ಮಾರುಕಟ್ಟೆ ನಿಯಂತ್ರಕ ಸೆಬಿ ಅದಾನಿ-ಹಿಂಡನ್‌ಬರ್ಗ್ ವಿವಾದ ಬಗ್ಗೆ ವರದಿಯನ್ನು ಪೂರ್ಣಗೊಳಿಸಲು ಇನ್ನು 15 ದಿನಗಳ ಹೆಚ್ಚುವರಿ ಸಮಯವನ್ನು ಕೋರಿದೆ. ಈ ನಡುವೆ ಹೂಡಿಕೆದಾರರು ಸೋಮವಾರ ಅದಾನಿ ಗ್ರೂಪ್ ಬೆಂಬಲಿತ ಷೇರುಗಳ ಕಡೆ ಒಲವು ತೋರಿಸಿಲ್ಲ. ಅದಾನಿ ಸಂಸ್ಥೆಯ ಷೇರುಗಳು ಇಂದು ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದೆ.
ವಿಚಾರಣೆಯಲ್ಲಿ ಗಣನೀಯ ಪ್ರಗತಿ ಸಾಧಿಸಲಾಗಿದೆ ಎಂದು ಹೇಳಿರುವ ಸೆಕ್ಯೂರಿಟೀಸ್ ಆಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಹೆಚ್ಚುವರಿ ಸಮಯವಕಾಶ ನೀಡುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ. ಈ ನಡುವೆ ಇಂದು ಅದಾನಿ ಷೇರುಗಳು ಶೇಕಡ 2ರಿಂದ ಶೇಕಡ 5ರಂದು ಕುಸಿತ ಕಂಡಿದೆ. ಪ್ರಮುಖ ಅದಾನಿ ಷೇರು ಸುಮಾರು ಶೇಕಡ 5.4ರಷ್ಟು ಇಳಿದು, ಇಂದಿನ ಟಾಪ್ ಲೂಸರ್ ಎನಿಸಿಕೊಂಡಿದೆ.

ಈ ಹಿಂದೆ ಅದಾನಿ ವಿರುದ್ಧ ಹಿಂಡನ್‌ಬರ್ಗ್ ಮಾಡಿರುವ ಆರೋಪದ ಬಗ್ಗೆ ಆಗಸ್ಟ್ 14ರವರಗೆ ಸಮಯವಕಾಶವನ್ನು ನೀಡಲಾಗಿದೆ. ಆದರೆ ಈಗ ಮತ್ತೆ 15 ದಿನಗಳ ಅವಕಾಶವನ್ನು ಸೆಬಿ ಕೋರಿದೆ. ವರದಿಯು ತನ್ನ ಅರ್ಜಿಯಲ್ಲಿ, "ತನಿಖೆಯು ಗಣನೀಯವಾಗಿ ಪ್ರಗತಿ ಸಾಧಿಸಿದೆ," ಎಂದು ಹೇಳಿದೆ.
ಲಭ್ಯವಿರುವ ಮಾಹಿತಿ ಆಧಾರದಲ್ಲಿ ಮಧ್ಯಂತರ ವರದಿಯನ್ನು ಸಿದ್ಧಪಡಿಸಲಾಗಿದೆ ಎಂದು ಸೆಬಿ ನ್ಯಾಯಾಲಯಕ್ಕೆ ತಿಳಿಸಿದೆ. ನಿಯಂತ್ರಕವು ವಿದೇಶಿ ಅಧಿಕಾರ ವ್ಯಾಪ್ತಿಯಲ್ಲಿರುವ ಏಜೆನ್ಸಿಗಳು ಮತ್ತು ನಿಯಂತ್ರಕರಿಂದ ಮಾಹಿತಿಯನ್ನು ಸಂಗ್ರಹಿಸಿಕೊಂಡಿದೆ ಎಂದು ಹೇಳಿದೆ. ಎಲ್ಲ ಮಾಹಿತಿ ಸಂಗ್ರಹ ಮಾಡಿದ ಬಗ್ಗೆ ಮುಂದಿನ ಕ್ರಮದ ಬಗ್ಗೆ ಪರಿಶೀಲಿಸಲಾಗುತ್ತದೆ ಎಂದು ಸೆಬಿ ಹೇಳಿದೆ.
ಉಳಿದ 6 ವಿಷಯಗಳಿಂದ 4 ರಲ್ಲಿ ಮಾಹಿತಿ ಸಂಗ್ರಹಿಸಲಾಗಿದೆ, ಬಳಿಕ ಈಗ ಅಧಿಕಾರಿಗಳ ಅನುಮೋದನೆಗಾಗಿ ಕಾಯುತ್ತಿವೆ ಎಂದು ನಿಯಂತ್ರಕರು ಮಾಹಿತಿ ನೀಡಿದರು. ಅಂತಿಮವಾಗಿ, ಇನ್ನೆರಡು ವಿಷಯಗಳಲ್ಲಿ, ಒಂದು ವಿಷಯದಲ್ಲಿ ತನಿಖೆ ಮುಂದುವರಿಯುತ್ತಿದೆ. ಇನ್ನೊಂದು ವಿಷಯದಲ್ಲಿ ಮಧ್ಯಂತರ ವರದಿ ಸಿದ್ಧವಾಗಿದೆ ಎಂದು ಸೆಬಿ ಹೇಳಿದೆ.
ಅದಾನಿ ಸಂಸ್ಥೆ ಷೇರುಗಳು ಹೇಗಿದೆ?
ಈ ವರದಿಯನ್ನು ಬರೆಯುವ ಸಂದರ್ಭದಲ್ಲಿ ಅದಾನಿ ಎಂಟರ್‌ಪ್ರೈಸಸ್ ಸ್ಟಾಕ್ ಸುಮಾರು ಶೇಕಡ 2.48ರಷ್ಟು ಇಳಿಕೆಯಾಗಿ 2,476.55 ರೂಪಾಯಿ ಆಗಿದೆ. ಅದಾನಿ ಪೋರ್ಟ್ಸ್ ಶೇಕಡ 1.25ರಷ್ಟು ಕುಸಿದು 791.00 ರೂಪಾಯಿಗೆ ತಲುಪಿದೆ. ಅದಾನಿ ಪವರ್ ಶೇಕಡ 0.28 ರಷ್ಟು ಇಳಿದು, 287.30 ಬೆಲೆಯಲ್ಲಿದೆ. ಅದಾನಿ ಟ್ರಾನ್ಸ್‌ಮಿಷನ್ ಶೇಕಡ 2.59ರಷ್ಟು ಕುಸಿತ ಕಂಡು 810.20 ರೂಪಾಯಿ ಆಗಿದೆ. ಅದಾನಿ ಟೋಟಲ್ ಗ್ಯಾಸ್ ಶೇಕಡ 1.93ರಷ್ಟು ಇಳಿಕೆಯಾಗಿ 636.50 ರೂಪಾಯಿ ಆಗಿದೆ.
ಅದಾನಿ ಗ್ರೀನ್ ಎನರ್ಜಿ ಶೇಕಡ 1.74ರಷ್ಟು ಕುಸಿತ ಕಂಡಿದ್ದು, 954.45 ರೂಪಾಯಿಗೆ ತಲುಪಿದೆ. ಅದಾನಿ ವಿಲ್ಮರ್ ಸುಮಾರು ಶೇಕಡ 1.79ರಷ್ಟು ಇಳಿಕೆಯಾಗಿ 376.25 ರೂಪಾಯಿ ಆಗಿದೆ. ಸಮೂಹದ ಮಾಧ್ಯಮ ಸ್ಟಾಕ್ ಎನ್‌ಡಿಟಿವಿ ಶೇಕಡ 1.26ರಷ್ಟು ಇಳಿಕೆಯಾಗಿ 220.30 ರೂಪಾಯಿ ಆಗಿದೆ. ಎರಡು ಸಿಮೆಂಟ್ ಸ್ಟಾಕ್‌ಗಳಾದ ಎಸಿಸಿ ಹಾಗೂ ಅಂಬುಜಾ ಸಿಮೆಂಟ್ಸ್ ಕ್ರಮವಾಗಿ ಶೇಕಡ 1.93 ಮತ್ತು ಶೇಕಡ 3.07 ಆಗಿದೆ.
ಸೆಕ್ಯೂರಿಟೀಸ್ ಆಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಆಗಸ್ಟ್ 10ರಂದು ಸುಪ್ರೀಂ ಕೋರ್ಟ್‌ನಲ್ಲಿ ಮನವಿಯನ್ನು ಸಲ್ಲಿಸಿದೆ. ಅದಾನಿ - ಹಿಂಡನ್‌ಬರ್ಗ್ ವರದಿಯ ಬಗ್ಗೆ ಸೆಬಿ ಸುಪ್ರೀಂ ಕೋರ್ಟ್‌ಗೆ 41 ಪುಟಗಳ ಅಫಿಡವಿಟ್ ಅನ್ನು ಸಲ್ಲಿಸಿದೆ. ಇದರಲ್ಲಿ ತಜ್ಞರ ಸಮಿತಿ ಮತ್ತು ಅರ್ಜಿದಾರರ ಶಿಫಾರಸುಗಳನ್ನು ದಾಖಲಿಸಿದೆ. ಹಾಗೆಯೇ ಸೆಬಿಯು ಸುಪ್ರೀಂ ಕೋರ್ಟ್‌ನಿಂದ ಸೂಕ್ತ ಆದೇಶಕ್ಕಾಗಿ ಮನವಿ ಮಾಡಿದೆ.


Click it and Unblock the Notifications