ಬದುಕಿನಲ್ಲಿ ಆರ್ಥಿಕವಾಗಿ ಯಶಸ್ಸು ಗಳಿಸಲು ಕೇವಲ ಉನ್ನತ ವಿದ್ಯಾಭ್ಯಾಸ ಮಾತ್ರ ಮಾನದಂಡವಲ್ಲ, ಕಠಿಣ ಪರಿಶ್ರಮ ಹಾಗೂ ಮುಂದೆ ಬರುವ ಛಲವೊಂದಿದ್ದರೆ ಏನೂ ಬೇಕಾದರೂ ಸಾಧಿಸಬಹುದು ಎಂಬ ಮಾತಿಗೆ ನಮಗೆ ದಿನಂಪ್ರತಿ ಎಂಬಂತೆ ಉದಾಹರಣೆ ಲಬಿಸುತ್ತಲೇ ಇರುತ್ತದೆ.
ಅಲ್ಲದೆ ಹೆಚ್ಚಿನ ಸ್ಥಾರ್ಟಪ್ ಅಥವಾ ನವೋದ್ಯಮಗಳನ್ನು ಆರಂಬಿಸಿದವರ ಪೈಕಿ ಹಲವರು ಕಾಲೇಜು ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ, ಉದ್ಯಮ ಆರಂಬಿಸಿದವರು ಎಂಬ ನಾವೀಗಾಗಲೇ ತಿಳಿದುಕೊಂಡಿದ್ದೇವೆ.

ಮುಕೇಶ್ ಅಂಬಾನಿ, ಬಿಲ್ ಗೇಟ್ಸ್ ಮತ್ತು ಗೌತಮ್ ಅದಾನಿ ಅವರಂತಹ ಬಿಲಿಯನೇರ್‌ಗಳು ತಮ್ಮ ಅಸಾಧಾರಣ ಪ್ರತಿಭೆ ಮತ್ತು ಕಠಿಣ ಪರಿಶ್ರಮದಿಂದ ಮುಂದೆ ಬಂದವರು. ಸದ್ಯದ ಮಟ್ಟಿಗೆ ವ್ಯಾಪಾರ ಜಗತ್ತನ್ನು ಆಳುತ್ತಿರುವ ಇವರೆಲ್ಲರೂ ಉನ್ನತ ವಿದ್ಯಾಭ್ಯಾಸ ಅಥವಾ ಯಾವುದೇ ಜಗತ್ತಿನ ಟಾಪ್ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದವರಲ್ಲ.
ಕೇವಲ ಅನುಭವ ಹಾಗೂ ಪರಿಶ್ರಮದಿಂದ ಮುಂದೆ ಬಂದವರು. ಸದ್ಯ ಈ ಮಾತಿಗೆ ನಮಗೆ ಅನೇಕ ಉದಾಹರಣೆಗಳು ಲಬಿಸುತ್ತಲೇ ಇದ್ದು, ಇದೀಗ ಮತ್ತೊಬ್ಬ ಯಶಸ್ವಿ ಉದ್ಯಮಿಯ ಬಗ್ಗೆ ನಾವು ತಿಳಿದುಕೊಳ್ಳಲೇಬೇಕಿದೆ. ಇನ್ನು ತ್ರಿಶ್ನೀತ್ ಅರೋರಾ ಎಂಬ ಯಶಸ್ವಿ ಉದ್ಯಮಿಯ ಬಗ್ಗೆ ನಾವು ಇಲ್ಲಿ ಅರಿಯೋಣ. ತ್ರಿಶ್ನೀತ್ ಕೂಡ ಶಾಲಾ ವಿದ್ಯಾಭ್ಯಾಸವನ್ನು ಅರ್ಧದಲ್ಲೇ ತೊರೆದಿದ್ದರೂ ಅವರ ವ್ಯಾಪಾರ ಚಾಣಾಕ್ಷತೆಯಿಂದ ಇದೀಗ ಅವರು ಯಶಸ್ವಿ ಉದ್ಯಮಿಯಾಗಲು ನೆರವಾಯಿತು.
ಯಾರಿವರು ತ್ರಿಶ್ನೀತ್? ಅವರ ಉದ್ಯಮದ ಬಗ್ಗೆ ಒಂದಿಷ್ಟು...
ಇನ್ನು ತ್ರಿಶ್ನೀತ್ ಬಗ್ಗೆ ಹೇಳುವುದಾದರೆ TAC ಸೆಕ್ಯುರಿಟಿಯ ಸ್ಥಾಪಕ ಮತ್ತು CEO ಆಗಿದ್ದಾರೆ. ತ್ರಿಶ್ನೀತ್ ಅರೋರಾ ಅವರು ಹುರುನ್ ಇಂಡಿಯಾ ರಿಚ್ ಲಿಸ್ಟ್ 2024 ರಲ್ಲಿ ಸ್ಥಾನ ಪಡೆದ ಅತ್ಯಂತ ಕಿರಿಯ ಭಾರತೀಯರಲ್ಲಿ ಒಬ್ಬರಾಗಿದ್ದಾರೆ. TAC ಸೆಕ್ಯುರಿಟಿಯು ರೂ 1,100 ಕೋಟಿ ಮೌಲ್ಯವನ್ನು ಹೊಂದಿದ್ದು, ಇದು ಸೈಬರ್ ಸುರಕ್ಷತೆ ಮತ್ತು ಅಪಾಯ ಮತ್ತು ದುರ್ಬಲತೆ ನಿರ್ವಹಣಾ ಸಂಸ್ಥೆಯಾಗಿದೆ.
19 ರ ಹರೆಯದಲ್ಲೇ ಉದ್ಯಮ ಅರಂಭಿಸಿದ್ದ ತ್ರಿಶ್ನೀತ್!
ತ್ರಿಶ್ನೀತ್ ಬಗ್ಗೆ ಕುತೂಹಲಕಾರಿ ವಿಚಾರದ ಬಗ್ಗೆ ತಿಳಿಸಲೇ ಬೇಕಿದೆ. ಉದ್ಯಮ ಸ್ಥಾಪಿಸಲು ವಯಸ್ಸಿನ ಹಂಗಿಲ್ಲ ಎಂಬ ಮಾತು ನಿಜವಾದರೂ ಸಾಮಾನ್ಯವಾಗಿ ಹದಿಹರೆಯದಲ್ಲಿ ಉದ್ಯಮಿಯಾಗುವುದು ಬಹುತೇಕ ಕಡಿಮೆಯೇ ಎನ್ನಬಹುದು. ಆದರೆ ಇದೇ ತ್ರಿಶ್ನೀತ್ ಕೇವಲ 19ರ ಹರೆಯದಲ್ಲೇ ಚಂಡೀಗಢದಲ್ಲಿ ಕಂಪನಿಯನ್ನು ಪ್ರಾರಂಭಿಸಿದ್ದರು. ಸದ್ಯ ಇವರ TAC ಸೆಕ್ಯುರಿಟಿ ಸಂಸ್ಥೆಯ ಆದಾಯ ರೂ 11.4 ಕೋಟಿಗಳಷ್ಟಿದ್ದು, ಏಪ್ರಿಲ್ 2024 ರಲ್ಲಿ NSE ಎಮರ್ಜ್‌ನಲ್ಲಿ ಪಟ್ಟಿಮಾಡಲ್ಪಟ್ಟಿದೆ.
ತ್ರಿಶ್ನೀತ್ ಉದ್ಯಮದ ಪಯಣ ಬಗ್ಗೆ ತಿಳಿದುಕೊಳ್ಳೋಣ
ಫೋರ್ಬ್ಸ್ ವರದಿಯ ಪ್ರಕಾರ, ತ್ರಿಶ್ನೀತ್ ಅರೋರಾ 12 ನೇ ತರಗತಿಯಲ್ಲಿದ್ದ ವೇಳೆ ಶಾಲೆಯನ್ನು ಬಿಟ್ಟಿದ್ದರು. ಉನ್ನತ ವಿದ್ಯಾಭ್ಯಾಸದ ಜ್ಞಾನ ಹೊಂದಿರದಿದ್ದರೂ ತ್ರಿಶ್ನೀತ್ ಅವರಿಗೆ ತಂತ್ರಜ್ಞಾನದ ವಿಚಾರದಲ್ಲಿ ಮಾತ್ರ ಅಪಾರ ಜ್ಞಾನ ಹೊಂದಿದ್ದರು.
ಹಾಗಾಗಿ ತಂತ್ರಜ್ಞಾನದಲ್ಲಿ ಇರುವ ಅಪಾರ ಆಸಕ್ತಿ ಹಾಗೂ ಜ್ಞಾನದ ಹಿನ್ನೆಲೆಯಲ್ಲಿ ಸದ್ಯ ತ್ರಿಶ್ನೀತ್ ಅವರನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ. ಪರಿಣಾಮ ವಯಸ್ಸಿನಲ್ಲಿ TAC ಭದ್ರತೆಯನ್ನು ಪ್ರಾರಂಭಿಸಲು ಕಾರಣವಾಯಿತು. 23 ನೇ ವಯಸ್ಸಿನಲ್ಲಿ, ಅವರು ಭಾರತದ ಅತ್ಯಂತ ಕಿರಿಯ ನೈತಿಕ ಹ್ಯಾಕರ್‌ಗಳಲ್ಲಿ ಒಬ್ಬರಾಗಿ ಗುರುತಿಸಲ್ಪಟ್ಟರು.
GQ ಇಂಡಿಯಾದ 2017 ರ ಅತ್ಯಂತ ಪ್ರಭಾವಶಾಲಿ 50 ಯುವ ಭಾರತೀಯರಲ್ಲಿ ಅರೋರಾ ಕೂಡ ಸೇರಿಕೊಂಡಿದ್ದಾರೆ ಎಂಬುದನ್ನು ಗಮನಾರ್ಹ ಸಂಗತಿ. ಎಥಿಕಲ್ ಹ್ಯಾಕಿಂಗ್ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದ ತ್ರಿಶ್ನೀತ್ 2007 ರಲ್ಲಿ ತಂದೆಯ ಕಂಪೆನಿಯನ್ನೇ ಹ್ಯಾಕ್ ಮಾಡಲು ಯತ್ನಿಸಿದ್ದರು ಎಂಬ ವಿಚಾರವನ್ನು ಸ್ವತಹ ಅವರೇ ಹಂಚಿಕೊಂಡಿದ್ದಾರೆ. ತೆರಿಗೆ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದ ತಂದೆಯ ಸಂಸ್ಥೆಯನ್ನೇ ಹ್ಯಾಕ್ ಮಾಡಲು ತ್ರಿಶ್ನೀತ್ ಯತ್ನಿಸಿದ್ದರು. ನಿಧಾನವಾಗಿ ಇದೇ ಆಸಕ್ತಿ ಮುಂದುವರೆಸಿದ ತ್ರಿಶ್ನೀತ್ ಸದ್ಯ TAC ಸೆಕ್ಯುರಿಟಿ ಎಂಬ ಸಂಸ್ಥೆ ಕಟ್ಟಿ ಬೆಳೆಸಿದ್ದಾರೆ.
ದೊಡ್ಡ ದೊಡ್ಡ ಸಂಸ್ಥೆಗೆ ಸೆಕ್ಯೂರಿಟಿ ಒದಗಿಸುವ ತ್ರಿಶ್ನೀತ್ ಸಂಸ್ಥೆ
ತ್ರಿಶ್ನೀತ್ ಅರೋರಾ ಅವರ ಟಿಎಸಿ ಸೆಕ್ಯುರಿಟಿಯಲ್ಲಿ ಸದ್ಯ ಹೆಚ್ಚಿನ ಸಂಖ್ಯೆ ಗ್ರಾಹಕರನ್ನು ಹೊಂದಿದ್ದು, ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್, ಅಮುಲ್, ಹಾಗೆಯೇ ಬಿಎಸ್‌ಇ (ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್) ಮತ್ತು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಸಿಬಿಐ) ಮುಂತಾದ ದೊಡ್ಡ ದೊಡ್ಡ ಸಂಸ್ಥೆಗಳಿಗೆ ಸಾಫ್ಟ್ ವೇರ್ ಸೆಕ್ಯುರಿಟಿಗಳನ್ನು ತ್ರಿಶ್ನೀತ್ ಒದಗಿಸುತ್ತಿದ್ದಾರೆ.
ಅದೂ ಅಲ್ಲದೆ ಸಂಸ್ಥೆಯ ವೆಬ್‌ಸೈಟ್ ಸೂಚಿಸಿದಂತೆ ಟೆಕ್ ಸಂಸ್ಥೆಯು ಭಾರತ, ಯುಎಸ್‌ಎ, ಯುಕೆ ಮತ್ತು ಕೆನಡಾ ಸೇರಿದಂತೆ 15 ದೇಶಗಳಲ್ಲಿ 150 ಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿದೆ. ಹಾಗಾಗಿ ವಿದ್ಯಾಭ್ಯಾಸ ಅರ್ಧದಲ್ಲೇ ಮೊಟಕುಗೊಳಿಸಿದರೂ ಚಾಣ್ಯಾಕ್ಷತೆಯಿಂದ ಯಾವ ರೀತಿ ಮುಂದೆ ಬರಬಹುದು ಎಂಬುದನ್ನು ತ್ರಿಶ್ನೀತ್ ತೋರಿಸಿಕೊಟ್ಟಿದ್ದಾರೆ.
More From GoodReturns

Silver Rate Today: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ಬೆಲೆ! ಎಷ್ಟಿದೆ ಇಂದಿನ ದರ?

Silver Rate: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Silver Rate Today: ಒಂದೇ ದಿನ 10,000 ಇಳಿಕೆ ಕಂಡ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

LPG Cylinder Shortage Live Updates: ಭಾರತದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ಪಿಎಂ ಮೋದಿ ಮಹತ್ವದ ಸಭೆ

LPG ಪೂರೈಕೆಯಲ್ಲಿ ಕೊರತೆ; ದೇಶದಲ್ಲಿ ಎಲ್ಪಿಜಿ ಉತ್ಪಾದನೆ 10% ಹೆಚ್ಚಳ

Bank Holidays: ಮಾರ್ಚ್ನಲ್ಲಿ ಬ್ಯಾಂಕ್ಗಳಿಗೆ 18 ದಿನ ರಜೆ! ಗ್ರಾಹಕರೇ ಇಲ್ಲಿ ಗಮನಿಸಿ

India Oil: ಇಸ್ರೇಲ್, ಯುಎಸ್ ಮತ್ತು ಇರಾನ್ ನಡುವೆ ವಾರ್! ಭಾರತದ ಕಚ್ಚಾ ತೈಲದ ಮೇಲೆ ಪರಿಣಾಮ ಬೀರಿದ್ದು ಹೇಗೆ?

Market Prediction: ನಾಳೆ ಹೇಗಿರಲಿದೆ ಷೇರು ಮಾರುಕಟ್ಟೆ? ಲಾಭವೋ? ನಷ್ಟವೋ? ಇಲ್ಲಿದೆ ಓದಿ

iPhone EMI: ಐಫೋನ್ EMIನಲ್ಲಿ ತಗೊಳೋದು ಎಷ್ಟು ಸೇಫ್? ಮಾಸಿಕ ಪಾವತಿ ಸುಲಭ, ಆದರೆ ನಿಮ್ಮ ಹಣಕಾಸು ಸುರಕ್ಷಿತವೇ?



Click it and Unblock the Notifications