ಸೆಪ್ಟೆಂಬರ್ ಆಟೋ ಸೇಲ್ಸ್: ಹಬ್ಬದ ಸೀಸನ್‌ನಲ್ಲಿ ಯಾವ ಸ್ಟಾಕ್‌ಗಳು ಹಾರಲಿವೆ? ಇಲ್ಲಿದೆ ಕಂಪ್ಲೀಟ್ ಮಾಹಿತಿ

ಅಕ್ಟೋಬರ್ 1ರ ಗುರುವಾರ ವಾಹನ ತಯಾರಿಕಾ ಕಂಪನಿಗಳು ಸೆಪ್ಟೆಂಬರ್ ತಿಂಗಳ ಮಾರಾಟದ ಆಟೋ ಡೇಟಾ (Dispatches) ಬಿಡುಗಡೆ ಮಾಡಲಿವೆ. ಈ ಮುಂಬರುವ ಹಬ್ಬದ ಸೀಸನ್‌ನಲ್ಲಿ ಆಟೋ ವಲಯದ ಸ್ಥಿತಿಗತಿ ಹೇಗಿರಲಿದೆ ಎಂಬುದಕ್ಕೆ ಇದು ದಿಕ್ಸೂಚಿಯಾಗಲಿದೆ. ಅಕ್ಟೋಬರ್ 11ರಿಂದ ಶಾರಾದೀಯ ನವರಾತ್ರಿ, ಅಕ್ಟೋಬರ್ 20ಕ್ಕೆ ದಸರಾ ಹಾಗೂ ನವೆಂಬರ್ 8ಕ್ಕೆ ದೀಪಾವಳಿ ಹಬ್ಬಗಳಿರುವುದರಿಂದ, ಮಾರುಕಟ್ಟೆಯಲ್ಲಿ ಬೇಡಿಕೆ ಚೇತರಿಸಿಕೊಳ್ಳುತ್ತಿದೆಯೇ ಎಂದು ಹೂಡಿಕೆದಾರರು ಕಾತರದಿಂದ ಕಾಯುತ್ತಿದ್ದಾರೆ. ಗ್ರಾಮೀಣ ಭಾಗ, ರಫ್ತು ಮತ್ತು ಮೂಲಸೌಕರ್ಯ ವಲಯಗಳಲ್ಲಿ ಮಾರುಕಟ್ಟೆ ಚಲನವಲನ ತಿಳಿಯಲು ಪ್ಯಾಸೆಂಜರ್ ವಾಹನ, ದ್ವಿಚಕ್ರ ವಾಹನ ಹಾಗೂ ವಾಣಿಜ್ಯ ವಾಹನಗಳ ಮಾರಾಟದ ಅಂಕಿ-ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ.

ದಿನಪೂರ್ತಿ ಶೇರುಪೇಟೆಗೆ ಆಟೋ ಕಂಪನಿಗಳಿಂದ ಮಾರಾಟದ ವರದಿಗಳು ಸಲ್ಲಿಕೆಯಾಗಲಿವೆ. ಸಾಮಾನ್ಯವಾಗಿ ದ್ವಿಚಕ್ರ ಮತ್ತು ವಾಣಿಜ್ಯ ವಾಹನ ಕಂಪನಿಗಳ ಡೇಟಾ ಮೊದಲು ಹೊರಬಿದ್ದರೆ, ಪ್ರಮುಖ ಪ್ಯಾಸೆಂಜರ್ ವಾಹನ ತಯಾರಕ ಸಂಸ್ಥೆಗಳ ವರದಿ ಮಧ್ಯಾಹ್ನದ ವೇಳೆಗೆ ಸಿಗುತ್ತದೆ. ಸೆಪ್ಟೆಂಬರ್ 1ರಂದು ಮಧ್ಯಾಹ್ನ 1:12ಕ್ಕೆ ಟಾಟಾ ಮೋಟಾರ್ಸ್ ಡೇಟಾ ನೀಡಿತ್ತು. ಹಾಗೆಯೇ ಬಜಾಜ್ ಆಟೋ ಹಾಗೂ ರಾಯಲ್ ಎನ್‌ಫೀಲ್ಡ್ ಕೂಡ ಪ್ರತಿ ತಿಂಗಳ ಮೊದಲ ದಿನವೇ ತಮ್ಮ ಮಾರಾಟದ ವಿವರಗಳನ್ನು ಹಂಚಿಕೊಳ್ಳುತ್ತವೆ.

ಸೆಪ್ಟೆಂಬರ್ ಆಟೋ ಸೇಲ್ಸ್: ಯಾವ ಸ್ಟಾಕ್‌ಗಳ ಮೇಲೆ ಕಣ್ಣಿಡಬೇಕು?

ಸೆಪ್ಟೆಂಬರ್ ಆಟೋ ಸೇಲ್ಸ್: ಪ್ಯಾಸೆಂಜರ್ ವಾಹನ ವಲಯದ ನಿರೀಕ್ಷೆ & ಗಮನಿಸಬೇಕಾದ ಸ್ಟಾಕ್‌ಗಳು

ಹಬ್ಬದ ಸೀಸನ್‌ಗೆ ಮುನ್ನ ಡೀಲರ್‌ಗಳು ಸ್ಟಾಕ್ ಹೆಚ್ಚಿಸಿಕೊಂಡಿದ್ದರಿಂದ ಆಗಸ್ಟ್‌ನಲ್ಲಿ ಇನ್ವೆಂಟರಿ ಸುಮಾರು 38-40 ದಿನಗಳಿಗೆ ಏರಿತ್ತು. ಆದರೂ ರಿಯಾಯಿತಿಗಳು (Discounts) ಮಿತವಾಗಿಯೇ ಇದ್ದವು. ಪ್ರಸ್ತುತ ಎಸ್‌ಯುವಿ (SUV) ವಿಭಾಗದ ವಾಹನಗಳು ವಾಹನ ಮಾರುಕಟ್ಟೆಯಲ್ಲಿ ಗಣನೀಯ ಪ್ರಗತಿ ಕಾಣುವ ನಿರೀಕ್ಷೆಯಿದೆ. ಈ ಪೈಕಿ ಮಾರುತಿ ಸುಜುಕಿ ಎಸ್‌ಯುವಿ ಪಾಲು, ಟಾಟಾ ಮೋಟಾರ್ಸ್ ಇವಿ ಮಾರಾಟ ಹಾಗೂ ಮಹೀಂದ್ರಾ ವಾಹನ ಪೂರೈಕೆ ಪ್ರಮಾಣದ ಮೇಲೆ ಕಣ್ಣಿಡಬೇಕಿದೆ. ಇದರ ಜೊತೆಗೆ ಎಸ್‌ಯುವಿ ಮತ್ತು ಇವಿ ವಲಯಕ್ಕೆ ಬಿಡಿಭಾಗ ಪೂರೈಸುವ ಕಂಪನಿಗಳ ಶೇರುಗಳ ಮೇಲೆಯೂ ಇದು ಪರಿಣಾಮ ಬೀರಲಿದೆ.

ಸೆಪ್ಟೆಂಬರ್ ಆಟೋ ಸೇಲ್ಸ್: 2-ವೀಲರ್ ಮತ್ತು ವಾಣಿಜ್ಯ ವಾಹನಗಳ ನಿರೀಕ್ಷೆ ಇಲ್ಲಿದೆ

ದ್ವಿಚಕ್ರ ವಾಹನಗಳ ಮಾರಾಟವು ಗ್ರಾಮೀಣ ಭಾಗದ ಬೇಡಿಕೆ ಮತ್ತು ರಫ್ತನ್ನೇ ಹೆಚ್ಚಾಗಿ ನೆಚ್ಚಿಕೊಂಡಿದೆ. ಮಳೆ ಕೊರತೆಯಿದ್ದರೂ ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಭಾಗದಲ್ಲೇ ಚಿಲ್ಲರೆ ಮಾರಾಟ ಹೆಚ್ಚಾಗಿದೆ ಎಂದು ಫಾಡಾ (FADA) ಡೇಟಾ ತಿಳಿಸಿದೆ. ಆಗಸ್ಟ್‌ನಲ್ಲಿ ಬಜಾಜ್ ರಫ್ತು ಗಣನೀಯವಾಗಿ ಏರಿಕೆಯಾಗಿದ್ದರೆ, ಟಿವಿಎಸ್ ವಿದೇಶಿ ಮಾರುಕಟ್ಟೆಯಲ್ಲಿ ಎರಡಂಕಿ ಪ್ರಗತಿ ಕಾಯ್ದುಕೊಂಡಿದೆ. ಇತ್ತ ರಾಯಲ್ ಎನ್‌ಫೀಲ್ಡ್‌ನ ಮಿಡ್‌ಸೈಜ್ ಬೈಕ್‌ಗಳಿಗೆ ಹಬ್ಬದ ಸೀಸನ್‌ನಲ್ಲಿ ಸ್ಥಿರ ಬೇಡಿಕೆಯಿದೆ. ಮಾರಾಟ ಪ್ರಮಾಣ ತಿಳಿಯಲು ಬಜಾಜ್ ಆಟೋ ಮತ್ತು ಐಷರ್ ಮೋಟಾರ್ಸ್ ವರದಿಗಳನ್ನು ಮೊದಲು ಗಮನಿಸಬೇಕಿದೆ.

ಮೂಲಸೌಕರ್ಯ ಯೋಜನೆಗಳ ಜಾರಿ, ಗಣಿಗಾರಿಕೆ ಹಾಗೂ ಇ-ಕಾಮರ್ಸ್ ಲಾಜಿಸ್ಟಿಕ್ಸ್‌ನಿಂದಾಗಿ ವಾಣಿಜ್ಯ ವಾಹನಗಳ (CV) ವಲಯಕ್ಕೆ ಉತ್ತಮ ಬೆಂಬಲ ಸಿಗುತ್ತಿದೆ. ಆಗಸ್ಟ್‌ನಲ್ಲಿ ವಿಇಸಿವಿ (VECV) ವೃದ್ಧಿ ಕಂಡಿದ್ದರಿಂದ ಐಷರ್ ಮೋಟಾರ್ಸ್ ಹಾಗೂ ಎರಡಂಕಿ ಪ್ರಗತಿ ಸಾಧಿಸಿರುವ ಅಶೋಕ್ ಲೇಲ್ಯಾಂಡ್ ಮೇಲೆ ಕಣ್ಣಿಡಬಹುದು. ಟಾಟಾ ಮೋಟಾರ್ಸ್ ವಾಣಿಜ್ಯ ವಾಹನಗಳ ಡೇಟಾ, ಸರಕು ಸಾಗಣೆ ವಾಹನಗಳ ಬೇಡಿಕೆಯನ್ನು ಪ್ರತಿಬಿಂಬಿಸಲಿದೆ. ಲಘು ಮತ್ತು ಮಧ್ಯಮ ಗಾತ್ರದ ಟ್ರಕ್‌ಗಳ ಮಾರಾಟ ಮುಂಚೂಣಿಯಲ್ಲಿದ್ದರೆ, ಬಸ್ ಉದ್ಯಮದ ಸ್ಥಿತಿ ಸಾಧಾರಣವಾಗಿದೆ.

ಎಲೆಕ್ಟ್ರಿಕ್ ವಾಹನಗಳ (EV) ಪಾಲು ಈ ಬಾರಿ ನಿರ್ಣಾಯಕ ಎನಿಸಲಿದೆ. ಆಗಸ್ಟ್‌ನಲ್ಲಿ ಪ್ಯಾಸೆಂಜರ್ ವಾಹನ ಚಿಲ್ಲರೆ ಮಾರಾಟದಲ್ಲಿ ಪರ್ಯಾಯ ಇಂಧನದ ವಾಹನಗಳ ಪಾಲು ಶೇ 41.95ರಷ್ಟಿತ್ತು. ಇದರಲ್ಲಿ ಇವಿಗಳು ಶೇ 7.63, ಹೈಬ್ರಿಡ್‌ಗಳು ಶೇ 9.04 ಹಾಗೂ ಸಿಎನ್‌ಜಿ ವಾಹನಗಳು ಶೇ 25.28ರಷ್ಟಿದ್ದವು. ಇನ್ನು ಆಟೋ ಶೇರುಗಳಲ್ಲಿ ಹೂಡಿಕೆ ಮಾಡುವ ಮುನ್ನ ಚಿಲ್ಲರೆ ಮಾರಾಟ ಮತ್ತು ಹೋಲ್‌ಸೇಲ್ ಸರಬರಾಜು ನಡುವಿನ ಅಂತರ, ರಫ್ತು, ವೈಟಿಂಗ್ ಪೀರಿಯಡ್, ಡಿಸ್ಕೌಂಟ್‌ಗಳು ಮತ್ತು ಇನ್ವೆಂಟರಿ ವರದಿಗಳನ್ನು ಗಮನಿಸುವುದು ಅಗತ್ಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+