ಉದ್ಯೋಗ ಮಾಡಿ ಆದಾಯವನ್ನು ಗಳಿಸುವುದು ಒಂದು ಕಡೆಯಾದ್ರೆ ನಮ್ಮ ನಿವೃತ್ತಿಯ ನಂತರ ಆದಾಯವನ್ನ ಹೇಗೆ ಗಳಿಸುವುದು ಎನ್ನುವ ದೊಡ್ಡ ಪ್ರಶ್ನೆ ಕಾಡುವುದು ಸಹಜ. ಅಲ್ಲದೆ ನಿವೃತ್ತಿಯ ನಂತರ ಬರುವ ಪಿಂಚಣಿ ನಮ್ಮ ಅಗತ್ಯಗಳಿಗೆ ಸಾಕಾಗಬಹುದಾ ಎನ್ನುವ ಪ್ರಶ್ನೆ ಕೂಡ ಎಲ್ಲರಿಗೂ ಇದ್ದೇ ಇರುತ್ತದೆ.
ಹೌದು, ನೀವು ನಿಮ್ಮ ನಿವೃತ್ತಿಯ ನಂತರ ದೊಡ್ಡ ಮೊತ್ತದಲ್ಲಿ ಪಿಂಚಣಿ ಪಡೆಯಲು ಬಯಸಿದ್ರೆ ನಿಮಗಾಗಿ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಒಂದು ಉತ್ತಮ ಆಯ್ಕೆಯಾಗಿದೆ. ಅದರಲ್ಲೂ ಹಿರಿಯ ನಾಗರೀಕರು ಅವರ 40ನೇ ವಯಸ್ಸಿನಲ್ಲಿ ಹೂಡಿಕೆ ಆರಂಭಿಸುವುದರಿಂದ ನಿವೃತ್ತಿಯ ನಂತರ ಪ್ರತಿ ತಿಂಗಳು 50 ಸಾವಿರದ ವರೆಗೆ ಪಿಂಚಣಿ ಹಣವನ್ನ ಅವರು ಪಡೆಯಬಹುದು.

ಇನ್ನು ಈ ಪಿಂಚಣಿ ವ್ಯವಸ್ಥೆ ಮೂಲಕ ನಿವೃತ್ತಿಯ ನಂತರ ಆದಾಯದ ಬಗ್ಗೆ ಹೆಚ್ಚು ಚಿಂತೆ ಮಾಡುವ ಅಗತ್ಯ ಬರುವುದಿಲ್ಲ. ವೃತ್ತಿಯಲ್ಲಿರುವಾಗ ಹೇಗಿದ್ದರೋ ಹಾಗೆ ನೀವು ನಿಮ್ಮ ನಿವೃತ್ತಿ ನಂತರ ಕೂಡ ಬದುಕು ಕಟ್ಟಿಕೊಳ್ಳಬಹುದು. ಅಲ್ಲದೆ ಈ ಪಿಂಚಣಿ ವ್ಯವಸ್ಥೆ ಮೂಲಕ ನೀವು ದೊಡ್ಡ ಮೊತ್ತದ ಹಣವನ್ನ ಪಡೆಯಬಹುದು.
ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಬಗ್ಗೆ ತಿಳಿಯಿರಿ
ಪ್ರತಿಯೊಬ್ಬರೂ ನಿವೃತ್ತಿಯ ನಂತರ ಯೋಚನೆ ಮಾಡುತ್ತಾರೆ ಮತ್ತು ಸಾಮಾನ್ಯವಾಗಿ ಜನರಿಗೆ ನಿವೃತ್ತಿಯಾದ ಮೇಲೆ ನಿಯಮಿತ ಆದಾಯದ ಅಗತ್ಯ ಬಹಳ ಇರುತ್ತದೆ. ಹಾಗೆ ನಿಯಮಿತ ಆದಾಯಕ್ಕಾಗಿ, ಈಗಾಗಲೇ ಜನರು ವಿವಿಧ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಾರೆ. ಹೆಚ್ಚಾಗಿ ಜನರು ಪಿಂಚಣಿ ಯೋಜನೆಗಳಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ. ನೀವು ನಿಮ್ಮ ನಿವೃತ್ತಿಯ ನಂತರ ದೊಡ್ಡ ಮೊತ್ತದ ಪಿಂಚಣಿ ಪಡೆಯಲು ಬಯಸಿದರೆ, ನಿಮಗೆ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಒಂದು ಉತ್ತಮ ಆಯ್ಕೆಯಂತಾನೆ ಹೇಳಬಹುದು.
ಈ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಒಂದು ಸರ್ಕಾರಿ ಯೋಜನೆಯಾಗಿದೆ. ಇದು ಮಾರುಕಟ್ಟೆಗೆ ಲಿಂಕ್ ಆಗಿರುತ್ತದೆ ಅಂದರೆ ಅದರಲ್ಲಿ ಬರುವ ಆದಾಯ ಮಾರುಕಟ್ಟೆಯನ್ನು ಆಧರಿಸಿದೆ. ಅಲ್ಲದೆ ನಿವೃತ್ತಿ ಯೋಜನೆಗೆ ಸಂಬಂಧಪಟ್ಟಂತೆ ಈ ಯೋಜನೆಯು ಬಹಳ ಜನಪ್ರಿಯ ಕೂಡ ಹೌದು. ನಿಮಗೆ ಈ ಯೋಜನೆಯು ಪಿಂಚಣಿಯ ಲಾಭವನ್ನು ನೀಡುತ್ತದೆ ಜೊತೆಗೆ ದೊಡ್ಡ ಮೊತ್ತವನ್ನು ನೀಡುತ್ತದೆ. ನೀವು 40 ವರ್ಷ ವಯಸ್ಸಿನವರಾಗಿದ್ದರೆ ಮತ್ತು ನೀವು ಎನ್‌ಪಿಎಸ್‌ನಲ್ಲಿ ಹೂಡಿಕೆ ಮಾಡಲು ಈಗಾಗಲೇ ಆರಂಭಿಸಿದ್ದರೆ, ಹಾಗೆ ನೀವು ಪ್ರತಿ ತಿಂಗಳು 50 ಸಾವಿರ ಪಿಂಚಣಿ ಪಡೆಯಲು ಬಯಸಿದ್ರೆ ಎಷ್ಟು ಹೂಡಿಕೆ ಮಾಡಬೇಕು? ಇಲ್ಲಿ ತಿಳಿಯಿರಿ.
ಹೂಡಿಕೆಗೆ ಯಾರು ಅರ್ಹರು?
NPS ಇದೊಂದು ಯೋಜನೆಯಾಗಿದ್ದು, ಇದರಲ್ಲಿ 18 ಮತ್ತು 70 ವರ್ಷಗಳ ನಡುವಿನ ಯಾವುದೇ ನಾಗರಿಕರು ಕೂಡ ಇದರಲ್ಲಿ ಹೂಡಿಕೆ ಮಾಡಬಹುದು. ಎನ್‌ಪಿಎಸ್‌ನಲ್ಲಿ ನೀವು ಎಷ್ಟೇ ಹೂಡಿಕೆ ಮಾಡಿದ್ರು ಕೂಡ, ಆ ಹಣವನ್ನು 2 ಭಾಗಗಳಾಗಿ ವಿಂಗಡಿಸಲಾಗುತ್ತದೆ. ನೀವು ನಿಮ್ಮ ನಿವೃತ್ತಿಯ ನಂತರ, ಮೊತ್ತದ 60 ಪ್ರತಿಶತದಷ್ಟು ಒಟ್ಟು ಮೊತ್ತವನ್ನ ನೀವು ತೆಗೆದುಕೊಳ್ಳಬಹುದು ಮತ್ತು 40 ಪ್ರತಿಶತದಷ್ಟು ಹಣ ವರ್ಷಾಶನಕ್ಕೆ ಹೋಗುತ್ತದೆ. ಈ ವರ್ಷಾಶನ ಮೊತ್ತದಿಂದ ನಿಮ್ಮ ಪಿಂಚಣಿಯನ್ನು ಸಿದ್ದಪಡಿಸಲಾಗಿರುತ್ತದೆ. ಹಾಗೆ ಈ ಪಿಂಚಣಿ ಯೋಜನೆಯನ್ನು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ನಿರ್ವಹಿಸುತ್ತದೆ.
ಮಾಸಿಕ 50,000 ಪಿಂಚಣಿ ಪಡೆಯುವುದು ಹೇಗೆ?
ನೀವೇನಾದ್ರು ನಿಮ್ಮ 40ನೇ ವಯಸ್ಸಿನಲ್ಲಿ 50,000 ರೂಪಾಯಿಗಳ ಮಾಸಿಕ ಪಿಂಚಣಿ ಪಡೆಯಲು ಇಚ್ಛಿಸಿದರೆ, ನೀವು NPM ನಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಹೂಡಿಕೆ ಮಾಡಬಹುದು. ಅಲ್ಲದೆ ನೀವು, ಇದಕ್ಕಾಗಿ ಒಂದಿಷ್ಟು ಮೊತ್ತವನ್ನು ಹೂಡಿಕೆ ಮಾಡಬೇಕಾಗುತ್ತದೆ. ಅಂದರೆ ನೀವು ನಿಮ್ಮ 40ನೇ ವಯಸ್ಸಿನಲ್ಲಿ ಮಾಸಿಕವಾಗಿ ಕನಿಷ್ಠ 15,000 ರೂಪಾಯಿಗಳನ್ನು ಹೂಡಿಕೆ ಮಾಡಬೇಕು. ನಂತರ ನೀವು 65 ವರ್ಷ ವಯಸ್ಸಿನವರೆಗೆ ಇದರಲ್ಲಿ ಹೂಡಿಕೆ ಮಾಡಬೇಕಾಗುತ್ತದೆ. ಅಂದರೆ 25 ವರ್ಷಗಳವರೆಗೆ ಪ್ರತಿ ತಿಂಗಳು 15,000 ರೂಪಾಯಿಗಳನ್ನು ಹೂಡಿಕೆ ಮಾಡಬೇಕಾಗುತ್ತದೆ.
ಅಂದರೆ ಲೆಕ್ಕಾಚಾರದ ಪ್ರಕಾರ, ನೀವು ಒಟ್ಟು 45 ಲಕ್ಷ ರೂ. ಹೂಡಿಕೆ ಮಾಡಬೇಕಾಗುತ್ತದೆ. ಈ ಮೊತ್ತದ ಮೇಲೆ ನೀವು ಶೇಕಡಾ 10ರ ಬಡ್ಡಿದರಲ್ಲಿ ಹಣವನ್ನು ಪಡೆದರೆ, ನೀವು ಬಡ್ಡಿಯಿಂದ 1,55,68,356 ರೂಗಳನ್ನು ಪಡೆಯುತ್ತೀರಿ. ಇದಿಂದಲೇ, 45,00,000 + 1,55,68,356 = 2,00,68,356 ರೂ.ಗಳ ಕಾರ್ಪಸ್ ಅನ್ನು ಸಿದ್ಧಗೊಳಿಸಲಾಗುತ್ತದೆ. ಈ ಮೊತ್ತದ ಶೇ.60ರಷ್ಟು ಅಂದರೆ 1,20,41,013 ರೂ.ಗಳನ್ನು ಒಟ್ಟು ಮೊತ್ತದ ಹಣವನ್ನ ಪಡೆಯಲಾಗುವುದು. ಉಳಿದ ಶೇಕಡಾ 40, ಅಂದರೆ 80,27,342 ರೂ. ವರ್ಷಾಶನಕ್ಕೆ ಹೋಗುತ್ತದೆ. ಈ ಮೊತ್ತದ ಮೇಲೆ 8 ಪ್ರತಿಶತದಷ್ಟು ಆದಾಯವನ್ನು ನಾವು ಊಹಿಸಿದರೆ, ಮಾಸಿಕ ಪಿಂಚಣಿ ನಮಗೆ 53,516 ರೂಪಾಯಿವರೆಗೆ ಸಿಗುತ್ತದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!



Click it and Unblock the Notifications