ಬುಡಕಟ್ಟು ಜನರ ಕರಕುಶಲ ವಸ್ತುಗಳಿಗಿನ್ನು ಪ್ರತ್ಯೇಕ ಇ-ಕಾಮರ್ಸ್ ತಾಣ

ನವದೆಹಲಿ: ಬುಡಕಟ್ಟು ಕುಶಲಕರ್ಮಿಗಳಿಗೆ ಕೇಂದ್ರ ಸರ್ಕಾರ ಶುಭ ಸುದ್ದಿಯನ್ನು ತಂದಿದೆ. ಶೀಘ್ರದಲ್ಲೇ ಬುಡಕಟ್ಟು ಜನರು ತಮ್ಮ ಕರಕುಶಲ ಉತ್ಪನ್ನಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಲು ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿ ಕೊಡುತ್ತಿದೆ.

ಅಂದರೆ ಅಮೆಜಾನ್, ಫ್ಲಿಪ್‌ಕಾರ್ಟ್ ರೀತಿ ಬುಡಕಟ್ಟು ಜನರಿಗಾಗಿಯೇ ಪ್ರತ್ಯೇಕ ವೆಬ್‌ಸೈಟ್ ಅಥವಾ ಇ ಕಾಮರ್ಸ್ ತಾಣವನ್ನು ಸೃಷ್ಠಿ ಮಾಡಿಕೊಡಲಾಗುತ್ತಿದೆ. ಬರುವ ಆಗಸ್ಟ್‌ 15 ರ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಇ-ಮಾರುಕಟ್ಟೆಯನ್ನು ಪ್ರಾರಂಭಿಸಲು ಸರ್ಕಾರ ಸಜ್ಜಾಗಿದೆ.

ಜುಲೈ 30 ರಿಂದ ಆಗಸ್ಟ್ 14 ರವರೆಗೆ ಇ-ಮಾರುಕಟ್ಟೆಯ ಟ್ರಯಲ್ ರನ್ ನಡೆಯಲಿದೆ ಎಂದು ಬುಡಕಟ್ಟು ಸಹಕಾರಿ ಮಾರುಕಟ್ಟೆ ಅಭಿವೃದ್ಧಿ ಒಕ್ಕೂಟ ತಿಳಿಸಿದೆ.

ಬುಡಕಟ್ಟು ಸಹಕಾರಿ ಮಾರುಕಟ್ಟೆ ಅಭಿವೃದ್ಧಿ ಒಕ್ಕೂಟ

ಬುಡಕಟ್ಟು ಸಹಕಾರಿ ಮಾರುಕಟ್ಟೆ ಅಭಿವೃದ್ಧಿ ಒಕ್ಕೂಟ

ದೇಶಾದ್ಯಂತ ಬುಡಕಟ್ಟು ಜನಾಂಗದವರ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ನೀಡುವ ಉದ್ದೇಶದಿಂದ ಸರ್ಕಾರ 1987 ರಲ್ಲಿ ಬುಡಕಟ್ಟು ಸಹಕಾರಿ ಮಾರುಕಟ್ಟೆ ಅಭಿವೃದ್ಧಿ ಒಕ್ಕೂಟವನ್ನು ಸ್ಥಾಪಿಸಿದೆ. ಈ ಏಜೆನ್ಸಿ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.

5 ಲಕ್ಷ ಬುಡಕಟ್ಟು ಕುಶಲಕರ್ಮಿಗಳು

5 ಲಕ್ಷ ಬುಡಕಟ್ಟು ಕುಶಲಕರ್ಮಿಗಳು

ಸುಮಾರು 5 ಲಕ್ಷ ಬುಡಕಟ್ಟು ಕುಶಲಕರ್ಮಿಗಳನ್ನು ಆನ್‌ಲೈನ್‌ನಲ್ಲಿ ತರುವುದು ಇದರ ಉದ್ದೇಶವಾಗಿದೆ. ಅವರನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಸಂಪರ್ಕಿಸಲು ಇದು ನೆರವಾಗುತ್ತದೆ. ಜವಳಿ, ವರ್ಣಚಿತ್ರಗಳು, ಮನೆ ಅಲಂಕಾರಿಕ ವಸ್ತುಗಳು, ಆಭರಣಗಳು ಮತ್ತು ಲೋಹದ ಕರಕುಶಲ ವಸ್ತುಗಳು ಸೇರಿದಂತೆ 20,000 ವಿಭಾಗಗಳಲ್ಲಿ ಸುಮಾರು 5 ಲಕ್ಷ ಬುಡಕಟ್ಟು ವಸ್ತುಗಳು ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತವೆ.

Tribes India e-Mart

Tribes India e-Mart

'ಆಗಸ್ಟ್ 15 ರಂದು ‘Tribes India e-Mart' ವೆಬ್‌ಸೈಟ್‌ನ್ನು ಪ್ರಾರಂಭಿಸುತ್ತೇವೆ. ಇದು ಉತ್ಪನ್ನಗಳನ್ನು ಅಮೆಜಾನ್ ಅಥವಾ ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟ ಮಾಡುವಂತೆಯೇ ಇರುತ್ತದೆ. ವ್ಯತ್ಯಾಸವೆಂದರೆ ಇದು ಬುಡಕಟ್ಟು ಜನಾಂಗದವರಿಗೆ ಮಾತ್ರ ಆಗಿರುತ್ತದೆ' ಎಂದು ಬುಡಕಟ್ಟು ಸಹಕಾರಿ ಮಾರುಕಟ್ಟೆ ಅಭಿವೃದ್ಧಿ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಪ್ರವೀಣ್ ಕೃಷ್ಣ ಹೇಳುತ್ತಾರೆ.

ಬುಡಕಟ್ಟು ಜನಾಂಗದವರಿಗೆ ತರಬೇತಿ ನೀಡುತ್ತಾರೆ

ಬುಡಕಟ್ಟು ಜನಾಂಗದವರಿಗೆ ತರಬೇತಿ ನೀಡುತ್ತಾರೆ

'ಇ-ಕಾಮರ್ಸ್‌ ಬಗ್ಗೆ ಬುಡಕಟ್ಟು ಕುಶಲಕರ್ಮಿಗಳಿಗೆ ತರಬೇತಿ ನೀಡಲಾಗುವುದು ಮತ್ತು ತಮ್ಮನ್ನು ವೆಬ್‌ಸೈಟ್‌ನಲ್ಲಿ ಮಾರಾಟಗಾರರಾಗಿ ನೋಂದಾಯಿಸಲು ಬುಡುಕಟ್ಟು ಜನರನ್ನು ಕೇಳಿಕೊಳ್ಳಲಾಗುವುದು. ದೇಶಾದ್ಯಂತದ ನಮ್ಮ 15 ಪ್ರಾದೇಶಿಕ ಕಚೇರಿಗಳಲ್ಲಿನ ಸಿಬ್ಬಂದಿ ಬುಡಕಟ್ಟು ಜನಾಂಗದವರಿಗೆ ತರಬೇತಿ ನೀಡುತ್ತಾರೆ ಮತ್ತು ಇ ಕಾಮರ್ಸ್‌ನಲ್ಲಿ ನೋಂದಾಯಿಸಲು ಸಹಾಯ ಮಾಡುತ್ತಾರೆ. ಬುಡಕಟ್ಟು ಮಾರಾಟಗಾರರ ಉತ್ಪನ್ನಗಳು ಕಟ್ಟುನಿಟ್ಟಾದ ಗುಣಮಟ್ಟದ ಪರಿಶೀಲನೆಗೆ ಒಳಗಾಗುತ್ತವೆ ಮತ್ತು ಸಮಿತಿಯು ಪ್ರತಿ ವಸ್ತುವಿನ ಬೆಲೆಗಳನ್ನು ನಿಗದಿಪಡಿಸುತ್ತದೆ. ಇದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆತ್ಮಾ ನಿರ್ಭರ್ ಭಾರತ್ ದೃಷ್ಟಿಕೋನಕ್ಕೆ ಅನುಗುಣವಾಗಿದೆ' ಎಂದು ನಿರ್ದೇಶಕ ಪ್ರವೀಣ್ ಕೃಷ್ಣ ಹೇಳುತ್ತಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+