For Quick Alerts
ALLOW NOTIFICATIONS  
For Daily Alerts

ಈ ಷೇರುಗಳ ಮೇಲೆ ಹೂಡಿಕೆಗೂ ಮುನ್ನ ಒಮ್ಮೆ ಯೋಚಿಸಿ

|

ಷೇರುಪೇಟೆಯ ಸೂಚ್ಯಂಕಗಳು ಉತ್ತುಂಗದಲ್ಲಿದ್ದು ಯಾವ ಷೇರಿನಲ್ಲಿ ಹೂಡಿಕೆ ಮಾಡಿದಲ್ಲಿ ಲಾಭ ಹೆಚ್ಚು ಎಂಬುದನ್ನು ನಿರ್ಧರಿಸಲು ಸ್ಪರ್ಧಾತ್ಮಕ ಚಿಂತನೆಗಳು, ವಿಶ್ಲೇಷಣೆಗಳು ನಡೆಯುತ್ತಿದ್ದು, ಮಾಧ್ಯಮಗಳಲ್ಲಿ ವಿವಿಧ ತಜ್ಞರ ವೈವಿಧ್ಯಮಯ ಚಿಂತನೆ ವಿಶ್ಲೇಷಣೆಗಳು ಬರುತ್ತಲೇ ಇದೆ. ಸೆನ್ಸೆಕ್ಸ್ ಮತ್ತು ನಿಫ್ಟಿಗಳು ಹೆಚ್ಚಾಗಿರುವ ಕಾರಣ ಈಗ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಷೇರುಗಳತ್ತ ಹೆಚ್ಚಿನವರ ಗಮನ ಹರಿಯುತ್ತಿದೆ.

 

ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಷೇರುಗಳ ಶಿಫಾರಸುಗಳು ಸಹ ಹೆಚ್ಚಾಗುತ್ತಿದೆ. ಕಾಲಚಕ್ರದಡಿಯಲ್ಲಿ ಇಂತಹ ಘಟಾನುಘಟಿ ಕಂಪನಿಗಳು ನೆಲಕಚ್ಚಿವೆ. ಅವುಗಳಲ್ಲಿ ಕೆಲವು ಚೇತರಿಸಿಕೊಂಡಿವೆ ಮತ್ತೆ ಕೆಲವು ತಲೆ ಎತ್ತದ ಸ್ಥಿತಿ ತಲುಪಿವೆ. ಈ ಸಂದರ್ಭದಲ್ಲಿ ಇಂತಹ ಷೇರುಗಳಲ್ಲಿ ಹೂಡಿಕೆ ಮಾಡಿದಲ್ಲಿ ಯಾವ ರೀತಿಯ ಬಂಡವಾಳ ಅಪಾಯಕ್ಕೊಳಗಾಗಬಹುದು ಎಂಬುದಕ್ಕೆ ನಿದರ್ಶನವಾಗಿದೆ.

ಡಿ ಎಲ್ ಎಫ್

ಡಿ ಎಲ್ ಎಫ್

ಈ ಕಂಪನಿಯು ಪ್ರತಿ ರೂ.2 ಷೇರನ್ನು ರೂ.550 ರಂತೆ 2007 ರಲ್ಲಿ ಐ ಪಿ ಓ ಮೂಲಕ ವಿತರಿಸಿತು. ನಂತರದಲ್ಲಿ ಷೇರಿನ ಬೆಲೆ ರೂ.1,400 ನ್ನು ದಾಟಿತಾದರೂ ಸ್ಥಿರತೆ ಕಾಣದೆ ಪೇಟೆಯಲ್ಲುಂಟಾದ ಬದಲಾವಣೆಯ ಕಾರಣ ರೂ.100 ರೊಳಗೆ ಕುಸಿದು ಸದ್ಯ ರೂ.200 ರ ಸಮೀಪವಿದೆ. ಆದರೆ ಇದು ತನ್ನ ಸಾಮರ್ಥ್ಯದ ಕಾರಣ ಚೇತರಿಕೆ ಕಂಡಿದೆ.

ಇಂಜಿನೀರ್ಸ್ ಇಂಡಿಯಾ

ಇಂಜಿನೀರ್ಸ್ ಇಂಡಿಯಾ

ಈ ಕಂಪನಿಯು 2014 ರಲ್ಲಿ ರೂ.150 ರಂತೆ ಐಪಿಒ ನಲ್ಲಿ ಷೇರು ವಿತರಿಸಿದೆ. ಈ ವರ್ಷದ ಕನಿಷ್ಠ ಬೆಲೆ ರೂ.92 ರವರೆಗೂ ಕುಸಿದು ಈಗ ರೂ.101 ರ ಸಮೀಪವಿದೆ.

ಅಪ್ಟೋ ಸರ್ಕ್ಯೂಟ್ಸ್ (ಇಂಡಿಯಾ)
 

ಅಪ್ಟೋ ಸರ್ಕ್ಯೂಟ್ಸ್ (ಇಂಡಿಯಾ)

ಈ ಕಂಪನಿ ಮೆಡಿಕಲ್ ಉಪಕರಣಗಳನ್ನು ತಯಾರಿಸುವ ಕಂಪೆನಿಯಾಗಿದ್ದು 2006 ರಲ್ಲಿ ಸುಮಾರು ರೂ.550 ರ ಸಮೀಪವಿದ್ದಂತಹ ಕಂಪನಿ 2012 ರವರೆಗೂ ಲಾಭಾಂಶ ವಿತರಿಸಿದ್ದಲ್ಲದೆ ಕೆಲವು ಬೋನಸ್ ಷೇರುಗಳನ್ನು ವಿತರಿಸಿದೆಯಾದರು, ನಂತರದ ವರ್ಷಗಳಲ್ಲಿ ರೋಗಗ್ರಸ್ಥವಾಗಿ ಈ ವರ್ಷ ರೂ.2.96 ರವರೆಗೂ ಇಳಿಕೆ ಕಂಡು ಈಗ ರೂ.4.10 ತಲುಪಿದೆ. ಜೂನ್ 2018 ರ ನಂತರದಲ್ಲಿ ಸತತವಾದ ಇಳಿಕೆಗೊಳಪಟ್ಟು ಚೇತರಿಕೆ ಕಾಣುವ ಸೂಚನೆಯೇ ಸಿಗದಂತಾಗಿದೆ. ಈ ತಿಂಗಳ 14 ರಂದು ತನ್ನ ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿದೆ.

ಎಸ್ ಈ ಎಲ್ ಮ್ಯಾನುಫ್ಯಾಕ್ಚರಿಂಗ್ ಕಂಪನಿ

ಎಸ್ ಈ ಎಲ್ ಮ್ಯಾನುಫ್ಯಾಕ್ಚರಿಂಗ್ ಕಂಪನಿ

ಟೆಕ್ಸ್ ಟೈಲ್ ವಲಯದ ಕಂಪೆನಿಯಾಗಿದ್ದು 2007 ರಲ್ಲಿ ಈ ಕಂಪನಿಯ ಷೇರಿನ ಬೆಲೆ ರೂ.220 ರ ಸಮೀಪವಿದ್ದ ಈ ಕಂಪನಿ ಈಗ ರೂ.0.75 ರ ಸಮೀಪವಿದೆ. 2010 ರಲ್ಲಿ ರೂ.60 ರ ಸಮೀಪದಿಂದ ಕುಸಿತಕ್ಕೊಳಗಾಗಿ ನಂತರದ ದಿನಗಳಲ್ಲಿ ತಲೆ ಎತ್ತದಾಗಿದೆ. ವಿಸ್ಮಯವೆಂದರೆ ಈ ಷೇರಿನ ಬೆಲೆ ಆಗಸ್ಟ್ 2008 ರಲ್ಲಿ ರೂ.735 ಗರಿಷ್ಟದಲ್ಲಿದ್ದಂತಹ ಕಂಪನಿ ಷೇರಿನ ಬೆಲೆ ರೂ.0.75 ಕ್ಕೆ ಕುಸಿದು ಚೇತರಿಕೆ ಕಾಣದಂತಹ ಪರಿಸ್ಥಿತಿಯಲ್ಲಿದೆ ಎಂಬುದಾಗಿದೆ.

ಸುಜುಲಾನ್ ಎನರ್ಜಿ

ಸುಜುಲಾನ್ ಎನರ್ಜಿ

ವಿಂಡ್ ಎನರ್ಜಿ ವಲಯದ ಕಂಪನಿ ಇದಾಗಿದೆ. ಒಂದು ಕಾಲದಲ್ಲಿ ಈ ಕಂಪನಿ ವಹಿವಾಟುದಾರರ ಅಭಿಮಾನಿ ಕಂಪೆನಿಯಾಗಿದ್ದು ರಭಸದ ಚಟುವಟಿಕೆ ಪ್ರದರ್ಶಿಸುತ್ತಿತ್ತು. ರೂ.2 ರ ಮುಖಬೆಲೆಯ ಈ ಕಂಪನಿಯ ಷೇರಿನ ಬೆಲೆ 2008 ರಲ್ಲಿ ರೂ.460 ರ ಸಮೀಪವಿದ್ದು 2009 ರ ಮಾರ್ಚ್ ಅಂತ್ಯದಲ್ಲಿ ಶೇ.43 ರಷ್ಟು ಭಾಗಿತ್ವವನ್ನು ಹೊಂದಿದ್ದಂತಹ ಪ್ರವರ್ತಕರು 2016 ರ ಮಾರ್ಚ್ ಅಂತ್ಯದಲ್ಲಿ ಅದು ಶೇ.17.54 ಕ್ಕೆ ಕುಸಿದಿದೆ. ಸೆಪ್ಟೆಂಬರ್ 2019 ರ ಅಂತ್ಯದಲ್ಲಿ ಪ್ರವರ್ತಕರ ಭಾಗಿತ್ವವು ಶೇ.19.82 ರಲ್ಲಿದೆ. ಅಲ್ಲದೆ ಪ್ರವರ್ತಕರ ಭಾಗಿತ್ವದಲ್ಲಿ ರೂ.227 ಕೋಟಿಯಷ್ಟು ಬಂಡವಾಳ ಒತ್ತೆಯಿಟ್ಟು ಸಾಲ ಪಡೆಯಲಾಗಿದೆ.

ಯುನಿಟೆಕ್ ಲಿ

ಯುನಿಟೆಕ್ ಲಿ

ರಿಯಲ್ ಎಸ್ಟೇಟ್ ವಲಯದ ಈ ಕಂಪನಿ ಭಾರಿ ದಾಖಲೆಯನ್ನು ನಿರ್ಮಿಸಿದ್ದಾಗಿದೆ. 2006 ರ ಜೂನ್ ತಿಂಗಳಲ್ಲಿ ಷೇರಿನ ಬೆಲೆ ರೂ.12,600 ರಲ್ಲಿದ್ದಂತಹ ಈ ಕಂಪನಿ ನಂತರದಲ್ಲಿ ಪ್ರತಿ ಒಂದು ಷೇರಿಗೆ 12 ರಂತೆ ಮತ್ತು ನಂತರದ ವರ್ಷದಲ್ಲಿ 1:1 ರ ಅನುಪಾತದ ಬೋನಸ್ ಷೇರು ನೀಡಿದೆ. ಷೇರಿನ ಮುಖಬೆಲೆಯನ್ನು ರೂ.2 ಕ್ಕೆ ಸೀಳಿದೆ. ಇಂತಹ ಷೇರಿನ ಬೆಲೆ ಈಗ ರೂ.0.75 ರಲ್ಲಿರುವುದು ಷೇರುಪೇಟೆಯಲ್ಲಿ ಬಂಡವಾಳ ಕರಗುವ ಮಟ್ಟದ ಅರಿವನ್ನು ಮೂಡಿಸುತ್ತದೆ.

ವಿಡಿಯೋಕಾನ್

ವಿಡಿಯೋಕಾನ್

2007 ರಲ್ಲಿ ರೂ.685 ರ ಸಮೀಪವಿದ್ದಂತಹ ಈ ಕಂಪನಿಯ ಷೇರು ಹೆಚ್ಚು ರಭಸಮಯವಾದ ಚಟುವಟಿಕೆಯನ್ನು ಪ್ರದರ್ಶಿಸುತ್ತಿತ್ತು. ಕಾಲನುಕಾಲದಲ್ಲಿ ಬದಲಾವಣೆ, ಬೆಳವಣಿಗೆಗಳ ಕಾರಣ ಈ ಕಂಪನಿಯ ಷೇರಿನ ಬೆಲೆ 2011 ರಲ್ಲಿ ರೂ.200ಕ್ಕೆ ಕುಸಿಯಿತು. ಇಂತಹ ಕಂಪನಿ ಈಗ ರೂ.1.55 ರ ಸಮೀಪ ವಹಿವಾಟಾಗುತ್ತಿದೆ. ಹೀಗೆ ಇಂದು ಉತ್ಕೃಷ್ಟವಾದ ಸಾಧನೆ ತೋರಿದರು ಮುಂದಿನ ದಿನಗಳಲ್ಲಿ ಕಂಪನಿಗಳು ತಮ್ಮ ಸಾಮರ್ಥ್ಯದಿಂದ ಬರುವ ಸಂಕಷ್ಟಗಳನ್ನು ಎದುರಿಸುವ ಸಾಮರ್ಥ್ಯವನ್ನು ಹೊಂದಿದೆಯೋ ಇಲ್ಲವೋ ಎಂಬ ಪರೀಕ್ಷೆಗೊಳಪಡುತ್ತವೆ.

ಬದಲಾವಣೆಗಳ ಒತ್ತಡ, ಪ್ರಭಾವ, ಸ್ಪರ್ಧೆ, ಮುಂತಾದವುಗಳನ್ನೆದುರಿಸುವ ಸಾಮರ್ಥ್ಯದ ಮೇಲೆ ಭವಿಷ್ಯವು ನಿರ್ಧರಿತವಾಗುವುದು. ದೀರ್ಘಕಾಲೀನ ಹೂಡಿಕೆ ಎಂದು ಆಯ್ಕೆ ಮಾಡಿಕೊಂಡರು, ಅತಿ ಹೆಚ್ಚಿನ ಲಾಭ ಗಳಿಸಿಕೊಟ್ಟ ಸಂದರ್ಭದಲ್ಲಿ ಮಾರಾಟಮಾಡಿ ನಿರ್ಗಮಿಸುವುದು ಉತ್ತಮ. ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಷೇರುಗಳು ಹೂವಿನಂತೆ ಅಲ್ಪಾಯು, ಲಾರ್ಜ್ ಕ್ಯಾಪ್ ಷೇರುಗಳು ಒಂದು ರೀತಿ ಡ್ರೈ ಫ್ರೂಟ್ ರೀತಿ ದೀರ್ಘಕಾಲೀನ ಪ್ರಭಾವಿಯಾಗಿರುತ್ತದೆ.

 

English summary

Share Market Present Situation

These are the examples shares which are most of variation in share market.Think before invest
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X