ನಿವೃತ್ತಿ ಬದುಕು ಕೂಡ ಸುಲಲಿತವಾಗಿ ಸಾಗಬೇಕೆಂದರೆ ಆದಾಯ ಇರಲೇ ಬೇಕು. ವಯಸ್ಸಾದ ಮೇಲೆ ಮೊತ್ತೊಬ್ಬರ ಮೇಲೆ ಅವಲಂಬನೆಯಾಗುವುದು ಅತ್ಯಂತ ಕಷ್ಟಕರ. ಅಲ್ಲದೇ ಆರೋಗ್ಯ ಹದಗೆಟ್ಟಾಗ ಆರ್ಥಿಕ ಬೆಂಬಲ ಕೂಡ ಬೇಕಿರುತ್ತದೆ. ವಯಸ್ಸಿರುವ ಕಾಲದಲ್ಲಿ ಚೆನ್ನಾಗಿ ದುಡಿದ ದೇಹ ಬೇರೆಯವರ ಮುಂದೆ ಕೈಚಾಚುವ ಮನಸ್ಸು ಮಾಡಿರುವುದಿಲ್ಲ. ಹೀಗಾಗಿ ತಮ್ಮ ಖರ್ಚನ್ನು ತಾವೇ ಹೊಂದಿಸುವ ಮನಸ್ಸಿರುತ್ತದೆ. ಅದಕ್ಕಾಗಿ ಕೆಲವೊಂದು ಆರೋಗ್ಯ ವಿಮೆಗಳನ್ನು ಹೊಂದಿರುತ್ತಾರೆ. ಆದರೆ ಭಾರತದಲ್ಲಿರುವ ಎಲ್ಲಾ ಹಿರಿಯ ನಾಗರಿಕರು ಪ್ರೀಮಿಯಂ ಮೊತ್ತದ ಹೆಲ್ತ್ ಇನ್ಶೂರೆನ್ಸ್ ಪಾವತಿಸಲು ಶಕ್ತರಾಗಿರುವುದಿಲ್ಲ. ಅಲ್ಲದೇ ಈ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂಗಳು ವಯಸ್ಸಿನ ಆಧಾರದ ಮೇಲಿರುತ್ತದೆ. ಹೀಗಾಗಿ ಇದು ಹಿರಿಯ ನಾಗರಿಕರಿಗೆ ಆರ್ಥಿಕ ಭಾರವಾಗಬಹುದು.

ಕಳೆದ ವರ್ಷ..ಅಂದರೆ 2024ರಲ್ಲಿ ಭಾರತದಲ್ಲಿ ಆಸ್ಪತ್ರೆಯ ಚಿಕಿತ್ಸಾ ವೆಚ್ಚಗಳು ಶೇ.11.35% ಹೆಚ್ಚಾಗಿದ್ದು, ಹಿರಿಯ ನಾಗರಿಕರ ಆರೋಗ್ಯ ಖರ್ಚುಗಳನ್ನು ಹೆಚ್ಚಿಸಿದಂತಾಗಿದೆ. ಮತ್ತು 2023-24ರಲ್ಲಿ ಸುಮಾರು 60,000 ಕ್ಲೈಮ್‌ಗಳ ಆಧಾರದ ಮೇಲೆ, ಸರಾಸರಿ ಕ್ಲೈಮ್ ಮೊತ್ತವು ₹70,558ಕ್ಕೆ ಏರಿಕೆಯಾಗಿದೆ. ಇದು ಹಿಂದಿನ ವರ್ಷದ ₹62,548ಕ್ಕೆ ಹೋಲಿಸಿದರೆ ಗಮನಾರ್ಹ ಏರಿಕೆಯಾಗಿದೆ. ಇನ್ನು ಅದೇ ವರದಿಯ ಪ್ರಕಾರ ತಿಳಿದು ಬಂದಿರುವ ಮತ್ತೊಂದು ವಿಚಾರವೇನೆಂದರೆ, ಭಾರತದ ವೈದ್ಯಕೀಯ ದರವು ಕೂಡ ಪ್ರಸ್ತುತ ಶೇ. 14 ರಷ್ಟಾಗಿದೆ. ಇದರಿಂದ ಮುಂಬರುವ ದಿನಗಳಲ್ಲಿ ಆಸ್ಪತ್ರೆ ವೆಚ್ಚಗಳು ಹೆಚ್ಚಾಗುವ ಸಾಧ್ಯತೆ ಇದೆ. ಈ ಹೆಚ್ಚುತ್ತಿರುವ ವೆಚ್ಚಗಳನ್ನು ಗಮನದಲ್ಲಿಟ್ಟುಕೊಂಡು, ಹಿರಿಯ ನಾಗರಿಕರು ತಮ್ಮ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂಗಳನ್ನು ಕಡಿಮೆ ಮಾಡಲು ಈ ಕ್ರಮಗಳನ್ನು ಅನುಸರಿಸಬಹುದು.
1. ಕಡಿಮೆ ವಯಸ್ಸಿರುವಾಗಲೇ ವಿಮೆ ಪ್ರಾರಂಭಿಸಿ:
ವಿಮೆ ಪಾಲಿಸಿದಾರರು ತಮ್ಮ ಕಡಿಮೆ ವಯಸ್ಸಿರುವಾಗಲೇ ಆರಂಭಿಸಿದರೆ ಮುಂದಿನ ದಿನಗಳಲ್ಲಿ ರಿಯಾಯಿತಿಗಳನ್ನು ಪಡೆಯಬಹುದು. ಇದು ಒಂದು ಅತ್ಯುತ್ತಮ ವಿಧಾನವಾಗಿದೆ. ಏಕೆಂದರೆ ಆರಂಭದಲ್ಲೇ ವಿಮಾ ಖರೀದಿಗಳು ಪ್ರೀಮಿಯಂಗಳನ್ನು ಹೊಂದಿರುತ್ತವೆ. ಅಂದರೆ 60ನೇ ವಯಸ್ಸಿನಲ್ಲಿ ವಿಮೆ ಖರೀದಿಸುವ ವ್ಯಕ್ತಿಗೆ ಹೋಲಿಸಿದರೆ, 35ನೇ ವಯಸ್ಸಿನಲ್ಲಿ ವಿಮೆ ಪ್ರಾರಂಭಿಸಿದ ವ್ಯಕ್ತಿಗೆ ಅದನ್ನು ಮುಂದುವರಿಸುವ ಶಕ್ತಿ ಇರುತ್ತದೆ ಅಲ್ಲದೇ ಆತ ಸಂಚಿತ ಬೋನಸ್‌ಗಳು ಮತ್ತು ಕಡಿಮೆ ದರಗಳಿಂದ ಪ್ರಯೋಜನ ಪಡೆಯುತ್ತಾನೆ.
ಇದರ ಜೊತೆಗೆ ಮೊದಲೇ ವಿಮೆ ಪ್ರಾರಂಭಿಸಿದ ವ್ಯಕ್ತಿಗೆ, ಅಂತಿಮವಾಗಿ ಒಟ್ಟಾರೆ ವೆಚ್ಚದ ಹೊರೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೇ ಪಾಲಿಸಿದಾರರು ವಾರ್ಷಿಕವಾಗಿ ಪ್ರೀಮಿಯಂಗಳನ್ನು ಪಾವತಿಸುವ ಆಯ್ಕೆಯೂ ಹೊಂದಿರುತ್ತಾರೆ. ಜೊತೆಗೆ ತಮಗೆ ಬೇಕಾದರೆ ಮೂರು ವರ್ಷಗಳ ಯೋಜನೆಗಳಂತಹ ದೀರ್ಘಾವಧಿಯ ಪಾಲಿಸಿಗಳನ್ನು ಕೂಡ ಆಯ್ಕೆ ಮಾಡಿಕೊಳ್ಳಬಹುದಾಗಿದೆ.
2. ಫ್ಲೋಟರ್ ಯೋಜನೆಯನ್ನು ಆಯ್ಕೆ ಉತ್ತಮ:
ಇನ್ನು ಹಿರಿಯ ನಾಗರಿಕರಿಗೆ ಸಹ ಕುಟುಂಬ ಫ್ಲೋಟರ್ ಉತ್ತಮ. ಏಕೆಂದರೆ ಈ ಯೋಜನೆಗಳಿಂದ ಇಡೀ ಕುಟುಂಬಕ್ಕೆ ಸಹಾಯವಾಗುತ್ತವೆ. ಅಂದರೆ ಈ ಕುಟುಂಬದಲ್ಲಿ ಎಲ್ಲರೂ ಒಳಗೊಂಡಿರುತ್ತಾರೆ. ಕಿರಿಯ, ಆರೋಗ್ಯವಂತ ಸದಸ್ಯರೊಂದಿಗೆ ಆರ್ಥಿಕ ಜವಾಬ್ದಾರಿಗಳನ್ನು ಹಂಚಿಕೊಳ್ಳುವಾಗ ಆರೋಗ್ಯ ಸೇವೆಗಳನ್ನು ಪಡೆಯಬಹುದು ಎಂದು ಖಚಿತಪಡಿಸುತ್ತದೆ.
ಈ ಕುಟುಂಬ ಫ್ಲೋಟರ್ ಯೋಜನೆಯಲ್ಲಿ ವಿಮೆಯ ಮೊತ್ತ ಇಡೀ ಕುಟುಂಬಕ್ಕೆ ಒಟ್ಟುಗೂಡಿಸಿ ಪಾವತಿಸಿಕೊಳ್ಳಲಾಗುತ್ತದೆ. ಇದು ವೈಯಕ್ತಿಕ ಪಾಲಿಸಿಗಳಿಗೆ ಹೋಲಿಸಿದರೆ ಕಡಿಮೆ ವೆಚ್ಚವನ್ನು ಭರಿಸಿಕೊಳ್ಳುತ್ತದೆ. ಅಂದರೆ ಒಂದು ಉದಾಹರಣೆಯನ್ನಾಗಿ ನ್ಯೂ ಇಂಡಿಯಾ ಫ್ಲೋಟರ್ ಮೆಡಿಕ್ಲೈಮ್ ಪಾಲಿಸಿಯನ್ನು ತೆಗೆದುಕೊಂಡರೆ, ಈ ಪಾಲಿಸಿಯಲ್ಲಿ 3 ಸದಸ್ಯರನ್ನು ಒಳಗೊಂಡಿದ್ದರೆ, ಪಾವತಿಸಿದ ಪ್ರೀಮಿಯಂನಲ್ಲಿ 10% ವರೆಗೆ ರಿಯಾಯಿತಿಯನ್ನು ನೀಡುತ್ತದೆ. ಜೊತೆಗೆ ನಾಲ್ಕು ಅಥವಾ ಅದಕ್ಕಿಂತ ಹೆಚ್ಚಿನ ಸದಸ್ಯರಿದ್ದರೆ 15% ವರೆಗೆ ರಿಯಾಯಿತಿಯನ್ನು ನೀಡುತ್ತದೆ. ಹೀಗಾಗಿ ಇದು ಉತ್ತಮವಾದ ಪಾಲಿಸಿ ಎಂದು ಕರೆಯಲಾಗುತ್ತದೆ.
3. ಸಹ-ಪಾವತಿ ಆಯ್ಕೆಗಳನ್ನು ಆರಿಸಿಕೊಳ್ಳಿ:
ಹಿರಿಯ ನಾಗರಿಕರು ಸಹ-ಪಾವತಿ ಆಯ್ಕೆಗಳನ್ನು ಆರಿಸಿಕೊಂಡರೆ ಉತ್ತಮ. ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ಕಡಿತಗೊಳಿಸುವಿಕೆಯನ್ನು ಆಯ್ಕೆ ಮಾಡಿಕೊಳ್ಳುವುದು ಕೂಡ ಉತ್ತಮ. ಏಕೆಂದರೆ ಇದು ಒಂದು ನಿರ್ದಿಷ್ಟ ಪಾಲಿಸಿ ವರ್ಷದಲ್ಲಿ ವಿಮಾ ರಕ್ಷಣೆ ಪ್ರಾರಂಭವಾಗುವ, ಮೊದಲು ಹಿರಿಯ ನಾಗರಿಕರು ತಮ್ಮ ಜೇಬಿನಿಂದ ಪಾವತಿಸಬೇಕಾದ ಸ್ಥಿರ ಮೊತ್ತವಾಗಿದೆ. ಕಡಿತಗೊಳಿಸುವಿಕೆಗಳನ್ನು ಆಯ್ಕೆ ಮಾಡುವುದು ಹೆಚ್ಚಿನ ಮೊತ್ತದ ವಿಮೆಯೊಂದಿಗೆ ಸಮಗ್ರ ಯೋಜನೆಗಳಿಗೆ ವೆಚ್ಚ ಮತ್ತು ಪರಿಣಾಮಕಾರಿ ಪರ್ಯಾಯವಾಗಿದೆ.
ಪಾಲಿಸಿದಾರರು ತಮ್ಮ ಪಾಲಿಸಿಯಲ್ಲಿ 10% ಸಹ-ಪಾವತಿ ನಿಬಂಧನೆ ಹೊಂದಿದ್ದು, ಆಸ್ಪತ್ರೆಯ ಬಿಲ್ ರೂ 1 ಲಕ್ಷವಾಗಿದ್ದರೆ, ನೀವು ರೂ 10,000 ಪಾವತಿಸಬೇಕಾಗುತ್ತದೆ. ಹೀಗಾಗಿ ಈ ವಿಧಾನ ತುಂಬಾ ಉತ್ತಮ.
4. ನೋ ಕ್ಲೇಮ್ ಬೋನಸ್, ಪ್ರೋತ್ಸಾಹ ಧನ ಪಡೆದರೆ ಉತ್ತಮ:
ವಿಮೆ ಪಾವತಿದಾರರು ತಮ್ಮ ವಿಮಾ ಕಂತುಗಳನ್ನು ಕಡಿಮೆ ಮಾಡ ಬಯಸಿದರೆ ಮತ್ತೊಂದು ಉಪಯುಕ್ತವಾದ ಮಾರ್ಗವಿದೆ. ಅದೇನೆಂದರೆ ವಾರ್ಷಿಕ ತಪಾಸಣೆ ಅಥವಾ ಫಿಟ್‌ನೆಸ್ ಕಾರ್ಯಕ್ರಮಗಳಂತಹ ಆರೋಗ್ಯ ಸೇವೆಗಳನ್ನು ಸಕ್ರಿಯವಾಗಿ ಬಳಸುವುದಾಗಿದೆ. ಇದರಿಂದ ಹಿರಿಯ ನಾಗರಿಕರಿಗೆ ರಿಯಾಯಿತಿಗಳು ಮತ್ತು ಅಂತಿಮವಾಗಿ ಪ್ರೀಮಿಯಂಗಳನ್ನು ಕಡಿಮೆ ಮಾಡುವ ಇತರ ಪ್ರೋತ್ಸಾಹಕಗಳನ್ನು ಗಳಿಸಬಹುದು.
5. ಸೂಪರ್ ಟಾಪಪ್‌ನೊಂದಿಗೆ ಸ್ಕೀಮ್ ಪಡೆದುಕೊಳ್ಳಿ:
ವಿಮೆ ಪಾವತಿದಾರರು ಇತರೆ ಆರೋಗ್ಯ ಕವರೇಜ್‌ಗಳೊಂದಿಗೆ ಸೂಪರ್ ಟಾಪಪ್ ಯೋಜನೆ ಪಡೆದರೆ ಉತ್ತಮ. ಸಾಮಾನ್ಯ ಹೆಲ್ತ್ ಇನ್ಶೂರೆನ್ಸ್‌ಗಿಂತ ಕಡಿಮೆ ಖರ್ಚಿನಲ್ಲಿ ವ್ಯಾಪ್ತಿ ವಿಸ್ತರಿಸುವ ಹಾಗೂ ಕೈಗೆಟುಕುವ ಯೋಜನೆಯ ಮಾರ್ಗವಾಗಿದೆ. ಹಿರಿಯ ನಾಗರಿಕರು ಈ ಸೂಪರ್ ಟಾಪಪ್ ಪಡೆದರೆ, ಅದನ್ನು PMJAY ಅಥವಾ ಮಕ್ಕಳು ತೆಗೆದುಕೊಳ್ಳುವ ಕಾರ್ಪೊರೇಟ್ ಗುಂಪಿನ ಆರೋಗ್ಯ ವಿಮಾ ಯೋಜನೆಯನ್ನು ಬಳಸಬಹುದು.
ಈ ಎಲ್ಲಾ ಸೂಕ್ತ ಮಾರ್ಗಗಳ ಮೂಲಕ ಆರೋಗ್ಯ ವಿಮೆ ಹೊಂದಿರುವ ಹಿರಿಯ ನಾಗರಿಕರು, ತಮ್ಮ ಪ್ರೀಮಿಯಂ ಪಾವತಿಯನ್ನು ಕಡಿಮೆಮಾಡಿಕೊಳ್ಳಬಹುದಾಗಿದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?



Click it and Unblock the Notifications