ಸೋನಿ ಟೆಲಿವಿಷನ್‌ನಲ್ಲಿ ಪ್ರಸಾರವಾಗುವ ಖ್ಯಾತ ಬಿಸಿನೆಸ್ ರಿಯಾಲಿಟಿ ಶೋ "ಶಾರ್ಕ್ ಟ್ಯಾಂಕ್ ಇಂಡಿಯಾ " ತನ್ನ ನಾಲ್ಕನೇ ಸೀಸನ್ ಹೊರತರಲು ಸಿದ್ದತೆ ನಡೆಸಿದ್ದು, ಇದಕ್ಕಾಗಿ ಕಳೆದ ವಾರದಿಂದ ಚಿತ್ರೀಕರಣ ಪ್ರಾರಂಭಿಸಿದೆ. ಆದರೆ ವಿಷಯ ಇದಲ್ಲ, ಈ ಶಾರ್ಕ್ ಟ್ಯಾಂಕ್ ರಿಯಾಲಿಟಿ ಶೋವನ್ನು ಈ ಬಾರಿ ಸ್ವಿಗ್ಗಿ ಪ್ರಾಯೋಜಿಸುತ್ತಿದ್ದು ಇದರ ನೇರ ಪರಿಣಾಮ ಆಗಿದ್ದು ಪ್ರತಿಸ್ಪರ್ಧಿ ಸಂಸ್ಥೆಯಾಗಿರುವ ಝೊಮ್ಯಾಟೊಗೆ.!
ಆರಂಭಿಕ ಸಾರ್ವಜನಿಕ ಷೇರು ಬಿಡುಗಡೆ(IPO)ಗಾಗಿ ತಯಾರಿ ನಡೆಸುತ್ತಿರುವ ಆಹಾರ ಮತ್ತು ದಿನಸಿ ಪ್ಲಾಟ್ ಫಾರಂ ಆಗಿರುವ Swiggy 25 ಕೋಟಿ ರೂ.ಗಳಿಗೆ ಈ ರಿಯಾಲಿಟಿ ಶೋ ವನ್ನು ಪ್ರಾಯೋಜಿಸಲಿದೆ. ಆದರೆ ತನ್ನ ಪ್ರಯೋಜಕತ್ವಕ್ಕೆ ಒಂದು ಷರತ್ತು ಹಾಕಿದ್ದು ಇದರ ನೇರ ಪರಿಣಾಮ ಝೊಮ್ಯಾಟೊ ಆಗಿದೆ. ಸ್ವಿಗ್ಗಿ ಮಾಡಿರುವ ಒಪ್ಪಂದ ಭಾಗವಾಗಿ ಈ ಬಾರಿಯ ಅವೃತ್ತಿಯಲ್ಲಿ ಶಾರ್ಕ್‌ಗಳ ಲಿಸ್ಟ್ ನಿಂದ ಝೊಮ್ಯಾಟೊ ಸಿಈಒ ದೀಪಿಂದರ್ ಗೋಯಲ್ ಅವರು ಇರುವಂತಿಲ್ಲ.! ಹೀಗಾಗಿ ಗೋಯಲ್ ಅವರನ್ನು ಕಾರ್ಯಕ್ರಮದ ನಿರ್ಣಾಯಕರ ಪಟ್ಟಿಯಿಂಡ ಹೊರಗಿಡಲಾಗಿದೆ.

ಈ ಬಾರಿಯ ಶೋನಲ್ಲಿ ಶಾರ್ಕ್‌ಗಳಾಗಿ ಅನುಪಮ್ ಮಿತ್ತಲ್ (ಪೀಪಲ್ ಗ್ರೂಪ್), ಅಮನ್ ಗುಪ್ತಾ (ಬೋಟ್), ನಮಿತಾ ಥಾಪರ್ (ಎಂಕ್ಯೂರ್ ಫಾರ್ಮಾಸ್ಯುಟಿಕಲ್ಸ್), ಪಿಯೂಶ್ ಬನ್ಸಾಲ್ (ಲೆನ್ಸ್‌ಕಾರ್ಟ್), ಮತ್ತು ರಿತೇಶ್ ಅಗರ್ವಾಲ್ (ಒವೈಒ). ಹೊಸ ಆತಿಥೇಯ್ ಶಾರ್ಕ್ ಗಳಾಗಿ ಸಾಹಿಬಾ ಬಾಲಿ ಮತ್ತು ಆಶಿಶ್ ಸೋಲಂಕಿ ಕೂಡ ಈ ಅವೃತ್ತಿಯಲ್ಲಿ ಕಾರ್ಯಕ್ರಮವನ್ನು ಸೇರಿಕೊಳ್ಳಲಿದ್ದಾರೆ.
Zomato ನ ದೀಪಿಂದರ್ ಗೋಯಲ್ ಹೇಳಿದ್ದೇನು?
ಮಾಧ್ಯಮ ಸಂಸ್ಥೆಯೊಂದು ನಡೆಸಿದ ಸ್ಟಾರ್ಟ್‌ಅಪ್ ಅವಾರ್ಡ್ಸ್‌ನಲ್ಲಿ ಇತ್ತೀಚಿನ ಸಂದರ್ಶನವೊಂದರಲ್ಲಿ, ಗೋಯಲ್ ಅವರು ಶೋನಲ್ಲಿನ ತಮ್ಮ ಸಂಕ್ಷಿಪ್ತ ಅನುಭವದ ಬಗ್ಗೆ ಮಾತನಾಡುತ್ತಾ, ಸ್ಟಾರ್ಟ್‌ಅಪ್‌ಗಳ ಬಗ್ಗೆ ವಿಭಿನ್ನ ದೃಷ್ಟಿಕೋನವನ್ನು ಒದಗಿಸಲು ಶಾರ್ಕ್ ಟ್ಯಾಂಕ್ ಪ್ಯಾನೆಲ್‌ಗೆ ಸೇರಿದ್ದೆ ಎಂದು ಹೇಳಿದ್ದಾರೆ.
"ಹೊಸ ಅಲೋಚನೆಗಳನ್ನು ಹುಟ್ಟುಹಾಕುವ ಉದ್ದೇಶದಿಂದ ರಿಯಾಲಿಟಿ ಶೋ ಶಾರ್ಕ್ ಆಗಿ ತೆರಳಿದ್ದೆ. ಕಾರ್ಯಕ್ರಮ ಹೆಚ್ಚು ನೈಜವಾಗಿರಬೇಕು, ಸ್ಟಾರ್ಟ್ ಅಪ್ ಗಳನ್ನು ಹೇಗೆ ಕಟ್ಟಬೇಕು ಎಂಬ ಈಗ ಇರುವ ಜನರ ಪರಿಕಲ್ಪನೆ ಬದಲಿಸಿ ಹೊಸ ರೂಪುಕೊಡಬೇಕು ಹೊಸ ಆಯಾಮ ಕೊಡಬೇಕು ಎಂದುಕೊಂಡಿದ್ದೆ.ಆದರೆ ದುರದೃಷ್ಟವಶಾತ್, ಸ್ವಿಗ್ಗಿ ಕಾರ್ಯಕ್ರಮವನ್ನು ಪ್ರಾಯೋಜಿಸಿದ ಕಾರಣ ನಾನು ಹಿಂತಿರುಗಲು ಸಾಧ್ಯವಿಲ್ಲ ಮತ್ತುಅವರು ನನ್ನನ್ನು ತೆಗೆದುಹಾಕಿದ್ದಾರೆ. ಕನಿಷ್ಠ ಪಕ್ಷ ಅದನ್ನಾದರೂ ನನ್ನ ಗಮನಕ್ಕೆ ತಂದಿದ್ದಾರೆ" ಎಂದು ಹೇಳಿದ್ದಾರೆ.
ಶಾರ್ಕ್ ಟ್ಯಾಂಕ್ ಎಂದರೇನು?
ಶಾರ್ಕ್ ಟ್ಯಾಂಕ್ ಎನ್ನುವುದು ಒಂದು ಜಾಗತಿಕವಾಗಿ ಹೆಸರುವಾಸಿಯಾಗಿರುವ ಬಿಸಿನೆಸ್ ರಿಯಾಲಿಟಿ ಶೋ ಆಗಿದೆ. ಜಾಗತಿಕವಾಗಿ ೪೦ಕ್ಕೂ ಹೆಚ್ಚು ದೇಶದಲ್ಲಿ ಈ ಶೋಗಳು ನಡೆದಿವೆ. ಭಾರತದಲ್ಲಿ ಶಾರ್ಕ್ ಟ್ಯಾಂಕ್ ಇಂಡಿಯಾ ಎಂಬ ಹೆಸರಿನಲ್ಲಿ ಇದು ಜನಪ್ರಿಯವಾಗಿದ್ದು, ಸ್ಟಾರ್ಟ್ ಅಪ್ ವ್ಯವಸ್ಥೆಯನ್ನು ವೇಗಗೊಳಿಸುವ ನಿಟ್ಟಿನಲ್ಲಿ ಸಹಕಾರಿಯಾಗಿದೆ. ಇಲ್ಲಿ ಶಾರ್ಕ್ ಗಳೆಂದರೆ ನಿರ್ಣಾಯಕ ಅಥವಾ ಜಡ್ಜ್ ಗಳಾಗಿದ್ದರೂ, ಇವರು ಮಲ್ಟಿ ಮಿಲಿಯನೇರ್ ಉದ್ಯಮಿಗಳಾಗಿರುತ್ತಾರೆ.
ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ಯಲ್ಲಿ ಇತ್ತೀಚೆಗೆ ತನ್ನ ನವೀಕರಿಸಿದ ಡ್ರಾಫ್ಟ್ ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್ (DRHP) ಅನ್ನು ಸಲ್ಲಿಸಿದ Swiggy, IPO ಗಾಗಿ ತಯಾರಿ ನಡೆಸುತ್ತಿದೆ. ಈ ಕೊಡುಗೆಯು 3,750 ಕೋಟಿ ರೂಪಾಯಿಗಳ ಹೂಡಿಕೆ ಉದ್ದೇಶದಿಂದ, 18.53 ಕೋಟಿ ಷೇರುಗಳ ಮಾರಾಟದ ಕೊಡುಗೆ (OFS) ಅನ್ನು ಒಳಗೊಂಡಿದೆ, ಪ್ರತಿ ಷೇರಿಗೆ 350 ರೂಪಾಯಿಗಳ ಬೆಲೆಯಲ್ಲಿ ಅಂದಾಜು 6,500 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಲಿದ್ದಾರೆ.
ಈ ನೂತನ ಐಪಿಒ ಮೂಲಕ ಕಂಪನಿಯ ಹೂಡಿಕೆ 1.25 ಶತಕೋಟಿ ಅಮೇರಿಕನ್ ಡಾಲರ್ ನಿಂದ 1.4 ಶತಕೋಟಿ ಡಾಲರ್ ಗೆ ತಲುಪಲಿದೆ.


Click it and Unblock the Notifications