್ತಾರೆ.
ವಂಚಕರು ಜನರನ್ನ ವಂಚಿಸಲು ಫಿಶಿಂಗ್ ವಿಧಾನವನ್ನ ಬಳಕೆ ಮಾಡುತ್ತಾರೆ. ಅವರು ್ಯಾಂಕಿಂಗ್ ಪೋರ್ಟಲ್‌ಗಳಂತೇ ಕಾಣುವ ನಕಲಿ ವೆಬ್‌ಸೈಟ್‌ಗಳ ಲಿಂಕ್‌ಗಳನ್ನ ಜನರಿಗೆ ಕಳಿಸುತ್ತಾರೆ. ಇಂತಹ ಸೈಟ್‌ಗಳು ಬಹಳ ಎಚ್ಚರಿಕೆಯ ಕ್ರೆಡಿಟ್ ಕಾರ್ಡ್ ಬಳಕೆದಾರರನ್ನು ಕೂಡ ಮೊಸಗೊಳಿಸುವಂತಿರುತ್ತವೆ. ಇಂತ ಪೋರ್ಟಲ್‌ಗಳನ್ನ ಬಳಕೆ ಮಾಡಿಕೊಂಡು ಜನರನ್ನ ತಮ್ಮ ಜಾಲದಲ್ಲಿ ಬೀಳಿಸಿಕೊಳ್ಳುತ್ತಾರೆ. ಹೀಗಾಗಿ ಇಂತಹ ವಂಚನಗಳಿಂದ ಜನರು ಸಾಕಷ್ಟು ಎಚ್ಚರಿಕೆಯನ್ನ ವಹಿಸಬೇಕು.
ಒಮ್ಮೆ ಇದೇ ರೀತಿ ಒಬ್ಬ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಇಂತದ್ದೇ ಒಂದು ವೆಬ್‌ಸೈಟ್ ಲಿಂಕ್ ಕಳುಹಿಸಿ ಲಿಂಕ್ ಮೂಲಕ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವಂತ ಸೂಚಿಸಲಾಯಿತು. ನಂತರ ಈ ಅಪ್ಲಿಕೇಶನ್‌ನಲ್ಲಿ ಕ್ರೆಡಿಟ್ ಸಂಖ್ಯೆಗಳು, ಇಮೇಲ್ ವಿಳಾಸಗಳು, PAN ಮತ್ತು ಆಧಾರ್ ಕಾರ್ಡ್ ವಿವರಗಳು, ಕ್ರೆಡಿಟ್ ಕಾರ್ಡ್ ಮುಕ್ತಾಯ ದಿನಾಂಕಗಳು, CVV ಸಂಖ್ಯೆಗಳು ಮತ್ತು ಹೆಚ್ಚಿನವುಗಳನ್ನು ಸೇರಿದಂತೆ ಸೂಕ್ಷ್ಮವಾದ ವೈಯಕ್ತಿಕ ಮಾಹಿತಿಯನ್ನು ತುಂಬಲು ಸೂಚನೆ ನೀಡಿದ್ರು. ನಂತರ ಬಳಕೆದಾರರು ಈ ಎಲ್ಲಾ ಪ್ರಕ್ರಿಯೆಯನ್ನ ಪೂರ್ಣಗೊಳಿಸಿದ ನಂತರ ವಂಕರು ಅವರ ಎಲ್ಲಾ ಮಾಹಿತಿಗಳನ್ನ ಪಡೆದುಕೊಂಡು ಕ್ರೆಡಿಟ್ ಕಾರ್ಡ್ ಬಳಕೆದಾರರ ಖಾತೆಯ ಪ್ರವೇಶವನ್ನ ಪಡೆದರು
ನಂತರ ಅವರ ಎಲ್ಲಾ ಮಾಹಿತಿಯನ್ನ ಬಳಸಿಕೊಂಡು, ವಂಚಕರು ವಿವಿಧ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಿಂದ ದುಬಾರಿ ಮೊಬೈಲ್ ಫೋನ್‌ಗಳು, ಚಿನ್ನ ಮತ್ತು ಬೆಳ್ಳಿ ನಾಣ್ಯಗಳಂತಹ ಹೆಚ್ಚಿನ ಮೌಲ್ಯದ ಖರೀದಿಗಳನ್ನು ಮಾಡಲು ಶುರುಮಾಡಿದ್ದರು. ಇನ್ನೂ ಈ ವಹಿವಾಟುಗಳಿಗೆ ತಮ್ಮ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಲಾಗುತ್ತಿದೆ ಎಂದ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಬಹಳ ತಡವಾಗಿ ತಿಳಿದಿತ್ತು.
ನಂತರ ಕ್ರೆಡಿಟ್ ಕಾರ್ಡ್ ಬಳಕೆದಾರರು ಈ ವಂಚನೆಯ ಕುರಿತು ಪೊಲೀಸರಿಗೆ ಮಾಹಿತಿಯನ್ನ ನೀಡಿದ್ದು, ಪೊಳೀಸರು ತನಿಖೆ ನಡೆಸಿ ವಂಚಕರನ್ನ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಗ್ಯಾಂಗ್‌ನ ಆರು ಸದಸ್ಯರನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ, ಈ ವಂಚನೆಯ ಹಿಂದಿನ ಮಾಸ್ಟರ್‌ಮೈಂಡ್, ನಕಲಿ ಬ್ಯಾಂಕಿಂಗ್ ವೆಬ್‌ಸೈಟ್ ಮತ್ತು ಅಪ್ಲಿಕೇಶನ್ ಅನ್ನು ರಚಿಸಿದ್ದಾನೆ ಎನ್ನಲಾಗ್ತಿದೆ. ಆದ್ರೆ ಪೊಲೀಸರ ಕೈಗೆ ಮಾತ್ರ ಇನ್ನೂ ಸಿಕ್ಕಿಲ್ಲ ಎಂಬ ಮಾಹಿತಿ ಇದೆ.
ಇಂತಹ ವಂಚನೆಗಳು ಹೆಚಚಾಗುತ್ತಿರುವ ಹಿನ್ನೆಲೆ ಕ್ರೆಡಿಟ್ ಕಾರ್ಡ್ ಹೊಂದಿರುವವರು ಹೆಚ್ಚು ಚ್ಚರಿಕೆಯಿಂದರಬೇಕು. ಹಾಗೆ ಕ್ರೆಡಿಟ್ ಮಿತಿಗಳನ್ನು ಹೆಚ್ಚಿಸಲು ನೀಡುವ ಕೊಡುಗೆಗಳ ಬಗ್ಗೆ ಜಾಗರೂಕರಾಗಿರಿ ಎಂದು ಪೊಲೀಸರು ತಿಳಿಸಿದ್ದಾರೆ. ಅಧಿಕೃತ ಬ್ಯಾಂಕ್‌ನೊಂದಿಗೆ ನೇರವಾಗಿ ಅಂತಹ ಕೊಡುಗೆಗಳನ್ನು ಬಗ್ಗೆ ಪರಿಶೀಲಿಸಿ ಮತ್ತು ಅಪರಿಚಿತ ಮೂಲಗಳಿಂದ ಬಂದಂತ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.
ಕ್ರೆಡಿಟ್ ಕಾರ್ಡ್ ವಂಚನೆಗಳಿಂದ ಪಾರಾಗುವುದು ಹೇಗೆ?
ಕ್ರೆಡಿಟ್ ಕಾರ್ಡ್ ವಂಚನೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು, ಜಾಗರೂಕರಾಗಿರಲು ಮತ್ತು ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳುವುದು ಮುಖ್ಯವಾಗಿದೆ. ಅನಧಿಕೃತ ವಹಿವಾಟುಗಳಿಗಾಗಿ ನಿಮ್ಮ ಕ್ರೆಡಿಟ್ ಕಾರ್ಡ್ ಹೇಳಿಕೆಗಳನ್ನು ಯಾವಾಗಲೂ ಪರಿಶೀಲನೆ ಮಾಡಿ ಮತ್ತು ಯಾವುದೇ ಅನುಮಾನಾಸ್ಪದ ಚಟುವಟಿಕೆಯನ್ನು ತಕ್ಷಣವೇ ವರದಿ ಮಾಡಿ. ನಿಮ್ಮ ಕಾರ್ಡ್ ವಿವರಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳುವಾಗ ಜಾಗರೂಕರಾಗಿರಿ. URL ನಲ್ಲಿ https ಮತ್ತು ಪ್ಯಾಡ್‌ಲಾಕ್ ಚಿಹ್ನೆಯನ್ನು ಹುಡುಕುವ ಮೂಲಕ ವೆಬ್‌ಸೈಟ್‌ಗಳು ಸುರಕ್ಷಿತವಾಗಿವೆ ಎಂದು ಖಚಿತಪಡಿಸಿಕೊಳ್ಳಿ.
ನಿಮ್ಮ ಕಾರ್ಡ್ ಮಾಹಿತಿಯನ್ನು ವಿನಂತಿಸುವ ಅಪೇಕ್ಷಿಸದ ಇಮೇಲ್‌ಗಳು, ಸಂದೇಶಗಳು ಅಥವಾ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡುವುದನ್ನು ತಪ್ಪಿಸಿ. ಯಾವುದೇ ವಿವರಗಳನ್ನು ಹಂಚಿಕೊಳ್ಳುವ ಮೊದಲು ಯಾವಾಗಲೂ ಮೂಲವನ್ನು ಪರಿಶೀಲಿಸಿ. ನಿಮ್ಮ ಪಾಸ್‌ವರ್ಡ್‌ಗಳನ್ನು ನಿಯಮಿತವಾಗಿ ನವೀಕರಿಸಿ ಮತ್ತು ಸಾಧ್ಯವಿರುವಲ್ಲಿ ಎರಡು ಅಂಶಗಳ ದೃಢೀಕರಣವನ್ನು ಸಕ್ರಿಯಗೊಳಿಸಿ. ಹೆಚ್ಚುವರಿಯಾಗಿ, ಪ್ರತಿ ವಹಿವಾಟಿಗೆ ನಿಮ್ಮ ಬ್ಯಾಂಕ್‌ನೊಂದಿಗೆ SMS ಅಥವಾ ಇಮೇಲ್ ಎಚ್ಚರಿಕೆಗಳನ್ನು ಹೊಂದಿಸಿ. ಎಲ್ಲಾ ಖರೀದಿಗಳನ್ನು ನೈಜ ಸಮಯದಲ್ಲಿ ಟ್ರ್ಯಾಕ್ ಮಾಡಲು ಮತ್ತು ಯಾವುದೇ ಮೋಸದ ಚಟುವಟಿಕೆಗಳನ್ನು ಪತ್ತೆಹಚ್ಚಲು ಇದು ನಿಮಗೆ ಸಹಾಯ ಮಾಡುತ್ತದೆ. ತಿಳುವಳಿಕೆ ಮತ್ತು ಜಾಗರೂಕತೆಯಿಂದ ಉಳಿಯುವ ಮೂಲಕ, ನೀವು ವಂಚನೆಗಳಿಗೆ ಬಲಿಯಾಗುವ ಅಪಾಯವನ್ನು ಕಡಿಮೆ ಮಾಡಬಹುದು.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications