13,844 ಕೋಟಿ ರೂಪಾಯಿ ಮಾರುಕಟ್ಟೆ ಬಂಡವಾಳ ಹೊಂದಿರುವ ಕಂಪೆನಿ ಮುಖ್ಯಸ್ಥೆ ಈಕೆ! ಇವರ ಹೆಸರಿನಲ್ಲಿ ಯಾಕಿದೆ ಟಾಟಾ?

ದೇಶದ ಪ್ರಸಿದ್ದ ಕಂಪೆನಿಗಳಲ್ಲಿ ಒಂದಾಗಿರುವ ಕಿರ್ಲೋಸ್ಕರ್‌ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಪಂಪ್‌ಸೆಟ್‌, ವಾಲ್ವ್‌ ಮುಂತಾದ ಉತ್ಪನ್ನಗಳನ್ನು ತಯಾರಿಸುವ ಕಂಪೆನಿಯಾಗಿರುವ ಸಂಸ್ಥೆ ಇಂದು ಭಾರತದ ಮುಖ್ಯ ಕಂಪೆನಿಗಳಲ್ಲಿ ಒಂದೆಂದು ಗುರುತಿಸಿಕೊಂಡಿದೆ. ಇನ್ನು ಇದೇ ಸಂಸ್ಥೆಯ ಭಾಗವಾಗಿರುವ ಟೊಯೊಟಾ ಕಿರ್ಲೋಸ್ಕರ್‌ ಮೋಟಾರ್‌ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ವಿಕ್ರಮ್‌ ಕಿರ್ಲೋಸ್ಕರ್‌ ಕೂಡ ಸಾಹಸಮಯಿ ಉದ್ಯಮಿಯಾಗಿದ್ದಾರೆ.

ಕಿರ್ಲೋಸ್ಕರ್‌ ಉದ್ಯಮ ಕುಟುಂಬದ ನಾಲ್ಕನೇ ತಲೆಮಾರಾಗಿರುವ ವಿಕ್ರಮ್‌ ಕಿರ್ಲೋಸ್ಕರ್‌ ಅವರು 1990ರಲ್ಲಿ ಭಾರತಕ್ಕೆ ಜಗತ್‌ ಪ್ರಸಿದ್ದ ಟೊಯೊಟಾ ಉದ್ಯಮವನ್ನು ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದರ ಪರಿಣಾಮವೇ 1997ರಲ್ಲಿ ಟೊಯೊಟಾ ಕಿರ್ಲೋಸ್ಕರ್‌ ಮೋಟಾರ್ಸ್‌ ಎಂಬ ಸಂಸ್ಥೆಯ ಜನನಕ್ಕೆ ಕಾರಣವಾಯಿತು.

13,844 Cr. ರೂಪಾಯಿ ಮಾರುಕಟ್ಟೆ ಬಂಡವಾಳ ಹೊಂದಿರುವ ಕಂಪೆನಿ ಮುಖ್ಯಸ್ಥೆ

ಇದೇ ವಿಕ್ರಮ್‌ ಕಿರ್ಲೋಸ್ಕರ್‌ ಅವಧಿಯಲ್ಲಿ ಟೊಯೊಟಾ ಹಾಗೂ ಕಿರ್ಲೋಸ್ಕರ್‌ ಜಂಟಿಯಾಗಿ ಕ್ವಾಲಿಸ್‌, ಇನ್ನೊವಾ, ಫಾರ್ಚುನರ್‌ ಹಾಗೂ ಕರೊಲ್ಲಾ ಮುಂತಾದ ಜನಪ್ರಿಯ ಕಾರ್‌ ಗಳನ್ನು ಹೊರತರಲು ಸಾಧ್ಯವಾಯಿತು. ಅದೂ ಅಲ್ಲದೆ ವಿಕ್ರಮ್‌ ಅವರು ಸೊಸೈಟಿ ಆಫ್‌ ಇಂಡಿಯನ್‌ ಆಟೋಮೊಬೈಲ್‌ ಮ್ಯಾನ್ಯುಫಾಕ್ಚರರ್‌ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ್ದರು.

2022ರಲ್ಲಿ ಸಂಸ್ಥೆಗೆ ಆಘಾತ

ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ವಿಕ್ರಮ್‌ ಅವರು 2022ರ ನವೆಂಬರ್‌ 29 ತಮ್ಮ 64ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು. ಸಹಜವಾಗಿಯೇ ಸಂಸ್ಥೆಗೆ ಬಹುದೊಡ್ಡ ಆಘಾತವನ್ನೇ ತಂದಿದ್ದು, ಸುಳ್ಳಲ್ಲ. ಒಂದೆಡೆ ತಂದೆಯ ನಿಧನದಿಂದ ಆಘಾತಗೊಂಡರೂ ಸಂಸ್ಥೆಯನ್ನು ಮುನ್ನಡೆಸಿಕೊಂಡು ಹೋಗಬೇಕಾದ ಮಹತ್ತರ ಜವಾಬ್ದಾರಿ ವಿಕ್ರಮ್‌ ಅವರ ಏಕೈಕ ಮಗಳು ಮಾನಸಿ ಕಿರ್ಲೋಸ್ಕರ್‌ ಟಾಟಾ ಅವರ ಮೇಲೆ ಬಿತ್ತು.

ಈ ಹಿನ್ನೆಲೆಯಲ್ಲೇ ಮಾನಸಿ ಕಿರ್ಲೋಸ್ಕರ್ ಟಾಟಾ ಅವರು ಕಿರ್ಲೋಸ್ಕರ್ ಜಾಯಿಂಟ್ ವೆಂಚರ್ ಪ್ರೈವೆಟ್ ಲಿಮಿಟೆಡ್‌ನ ಅಧ್ಯಕ್ಷರಾಗಿ ನಿಯುಕ್ತಿಗೊಂಡರು. ಇದಕ್ಕೂ ಮುಂಚಿತವಾಗಿ ಮಾನಸಿ ಕಿರ್ಲೋಸ್ಕರ್ ಟಾಟಾ ಅವರು ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಪ್ರೈವೇಟ್ ಲಿಮಿಟೆಡ್‌ನ ಮಂಡಳಿಯಲ್ಲಿ ಸೇವೆ ಸಲ್ಲಿಸಿದ್ದ ಅನುಭವ ಹೊಂದಿದ್ದರು.

ಮಾನಸಿ ವಿದ್ಯಾಭ್ಯಾಸದ ಕುರಿತು

ಮಾನಸಿ ಕಿರ್ಲೋಸ್ಕರ್ ಟಾಟಾ ಅವರು ಅಮೆರಿಕಾದ ರೋಡ್ ಐಲ್ಯಾಂಡ್ ಸ್ಕೂಲ್ ಆಫ್ ಡಿಸೈನ್‌ನಿಂದ ಬ್ಯಾಚುಲರ್ ಆಫ್ ಫೈನ್ ಆರ್ಟ್ಸ್ ಪದವಿಯನ್ನು ಪಡೆದಿದ್ದಾರೆ. ಅಲ್ಲದೆ ವಿಶ್ವಸಂಸ್ಥೆಯು ಆಕೆಯನ್ನು ಸುಸ್ಥಿರ ಅಭಿವೃದ್ಧಿ ಗುರಿಗಳಿಗಾಗಿ (SDGs) ಮೊದಲ ಯುವ ವ್ಯಾಪಾರ ಚಾಂಪಿಯನ್ ಎಂದು ಗೌರವಿಸಿತ್ತು.

ಟಾಟಾ ಪರಿವಾರ ಸೇರಿದ ಮಾನಸಿ!

ಅಂದ ಹಾಗೆ ವಿಕ್ರಮ್‌ ಕಿರ್ಲೋಸ್ಕರ್ ಅವರ ಪುತ್ರಿಯಾಗಿದ್ದರೂ ಮಾನಸಿ ಅವರ ಸರ್‌ ನೇಮ್‌ ನಲ್ಲಿ ಟಾಟಾ ಹೆಸರು ಹೇಗೆ ಸೇರಿಕೊಂಡಿತು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. 2019ರಲ್ಲಿ ಮಾನಸಿ ಅವರು ಕೈಗಾರಿಕೋದ್ಯಮಿ ನೋಯೆಲ್ ಟಾಟಾ ಅವರ ಮಗ ಮತ್ತು ಇತ್ತೀಚಿಗಷ್ಟೇ ನಿಧನ ಹೊಂದಿದ ಭಾರತದ ಪ್ರಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ ಅವರ ಸೋದರಳಿಯ ನೆವಿಲ್ಲೆ ಟಾಟಾ ಅವರನ್ನು ವಿವಾಹವಾದರು, ಈ ಮೂಲಕ ಭಾರತದ ಎರಡು ಪ್ರಮುಖ ವ್ಯಾಪಾರ ಕುಟುಂಬಗಳನ್ನು ಪರಸ್ಪರ ಹೆಣೆದುಕೊಂಡಿತು. ಟಾಟಾ ಕುಟುಂಬದ ಸೊಸೆ ಆಗಿದ್ದರೂ ಮಾಧ್ಯಮಗಳ ಮುಂದೆ ಯಾವುದೇ ಶೋಗಿರಿ ನಡೆಸದೆ ಮಾನಸಿ ತನ್ನ ಕಾರ್ಯದ ಮೇಲೆ ಹೆಚ್ಚು ಗಮನ ಹರಿಸಿದರು. ಇದರ ಪರಿಣಾಮವೇ ಸದ್ಯ ಕಿರ್ಲೋಸ್ಕರ್‌ ಯಶಸ್ವಿನತ್ತ ಸಾಗಿದೆ.

ಈಗಾಗಲೇ ತನ್ನ ಪರಿಣಾಮಕಾರಿ ನಿರ್ವಹಣಾ ಶೈಲಿಗೆ ಹೆಸರುವಾಸಿಯಾಗಿರುವ ಮಾನಸಿ ಅವರು ಸಾಂಪ್ರದಾಯಿಕ ವ್ಯಾಪಾರ ಅಭ್ಯಾಸಗಳನ್ನು ಆಧುನಿಕ ತಂತ್ರಜ್ಞಾನಗಳೊಂದಿಗೆ ಸಂಯೋಜಿಸಿ ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಅವರ ನಾಯಕತ್ವ ಮತ್ತು ಆಧುನಿಕ ಕಾರ್ಯಶೈಲಿಯ ಮೂಲಕ ಮಾನಸಿ ಕಿರ್ಲೋಸ್ಕರ್ ಟಾಟಾ ಅವರು ಕಿರ್ಲೋಸ್ಕರ್ ಸಂಸ್ಥೆಯ ಮತ್ತು ಭಾರತೀಯ ಆರ್ಥಿಕತೆ ಎರಡಕ್ಕೂ ಗಮನಾರ್ಹ ಕೊಡುಗೆಗಳನ್ನು ನೀಡುತ್ತಿದ್ದಾರೆ.

ಮಾನಸಿ ಕಿರ್ಲೋಸ್ಕರ್ ಟಾಟಾ ಅವರ ಸಮರ್ಪಣೆ ಮತ್ತು ಮುಂದಾಲೋಚನೆಯ ವಿಧಾನದಿಂದ ಅನೇಕರಿಗೆ ಪ್ರೇರಣೆಯಾಗಿದೆ. ಕಿರ್ಲೋಸ್ಕರ್‌ ಸಂಸ್ಥೆಯು ಭಾರತದಲ್ಲಿ 130 ವರ್ಷಗಳ ಶ್ರೀಮಂತ ಇತಿಹಾಸವನ್ನು ಹೊಂದಿದ್ದು, ಅಲ್ಲದೆ 13,844 ಕೋಟಿ ರೂಪಾಯಿಗಳ ಮಾರುಕಟ್ಟೆ ಬಂಡವಾಳವನ್ನು ಹೊಂದಿದೆ. ಕಿರ್ಲೋಸ್ಕರ್‌ ಕಂಪನಿಯು ಟೊಯೋಟಾ ಮೋಟಾರ್ ಕಾರ್ಪೊರೇಶನ್‌ನೊಂದಿಗೆ ನಿಕಟವಾಗಿ ಸಹಯೋಗ ಹೊಂದಿರುವುದರಿಂದ ಮುಂದೆ ಮಾನಸಿಯ ನಾಯಕತ್ವವು ಪ್ರಮುಖವಾಗಿದೆ. ಅದರಲ್ಲೂ ಭಾರತದಲ್ಲಿ ಟೊಯೋಟಾದ ಎರಡನೇ ಹೈಬ್ರಿಡ್ ವಾಹನವನ್ನು ಬಿಡುಗಡೆ ಮಾಡಿದ ನಂತರ ಮಾನಸಿ ಅವರ ಪಾತ್ರವು ಹೆಚ್ಚು ಮಹತ್ವದ್ದಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+