ಫಿಕ್ಸ್‌ಡ್ ಡೆಪಾಸಿಟ್ (FD) ಅಥವಾ ಸ್ಥಿರ ಠೇವಣಿಗಳಲ್ಲಿ ಹಾಕಿದ ಮೊತ್ತಕ್ಕೆ ಉತ್ತಮ ಬಡ್ಡಿದರಗಳನ್ನು ಪಡೆದುಕೊಳ್ಳುವುದು ಸಾಮಾನ್ಯವಾಗಿ ಎಲ್ಲರ ಇಚ್ಛೆಯಾಗಿರುತ್ತದೆ. ಬಡ್ಡಿ ಹೆಚ್ಚಿರುವ ಕಡೆಗಳಲ್ಲಿ ಸಾಮಾನ್ಯವಾಗಿ ಜನರು ತಮ್ಮ ಹಣವನ್ನು ಡೆಪಾಸಿಟ್ ಇಡುತ್ತಾರೆ. ಕೆಲವೊಂದು ಬ್ಯಾಂಕ್‌ಗಳಲ್ಲಿ ಇದರ ಬಡ್ಡಿದರವು ಕಡಿಮೆ ಇದ್ದರೆ ಇನ್ನೂ ಕೆಲವು ಬ್ಯಾಂಕ್‌ಗಳಲ್ಲಿ ಆಕರ್ಷಕ ರೀತಿಯಲ್ಲಿ ಹೆಚ್ಚಿರುತ್ತದೆ. ಅದೂ ಅಲ್ಲದೆ ಕೆಲವು ಬ್ಯಾಂಕ್‌ಗಳಲ್ಲಿ ಹಿರಿಯ ನಾಗರಿಕರ ಫಿಕ್ಸ್‌ಡ್ ಡೆಪಾಸಿಟ್‌ಗಳಿಗೆ ಉತ್ತಮ ಬಡ್ಡಿದರಗಳನ್ನು ನೀಡಲಾಗುತ್ತದೆ. ಸದ್ಯ ನಾವು ಆ ಬ್ಯಾಂಕ್‌ಗಳ ಬಗ್ಗೆ ನೀಡಲಿದ್ದೇವೆ. ಹಾಗಾಗಿ ಈ ಬ್ಯಾಂಕ್‌ಗಳಲ್ಲಿ ಹೂಡಿಕೆ ಮಾಡಲು ಉತ್ತಮ ಅವಕಾಶ ಇರುತ್ತದೆ. ಆದರೆ ಯಾವುದಕ್ಕೂ ಹೂಡಿಕೆ ಮಾಡುವ ಮುನ್ನ ಆರ್ಥಿಕ ತಜ್ಞರ ಸಲಹೆ ಪಡೆದುಕೊಳ್ಳುವುದು ಕೂಡ ಅತೀ ಅಗತ್ಯವಾಗಿದೆ.
ಅತೀ ಹಿರಿಯ ನಾಗರಿಕರ FD ದರಗಳು
SBI ಬ್ಯಾಂಕ್‌ನಲ್ಲಿ ಅತೀ ಹಿರಿಯ ನಾಗರಿಕರಿಗೆ ಒಂದು ವರ್ಷದ ಅವಧಿಯಲ್ಲಿ 7.30 ಶೇಕಡಾ ಬಡ್ಡಿದರವನ್ನು ನೀಡಲಾಗುತ್ತದೆ. ಉಳಿದಂತೆ 3 ವರ್ಷ ಮತ್ತು 5 ವರ್ಷಗಳ FD ಗಳಲ್ಲಿ ಬ್ಯಾಂಕ್ ಕ್ರಮಾವಾಗಿ 7.25 ಶೇಕಡಾ ಮತ್ತು 7.50 ಶೇಕಡಾ ಬಡ್ಡಿದರಗಳನ್ನು ಒದಗಿಸುತ್ತದೆ. ಸ್ಥಿರ ಠೇವಣಿ (ಎಫ್‌ಡಿ) ಒಂದು ರೀತಿಯ ಹೂಡಿಕೆಯಾಗಿದ್ದು, ಉತ್ತಮ ಬಡ್ಡಿ ದರವನ್ನು ಗಳಿಸಲು ನೀವು ನಿಗದಿತ ಅವಧಿಗೆ ಒಟ್ಟು ಮೊತ್ತವನ್ನು ಠೇವಣಿ ಮಾಡಬಹುದು. ಎಫ್‌ಡಿಗಳನ್ನು ಹೂಡಿಕೆಯ ಸುರಕ್ಷಿತ ಮಾರ್ಗವೆಂದು ಪರಿಗಣಿಸಲಾಗುತ್ತದೆ, ಅದಕ್ಕಾಗಿಯೇ ಅವು ಅತ್ಯಂತ ಜನಪ್ರಿಯ ಹೂಡಿಕೆ ಆಯ್ಕೆಯಾಗಿದೆ. ಮಾರುಕಟ್ಟೆ ಕುಸಿದಾಗಲೂ ನೀವು ಅದೇ ಬಡ್ಡಿದರವನ್ನು ಕಾಯ್ದುಕೊಂಡಿರುತ್ತದೆ. ಅಂದರೆ ಎಫ್‌ಡಿ ಸ್ಥಿರ ಬಡ್ಡಿದರವನ್ನು ಹೊಂದಿದ್ದು, ಮಾರುಕಟ್ಟೆಯ ಏರಿಳಿತಗಳಿಂದ ಅವು ಪರಿಣಾಮ ಬೀರುವುದಿಲ್ಲ. ಹಿರಿಯ ನಾಗರಿಕರು ಸಾಮಾನ್ಯ FD ಗಳಿಗಿಂತ ಹೆಚ್ಚಿನ ಬಡ್ಡಿದರವನ್ನು ಪಡೆಯುತ್ತಾರೆ.

ಪ್ರಮುಖ ಬ್ಯಾಂಕ್‌ಗಳ FD ಬಡ್ಡಿ ದರಗಳು
ಪಿಎಸ್‌ಯು ಬ್ಯಾಂಕ್‌ಗಳಾದ ಎಸ್‌ಬಿಐ, ಬಿಒಬಿ, ಪಿಎನ್‌ಬಿ ಮತ್ತು ಇತರ ಬ್ಯಾಂಕ್‌ಗಳು ಸ್ಥಿರ ಠೇವಣಿಗಳ ಮೇಲೆ ಹಿರಿಯ ನಾಗರಿಕರಿಗೆ ಏನೇನು ಒದಗಿಸುತ್ತಿವೆ ಎಂಬುದನ್ನು ನೋಡೋಣ.
ಹಿರಿಯ ನಾಗರಿಕರಿಗೆ SBI FD ದರ
ಇನ್ನು ಹಿರಿಯ ನಾಗರಿಕರಿಗೆ ಎಸ್‌ಬಿಐ ನ 444 ದಿನಗಳ ಅಮೃತ್ ವೃಷ್ಟಿ ಎಫ್‌ಡಿ ಯೋಜನೆಯಡಿಯಲ್ಲಿ 7.75 ಶೇಕಡಾ ಬಡ್ಡಿದರವನ್ನು ನೀಡಲಾಗುತ್ತದೆ.
SBI ನಾ 1, 3, 5 ವರ್ಷಗಳ FD ಯೋಜನೆ
ಒಂದು ವರ್ಷದಲ್ಲಿ SBI ಹಿರಿಯ ನಾಗರಿಕರಿಗೆ 7.30 ಶೇಕಡಾ ಬಡ್ಡಿದರವನ್ನು ನೀಡುತ್ತದೆ. ಉಳಿದಂತೆ 3 ವರ್ಷ ಮತ್ತು 5 ವರ್ಷಗಳ FD ಗಳಲ್ಲಿ ಬ್ಯಾಂಕ್ ಕ್ರಮವಾಗಿ 7.25 ಶೇಕಡಾ ಮತ್ತು 7.50 ಶೇಕಡಾ ಬಡ್ಡಿದರಗಳನ್ನು ಒದಗಿಸುತ್ತದೆ.
ಬ್ಯಾಂಕ್ ಆಫ್ ಬರೋಡಾ FD ದರಗಳು
ಬ್ಯಾಂಕ್ ಆಫ್ ಬರೋಡಾದಲ್ಲಿ ಬಾಬ್ ಉತ್ಸವ ಎಂಬ ಎಫ್‌ಡಿ ಯೋಜನೆಯಲ್ಲಿ 400 ದಿನಗಳ ಅವಧಿಗೆ ಹಿರಿಯ ನಾಗರಿಕರಿಗೆ 7.80 ಶೇ. ಬಡ್ಡಿದರವನ್ನು ನೀಡಲಾಗುತ್ತದೆ. ಇನ್ನು ಹಿರಿಯ ನಾಗರಿಕರಿಗೆ ಒಂದು ವರ್ಷದಲ್ಲಿ ಶೇಕಡಾ 7.35 ದರಲ್ಲಿ ಹಾಗೂ ಮೂರು ವರ್ಷಗಳಲ್ಲಿ 7.65 ಶೇಕಡಾ ಮತ್ತು ಐದು ವರ್ಷಗಳಲ್ಲಿ 7.15 ಶೇಕಡಾ ಬಡ್ಡಿದರವನ್ನು ನೀಡುತ್ತದೆ. ಅತ್ತ ಪಂಜಾಬ್ ನ್ಯಾಶನಲ್ ಬ್ಯಾಂಕ್‌ನಲ್ಲಿ 400 ದಿನಗಳ ಅವಧಿಗೆ ಹಿರಿಯ ನಾಗರಿಕರಿಗೆ 7.75ರ ಬಡ್ಡಿದರವನ್ನು ನೀಡಲಾಗುತ್ತದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್
PNB ಬ್ಯಾಂಕ್‌ನಲ್ಲಿ ಹಿರಿಯ ನಾಗರಿಕರಿಗೆ ಒಂದು ವರ್ಷದಲ್ಲಿ ಶೇಕಡಾ 7.30 ಬಡ್ಡಿ ನೀಡಲಾಗುತ್ತಿದ್ದು, ಅಲ್ಲದೆ ಮೂರು ವರ್ಷಗಳಲ್ಲಿ ಶೇಕಡಾ 7.50 ಮತ್ತು ಐದು ವರ್ಷಗಳಲ್ಲಿ ಶೇಕಡಾ 7.00 ಬಡ್ಡಿದರವನ್ನು ನೀಡುತ್ತದೆ. ಅತ್ತ ಆಕ್ಸಿಸ್ ಬ್ಯಾಂಕ್‌ನಲ್ಲಿ 15 ತಿಂಗಳ ಅವಧಿಗೆ 7.75 ರಷ್ಟು ಬಡ್ಡಿ ದರಗಳನ್ನು ನೀಡಲಾಗುತ್ತದೆ. ಉಳಿದಂತೆ ಆಕ್ಸಿಸ್ ಬ್ಯಾಂಕ್‌ನಲ್ಲಿ ಹಿರಿಯ ನಾಗರಿಕರಿಗೆ ಒಂದು ವರ್ಷದ ಅವಧಿಗೆ 7.20 ಪ್ರತಿಶತ ಬಡ್ಡಿದರವನ್ನು ನೀಡಲಾಗುತ್ತದೆ. ಅಲ್ಲದೆ ಮೂರು ವರ್ಷಗಳಲ್ಲಿ 7.60 ಪ್ರತಿಶತ ಬಡ್ಡಿದರ ಹಾಗೂ ಐದು ವರ್ಷಗಳ ಅವಧಿಗೆ 7.75 ಪ್ರತಿಶತ ಬಡ್ಡಿದರವನ್ನು ನೀಡಲಾಗುತ್ತದೆ.
ಕೆನರಾ ಬ್ಯಾಂಕ್ FD ದರಗಳು
ಮೂರು ವರ್ಷಗಳ ಅವಧಿಗೆ ಕೆನರಾ ಬ್ಯಾಂಕ್‌ನಲ್ಲಿ 7.9 ಪ್ರತಿಶತ ಬಡ್ಡಿಯನ್ನು ನೀಡಲಾಗುತ್ತದೆ. ಇನ್ನು ಒಂದು ವರ್ಷದ ಅವಧಿಗೆ ಹಿರಿಯ ನಾಗರಿಕರಿಗೆ 7.35 ಪ್ರತಿಶತ ಬಡ್ಡಿ ನೀಡಲಾಗುತ್ತದೆ. ಉಳಿದಂತೆ ಮೂರು ವರ್ಷಗಳಲ್ಲಿ 7.30 ಪ್ರತಿಶತ ಬಡ್ಡಿದರ ಹಾಗೂ ಐದು ವರ್ಷಗಳ ಅವಧಿಗೆ 7.20 ಬಡ್ಡಿದರವನ್ನು ನೀಡುತ್ತದೆ.
HDFC ಬ್ಯಾಂಕ್ ಬಡ್ಡಿ ದರ
55 ತಿಂಗಳುಗಳ ಅವಧಿಗೆ HDFC ಬ್ಯಾಂಕ್‌ನಲ್ಲಿ 7.90 ಶೇಕಡಾ ಬಡ್ಡಿ ದರವನ್ನು ನೀಡಲಾಗುತ್ತದೆ. ಉಳಿದಂತೆ ಹಿರಿಯ ನಾಗರಿಕರಿಗೆ ಒಂದು ವರ್ಷದಲ್ಲಿ 7.10 ಶೇ. ಹಾಗೂ ಮೂರು ವರ್ಷಗಳಲ್ಲಿ 7.50 ಶೇ ಮತ್ತು ಐದು ವರ್ಷಗಳಲ್ಲಿ 7.50 ಬಡ್ಡಿದರವನ್ನು ನೀಡಲಾಗುತ್ತದೆ.


Click it and Unblock the Notifications