ಷೇರುಪೇಟೆಯಲ್ಲಿ ಹೂಡಿಕೆ ಮಾಡಿ ಲಕ್ಷಾಂತರ ರೂ. ಹಣ ಸಂಪಾದಿಸಬಹುದು ಎಂದು ಆನ್ ಲೈನ್ ನಲ್ಲಿ ವಂಚಕರು ವಾಟ್ಸ ಆಪ್ , ಟೆಲಿಗ್ರಾಂ, ಇನ್ ಸ್ಟಾಗ್ರಾಂ ಮೂಲಕ ಜನರನ್ನು ಮೋಸ ಮಾಡುವುದು ಹೊಸದಲ್ಲ. ಆದರೂ ವಂಚಕರ ಮಾತಿನ ಮೋಡಿಗೆ ಸಿಲುಕಿ ಅನೆಕರು ಲಕ್ಷಾಂತರ ರೂಪಾಯಿ ಕಳೆದುಕೊಳ್ಳುವುದು ಆಗ್ಗಾಗ್ಗೆ ವರದಿಯಾಗುತ್ತಿರುತ್ತದೆ. ಇದೇ ರೀತಿಯ ಪ್ರಕರಣ ಕರ್ನಾಟಕದ ಉಡುಪಿಯಲ್ಲಿ ವರದಿಯಾಗಿದೆ.
ಈ ಪ್ರಕರಣದಲ್ಲಿ ವೃದ್ದರೊಬ್ಬರು ಬರೋಬ್ಬರಿ 49 ಲಕ್ಷ ರೂ. ಕಳೆದುಕೊಂಡಿದ್ದು ಸ್ಟಾಕ್ ಮಾರ್ಕೆಟ್ ನಲ್ಲಿ ಅತಧಿಕ ಲಾಭ ಗಳಿಸಬಹುದು ಎಂದು ನಂಬಿಸಿ ವಂಚಕರು ಪಂಗನಾಮ ಹಾಕಿದ್ದಾರೆ. ಈ ಘಟನೆಯ ಕುರಿತು ಉಡುಪಿ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಂಚಕರು ಬಲೆ ಬೀಸಿದ್ದು ಹೇಗೆ?
ಉಡುಪಿಯ ಮೂಡುಬೆಳ್ಳೆ ನಿವಾಸಿ 72 ವರ್ಷದ ಫ್ರಾನ್ಸಿಸ್ ಕ್ಯಾಸ್ಟಲಿನೋ ಎಂಬವರು ಆನ್‌ಲೈನ್ ಸ್ಟಾಕ್ ಮಾರ್ಕೆಟ್ ಹೆಸರಲ್ಲಿ ಹಣಕಳೆದುಕೊಂಡ ವ್ಯಕ್ತಿಯಾಗಿದ್ದಾರೆ. ಷೇರುಪೇಟೆಯಲ್ಲಿ ಉತ್ತಮ ಹಣ ಗಳಿಸಲು ಸಾಧ್ಯ ಎಂಬ ಮೋಡಿ ಮಾಡಿ ವಂಚಕರು ಕ್ಯಾಸ್ಟೆಲಿನೊ ಅವರ ಮಗನ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು "ಸ್ಟಾಕ್ ಮಾರ್ಕೆಟ್ ನ್ಯಾವಿಗೇಶನ್" ಹೆಸರಿನ ವಾಟ್ಸಾಪ್ ಗ್ರೂಪ್ ಗೆ ಸೇರ್ಪಡೆಗೊಳಿಸಿದ್ದಾರೆ . ಈ ವಾಟ್ಸಾಪ್ ಗುಂಪಿನ ಸದಸ್ಯರು ಷೇರು ಮಾರುಕಟ್ಟೆ ಹೂಡಿಕೆಗಳ ಬಗ್ಗೆ ಆಕರ್ಷಕ ಮಾಹಿತಿಯನ್ನು ಒದಗಿಸುವುದರೊಂದಿಗೆ, ಗಮನಾರ್ಹ ಆದಾಯ ನೀಡುವುದಾಗಿ ಭರವಸೆ ನೀಡಿದ್ದಾರೆ. ನಯವಾದ ಮಾತಿನ ಮೂಲಕವೇ ಕ್ಯಾಸ್ಟೆಲಿನೊ ಮತ್ತು ಅವನ ಮಗನ ವಿಶ್ವಾಸವನ್ನು ಗಳಿಸಿದ ವಂಚಕರು ಸ್ಟಾಕ್ ಮಾರ್ಕೆಟ್ ನಲ್ಲಿ ದೊಡ್ಡ ಮೊತ್ತದ ಹಣವನ್ನು ಹೂಡಿಕೆ ಮಾಡುವಂತೆ ಸಲಹೆ ನೀಡುತ್ತಾರೆ.
ವಂಚಕರ ಸಲಹೆಯಂತೆ ಕ್ಯಾಸ್ಟೆಲಿನೊ ಅವರ ತಮ್ಮ ಬ್ಯಾಂಕ್ ಖಾತೆಯಿಂದ 12 ಲಕ್ಷ ರೂ., ಅವರ ಪತ್ನಿಯ ಖಾತೆಯಲ್ಲಿದ್ದ 10.5 ಲಕ್ಷ ರೂ., ಮತ್ತು ಅವರ ಪುತ್ರ 21.5 ಲಕ್ಷ ರೂ. ಹಣವನ್ನು ವಂಚಕರು ಸೂಚಿಸಿದ ಬ್ಯಾಂಕ್ ಖಾತೆಗಳಿಗೆ 2024ರ ಡಿಸೆಂಬರ್ 30 ರಂದು ವರ್ಗಾಯಿಸಿದ್ದಾರೆ. ಒಟ್ಟಾರೆಯಾಗಿ ಕ್ಯಾಸ್ಟೆಲಿನೊ ಅವರ ಕುಟುಂಬವು 49 ಲಕ್ಷ ರೂ. ಹಣವನ್ನು ಹೂಡಿಕೆ ಮಾಡಿದೆ.
ಬಳಿಕ ಕ್ಯಾಸ್ಟಲಿನೋ ರಿಟರ್ನ್ಸ್ ಅಥವಾ ಹೂಡಿಕೆ ಮೊತ್ತವನ್ನು ಹಿಂಪಡೆಯಲು ಪ್ರಯತ್ನಿಸಿದ್ದಾರೆ. ಈ ವೇಳೆ ವಂಚಕರು ಮತ್ತಷ್ಟು ಹಣವನ್ನು ಹೂಡಿಕೆ ಮಾಡುವಂತೆ ಒತ್ತಾಯಿಸಿದ್ದಾರೆ. ಆದರೆ ಎಷ್ಟೇ ಬಾರಿ ಪ್ರಯತ್ನಿಸಿದರೂ ರಿಟರ್ನ್ಸ್ ಅಥವಾ ಹೂಡಿಕೆ ಅಸಲು ಮೊತ್ತವನ್ನು ಹಿಂಪಡೆಯಲು ಸಾಧ್ಯವಾಗಲಿಲ್ಲ. ಈ ವೇಳೆ ಅವರಿಗೆ ಮೋಸಹೋಗಿರುವ ಅರಿವಾಗಿದೆ.
ಈ ಕುರಿತು ಉಡುಪಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ಐಟಿ ಕಾಯ್ದೆಯ ಸೆಕ್ಷನ್ 66(ಸಿ), 66(ಡಿ) ಮತ್ತು 318(4) ಬಿಎನ್‌ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಈ ಪ್ರಕರಣ ಷೇರು ಮಾರುಕಟ್ಟೆಯಲ್ಲಿ ನಡೆಯುವ ತಾಜಾ ಉದಾಹರಣೆಯಷ್ಟೇ.! ಸ್ಟಾಕ್ ಮಾರ್ಕೆಟ್ ಹೂಡಿಕೆ ಹೆಸರಲ್ಲಿ ಜನರನ್ನು ಮೋಸ ಮಾಡುವುದು ಮುಂದುವರಿಯುತ್ತನೇ ಇರುತ್ತದೆ. ಅದರಲ್ಲೂ ಸ್ಟಾಕ್ ಮಾರ್ಕೆಟ್ ಬಗ್ಗೆ ಜ್ಞಾನ ಇಲ್ಲದಿರುವಾಗ ವಂಚನೆಗೊಳಗಾಗುವುದು ಸಹಜ.
ವಂಚನೆಯಿಂದ ಪಾರಾಗಲು ಕೆಲ ಟಿಪ್ಸ್
ಅತ್ಯಧಿಕ ಲಾಭದ ಅಮಿಷ ತೋರಿಸುವ ಯಾರನ್ನು ನಂಬಬೇಡಿ. ಹಣ ಡಬಲ್ ಆಗುತ್ತೆ, ನಾಲ್ಕು ಪಟ್ಟು ಹೆಚ್ಚಾಗುತ್ತೆ ಎನ್ನುವುದೇ ವಂಚನೆಯ ಮೊತ್ತಮೊದಲ ರೆಡ್ ಸಿಗ್ನಲ್ ಆಗಿದೆ.
ಷೇರು ಮಾರುಕಟ್ಟೆ ಬಗ್ಗೆ ಇರೋ ಅಪರಿಚಿತ ಟೆಲಿಗ್ರಾಂ, ವಾಟ್ಸಪ್ ಗ್ರೂಪ್ ಗಳಿಂದ ಹೊರಬನ್ನಿ. ಅವರು ಕಳುಹಿಸುವ ಲಿಂಕ್ ಕ್ಲಿಕ್ ಮಾಡಬೇಡಿ. ಹೂಡಿಕೆ ಮಾಡೋ ಮುನ್ನ ಸೆಬಿ ಆರ್ ಬಿಐ ಲೈಸನ್ಸ್ ಪರಿಶೀಲಿಸಿ. ನಕಲಿ ಸರ್ಟೀಫಿಕೇಟ್ ಗಳನ್ನು ನಂಬಬೇಡಿ.
ಹೂಡಿಕೆಗೆ ಒತ್ತಾಯ ಮಾಡುತ್ತಿದ್ದರೆ ತಕ್ಷಣ ಅವರ ರಿಜಿಸ್ಟ್ರೇಷನ್ ಸಂಖ್ಯೆ ಪಡೆದು ಪರಿಶೀಲಿಸಿ. ಯಾವುದೇ ಕಾರಣಕ್ಕೂ ಎಪಿಕೆ ಫೈಲ್ ಗಳನ್ನು ಕ್ಲಿಕ್ ಮಾಡಬೇಡಿ. ಮೊಬೈಲ್ ಪಾಸ್ ವರ್ಡ್ ಆಗ್ಗಾಗೆ ಬದಲಾಯಿಸುತ್ತಿರಿ. ನಿಮ್ಮ ಕಷ್ಟಪಟ್ಟು ದುಡಿದ ಹಣವನ್ನು ರಕ್ಷಿಸಿಕೊಳ್ಳಿ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?



Click it and Unblock the Notifications