ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೊಸ ಆವಿಷ್ಕಾರ ಮಾಡಲಾಗಿದೆ. ಎಲ್ಲಾ ಪ್ರಯಾಣಿಕರಿಗೆ ಸಮಾನ ಮತ್ತು ಆರಾಮದಾಯಕ ಅನುಭವ ಒದಗಿಸಲು, ಮತ್ತೊಂದು ಮಹತ್ವದ ಹೆಜ್ಜೆ ಇಡಲಾಗಿದೆ. ಅದೇನೆಂದರೆ ಟರ್ಮಿನಲ್ 2 ರಲ್ಲಿ ಹೊಸದಾಗಿ ಪರಿಚಯಿಸಲಾದ ಸಂವೇದನಾ ಕೊಠಡಿ ಒದಗಿಸಲಾಗುತ್ತಿದೆ. ಈ ಮೂಲಕ ಪ್ರಯಾಣಿಕರಿಗೆ ಅಥವಾ ಸಂವೇದನಾ ಸೂಕ್ಷ್ಮತೆಯನ್ನು ಹೊಂದಿರುವವರಿಗೆ ಶಾಂತಿಯುತ, ನಿಯಂತ್ರಿತ ವಾತಾವರಣ ಒದಗಿಸಲು ವಿನ್ಯಾಸಗೊಳಿಸಲಾಗಿದೆ.

ಸಂವೇದನಾ ಕೊಠಡಿಯ ಅವಶ್ಯಕತೆ ಏನು..?
ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸಂವೇದನಾ ಕೊಠಡಿ ನಿರ್ಮಿಸಿದರೆ ಸಾಕಷ್ಟು ಉಪಯೋಗಗಳಿಗವೆ. ಅವುಗಳೇನೆಂದರೆ ಶಬ್ದ, ಬೆಳಕು ಮತ್ತು ಓಡಾಟದಿಂದಲೇ ತುಂಬಿರುವ ವಿಮಾನ ನಿಲ್ದಾಣದಲ್ಲಿ ಈ ಆವಿಷ್ಕಾರ ಹೆಚ್ಚು ಪ್ರಯೋಜನಕಾರಿಯಾಗಿದೆ. ಈ ಸಂವೇದನಾ ಕೊಠಡಿ ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್, ಸಂವೇದನಾ ಪ್ರಕ್ರಿಯೆ ಸಂಬಂಧಿತ ಸಮಸ್ಯೆ, ಆತಂಕ ಸಮಸ್ಯೆ, ಪೋಸ್ಟ್-ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್ ಮತ್ತು ಇತರ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವವರಿಗೆ ತೊಂದರೆ ಉಂಟುಮಾಡಬಹುದು. ಈ ಪಾಸಿಟಿವ್ ವಾತಾವರಣದ ಕೊಠಡಿ, ಪ್ರಯಾಣಿಕರಿಗೆ ಮಾನಸಿಕ ಒತ್ತಡ ಕಡಿಮೆ ಮಾಡುವ ಮತ್ತು ಸಮಾಧಾನಕರ ಅನುಭವ ನೀಡುವ ಉದ್ದೇಶ ಹೊಂದಿದೆ.
ಸಂವೇದನಾ ಕೊಠಡಿಯ ಪ್ರಮುಖ ಲಕ್ಷಣಗಳು:
1. ಶಾಂತ ವಾತಾವರಣ ಒದಗಿಸುವುದು: ಸಂವೇದನಾ ಕೊಠಡಿಯಲ್ಲಿ ಶಬ್ದವನ್ನು ನಿಯಂತ್ರಿಸುವ ವ್ಯವಸ್ಥೆ ಇದೆ. ಇದರಿಂದ ಬಿಳಿ ಶಬ್ದ ಯಂತ್ರ ಮತ್ತು ಧ್ವನಿ ನಿಯಂತ್ರಣ ವ್ಯವಸ್ಥೆ ಶಾಂತ ವಾತಾವರಣವನ್ನು ಒದಗಿಸುತ್ತದೆ.
2. ಬೆಳಕು ಮತ್ತು ಕಲಾತ್ಮಕ ವಿನ್ಯಾಸ: ಪ್ರಯಾಣಿಕರು ಸಂವೇದನಾ ಕೊಠಡಿಯಲ್ಲಿ ಸುತ್ತುವರಿದ ಬೆಳಕಿನ ಆಯ್ಕೆ ಮಾಡಿಕೊಳ್ಳಬಹುದು. ಅಂದರೆ ಪರಿಮಿತ ಬೆಳಕು, ಮೃದುವಾದ ಬೆಳಕನ್ನು ಆಯ್ಕೆ ಮಾಡಬಹುದು. ಅಂದರೆ ಕಲಾ ಭಿತ್ತಿಚಿತ್ರ, ಸಾವಯವ ಮಾದರಿಗಳೊಂದಿಗೆ ವಿನ್ಯಾಸಗೊಳಿಸಿದ್ದು, ಭಾವನಾತ್ಮಕ ಶಾಂತತೆಯನ್ನು ಒದಗಿಸುತ್ತದೆ.
3. ಸ್ಪರ್ಶ & ಅನುಭವಕ್ಕೆ ಪ್ರೋತ್ಸಾಹ ನೀಡುವ ಅಂಶಗಳು: ಚಿಕ್ಕ ಮಕ್ಕಳಿಗೆ ಸಂವೇದನಾ ಅನುಭವ ನೀಡಲು ಬಾಲ್ ಪೂಲ್ ಒದಗಿಸಲಾಗಿದೆ. ಹಾಗೂ ಸ್ಪರ್ಷದ ಮೂಲಕ ಮನಸ್ಸಿಗೆ ಶಾಂಕಿ ನೀಡಲು ಸಂವೇದನಾ ಆಟಿಕೆ ಕೇಂದ್ರ ಒದಗಿಸಲಾಗಿದೆ. ಮನರಂಜನೆಗಾಗಿ ಪ್ರಕ್ಷೇಪಣಾ ಗೋಡೆ ಮತ್ತು ನೆಲ ಒದಗಿಸಲಾಗಿದೆ.
4. ಒತ್ತಡ ನಿವಾರಣಾ ಸಾಧನಗಳು: ವಿಮಾನ ನಿಲ್ದಾಣದಲ್ಲಿ ಒತ್ತಡ ಕಡಿಮೆ ಮಾಡಲು ತೂಕದ ಕಂಬಳಿಗಳನ್ನು ಒದಗಿಸಲಾಗಿದೆ. ಹಾಗೆಯೇ ಕ್ರ್ಯಾಶ್ ಪ್ಯಾಡ್‌ಗಳು ಮತ್ತು ಚಿಕಿತ್ಸಾ ಮ್ಯಾಟ್‌ಗಳು ಆರಾಮದಾಯಕ ಅನುಭವಕ್ಕೆ ಒದಗಿಸುತ್ತವೆ.
5. ಪರಿಮಳ ಮತ್ತು ಸಮತೋಲನ ಸಾಧನಗಳು: ಪ್ರಯಾಣಿಕರಿಗೆ ಸುಗಂಧ ದ್ರವ್ಯಗಳು ಶಾಂತಿ ತರುವಂತೆ ಪರಿಮಳ ಡಿಫ್ಯೂಸರ್‍ನ ವಿನ್ಯಾಸಗೊಳಿಸಲಾಗಿದೆ. ದೃಷ್ಟಿ ಶಾಂತಿ ನೀಡಲು, ಲಾವಾ ದೀಪ ವ್ಯವಸ್ಥೆ ನೀಡಲಾಗಿದೆ. ಹಾಗೂ ನೆಮ್ಮದಿ ಮತ್ತು ಏಕಾಗ್ರತೆಗೆ ಸಮತೋಲನ ಫಲಕ ಒದಗಿಸಲಾಗಿದೆ.
BIAL ಭವಿಷ್ಯದ ಯೋಜನೆ:
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಈ ಸಂವೇದನಾ ಕೊಠಡಿಯನ್ನು, ಲೋಕಾರ್ಪಣೆ ಮಾಡಲಾಗಿದ್ದು ಇದು ಪ್ರತಿಯೊಬ್ಬ ಪ್ರಯಾಣಿಕನಿಗೂ ಒತ್ತಡ-ಮುಕ್ತ ಅನುಭವ ನೀಡುವ ಉದ್ದೇಶದಿಂದ ಈ ಹೊಸ ಸೇವೆಯನ್ನು ಆರಂಭಿಸಿದ್ದೇವೆ, ಎಂದು BIALನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಹರಿ ಮಾರಾರ್ ಹೇಳಿದ್ದಾರೆ. ಹಾಗೂ ಈ ಕೊಠಡಿಯ ಬಳಕೆ ಪ್ರಯಾಣಿಕರಿಗೆ 15-30 ನಿಮಿಷಗಳ ಶಾಂತ ಸಮಯವನ್ನು ಒದಗಿಸುವಂತೆ ವಿನ್ಯಾಸಗೊಂಡಿದೆ. ಇದು ವಿಮಾನ ಪ್ರಯಾಣದ ಮೊದಲು, ಈ ಕೊಠಡಿ ನಿರಾಳತೆ ನೀಡುವ ಒಂದು ವಿಶಿಷ್ಟ ಅವಕಾಶ ಒದಗಿಸುತ್ತದೆ.
ಇನ್ನು ಬೆಂಗಳೂರು ವಿಮಾನ ನಿಲ್ದಾಣದ ಸಂವೇದನಾ ಕೊಠಡಿ ಭಾರತದಲ್ಲಿ ಪ್ರಥಮವಾಗಿದೆ. ಈ ಕೊಠಡಿ ಆಟಿಸಂ, PTSD, ಆತಂಕ ಸಮಸ್ಯೆ ಹಾಗೂ ಇತರ ಸಂವೇದನಾ ಅಸ್ವಸ್ಥತೆ ಹೊಂದಿರುವ ಪ್ರಯಾಣಿಕರಿಗೆ ಶಾಂತಿಯುತ ವಾತಾವರಣ ಒದಗಿಸುತ್ತದೆ. ಬೆಳಕು, ಧ್ವನಿ ನಿಯಂತ್ರಣ, ಪರಿಮಳ ಚಿಕಿತ್ಸೆ, ಕಲೆ ಮತ್ತು ಆಟಿಕೆಗಳ ಬಳಕೆ ಇಲ್ಲಿರುವುದು ಇದನ್ನು ಒಂದರಷ್ಟು ಸಮರ್ಥ ಮತ್ತು ವಿಶಿಷ್ಟ ಪರಿಹಾರವಾಗಿ ಮಾಡುತ್ತದೆ. ಈ ಸೇವೆಯಿಂದ ಎಲ್ಲರನ್ನೂ ಒಳಗೊಳ್ಳುವ ಮತ್ತು ಪ್ರಯಾಣವನ್ನು ಸುಗಮಗೊಳಿಸುವ ಹೊಸದೊಂದು ಪ್ರಯತ್ನವನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡಿದೆ.
ವಿಮಾನ ನಿಲ್ದಾಣದ ಬಿಕ್ಕಟ್ಟಿನ ಪರಿಸರ, ಅತಿಯಾದ ಬೆಳಕು, ಶಬ್ದ, ಓಡಾಟ ಮತ್ತು ಜನಸಂಚಾರ ಕೆಲವು ಪ್ರಯಾಣಿಕರಿಗೆ ಅಸಹನೀಯವಾಗಬಹುದು. ವಿಶೇಷವಾಗಿ, ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್ , ಸಂವೇದನಾ ಪ್ರಕ್ರಿಯೆ ಸಮಸ್ಯೆ, ಆತಂಕ ಅಸ್ವಸ್ಥತೆ, PTSD ಹೊಂದಿರುವ ಪ್ರಯಾಣಿಕರಿಗೆ ಈ ಕೋಣೆಯು ಶಾಂತಿಯುತ, ನಿಯಂತ್ರಿತ, ಮತ್ತು ಆರಾಮದಾಯಕ ಸ್ಥಳವನ್ನು ಒದಗಿಸುವ ಉದ್ದೇಶ ಹೊಂದಿದೆ. ಈ ಹೊಸ ಪ್ರಯತ್ನವು ಎಲ್ಲರನ್ನೂ ಒಳಗೊಂಡ ಮತ್ತು ಪ್ರಯಾಣಿಕ ಸ್ನೇಹಿ ನಿಲ್ದಾಣವಾಗಿ ರೂಪಿಸುವ ದಿಕ್ಕಿನಲ್ಲಿ ಒಂದು ಮಹತ್ವದ ಹೆಜ್ಜೆ ಎಂದು ಹೇಳಬಹುದು. ವಿಮಾನ ಪ್ರಯಾಣದ ಮುನ್ನ ಈ ಕೊಠಡಿ ಪ್ರಯಾಣಿಕರಿಗೆ ಒತ್ತಡ-ಮುಕ್ತ ಅನುಭವ ಒದಗಿಸಲು ಮತ್ತು ಅವರ ಭಾವನಾತ್ಮಕ ನೆಮ್ಮದಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
More From GoodReturns

Bengaluru: ಮಳೆಗಾಲಕ್ಕೂ ಮುನ್ನ ಫೀಲ್ಡ್ಗೆ ಇಳಿದ ಶಾಸಕ ಗೋಪಾಲಯ್ಯ...ಮಹಾಲಕ್ಷ್ಮಿ ಲೇಔಟ್ನಲ್ಲಿ ಕಾಮಗಾರಿಗಳ ಪರಿಶೀಲನೆ!

Bengaluru - Stock Market: ಷೇರು ಮಾರುಕಟ್ಟೆಯಲ್ಲಿ ಭಾರೀ ನಷ್ಟ; ಮನನೊಂದು ಬೆಂಗಳೂರಿನ ವ್ಯಕ್ತಿ ಆತ್ಮಹತ್ಯೆ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Hotel Bandh: ಬೆಂಗಳೂರಿಗೂ ತಟ್ಟಿದ ಯುದ್ಧದ ಬಿಸಿ; ಇಂದಿನಿಂದ ಹಲವು ಹೋಟೆಲ್ ಬಂದ್

Bengaluru: ಬೆಂಗಳೂರಿಗೆ 5,000 ರೂ. ಕೋಟಿ ಪ್ರವಾಹ ಯೋಜನೆ, 41 ಕಿ.ಮೀ ಮೆಟ್ರೋ, 450 ಕಿ.ಮೀ ರಸ್ತೆ ಅಭಿವೃದ್ಧಿ!

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Biggest Airport: ಭಾರತದ ಅತಿದೊಡ್ಡ ವಿಮಾನ ನಿಲ್ದಾಣ ಸಂಚಾರಕ್ಕೆ ಸಿದ್ಧ; 45 ದಿನದೊಳಗೆ ಆರಂಭ

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಇರಲ್ಲ ಕರೆಂಟ್! ಎಲ್ಲೆಲ್ಲಿ ಗೊತ್ತಾ?

Bengaluru-Mangaluru Flight: ಬೆಂಗಳೂರು-ಮಂಗಳೂರು ವಿಮಾನ ಪ್ರಯಾಣಿಕರಿಗೆ ಬಂಪರ್ ಸುದ್ದಿ! ಇನ್ಮೇಲೆ ತಡರಾತ್ರಿಯೂ ವಿಮಾನ ಸೇವೆ

Bengaluru Special Trains: ಮಾರ್ಚ್ 11 ರಿಂದ ಬೆಂಗಳೂರಿಗೆ ಬರಲಿದೆ ಮತ್ತೊಂದು ಸ್ಪೆಷಲ್ ರೈಲು! ಎಲ್ಲಿಂದ ಎಲ್ಲಿಗೆ?



Click it and Unblock the Notifications