For Quick Alerts
ALLOW NOTIFICATIONS  
For Daily Alerts

ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ನೂತನ ಸಿಇಓ ಶಶಿಧರ್ ಜಗದೀಶನ್

|

ಆದಿತ್ಯ ಪುರಿಯ ನಂತರ ಎಚ್‌ಡಿಎಫ್‌ಸಿ ಬ್ಯಾಂಕಿನ ಮುಂದಿನ ಸಿಇಒ ಆಗಿ ಭಾರತೀಯ ರಿಸರ್ವ್ ಬ್ಯಾಂಕ್ ಶಶಿಧರ್ ಜಗದೀಶನ್ ಅವರ ಹೆಸರನ್ನು ಅಂಗೀಕರಿಸಿದೆ ಎಂದು ಎಚ್‌ಡಿಎಫ್‌ಸಿ ತಿಳಿಸಿದೆ.

ಪ್ರಸ್ತುತ ಸಿಇಓ ಆದಿತ್ಯ ಪುರಿ ಈ ವರ್ಷದ ಅಕ್ಟೋಬರ್‌ನಲ್ಲಿ ನಿವೃತ್ತಿ ಹೊಂದಲಿದ್ದಾರೆ. ಕಳೆದ ತಿಂಗಳ ಆರಂಭದಲ್ಲಿ ಪುರಿ ಎಚ್‌ಡಿಎಫ್‌ಸಿ ಬ್ಯಾಂಕಿನ 843 ಕೋಟಿ ರುಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದರು.

Q1: ಎಚ್‌ಡಿಎಫ್‌ಸಿ ಬ್ಯಾಂಕ್‌ನ ನಿವ್ವಳ ಲಾಭದಲ್ಲಿ ಶೇ 19.6 ರಷ್ಟು ಏರಿಕೆ

ಶಶಿಧರ್ ಜಗದೀಶನ್ ಪ್ರಸ್ತುತ ಎಚ್‌ಡಿಎಫ್‌ಸಿ ಬ್ಯಾಂಕಿನ ಗ್ರೂಪ್ ಹೆಡ್ ಮತ್ತು ಚೇಂಜ್ ಏಜೆಂಟ್. 1996 ರಲ್ಲಿ ಹಣಕಾಸು ಕಾರ್ಯದಲ್ಲಿ ವ್ಯವಸ್ಥಾಪಕರಾಗಿ ಬ್ಯಾಂಕ್‌ಗೆ ಸೇರಿದರು ಮತ್ತು ನಂತರ 1999 ರಲ್ಲಿ ಬಿಸಿನೆಸ್ ಹೆಡ್-ಫೈನಾನ್ಸ್ ಆದರು. ಎಚ್‌ಡಿಎಫ್‌ಸಿ ಬ್ಯಾಂಕಿನ ಮುಖ್ಯಸ್ಥರಾಗಿ ಶೀಘ್ರದಲ್ಲೇ ಮುಖ್ಯ ಹಣಕಾಸು ಅಧಿಕಾರಿಯಾಗಿ ನೇಮಕಗೊಂಡರು. ಬ್ಯಾಂಕಿಂಗ್ ಉದ್ಯಮದಲ್ಲಿ ಸುಮಾರು 3 ದಶಕಗಳ ಅನುಭವವನ್ನು ಹೊಂದಿರುವ ಶಶಿಧರ್ ಜಗದೀಶನ್ ವೃತ್ತಿಯಲ್ಲಿ ಚಾರ್ಟೆಡ್ ಅಕೌಂಟೆಂಟ್ ಆಗಿದ್ದು, ಅವರು ಬ್ಯಾಂಕಿಂಗ್ ಮತ್ತು ಹಣಕಾಸು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.

ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ನೂತನ ಸಿಇಓ ಶಶಿಧರ್ ಜಗದೀಶನ್

 

ಹೊರಹೋಗುವ ಆದಿತ್ಯ ಪುರಿ ಅವರು ವಿಶ್ವಮಟ್ಟದ ಇಂಡಿಯನ್ ಬ್ಯಾಂಕ್ ಅನ್ನು ರಚಿಸುವ ಗುರಿಯನ್ನು ಹೊಂದಿದ್ದರಿಂದ ಖಾಸಗಿ ವಲಯದ ಬ್ಯಾಂಕನ್ನು ಮೂಲ ಹಂತದಿಂದ ಪೋಷಿಸಿದರು. ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ಮೊದಲು ಆದಿತ್ಯ ಪುರಿ ಮಲೇಷ್ಯಾದಲ್ಲಿ ಸಿಟಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕರಾಗಿದ್ದರು, ಅಲ್ಲಿ ಅವರು ಗ್ರೀಸ್, ಸೌದಿ ಅರೇಬಿಯಾ, ಹಾಂಗ್ ಕಾಂಗ್, ಕೊರಿಯಾ, ತೈವಾನ್, ಭಾರತ ಮತ್ತು ಚೀನಾದಂತಹ ದೇಶಗಳಲ್ಲಿ ಕಾರ್ಯಗಳನ್ನು ನಿರ್ವಹಿಸಿದರು. ಪುರಿಯೂ ಸಹ ಪಂಜಾಬ್ ವಿಶ್ವವಿದ್ಯಾಲಯದಿಂದ ವಾಣಿಜ್ಯ ಅಧ್ಯಯನ ಮಾಡಿದ ವೃತ್ತಿಯಲ್ಲಿ ಚಾರ್ಟೆಡ್ ಅಕೌಂಟೆಂಟ್ ಆಗಿದ್ದರು.

Read more about: hdfc bank ceo ಬ್ಯಾಂಕ್
English summary

RBI approves Sashidhar Jagdishan's name for CEO of HDFC Bank

Shashidhar Jagdishan Is New CEO For HDFC Bank: RBI Approves
Company Search
COVID-19