ಗಲ್ಫ್‌ನಲ್ಲಿ ಬೃಹತ್‌ ವೈದ್ಯಕೀಯ ಸಾಮಾಜ್ಯವನ್ನೇ ನಿರ್ಮಿಸಿರುವ ಈ ಭಾರತೀಯ ನಿಮಗೆ ಗೊತ್ತಾ?

ನವದೆಹಲಿ, ಫೆಬ್ರವರಿ 13: ಶಂಶೀರ್ ವಯಾಲಿಲ್ ಪರಂಬತ್ ಅವರು ಭಾರತೀಯ ವಿಕಿರಣಶಾಸ್ತ್ರಜ್ಞ ಮತ್ತು ಉದ್ಯಮಿ. ಪರಂಬತ್ ಹುಟ್ಟಿದ್ದು ಕೇರಳದ ಕೋಯಿಕ್ಕೋಡ್ ನಲ್ಲಿ. ಅವರು ಯಾವಾಗಲೂ ಶೈಕ್ಷಣಿಕವಾಗಿ ಪ್ರತಿಭಾವಂತರಾಗಿದ್ದರು. ಶಾಲೆಯ ನಂತರ ಶಂಶೀರ್ ಎಂಬಿಬಿಎಸ್ ಅನ್ನು ಮಣಿಪಾಲದ ಕಸ್ತೂರಬಾ ವೈದ್ಯಕೀಯ ಕಾಲೇಜಿನಲ್ಲಿ ಮಗಿಸಿದರು.

ಎಂಬಿಬಿಎಸ್ ನಂತರ ರೇಡಿಯಾಲಜಿಯಲ್ಲಿ ಎಂಡಿ ಅನ್ನು ಚೆನ್ನೈನ ಶ್ರೀ ರಾಮಚಂದ್ರ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಮುಗಿಸಿದರು. ಅವರ ಶಿಕ್ಷಣ ಮುಗಿದ ನಂತರ, ಶಂಶೀರ್ ವಯಾಲಿಲ್ ಯುಎಇಯ ಅಬುಧಾಬಿಯ ಶೇಖ್ ಖಲೀಫಾ ಮೆಡಿಕಲ್ ಸಿಟಿಯಲ್ಲಿ ರೇಡಿಯಾಲಜಿಸ್ಟ್ ಆಗಿ ಕೆಲಸ ಮಾಡಿದರು. ಆದರೆ ಒಂದು ವರ್ಷದ ನಂತರ, ಅವರು ದೊಡ್ಡ ಯೋಜನೆ ಮಾಡಲು ನಿರ್ಧರಿಸಿದರು.

ಗಲ್ಫ್‌ನಲ್ಲಿ ವೈದ್ಯಕೀಯ ಸಾಮಾಜ್ಯವನ್ನೇ ನಿರ್ಮಿಸಿರುವ ಭಾರತೀಯ

2007 ರಲ್ಲಿ ಅವರು ತಮ್ಮ ಮೊದಲ ಆಸ್ಪತ್ರೆಯಾದ LLH ಅನ್ನು ಅಬುಧಾಬಿಯಲ್ಲಿ ತೆರೆದರು. ಶಂಶೀರ್ ವಯಾಲಿಲ್ ಅವರು ಬಿಲಿಯನೇರ್ ಎಂಎ ಯೂಸುಫ್ ಅಲಿ ಅವರ ಹಿರಿಯ ಪುತ್ರಿ ಶಬೀನಾ ಅವರನ್ನು ವಿವಾಹವಾಗಿದ್ದಾರೆ. ಯೂಸುಫ್ ಅಲಿ ಮಧ್ಯಪ್ರಾಚ್ಯದಲ್ಲಿ ಅತ್ಯಂತ ಶ್ರೀಮಂತ ಮತ್ತು ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರು.

ಫೋರ್ಬ್ಸ್ ಇಂಡಿಯಾ ಶ್ರೀಮಂತರ ಪಟ್ಟಿ 2023 ರ ಪ್ರಕಾರ, ಶಂಶೀರ್ ತನ್ನ ಕಠಿಣ ಪರಿಶ್ರಮದಿಂದ ತನ್ನ ಹೆಸರನ್ನು ಗಳಿಸಿಕೊಂಡಿದ್ದಾರೆ ಮತ್ತು ಭಾರತದ 57 ನೇ ಶ್ರೀಮಂತ ವ್ಯಕ್ತಿಯಾಗಿದ್ದಾನೆ. ಇಂದು ಫೋರ್ಬ್ಸ್ ಪ್ರಕಾರ ಶಂಶೀರ್ ವಯಾಲಿಲ್ ಅವರ ನಿವ್ವಳ ಮೌಲ್ಯವು 33,205 ಕೋಟಿ ರೂ. ಇದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+