ಸಂಕ್ರಾಂತಿ ಹಬ್ಬವನ್ನ ದೇಶದ ಅನೇಕ ರಾಜ್ಯದ ಜನರು ವಿಜೃಂಭಣೆಯಿಂದ ಆಚರಣೆ ಮಾಡುತ್ತಾರೆ. ಈ ಹಬ್ಬ ಕರ್ನಾಟಕದ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಈ ಹಬ್ಬವನ್ನ ನಾಡಿನಾದ್ಯಂತ ವಿವಿಧ ರೀತಿಯಲ್ಲಿ ಅದ್ಧೂರಿಯಾಗಿ ಆಚರಣೆ ಮಾಡುತ್ತಾರೆ. ಸಂಕ್ರಾಂತಿ ಹಬ್ಬವನ್ನ ಸುಗ್ಗಿ ಹಬ್ಬ ಎನ್ನುತ್ತಾರೆ. ಇದು ಚಳಿಗಾಲದ ಅಂತ್ಯ ಹಾಗು ವಸಂತಕಾಲದ ಆರಂಭವನ್ನ ಸೂಚಿಸುತ್ತದೆ. ಪ್ರಕೃತಿಗೆ ರೈತ ಕೃತಜ್ಞತೆಯನ್ನ ಸೂಚಿಸುವ ಸಂದರ್ಭ ಇದಾಗಿದೆ. ಹೀಗಾಗಿ ಈ ಹಬ್ಬ ಸಮೃದ್ಧಿಯನ್ನ ಸೂಚಿಸುತ್ತದೆ. ಹಾಗೆ ಈ ಹಬ್ಬವನ್ನ ಹಲವೆಡೆ ಹಲವು ಹೆಸರುಗಳಲ್ಲಿ ಆಚರಣೆ ಮಾಡುತ್ತಾರೆ. ಮಕರ ಸಂಕ್ರಾಂತಿಯು ಕೃಷಿಯ ಮಹತ್ವ ಜೊತೆಗೆ ಆಳವಾದ ಸಾಂಸ್ಕೃತಿಕ ಹಿನ್ನಲೆಯನ್ನ ಹೊಂದಿದೆ.
ಸಂಕ್ರಾಂತಿ ಹಬ್ಬವನ್ನ ಅನೇಕ ರಾಜ್ಯಗಳಲ್ಲಿ ಆಚರಣೆ ಮಾಡುತ್ತಾರೆ. ಆದ್ರೆ ಕೆಲವು ರಾಜ್ಯಗಳಲ್ಲಿ ಕೆಲವು ಹೆಸರುಗಳಿಂದ ಆಚರಿಸಲಾಗುತ್ತದೆ. ಇನ್ನು ಜನವರಿ 14ರಂದು ಸಾಮಾನ್ಯವಾಗಿ ರಜೆ ಇರುತ್ತದೆ. ಶಾಲೆ, ಕಾಲೇಜು, ಕಚೇರಿಗಳಿಗೆ ಹಾಗೆ ಬ್ಯಾಂಕ್‌ಗಳಿಗೆ ಅಂದು ರಜೆ ಇರುತ್ತದೆ. ಇದರ ನಂತರ ಕೂಡ ಶಾಲೆಗಳಿಗೆ ರಜೆ ಇರಲಿದೆಯಾ ಎಂಬ ಗೊಂದಲಗಳಿವೆ. ಆ ಗೊಂದಲಗಳಿಗೆ ಮಾಹಿತಿ ಇಲ್ಲಿದೆ ತಿಳಿಯಿರಿ.

ದೇಶದ ಎಲ್ಲಾ ಭಾಗಗಳಲ್ಲಿ ಈ ಹಬ್ಬವನ್ನ ಆಚರಣೆ ಮಾಡದಿದ್ದರೂ ಕೂಡ ಗುಜರಾತ್, ಮಹಾರಾಷ್ಟ್ರ, ಕರ್ನಾಟಕ ತಮಿಳುನಾಡು, ಆಂಧ್ರಪ್ರದೇಶ ಹಾಗು ತೆಲಂಗಾಣದಲ್ಲಿ ಸಂಕ್ರಾಂತಿಯನ್ನ ಆಚರಿಸುತ್ತಾರೆ. ಇನ್ನು ಗುಜರಾತ್ ಮತ್ತು ಮಹಾರಾಷ್ಟ್ರ ಭಾಗಗಳಲ್ಲಿ ಗಾಳಿಪಟವನ್ನ ಹಾರಿಸಿ ಹಬ್ಬದ ಆಚರಣೆಯನ್ನ ಮಾಡುತ್ತಾರೆ. ಇತ್ತ ಕರ್ನಾಟಕ, ಆಂಧ್ರ ಹಾಗೆ ತೆಲಾಂಗಾಣದಲ್ಲಿ ಮಕರ ಸಂಕ್ರಾಂತಿಯನ್ನ ಎಳ್ಳು, ಬೆಲ್ಲ, ಕಬ್ಬು ಹಂಚುವ ಮೂಲಕ ಆಚರಣೆಯನ್ನ ಮಾಡುತ್ತಾರೆ. ಇನ್ನು ತಮಿಳುನಾಡಿನಲ್ಲಿ ಸಂಕ್ರಾಂತಿಯಂದು ಪೊಂಗಲ್ ಹಬ್ಬವನ್ನ ಆಚರಣೆ ಮಾಡುತ್ತಾರೆ. ಇದು ತಮಿಳುನಾಡಿನಲ್ಲಿ ಆಚರಿಸುವ ದೊಡ್ಡ ಹಬ್ಬ ಇದಾಗಿದೆ.
ಮಕರ ಸಂಕ್ರಾಂತಿಯಂದು ಸೂರ್ಯ ತನ್ನ ಪಥವನ್ನ ಬದಲಾಯಿಸುತ್ತಾನೆ. ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಬದಲಾಗುತ್ತಾನೆ. ಹೀಗಾಗಿ ಇದನ್ನು ಉತ್ತಾರಾಯಣ ಹಬ್ಬ ಎಂದು ಕರೆಯುತ್ತಾರೆ. ಹಿಂದೂ ಧರ್ಮದ ಪ್ರಕಾರ ಸಂಕ್ರಾಂತಿ ಹಬ್ಬಕ್ಕೆ ಸಾಕಷ್ಟು ಮಹತ್ವವಿದೆ. ಈ ಹಬ್ಬಕ್ಕೆ ಪ್ರದೇಶಿಕ ಮಹತ್ವ ಹೆಚ್ಚಿರುವುದರಿಂದ ಈ ಹಬ್ಬಕ್ಕೆ ಸಾಕಷ್ಟು ಮಹತ್ವವನ್ನ ನೀಡಲಾಗುತ್ತದೆ.
ಹೀಗಾಗಗಿ ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು ಗುಜರಾತ್ ಸೇರಿದಂತೆ ದೇಶದ ಅನೇಕ ರಾಜ್ಯಗಳಿಗೆ ರಜೆ ಇದೆ. ಸಂಕ್ರಾಂತಿಯ ನಂತರ ಗುಜರಾತ್ ಮತ್ತು ಮಹಾರಷ್ಟ್ರದಲ್ಲಿ ಕೈಟ್‌ಫೆಸ್ಟ್ ಮಾಡುತ್ತಾರೆ ಹಾಗಾಗಿ ಸಂಕ್ರಾಂತಿ (ಜನವರಿ 14)ಯ ನಂತರ ಜನವರಿ 15 ರಂದು ರಜೆ ಇರಲಿದೆ. ಇನ್ನು ಇತ್ತ ಆಂದ್ರ ಪ್ರದೇಶದ ರಾಜ್ಯಗಳಲ್ಲಿ ಮಕರ ಸಂಕ್ರಾಂತಿಯ ನಂತರ ಮತ್ತೊಂದು ದಿನ ಕ್ರಮವಾಗಿ 15 ರಂದು ರಜಡ ಇರಲಿದೆ. ಇನ್ನು ತೆಲಾಂಗಾಣ ಸರ್ಕಾರ ಮಕ್ಕಳಿಗೆ ಸಾಂಕ್ರಾಂತಿ ನಂತರ ಜನವರಿ 17ರ ವರೆಗೆ ರಜೆ ನೀಡಲಾಗಿದೆ. ಹಾಗೆ ಮತ್ತೆ ಶನಿವಾರ 18ರಂದು ಮತ್ತೆ ಶಾಲೆಗಳು ಆರಂಭವಾಗಲಿವೆ.
ಇನ್ನು ತಮಿಳುನಾಡಿನಲ್ಲಿ ಪೊಂಗಲ್ ಹಿನ್ನೆಲೆ ಜನವರಿ 14 ರಂದು ಸಾರ್ವಜನಿಕ ರಜೆ ಇರುತ್ತದೆ. ಅಂದು ಶಾಲೆಗಳು ಕೂಡ ಮುಚ್ಚಲಿವೆ. ಇದರ ನಂತರ ಜನವರಿ 15 ರಂದು ತಿರುವಳ್ಳುವರ್ ದಿನ ಮತ್ತು ಜನವರಿ 16 ರಂದು ಉಳವರ್ ತಿರುನಾಳ್. ಹೀಗಾಗಿ ಜನವರಿ 17 ರಂದು ಕೂಡ ಶಾಲೆಗಳಿಗೆ ರಜೆ ಇರುವ ಸಾಧ್ಯತೆ ಇದೆ. ಶನಿವಾರ ಅರ್ಧ ದಿನ ಮತ್ತು ಭಾನುವಾರದ ರಜಾದಿನಗಳ ಕಾರಣದಿಂದಾಗಿ ಶಾಲೆಗಳಿಗೆ ರಜೆ ಇರಲಿದೆ.
ಕರ್ನಾಟಕದಲ್ಲಿ ಎಷ್ಟು ದಿನ ರಜೆ ಇರಲಿದೆ
ಕರ್ನಾಟಕದಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನ ವಿಶೇಷವಾಗಿ ಆಚರಣೆ ಮಾಡುತ್ತಾರೆ. ಹೀಗಾಗಿ ಈ ಹಬ್ಬದ ಸಮಯದಲ್ಲಿ ಶಾಲೆಗಳಿಗೆ ರಜೆ ಇರುತ್ತದೆಜೊತೆಗೆ ಅಲ್ಲದೆ ಅಂದು ಜನವರಿ 14ರಂದು ಮಾತ್ರ ರಜೆ ಇರಲಿದೆ. ಇನ್ನು ಮಕರ ಸಂಕ್ರಾಂತಿ ನಂತರ ಮರುದಿನ ಎಂದಿನಂತೆ ಶಾಲೆಗಳು ಇರಲಿದೆ. ಬೇರೆ ಬೇರೆ ರಾಜ್ಯಗಳಲ್ಲಿ ವಿಶೇಷ ಆಚರಣೆ ಹಿನ್ನೆಲೆ ಪ್ರಾದೇಶಿಕ ರಜೆ ಇರಲಿದೆ. ಆದ್ರೆ ಕರ್ನಾಟಕದಲ್ಲಿ ಸಂಕ್ರಾಂತಿಯಂದು ಮಾತ್ರ ರಜೆ ಇರಲಿದೆ. ಹೀಗಾಗಿ ಮಕ್ಕಳು ಸಂಕ್ರಾಂತಿ ನಂತರ ಮತ್ತೆ ಎಂದಿನಂತೆ ಶಾಲೆಗಳುಗೆ ಹೋಗಬೇಕು ಎಂದು ಶಿಕ್ಷಣ ಇಲಾಖೆ ತಿಳಿಸಿದೆ.


Click it and Unblock the Notifications