ಸಾವರಿನ್ ಗೋಲ್ಡ್‌ ಬಾಂಡ್ ಯೋಜನೆ ಸ್ಥಗಿತಗೊಳಿಸಿದ ಕೇಂದ್ರ ಸರ್ಕಾರ..ಕಾರಣವೇನು?

ಚಿನ್ನದ ನಗದೀಕರಣಕ್ಕಾಗಿ ಕೇಂದ್ರ ಸರ್ಕಾರ ಪರಿಚಯಿಸಿದ್ದ ಅತ್ಯಂತ ಪ್ರಮುಖ ಯೋಜನೆಗಳಲ್ಲಿ ಒಂದಾದ 'ಸಾವರಿನ್‌ ಗೋಲ್ಡ್‌ ಬಾಂಡ್‌' ನ್ನು ಕಳೆದ ಒಂದು ವರ್ಷದಿಂದಲೂ ಭಾರತೀಯ ರಿಸರ್ವ್ ಬ್ಯಾಂಕ್ (RBI) ಬಿಡುಗಡೆ ಮಾಡಿಲ್ಲ. ಭೌತಿಕ ಚಿನ್ನಕ್ಕೆ ಪರ್ಯಾಯವಾಗಿ SGB ಯೋಜನೆಯನ್ನು ನವೆಂಬರ್ 2015 ರಲ್ಲಿ ಪರಿಚಯಿಸಲಾಗಿತ್ತು. ಚಿಲ್ಲರೆ ಹೂಡಿಕೆದಾರರಿಗೆ ಕಾಗದದ ರೂಪದಲ್ಲಿ ಚಿನ್ನದಲ್ಲಿ ಹೂಡಿಕೆ ಮಾಡಲು ಅವಕಾಶ ಮಾಡಿಕೊಟ್ಟಿತು. ಪ್ರಮುಖವಾಗಿ ಭೌತಿಕ ಚಿನ್ನ ಖರೀದಿಯನ್ನು ಕಡಿಮೆ ಮಾಡಲು ಹಾಗೂ ಚಿನ್ನದ ಆಮದನ್ನು ಕಡಿತ ಮಾಡು ಉದ್ದೇಶದೊಂದಿಗೆ ಕೇಂದ್ರ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿತ್ತು. ಅಂದಿನಿಂದ ಇಂದಿನವರೆಗೂ ಈ ಯೋಜನೆ ಭಾರೀ ಜನಪ್ರಿಯತೆ ಪಡೆದಿತ್ತು. ಅನೇಕರು ಈ ಬಾಂಡ್ ಕೊಳ್ಳಲು ಕಾತರದಿಂದ ಕಾಯುತ್ತಿದ್ದರೂ RBI ಕಳೆದ ಒಂದು ವರ್ಷದಿಂದ ಬಿಡುಗಡೆ ಮಾಡಿಲ್ಲ ಯಾಕೆ ಎಂಬ ಪ್ರಶ್ನೆ ಹಲವು ಮಂದಿಯಾಗಿತ್ತು.

ಕೇಂದ್ರ ಸರ್ಕಾರ ಈ ಯೋಜನೆಯನ್ನು ಮುಂದುವರಿಸುವ ಒಲವು ತೋರುತ್ತಿಲ್ಲ ಎಂಬುವುದು ಬಜೆಟ್ ನಂತರದ ಮಾಧ್ಯಮಗೋಷ್ಠಿಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೀಡಿದ ಉತ್ತರದಿಂದ ಸ್ಪಷ್ಟವಾಗಿದೆ. ಈ ಯೋಜನೆಗೆ ಸಂಬಂಧಿಸಿದ ಸಾಲದ ವೆಚ್ಚವು ಹೆಚ್ಚಾಗಿರುವುದರಿಂದ "ಸಾವರಿನ್‌ ಚಿನ್ನದ ಬಾಂಡ್ (SGB)" ಯೋಜನೆಯನ್ನು ಸ್ಥಗಿತಗೊಳಿಸಲು ಕೇಂದ್ರವು ನಿರ್ಧರಿಸಿದೆ.

ಸಾವರಿನ್ ಗೋಲ್ಡ್‌ ಬಾಂಡ್ ಯೋಜನೆ ಸ್ಥಗಿತಗೊಳಿಸಿದ ಕೇಂದ್ರ, ಕಾರಣ?

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಕೇಂದ್ರ ಸರ್ಕಾರದ ಪರವಾಗಿ ಸಾರ್ವಭೌಮ ಚಿನ್ನದ ಬಾಂಡ್‌ಗಳನ್ನು ವಿತರಿಸುತ್ತದೆ. ಈ ಹಿಂದೆ, ಈ ಬಾಂಡ್‌ಗಳನ್ನು ವಿವಿಧ ಭಾರಿ ವಿತರಿಸಲಾಗುತ್ತಿತ್ತು - ಆರಂಭದಲ್ಲಿ ಪ್ರತಿ ತಿಂಗಳು ಹಲವಾರು ಬಾರಿ, ನಂತರ ತಿಂಗಳಿಗೊಮ್ಮೆ, ತದನಂತರ ಪ್ರತಿ ಮೂರು ತಿಂಗಳಿಗೊಮ್ಮೆ ವರ್ಷಕ್ಕೆ ನಾಲ್ಕು ಬಾರಿ. ಆದರೆ ಕಳೆದ ಕೆಲವು ತಿಂಗಳುಗಳಿಂದ, ನಿರ್ದಿಷ್ಟವಾಗಿ 2024 ರ ಫೆಬ್ರವರಿಯಿಂದ ಯಾವುದೇ ಹೊಸ ಬಾಂಡ್‌ಗಳನ್ನು ವಿತರಿಸಲಾಗಿರಲಿಲ್ಲ.

ಮಾಧ್ಯಮಗೋಷ್ಠಿಯಲ್ಲಿ ಸಾರ್ವಭೌಮ ಚಿನ್ನದ ಬಾಂಡ್ (SGB) ಯೋಜನೆಯ ಭವಿಷ್ಯ ವರದಿಗಾರರು "ಈ ಬಜೆಟ್‌ನಲ್ಲಿ ಸಾವರಿನ್‌ ಚಿನ್ನದ ಬಾಂಡ್‌ಗಳ ಬಗ್ಗೆ ಯಾವುದೇ ಉಲ್ಲೇಖವಿಲ್ಲ.' ಕಳೆದ ಕೆಲವು ತ್ರೈಮಾಸಿಕಗಳಿಂದ ಯಾವುದೇ ಹೊಸ ಬಾಂಡ್‌ಗಳನ್ನು ನೀಡಲಾಗಿಲ್ಲ. ಇದನ್ನು ಯೋಜನೆಯ ಅಂತ್ಯದ ಸೂಚನೆ ಎಂದು ಪರಿಗಣಿಸಬಹುದೇ?' ಎಂದು ಕೇಳಿದಾಗ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, 'ಒಂದು ರೀತಿಯಲ್ಲಿ ಹೌದು' ಎಂದು ಉತ್ತರಿಸಿ ಪರೋಕ್ಷವಾಗಿ ಒಪ್ಪಿಕೊಂಡರು. ಆರ್ಥಿಕ ವ್ಯವಹಾರಗಳ ಇಲಾಖೆ (ಡಿಇಎ) ಕಾರ್ಯದರ್ಶಿ ಅಜಯ್ ಸೇಠ್ ಈ ಕುರಿತು ಮಾತನಾಡಲಿದ್ದಾರೆ" ಎಂದು ಅವರು ಹೇಳಿದರು.

"ಇವು ಮಾರುಕಟ್ಟೆಯಿಂದ ಸಾಲ ಪಡೆಯುವ ಉದ್ದೇಶದಿಂದ, ಬಜೆಟ್ ಹಣಕಾಸು ಒದಗಿಸುವ ಉದ್ದೇಶದಿಂದ ತೆಗೆದುಕೊಳ್ಳಲಾದ ನಿರ್ಧಾರಗಳು. ಒಂದು ನಿರ್ದಿಷ್ಟ ಸಮಯದಲ್ಲಿ, ಈ ಆಸ್ತಿ ವರ್ಗವನ್ನು ಬೆಂಬಲಿಸಬೇಕೇ ಅಥವಾ ಬೇಡವೇ ಎಂಬುದು ನಿರ್ಧರಿಸಲಾಗುತ್ತದೆ. ಇತ್ತೀಚಿನ ಅನುಭವಗಳ ಪ್ರಕಾರ, ಇದು ಸರ್ಕಾರಕ್ಕೆ ಸಾಕಷ್ಟು ದುಬಾರಿ ಸಾಲವಾಗಿತ್ತು. ಆದ್ದರಿಂದ, ಸರ್ಕಾರವು ಆ ಮಾರ್ಗವನ್ನು ಅನುಸರಿಸದಿರಲು ನಿರ್ಧರಿಸಿದೆ" ಎಂದು ಈ ಯೋಜನೆಯು ಸರ್ಕಾರದ ಮೇಲೆ ಆರ್ಥಿಕ ಹೊರೆಯಾಗಿ ಪರಿಣಮಿಸಿದೆ ಎನ್ನುವ ಅರ್ಥದಲ್ಲಿಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಅಜಯ್ ಸೇಠ್ ಅವರು ವಿವರಿಸಿದರು

FY25 ಬಜೆಟ್‌ನಲ್ಲಿ SGB ಗಳಿಗೆ 18,500 ಕೋಟಿ ರೂ.ಗಳನ್ನು ಮೀಸಲಿಡಲಾಗಿದ್ದರೂ (ಮಧ್ಯಂತರ ಬಜೆಟ್‌ನಲ್ಲಿ 26,852 ಕೋಟಿ ರೂ.ಗಳಿಂದ ಕಡಿಮೆಯಾಗಿದೆ), ಪ್ರಸಕ್ತ ಹಣಕಾಸು ವರ್ಷದಲ್ಲಿ ಯಾವುದೇ ಹೊಸ SGB ಕಂತುಗಳನ್ನು ವಿತರಿಸಲಾಗಿಲ್ಲ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಕೊನೆಯ ಬಾರಿಗೆ ಫೆಬ್ರವರಿ 2023 ರಲ್ಲಿ 8,008 ಕೋಟಿ ರೂ. ಮೌಲ್ಯದ SGB ಗಳನ್ನು ವಿತರಿಸಿತು. ಯೋಜನೆಯ ಪ್ರಾರಂಭದಿಂದ, FY23 ರವರೆಗೆ SGB ಯೋಜನೆಯಡಿ ಒಟ್ಟು 45,243 ಕೋಟಿ ರೂ.ಗಳನ್ನು ವಿತರಿಸಲಾಗಿದೆ ಮತ್ತು ಮಾರ್ಚ್ 2023 ರ ವೇಳೆಗೆ 4.5 ಲಕ್ಷ ಕೋಟಿ ರೂ.ಗಳ ಬಾಕಿ ಮೊತ್ತವಿತ್ತು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+